ಮುಂಬಯಿ:- ಮುಂಬಯಿ ವಿಶ್ವವಿದ್ಯಾಲಯ ಕಳೆದ ಎಪ್ರಿಲ್ ತಿಂಗಳಲ್ಲಿ ನಡೆಸಿದ ಕನ್ನಡ ಸರ್ಟಿಫಿಕೇಟ್ ಕೋರ್ಸ್ನ ಫಲಿತಾಂಶ ಪ್ರಕಟವಾಗಿದ್ದು ಕನ್ನಡ ವಿಭಾಗದ ವಿದ್ಯಾರ್ಥಿಗಳು ನೂರು ಪ್ರತಿಶತ ಉತ್ತೀರ್ಣರಾಗಿದ್ದಾರೆಂದು ವಿಶ್ವವಿದ್ಯಾಲಯದ ಪ್ರಕಟಣೆ ತಿಳಿಸಿದೆ. ಮುಂಬಯಿ ವಿಶ್ವವಿದ್ಯಾಲಯದ ಮೂಲಕ ಕನ್ನಡ ವಿಭಾಗ ಈ ಶೈಕ್ಷಣಿಕ ವರ್ಷದಲ್ಲಿ ನಡೆಸಿದ ಕನ್ನಡ ಸರ್ಟಿಫಿಕೇಟ್ ಕೋರ್ಸಿನ ಫಲಿತಾಂಶ ಪ್ರಕಟವಾಗಿದ್ದು ಪ್ರಥಮ ಸ್ಥಾನವನ್ನು ವಂಶಿ ಮಂಜುನಾಥ್ ಶೆಟ್ಟಿ, ದ್ವಿತೀಯ ಸ್ಥಾನವನ್ನು ಸನ್ನಿಧಿ ರಾಜಶೇಖರ ಭಟ್ ಹಾಗೂ ರಕ್ಷಿತ್ ಸತೀಶ್ ಶೆಟ್ಟಿ ಅವರು ತೃತೀಯ ಸ್ಥಾನವನ್ನು ಗಳಿಸಿದ್ದಾರೆ. ಈ ಪರೀಕ್ಷೆಗೆ ಕುಳಿತ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಗರಿಷ್ಠ ಅಂಕಗಳನ್ನು ಪಡೆದುಕೊಂಡಿದ್ದಾರೆ. ಇವರಿಗೆ ವಿಭಾಗದ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರಾದ ಡಾ.ಜಿ.ಎನ್.ಉಪಾಧ್ಯ ಹಾಗೂ ಸಹಪ್ರಾಧ್ಯಾಪಕರಾದ ಡಾ.ಪೂರ್ಣಿಮಾ.ಎಸ್.ಶೆಟ್ಟಿ ಅವರು ಅಭಿನಂದನೆಯನ್ನು ಸಲ್ಲಿಸಿದ್ದಾರೆ. ಕನ್ನಡ ಸರ್ಟಿಫಿಕೇಟ್ ಕೋರ್ಸ್ ತರಗತಿಗಳ ಶಿಕ್ಷಕರಾಗಿ ಗೀತಾ ಮಂಜುನಾಥ್ ಹಾಗೂ ಕುಮುದಾ ಆಳ್ವ ಅವರು ಕಾರ್ಯನಿರ್ವಹಿಸುತ್ತಿದ್ದಾರೆ.
ಕನ್ನಡ ಬಾರದವರಿಗೆ, ಕನ್ನಡೇತರರಿಗೆ ಕನ್ನಡ ಕಲಿಸುವ ಈ ಉಪಕ್ರಮಕ್ಕೆ ನಗರದೆಲ್ಲೆಡೆ ವಿಶೇಷ ಬೇಡಿಕೆ ಇದ್ದು ವಿಶ್ವವಿದ್ಯಾಲಯದ ಮಟ್ಟದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಜಿ.ಎನ್.ಉಪಾಧ್ಯ ಅವರು ತಿಳಿಸಿದ್ದಾರೆ. ಈ ಸಾಲಿನ ಕನ್ನಡ ತರಗತಿಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ಡಾ.ಜಿ.ಎನ್.ಉಪಾಧ್ಯ, ಮುಖ್ಯಸ್ಥರು, ಕನ್ನಡ ವಿಭಾಗ, ಮುಂಬೈ ವಿಶ್ವವಿದ್ಯಾಲಯ, ರಾನಡೆ ಭವನ, ಪ್ರಥಮ ಮಹಡಿ, ವಿದ್ಯಾನಗರಿ, ಸಾಂತಾಕ್ರೂಜ್(ಪೂ), ಮುಂಬಯಿ-400098. ಅಥವಾ ದೂರವಾಣಿಯ ಮುಖಾಂತರ ಡಾ. ಜಿ.ಎನ್.ಉಪಾಧ್ಯ(9220212578) ಅಥವಾ ಡಾ.ಪೂರ್ಣಿಮಾ ಸುಧಾಕರ ಶೆಟ್ಟಿ(9594553402), ಗೀತಾ ಮಂಜುನಾಥ್(8369653432) ಅಥವಾ ಕುಮುದಾ ಆಳ್ವ(9967106310) ಇವರನ್ನು ಸಂಪರ್ಕಿಸಬಹುದು.
ಆನ್ಲೈನ್ ಮೂಲಕ ಕನ್ನಡ ಕಲಿಸುವ ನೂತನ ಉಪಕ್ರಮವನ್ನು ವಿಭಾಗ ಜಾರಿಗೆ ತಂದಿದ್ದು ಆಸಕ್ತರು ಇದರ ಪ್ರಯೋಜನವನ್ನು ಪಡೆಯಬಹುದಾಗಿದೆ. 2024-25ರ ಸಾಲಿನ ಕನ್ನಡ ಸರ್ಟಿಫಿಕೇಟ್ ಕೋರ್ಸಿಗೆ ಸೇರಬಯಸುವವರು ಆಗಸ್ಟ್ 14ರ ಒಳಗಾಗಿ ವಿಭಾಗವನ್ನು ಸಂಪರ್ಕಿಸಬಹುದೆಂದು ಪ್ರಕಟಣೆಯ ಮೂಲಕ ತಿಳಿಸಲಾಗಿದೆ. ಪ್ರಕಟಣೆಯ ಕೃಪೆ ಕೋರಿ ಸಂಪಾದಕರು ಡಾ.ಜಿ.ಎನ್.ಉಪಾಧ್ಯ ಪ್ರಾಧ್ಯಾಪಕರುಮತ್ತು ಮುಖ್ಯಸ್ಥರು ಕನ್ನಡ ವಿಭಾಗ, ಮುಂಬಯಿ ವಿಶ್ವವಿದ್ಯಾಲಯ ಮುಂಬಯಿ-400098