Author: admin
ಐಲೇಸಾ ದಿ ವಾಯ್ಸ್ ಆಫ್ ಓಷನ್ (R)ಮತ್ತು ಕರಾವಳಿ ಲೇಖಕಿಯರ-ವಾಚಕಿಯರ ಸಂಘ(ರಿ.), ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ಶ್ರೀಮತಿ ರೂಪಕಲಾ ಆಳ್ವ ರಚನೆಯ “ಶಿವಸುಗಿಪು”- ಕಾವೂರು ಶ್ರೀ ಮಹಾಲಿಂಗೇಶ್ವರ ದೇವರ ತುಳು ಭಕ್ತಿಗೀತೆಗಳ ಬಿಡುಗಡೆ ಕಾರ್ಯಕ್ರಮ ದಿನಾಂಕ 07.03.2024, ಗುರುವಾರ, ಸಂಜೆ 7:30ರಿಂದ 9:30 ರ ವರೆಗೆ ವರ್ಚುವಲ್ ವೇದಿಕೆಯಲ್ಲಿ ನಡೆಯಲಿದೆ. 26 ವರ್ಷಗಳ ಹಿಂದೆ ಧ್ವನಿಸುರುಳಿ ಮೂಲಕ ಹೊರಬಂದಿದ್ದ ಈ ಹಾಡುಗಳು ಮತ್ತೆ ದೃಶ್ಯ ಸಂಯೋಜನೆಯೊಂದಿಗೆ ನವೀನವಾಗಿ ಮೂಡಿಬರಲಿದ್ದು, ದೇಗುಲದ ಪ್ರಧಾನ ಅರ್ಚಕರಾದ ಶ್ರೀ ಶ್ರೀನಿವಾಸ ಭಟ್ ಆಶೀರ್ವಚನ ಮಾಡಲಿರುವರು. ಶ್ರೀ ರವಿ ಶೆಟ್ಟಿ ಮೂಡಂಬೈಲು ಮ್ಯಾನೇಜಿಂಗ್ ಡೈರೆಕ್ಟರ್, ಎಟಿಎಸ್, ಕತಾರ್ ಅಧ್ಯಕ್ಷತೆ ವಹಿಸಿ, ನ್ಯಾಯವಾದಿ ಹಾಗೂ ನಾಟಕಕಾರರಾದ ಶ್ರೀ ಶಶಿರಾಜ್ ಕಾವೂರು ಹಾಡುಗಳ ಬಿಡುಗಡೆ ಮಾಡಲಿರುವರು. ಶ್ರೀಮತಿ ಯಶೋದಾ ಮೋಹನ್ ಕಾವೂರು ಹಾಡುಗಳ ಪರಿಚಯ ಮಾಡಲಿದ್ದು, ಲೇಖಕಿಯರ ಸಂಘದ ಅಧ್ಯಕ್ಷೆ ಡಾ.ಜ್ಯೋತಿ ಚೇಳಾೈರು, ಹಿರಿಯ ಸಾಹಿತಿ ಶ್ರೀಮತಿ ಚಂದ್ರಕಲಾ ನಂದಾವರ, ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ, ಹಿರಿಯ…
ಪುಣೆಯ ಖ್ಯಾತ ಹೋಟೆಲ್ ಉದ್ಯಮಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ನಿರ್ದೇಶಕರು, ಪುಣೆ ಬಂಟರ ಸಂಘದ ಅತ್ಯಂತ ಯಶಸ್ವಿ ಅಧ್ಯಕ್ಷ, ಬಂಟ ಸಮಾಜದ ಮುಖಂಡರಾದ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಬಾಳಿಕೆ ಇವರ ಮಾಲಕತ್ವದ ಕೊರೊನೆಟ್ ಬ್ಯೂಟಿಕ್ ಹೋಟೆಲ್ ನೂತನ ವಿನ್ಯಾಸದೊಂದಿಗೆ ಪುಣೆಯ ಆಪ್ಟೆ ರೋಡ್ ನಲ್ಲಿ ಮಾರ್ಚ್ 1ರಂದು ಎಂ ಆರ್ ಜಿ ಗ್ರೂಪ್ ನ ಆಡಳಿತ ನಿರ್ದೇಶಕ ಕೆ ಪ್ರಕಾಶ್ ಶೆಟ್ಟಿಯವರ ಉದ್ಘಾಟನೆಯೊಂದಿಗೆ ಶುಭಾರಂಭಗೊಂಡಿತು. ವಾಸ್ತು ಪೂಜೆ, ಶ್ರೀ ಸತ್ಯನಾರಾಯಣ ಪೂಜೆಯೊಂದಿಗೆ ದೇವತಾ ಕಾರ್ಯಗಳು ನಡೆದವು. ಈ ಸಂಧರ್ಭ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಎಂ.ಆರ್.ಜಿ ಗ್ರೂಪ್ ನ ಸಿ.ಎಂ.ಡಿ ಕೆ ಪ್ರಕಾಶ್ ಶೆಟ್ಟಿ, ಜಾಗತಿಕ ಬಂಟರ ಸಂಘದ ಪದಾಧಿಕಾರಿಗಳು, ಮುಂಬಯಿ ಬಂಟರ ಸಂಘದ ಪ್ರಮುಖರು, ಖ್ಯಾತ ಉದ್ಯಮಿಗಳು ಆಗಮಿಸಿ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಬಾಳಿಕೆ ಹಾಗೂ ಶ್ರೀಮತಿ ದಿವ್ಯಾ ಸಂತೋಷ್ ಶೆಟ್ಟಿಯವರನ್ನು ಶಾಲು ಪುಷ್ಪಗುಚ್ಛ ಸ್ಮರಣಿಕೆ ನೀಡಿ…
ಉತ್ತಮ ವಿಚಾರಧಾರೆಯ ಸೇವಾ ಕಾರ್ಯ ಸಮಾಜದಲ್ಲಿ ಸಾಮರಸ್ಯ ಬೆಳೆಯಲು ಮತ್ತು ಸಂಘಟನೆ ಬೆಳೆಯಲು ಕಾರಣವಾಗುತ್ತದೆ. ಯಾವುದೇ ರೀತಿಯ ಕಾರ್ಯಯೋಜನೆ ಇರಲಿ ದೃಡ ಮನಸ್ಸು ಮತ್ತು ಶ್ರಮದಿಂದ ಯಶಸ್ಸು ಪಡೆಯಬಹುದು. ಸಮಾಜ ಸೇವೆಯಲ್ಲಿರುವ ನಾವೆಲ್ಲರೂ ಶ್ರಮಜೀವಿಗಳು ಒಗ್ಗಟ್ಟು ಮತ್ತು ಕ್ರೀಯಾಶೀಲ ಉತ್ತಮ ಚಿಂತನೆಯ ಮೂಲಕ ಸಮಾಜಕ್ಕೆ ಮೌಲ್ಯಯುತವಾದ ಕೊಡುಗೆಯನ್ನು ನೀಡಿ ಗೌರವವನ್ನು ಪಡೆಯುತ್ತೇವೆ. ಕ್ರೀಡೆ ಅಥವಾ ಕ್ರಿಕೆಟ್ ಕೂಡಾ ನಮ್ಮ ಜೀವನದ ಹಾಗೆ ಸೋಲು ಗೆಲುವು ಏಳು ಬೀಳು ಏನಿದೆಯೋ ಅದನ್ನು ಸಮಾನವಾಗಿ ಸ್ವೀಕರಿಸಿ ಜೀವನದಲ್ಲಿ ಮುನ್ನಡೆಯಬೇಕು. ಕ್ರೀಡೆಯಿಂದ ಆರೋಗ್ಯ ಭಾಗ್ಯ, ಶಕ್ತಿ ದೊರಕುತ್ತದೆ. ಇಂತಹ ದೊಡ್ಡ ಕೂಟವನ್ನು ಆಯೋಜನೆ ಮಾಡುವುದೆಂದರೆ ಕಠಿನ ಪರಿಶ್ರಮದಿಂದ ಮಾತ್ರ ಸಾದ್ಯ. ಇದಕ್ಕೆ ಬಲಯುತವಾದ ಸಂಘಟನೆ ಮತ್ತು ಒಗ್ಗಟ್ಟು ಮುಖ್ಯ. ಮಾನವ ಮೌಲ್ಯವನ್ನರಿತು ನಾವು ಮಾಡುವ ಯಾವುದೇ ಕಾರ್ಯ ಇರಲಿ ಅದರಿಂದ ಸಾಧನೆಗೆ ಫಲ ಪಡೆಯಬಹುದು. ಸಾಯಿ ಕ್ರಿಕೆಟರ್ಸ್ ನ ವಸಂತ್ ಶೆಟ್ಟಿ ವರ್ಲ್ಡ್ ಬಂಟ್ಸ್ ಕ್ರಿಕೆಟ್ ಟೂರ್ನಮೆಂಟ್ ಆಯೋಜನೆ ಮಾಡುವ ಮೂಲಕ ಪುಣೆ ಬಂಟರ ಹೆಮ್ಮೆಯನ್ನು…
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ‘ಮಹಿಳೆಗೆ ಗೌರವ, ಪುರುಷರಲ್ಲಿ ಅರಿವು ಅವಶ್ಯ’
ವಿದ್ಯಾಗಿರಿ: ‘ದೇಶದ ಅಭಿವೃದ್ಧಿಗೆ ಮಹಿಳೆಯರ ಸಶಕ್ತೀಕರಣ, ಮೌಲ್ಯ ಹಾಗೂ ಗೌರವವು ಅವಶ್ಯವಾಗಿದ್ದು, ಈ ಜವಾಬ್ದಾರಿಯನ್ನು ಪುರುಷರೂ ಅರಿತುಕೊಳ್ಳಬೇಕಿದೆ’ ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಆನಂದ ಕೆ. ಹೇಳಿದರು. ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ -2024ರ ಪ್ರಯುಕ್ತ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ವಿವಿಧ ಸಂಘ -ಸಂಸ್ಥೆಗಳ ಸಹಭಾಗಿತ್ವದಲ್ಲಿ ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡ ‘ಸಾಧನೆಗಳ ಆಚರಣೆ : ಭವಿಷ್ಯದ ಪ್ರೇರಣೆ ಮಹಿಳಾ ಉದ್ಯಮಶೀಲತಾ ಪ್ರೇರಣಾ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ಸಮಾಜದ ವಿವಿಧ ಕಾರ್ಯಗಳಲ್ಲಿ ಮಹಿಳೆಯ ಪಾಲ್ಗೊಳ್ಳುವಿಕೆ ಕಡಿಮೆ ಇದೆ. ಮಹಿಳೆಯರಿಗೆ ರಾಜಕೀಯವಾಗಿ ಶೇ 50 ರಷ್ಟು ಮೀಸಲಾತಿ ನೀಡುತ್ತಿರುವುದು ಉತ್ತಮ ಬೆಳವಣಿಗೆ. ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಎಂಬುದು ವಿಶ್ವ ಪರಿಕಲ್ಪನೆ ಎಂದರು. ಮಹಿಳೆಯರ ಆಶಯ ಪರಿಗಣಿಸದೇ ಯಾವುದೇ ಪ್ರಗತಿ ಸಾಧ್ಯವಿಲ್ಲ. ಮಹಿಳೆಯರಿಗೆ ಸ್ಪಂದನೆ ಮತ್ತು ಅವಕಾಶ ನೀಡುವುದು ಮುಖ್ಯ ಎಂದರು. ಸ್ವಸಹಾಯ ಸಂಘಗಳ ಮೂಲಕ ತಳಮಟ್ಟದಲ್ಲಿ ಮಹಿಳಾ ಅಭಿವೃದ್ಧಿ ಸಾಧಿಸಲಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಮಹಿಳೆಯರು…
ತುಳುನಾಡ ಪೌಂಡೇಶನ್ ಪುಣೆ ವತಿಯಿಂದ ಮಾರ್ಚ್ 3ರಂದು ಕ್ರಾಸ್ ಬಾರ್ ಮಲ್ಟಿಸ್ಪೋರ್ಟ್ಸ್ ಮೈದಾನ ಸಿಂಹಘಡ್ ರೋಡ್ ಪುಣೆ ಇಲ್ಲಿ ತುಳು ಕನ್ನಡಿಗರಿಗಾಗಿ ಆಯೋಜಿಸಿದ ಪ್ರಥಮ ಬಾಕ್ಸ್ ಕ್ರಿಕೆಟ್ ಪಂದ್ಯಾಟದಲ್ಲಿ ಅಭಿಜಿತ್ ಶೆಟ್ಟಿ ನೇತೃತ್ವದ ಕಟೀಲ್ ವಾರಿಯರ್ಸ್ ತಂಡ ಜಯಗಳಿಸಿ ಟ್ರೋಫಿ ಹಾಗೂ ನಗದು ಬಹುಮಾನ ಪಡೆದುಕೊಂಡಿತು. ಅಂತಿಮ ಹಣಾಹಣಿಯಲ್ಲಿ ಸಾಯಿ ಕ್ರಿಕೆಟರ್ಸ್ ಹಾಗೂ ಕಟೀಲ್ ವಾರಿಯರ್ಸ್ ತಂಡಗಳು ಸೆಣಸಿದ್ದು ವಸಂತ್ ಶೆಟ್ಟಿ ನೇತೃತ್ವದ ಸಾಯಿ ಕ್ರಿಕೆಟರ್ಸ್ ತಂಡ ದ್ವಿತೀಯ ಸ್ಥಾನಿಯಾಗಿ ರನ್ನರ್ ಆಫ್ ಪ್ರಶಸ್ತಿ ಹಾಗೂ ನಗದು ಬಹುಮಾನವನ್ನು ಪಡೆದುಕೊಂಡಿತು. ಪಂದ್ಯಾವಳಿಯಲ್ಲಿ ಬೆಸ್ಟ್ ಬ್ಯಾಟರ್ ಆಗಿ ವೈಬಿಪಿ ವಾರಿಯರ್ಸ್ ತಂಡದ ಅಭಿನಂದನ್ ಶೆಟ್ಟಿ ಹಾಗೂ ಆರ್ ಕೆ ತಂಡದ ಜಯಲಕ್ಷ್ಮೀ, ಬೆಸ್ಟ್ ಬೌಲರ್ ಆಗಿ ಕಟೀಲ್ ವಾರಿಯರ್ಸ್ ತಂಡದ ಅಖಿಲ್ ಮತ್ತು ತುಳುನಾಡು ತಂಡದ ಖುಷಿ ಶೆಟ್ಟಿ, ಬೆಸ್ಟ್ ಫೀಲ್ಡರ್ ಬಹುಮಾನವನ್ನು ಕಟೀಲ್ ವಾರಿಯರ್ಸ್ ತಂಡದ ಸುವಿತ್ ಶೆಟ್ಟಿ ಹಾಗೂ ಚಾನೆಲ್ ತಂಡದ ಶ್ರೇಯಾ ಶೆಟ್ಟಿ ಪಡೆದುಕೊಂಡರೆ ಸಾಯಿ ಕ್ರಿಕೆಟರ್ಸ್ ತಂಡದ…
ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಓಪ್ ಸೊಸೈಟಿಯಿಂದ ರೂ.500 ಕೋಟಿ ಮೀರಿದ ಠೇವಣಿ ಸಂಗ್ರಹಣೆಯ ಅಮೋಘ ಸಾಧನೆ : ಅಧ್ಯಕ್ಷ ಕೆ. ಜೈರಾಜ್ ಬಿ. ರೈ
ರಾಜ್ಯದ ಅಗ್ರಗಣ್ಯ ಕ್ರೆಡಿಟ್ ಸಹಕಾರ ಸಂಸ್ಥೆಗಳಲ್ಲೊಂದಾದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ವ್ಯಾಪ್ತಿಯಲ್ಲಿ ಕಾರ್ಯಾಚರಿಸುತ್ತಿರುವ ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿಯ ಠೇವಣಾತಿಯು 2024 ಫೆಬ್ರವರಿ ತಿಂಗಳಾಂತ್ಯಕ್ಕೆ ರೂ.503 ಕೋಟಿಗೂ ವಿiÁರಿದೆ. ಇದು ಸಹಕಾರ ಸಂಘದ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು. ಸ್ಥಾಪನೆಯ 30 ವರ್ಷದ ಅವಧಿಯಲ್ಲಿ ಒಂದು ಸಹಕಾರ ಸಂಸ್ಥೆಯು ರೂ.500 ಕೋಟಿ ಮೀರಿದ ಠೇವಣಾತಿ ಹೊಂದಿರುವುದು ಅನುಪಮ ಸಾಧನೆಯಾಗಿದೆ. 2024ರ ಫೆಬ್ರವರಿ ತಿಂಗಳ ಅಂತ್ಯಕ್ಕೆ ಠೇವಣಿ ಮತ್ತು ಸಾಲ ಸೇರಿ ರೂ.943 ಕೋಟಿಯನ್ನು ಮೀರಿದ ವ್ಯವಹಾರವನ್ನು ದಾಖಲಿಸಿ, ವರ್ಷಾಂತ್ಯ ಮಾರ್ಚ್ಗೆ ರೂ.1000 ಕೋಟಿ ಒಟ್ಟು ವ್ಯವಹಾರವನ್ನು ಸಾಧಿಸುವ ನಿಟ್ಟಿನಲ್ಲಿ ದೃಢ ಹೆಜ್ಜೆಯನ್ನಿರಿಸಿದೆ. ಸಂಘವು ವರ್ಷಾಂತ್ಯ 31.03.2024ಕ್ಕೆ ರೂ.10 ಕೋಟಿ ಮೀರಿದ ನಿವ್ವಳ ಲಾಭ ಗಳಿಸುವ ನಿರೀಕ್ಷೆಯಲ್ಲಿದೆ. ಸಂಘದ ವ್ಯವಹಾರ ದಕ್ಷತೆಯ ಇನ್ನೊಂದು ಪ್ರಮುಖ ಅಂಶವೆಂದರೆ ಕಳೆದ 16 ವರ್ಷಗಳಿಂದ ನಿವ್ವಳ ಅನುತ್ಪಾದಕ ಆಸ್ತಿಯು ಶೂನ್ಯ ಪ್ರಮಾಣದಲ್ಲಿರುವುದು ಹಾಗೂ ಸಂಘದ ಸದಸ್ಯರಿಗೆ ಸ್ಥಾಪನೆಯಿಂದ ನಿರಂತರವಾಗಿ ಡಿವಿಡೆಂಡ್ ನೀಡುತ್ತಾ ಬಂದಿದ್ದು, ಕಳೆದ…
ಖ್ಯಾತ ಹೋಟೆಲ್ ಉದ್ಯಮಿ, ಸಮಾಜಸೇವಕ ಪಂಜುರ್ಲಿ ಗ್ರೂಪ್ ಆಫ್ ಹೊಟೇಲ್ಸ್ ನ ಸಿಎಂಡಿ ರಾಜೇಂದ್ರ ವಿಶ್ವನಾಥ್ ಶೆಟ್ಟಿ ಇವರು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಶ್ರೀ ಐಕಳ ಹರೀಶ್ ಶೆಟ್ಟಿಯವರ ವಿಶೇಷ ಮನವಿಗೆ ಸ್ಪಂದಿಸಿ ಮತ್ತು ಒಕ್ಕೂಟದಲ್ಲಿ ನಡೆಯುವ ಜನಪರ ಕಾಳಜಿಯ ಸಾಮಾಜಿಕ ಕಾರ್ಯಗಳಿಗೆ ಒತ್ತು ನೀಡುವ ಸಲುವಾಗಿ ಒಕ್ಕೂಟಕ್ಕೆ ಮಹಾ ನಿರ್ದೇಶಕರಾಗಿ ಸೇರುವುದಾಗಿ ಭರವಸೆ ನೀಡಿದ್ದಾರೆ. ಇವರು ಈ ಹಿಂದೆ ಒಕ್ಕೂಟದ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಇನ್ನು ಮುಂದೆ ಮಹಾ ನಿರ್ದೇಶಕರಾಗಿ ಕಾರ್ಯನಿರ್ವಹಿಸಲಿದ್ದಾರೆ. ರಾಜೇಂದ್ರ ವಿ ಶೆಟ್ಟಿಯವರನ್ನು ಅವರ ಪುಣೆಯ ವಿಶ್ವನಾಥ್ ಪ್ಯಾಲೇಸ್ ಹೋಟೆಲಿನಲ್ಲಿ ಅಧ್ಯಕ್ಷರಾದ ಶ್ರೀ ಐಕಳ ಹರೀಶ್ ಶೆಟ್ಟಿಯವರು ಅಭಿನಂದಿಸಿದರು. ಈ ಸಂದರ್ಭದಲ್ಲಿ ಒಕ್ಕೂಟದ ಉಪಾಧ್ಯಕ್ಷರಾದ ಕರ್ನಿರೆ ವಿಶ್ವನಾಥ್ ಶೆಟ್ಟಿ, ಕೋಶಾಧಿಕಾರಿ ಉಳ್ತೂರು ಮೋಹನದಾಸ್ ಶೆಟ್ಟಿ ಮತ್ತು ಪೋಷಕ ಸದಸ್ಯ ಗಿರೀಶ್ ಶೆಟ್ಟಿ ತೆಳ್ಳಾರ್ ಉಪಸ್ಥಿತರಿದ್ದರು.
ದೆಹಲಿಯ ಬಾಲಕಟೋರ ಸ್ಟೇಡಿಯಂ ನಲ್ಲಿ ದಿನಾಂಕ 27-02-2024 ರಂದು ಗ್ಲೋಬಲ್ ಇಂಡಿಯಾ ಎಂಟರ್ ಟೈನ್ ಮೆಂಟ್ ಪ್ರೊಡಕ್ಷನ್ ಮತ್ತು ಆಲಿ ಶರ್ಮಾ ಜಂಟಿಯಾಗಿ ಪ್ರಸ್ತುತ ಪಡಿಸಿರುವ ಮಿಸ್ಸಸ್ /ಮಿಸ್ಟರ್ ಮತ್ತು ಮಿಸ್ ಹಾಗೂ ಮಿಸ್ ಟೀನ್ ಗ್ಲೋಬಲ್ ವಲ್ಡ್ ಸೌಂದರ್ಯ ಸ್ಪರ್ಧೆಯಲ್ಲಿ ಮಂಗಳೂರಿನ ಕುಮಾರಿ ಈಶಿಕಾ ಶೆಟ್ಟಿ “ಗ್ಲೋಬಲ್ ಮಿಸ್ ಟೀನ್ ವರ್ಲ್ಡ್ ಇಂಡಿಯಾ ಓಶಿಯಾನ 2024” ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿರುತ್ತಾರೆ. ಈ ಕುರಿತು ಮಾಧ್ಯಮಗಳ ಜೊತೆ ಮಾತಾಡಿದ ಇಶಿಕಾ ಶೆಟ್ಟಿ, “ತಂದೆ ತಾಯಿಯ ಸಹಕಾರದಿಂದ ನಾನು ಈ ಸ್ಪರ್ಧೆಯಲ್ಲಿ ಪಾಲ್ಗೊಂಡು ಗೆಲ್ಲಲು ಸಾಧ್ಯವಾಯಿತು. ಮಂಗಳೂರು ಕಮಿಷನರ್ ಅನುಪಮ್ ಅಗರ್ವಾಲ್, ರವೀಶ್ ನಾಯಕ್ ಅವರ ಸಹಕಾರಕ್ಕೆ ಧನ್ಯವಾದಗಳು” ಎಂದರು. ತಂದೆ ಶರತ್ ಶೆಟ್ಟಿ ಮಾತಾಡಿ “ಇಶಿಕಾ ಕುರಿತು ಮಾತಾಡಲು ಹೆಮ್ಮೆ ಆಗ್ತಾ ಇದೆ. ಸೌಂದರ್ಯ ಸ್ಪರ್ಧೆಯಲ್ಲಿ ದೇಶದ ನಾನಾ ಭಾಗಗಳಿಂದ 65ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದು ಅವರಲ್ಲಿ ನನ್ನ ಮಗಳು ಪ್ರಥಮ ಸ್ಥಾನಿಯಾಗಿ ಗೆದ್ದಿರುವುದು ಅತೀವ ಸಂತಸ ಉಂಟುಮಾಡಿದೆ. ನನಗೆ ಪೊಲೀಸ್…
ಸುರತ್ಕಲ್ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಕ್ಲಬ್ ಇದರ ತೃತೀಯ ವಾರ್ಷಿಕೋತ್ಸವದ ಪ್ರಯುಕ್ತ ಸಂಘಟನೆಯ ಮಹಾಪೋಷಕರಾದ ಎಸಿಪಿ ಎಸ್. ಮಹೇಶ್ ಕುಮಾರ್ ಅವರಿಗೆ ಅಭಿನಂದನಾ ಸಮಾರಂಭ ಇಲ್ಲಿನ ಗೋವಿಂದ ದಾಸ್ ಕಾಲೇಜ್ ಮೈದಾನದಲ್ಲಿ ಜರುಗಿತು. ಕಾರ್ಯಕ್ರಮವನ್ನು ಖ್ಯಾತ ಜ್ಯೋತಿಷಿ ನಾಗೇಂದ್ರ ಭಾರಧ್ವಾಜ್ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತಾಡಿದ ಅವರು, “ಬಾಲ್ಯ ಕಾಲದ ನೆನಪುಗಳು ಜೀವನದ ಕೊನೆಯ ತನಕ ನೆನಪಲ್ಲಿ ಉಳಿಯುವಂತದ್ದು. ಅದನ್ನು ಮತ್ತೆ ನೆನಪಿಸುತ್ತಿರುವ ಲೆಜೆಂಡ್ಸ್ ಕ್ರಿಕೆಟ್ ಲೀಗ್ ನಂತಹ ಕಾರ್ಯಕ್ರಮವನ್ನು ಆಯೋಜಿಸಿರುವ ಸುರತ್ಕಲ್ ಸ್ಪೋರ್ಟ್ಸ್ ಕಲ್ಚರಲ್ ಕ್ಲಬ್ ಈ ಮೂಲಕ ಪ್ರಶಂಸಾರ್ಹ ಕೆಲಸವನ್ನು ಮಾಡಿದೆ. ಹಿರಿಯರ ಕ್ರಿಕೆಟ್ ಪಂದ್ಯಾವಳಿಯನ್ನು ಪ್ರೋತ್ಸಾಹಿಸುತ್ತಿರುವ ಎಸಿಪಿ ಮಹೇಶ್ ಕುಮಾರ್ ಅವರಿಗೆ ಅಭಿನಂದನೆಗಳು. ಇಂತಹ ಕಾರ್ಯಕ್ರಮ ಇನ್ನಷ್ಟು ಆಯೋಜನೆಗೊಳ್ಳಲಿ” ಎಂದು ಶುಭ ಹಾರೈಸಿದರು. ಸಂಘಟನೆಯ ಮಹಾಪೋಷಕರಾಗಿದ್ದುಕೊಂಡು ಮಂಗಳೂರಿನಿಂದ ಮಡಿಕೇರಿಗೆ ವರ್ಗಾವಣೆಗೊಂಡಿರುವ ಎಸಿಪಿ ಮಹೇಶ್ ಕುಮಾರ್ ಅವರನ್ನು ವೇದಿಕೆಯಲ್ಲಿ ಅತಿಥಿಗಳು ಸನ್ಮಾನಿಸಿದರು. ಸನ್ಮಾನ ಸ್ವೀಕರಿಸಿ ಮಾತಾಡಿದ ಅವರು, “ಹಿರಿಯರಾದ ಮಹಾಬಲ ಪೂಜಾರಿ ಕಡಂಬೋಡಿ ಅವರ…
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಮೂಲ್ಕಿ ರಾಷ್ಟ್ರೀಯ ಹೆದ್ದಾರಿಯ ಬಳಿ ಇರುವ ಶ್ರೀ ಕನ್ಯಾನ ಸದಾಶಿವ ಶೆಟ್ಟಿ ಸoಕೀರ್ಣದಲ್ಲಿ ಒಕ್ಕೂಟದ ಮಹಾ ನಿರ್ದೇಶಕರಾದ ಶ್ರೀ ತೋನ್ಸೆ ಆನಂದ ಶೆಟ್ಟಿಯವರು ಕೊಡುಗೆಯಾಗಿ ನಿರ್ಮಿಸುತ್ತಿರುವ ಶ್ರೀಮತಿ ಶಶಿರೇಖಾ ಆನಂದ ಶೆಟ್ಟಿ ಓಪನ್ ಏರ್ ಗಾರ್ಡನ್ ಇದರ ಕಾಮಗಾರಿಯನ್ನು ಅಧ್ಯಕ್ಷರಾದ ಶ್ರೀ ಐಕಳ ಹರೀಶ್ ಶೆಟ್ಟಿಯವರು ವೀಕ್ಷಣೆ ಮಾಡಿದರು. ಕಾಮಗಾರಿಯ ಕಂಟ್ರಾಕ್ಟರ್ ಶ್ರೀ ಗುರುಪ್ರಸಾದ್ ಶೆಟ್ಟಿ, ಇಂಜಿನಿಯರ್ ಶ್ರೀ ಹರೀಶ್ ಶೆಟ್ಟಿ ಹಾಗೂ ಒಕ್ಕೂಟದ ಇಂಜಿನಿಯರ್ ಶ್ರೀ ಜೀವನ್ ಕೆ. ಶೆಟ್ಟಿ ಮುಲ್ಕಿಯವರ ಉಪಸ್ಥಿತಿಯಲ್ಲಿ ಶ್ರೀ ಐಕಳ ಹರೀಶ್ ಶೆಟ್ಟಿಯವರು ಪರಿಶೀಲನೆ ನಡೆಸಿ ನಿರ್ಮಾಣಗಾರರಿಂದ ಹೆಚ್ಚಿನ ಮಾಹಿತಿ ಪಡೆದುಕೊಂಡು ಕಾಮಗಾರಿ ವೇಗ ಪಡೆದುಕೊಳ್ಳಲು ಸಲಹೆ ನೀಡಿದರು.















