ಬಾರ್ಕೂರು ರೋಟರಿ ಕ್ಲಬ್ ನೂತನ ಅಧ್ಯಕ್ಷರಾಗಿ ಗಣೇಶ್ ಶೆಟ್ಟಿ ಬಿ, ಕಾರ್ಯದರ್ಶಿಯಾಗಿ ಹೆಚ್ ಅಜಿತ್ ಕುಮಾರ್ ಶೆಟ್ಟಿಯವರು ಆಯ್ಕೆಯಾಗಿದ್ದಾರೆ. ಪದಾಧಿಕಾರಿಗಳಾಗಿ ಯು ಕೆ ವಾಸುದೇವ್ ಶೆಟ್ಟಿ, ಆನಂದ ಶೆಟ್ಟಿ, ಕೆ ಬಾಬು ನಾಯಕ್, ಹರೀಶ್ ಕುಂದರ್, ಆರ್ ರತ್ನಾಕರ್ ಶೆಟ್ಟಿ, ಗಣೇಶ್ ಆಚಾರ್ಯ, ರಾಜು ಪೂಜಾರಿ, ಸುಧಾಕರ್ ರಾವ್, ಕಿಶೋರ್ ಶೆಟ್ಟಿ, ಜಯಶ್ರೀ ಶೆಟ್ಟಿ, ಶ್ರೀನಿವಾಸ್ ಶೆಟ್ಟಿಗಾರ್, ಸತೀಶ್ ಲಿಮಿನ್, ಡಾ. ಸುರೇಶ್ ಶೆಟ್ಟಿ, ಪ್ರಕಾಶ್ ತಂತ್ರಿ, ಎ ರತ್ನಾಕರ್ ಶೆಟ್ಟಿ, ರತ್ನಾಕರ್ ಶೆಟ್ಟಿ ಬಿ, ಸೀತಾರಾಮ್ ಎಸ್ ಆಯ್ಕೆಯಾಗಿದ್ದಾರೆ.
ಯುವ ಸಂಘಟಕರಿಗೆ ಸಂಸ್ಥೆಯ ಹೊಣೆ : ಗಣೇಶ್ ಶೆಟ್ಟಿ ಅವರು ಹಲಸು ಮೇಳ ಸೇರಿದಂತೆ ಅನೇಕ ಕಾರ್ಯಕ್ರಮ ಆಯೋಜನೆ ಮೂಲಕ ಕರಾವಳಿಯಲ್ಲಿ ತಮ್ಮದೇ ಹೆಸರು ಹೊಂದಿದ್ದು, ಸ್ವದೇಶಿ ಆಯುರ್ವೇದ ಸಂಸ್ಥೆಯ ಮಾಲೀಕರಾಗಿ, ಸದ್ಗುರು ಆಯುರ್ವೇದ ಸಂಸ್ಥೆಯ ಕರಾವಳಿ ಮುಖ್ಯಸ್ಥರಾಗಿ, ನಮ್ಮೂರ್ ಬಾರ್ಕೂರು ಸಂಘಟಕರಾಗಿ, ಬೆಣ್ಣೆ ಕುದ್ರು ಗಣೇಶೋತ್ಸವದ ಅಧ್ಯಕ್ಷರಾಗಿ, ಯುವ ಉದ್ಯಮಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕಾರ್ಯದರ್ಶಿಯಾಗಿರುವ ಹೆಚ್ ಅಜಿತ್ ಕುಮಾರ್ ಶೆಟ್ಟಿ ಅವರು ಉದ್ಯಮಿಯಾಗಿ, ಸಂಘಟಕರಾಗಿ ಸಮಾಜಕ್ಕೆ ತಮ್ಮದೇ ಆದ ಸೇವೆ ಸಲ್ಲಿಸುತ್ತಿದ್ದಾರೆ. ಇದೀಗ ಇವರಿಗೆ ಮತ್ತಷ್ಟು ಸೇವೆ ಮಾಡಲು ಅವಕಾಶ ಸಿಕ್ಕಿದೆ.