Author: admin
ಸಹಸ್ರಾರು ಸಂಖ್ಯೆಯಲ್ಲಿ ಸೇರಿದ್ದ ಬೆಂಬಲಿಗರು, ಅಭಿಮಾನಿಗಳು, ಉತ್ಸಾಹಿ ಕಾರ್ಯಕರ್ತರೊಂದಿಗೆ ಮಾಜಿ ಸಚಿವ ಬಿ. ರಮಾನಾಥ ರೈ ಗುರುವಾರ ಅದ್ದೂರಿ ಪಾದಯಾತ್ರೆ ನಡೆಸಿ, ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ 9ನೇ ಬಾರಿಗೆ ನಾಮಪತ್ರ ಸಲ್ಲಿಸಿದರು. ಬೆಳಗ್ಗೆ ಪೊಳಲಿ ಶ್ರೀ ರಾಜರಾಜೇಶ್ವರಿ ಕ್ಷೇತ್ರ, ಶ್ರೀ ನಂದಾವರ ವಿನಾಯಕ ಶಂಕರನಾರಾಯಣ ದುರ್ಗಾಂಬಾ ಕ್ಷೇತ್ರ, ಬಿ.ಸಿ.ರೋಡು ಶ್ರೀ ರಕ್ತೇಶ್ವರೀ ದೇವಸ್ಥಾನ, ಮೊಡಂಕಾಪು ಇನ್ಫೆಂಟ್ ಜೀಸಸ್ ಚರ್ಚ್, ಮಿತ್ತಬೈಲು ಮಸೀದಿ, ಬಂಟ್ವಾಳ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಪೂಜೆ, ಪ್ರಾರ್ಥನೆ ಸಲ್ಲಿಸಿದರು. ಅಲ್ಲಿಂದ ವೈಭವಯುತ ಪಾದಯಾತ್ರೆ ಯೊಂದಿಗೆ ಹೆಜ್ಜೆ ಹಾಕಿದರು. ಈ ಸಂದರ್ಭ ಸಹಸ್ರಾರು ಸಂಖ್ಯೆಯ ಕಾರ್ಯಕರ್ತರು ಸಾಗಿ ಬಂದರು. ಕೊಂಬು, ಚೆಂಡೆ, ವಾದ್ಯಘೋಷ ಮೆರುಗು ತಂದವು. ಋಣ ತೀರಿಸುವುದು ಅಸಾಧ್ಯ ರಮಾನಾಥ ರೈ ಅವರು ಕಾರ್ಯಕರ್ತ ರನ್ನುದ್ದೇಶಿಸಿ ಮಾತನಾಡಿ, ನನ್ನ ಸುದೀರ್ಘ ಜನಸೇವೆಯ ಬದುಕಿನಲ್ಲಿ 9ನೇ ಬಾರಿ ಒಂದೇ ಪಕ್ಷದಿಂದ ನಾಮಪತ್ರ ಸಲ್ಲಿಸುತ್ತಿದ್ದೇನೆ. ಜಿಲ್ಲೆಯಿಂದ ಕಾಂಗ್ರೆಸ್‌ನಿಂದ ಒಬ್ಬನೇ ಆರಿಸಿಬಂದಂತಹ ಕಠಿನ ಪರಿಸ್ಥಿತಿಯಲ್ಲೂ ನನಗೆ ಬೆಂಬಲವಾಗಿ ನಿಂತ…
ಕನ್ನಡ ಸಾಹಿತ್ಯಕ್ಕೆ ನಾನು ಬಂದಿದ್ದು ಆಕಸ್ಮಿಕ. ಬಿಎಸ್ಸಿ ವಿದ್ಯಾರ್ಥಿಯಾಗಿದ್ದ ನನಗೆ ಎಂಎಸ್ಸಿ ಮಾಡಬೇಕು ಎಂಬ ಆಸೆಯಿತ್ತು. ಆದರೆ ಸೀಟು ಸಿಗಲಿಲ್ಲ. ಹಾಗಾಗಿ ಐಚ್ಛಿಕ ಕನ್ನಡ ತೆಗೆದುಕೊಂಡು ಎಂಎ ಪದವಿ ಪಡೆದು ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಕೊಂಡೆ ಎಂದು ಹಿರಿಯ ಜಾನಪದ ವಿದ್ವಾಂಸ ಡಾ| ಬಿ.ಎ.ವಿವೇಕ ರೈ ಹೇಳಿದರು.ಬಿಎಂಶ್ರೀ ಪ್ರತಿಷ್ಠಾನ ಎನ್‌ಆರ್ ಕಾಲನಿಯ ಎಂವಿಸಿ ಸಭಾಂಣದಲ್ಲಿ ರವಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ “ಶ್ರೀ ಸಾಹಿತ್ಯ ಪ್ರಶಸ್ತಿ’ ಸ್ವೀಕರಿಸಿ ಅವರು ಮಾತನಾಡಿದರು. ಹಿರಿಯ ವಿದ್ವಾಂಸ ಹಂಪ ನಾಗರಾಜಯ್ಯ ಮಾತನಾಡಿ, ವಿವೇಕ ರೈ ಅವರು ಜರ್ಮನಿಯಲ್ಲಿ ಕೂಡ ಕನ್ನಡ ಸಾಹಿತ್ಯದ ಬಿತ್ತನೆ ಮಾಡಿದ್ದಾರೆ. ಹೀಗಾಗಿ ಮುಂದಿನ 500 ವರ್ಷಗಳಲ್ಲಿ ಕನ್ನಡ ಸಾಹಿತ್ಯದ ವೈಶಿಷ್ಟ ಏನು ಎಂಬುದು ತಿಳಿಯಲಿದೆ ಎಂದರು. ಶಾ ಬಾಲುರಾವ್ ನೆನಪುಗಳು ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು. ಬಿಎಂಶ್ರೀ ಪ್ರತಿಷ್ಠಾನದ ಅಧ್ಯಕ್ಷ ಡಾ| ಬೈರಮಂಗಲ ರಾಮೇಗೌಡ, ನಿಕಟಪೂರ್ವ ಅಧ್ಯಕ್ಷ ಡಾ| ಆರ್.ಲಕ್ಷ್ಮಿನಾರಾಯಣ, ಗೌರವಾಧ್ಯಕ್ಷ ಡಾ| ಪಿ.ವಿ.ನಾರಾಯಣ, ಕಮಲಿನಿ ಬಾಲುರಾವ್ ಮತ್ತಿತರರು ಉಪಸ್ಥಿತರಿದ್ದರು.
‘ನಮ್ಮ ಭವಿಷ್ಯದ ನಿರ್ಮಾತೃ ನಾವೇ’ ವಿದ್ಯಾಗಿರಿ: ‘ನಮ್ಮ ಭವಿಷ್ಯದ ನಿರ್ಮಾತೃಗಳು ನಾವೇ’ ಎಂದು ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್ ಹೇಳಿದರು. ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ‘ಅಭಿವಿನ್ಯಾಸ’ ಕಾರ್ಯಕ್ರಮದಲ್ಲಿ ಸೋಮವಾರ ಅವರು ಮಾತನಾಡಿದರು. ‘ಪ್ರತಿ ವ್ಯಕ್ತಿಯೂ ತನ್ನ ಜೊತೆಯೇ ತಾನು ಅತಿ ಹೆಚ್ಚು ಸಂವಹನ ನಡೆಸುತ್ತಾನೆ. ಆ ಸಂವಹನದ ಆಧಾರದಲ್ಲಿಯೇ ಆತನ ವ್ಯಕ್ತಿತ್ವ ರೂಪುಗೊಳ್ಳುತ್ತಾ ಹೋಗುತ್ತದೆ. ಹೀಗಾಗಿ, ನಮ್ಮನ್ನು ನಾವೇ ರೂಪಿಸಿಕೊಳ್ಳುತ್ತೇವೆ’ ಎಂದರು. ‘ಪತ್ರಿಕೋದ್ಯಮ ವಿದ್ಯಾರ್ಥಿಗಳು ಮಾಹಿತಿ ಗಳಿಕೆಗಿಂತ ಹೆಚ್ಚು ತಿಳಿವಳಿಕೆ ಬೆಳೆಸಿಕೊಳ್ಳಲು ಆದ್ಯತೆ ನೀಡಬೇಕು. ಸಮಾಜ ಹಾಗೂ ಜಗತ್ತಿನ ವಿದ್ಯಮಾನಗಳಿಗೆ ಸ್ಪಂದಿಸುವ ಸೂಕ್ಷ್ಮತೆ ಬೆಳೆಸಿಕೊಳ್ಳಬೇಕು. ಮೌಲ್ಯಯುತ ಪ್ರಶ್ನೆಗಳನ್ನು ಕೇಳಬೇಕು’ ಎಂದರು. ‘ಆಳ್ವಾಸ್ ಕಾಲೇಜಿನಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿಗಳು ವಿಫುಲ ಅವಕಾಶ ಹೊಂದಿದ್ದು, ವೈಯಕ್ತಿಕ ವಿಕಸನಕ್ಕೆ ಉತ್ತಮ ವೇದಿಕೆ ಹೊಂದಿದೆ’ ಎಂದು ಅವರು ವಿವರಿಸಿದರು. ‘ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ಸಂವಿಧಾನ’ ಕುರಿತು ಮಾತನಾಡಿದ ಕಾಲೇಜಿನ ರಾಜ್ಯಶಾಸ್ತ್ರ ಸಹಾಯಕ ಪ್ರಾಧ್ಯಾಪಕ ಧನಂಜಯ ಆಚಾರ್ಯ,…
ಟೈಟಲ್, ಪೋಸ್ಟರ್ ನಿಂದಲೇ ಕುತೂಹಲ ಕೆರಳಿಸಿರೋ “ಗಬ್ಬರ್ ಸಿಂಗ್” ತುಳು ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಸಿನಿಮಾವನ್ನು ಸೆನ್ಸಾರ್ ಗೆ ಕಳುಹಿಸಲಾಗಿದೆ ಎಂದು ಚಿತ್ರದ ನಿರ್ಮಾಪಕ ಸತೀಶ್ ಪೂಜಾರಿ ಬಾರ್ಕೂರು ತಿಳಿಸಿದ್ದಾರೆ. ಮುತ್ತು ಗೋಪಾಲ್ ಫಿಲ್ಮ್ಸ್ ಬಾರ್ಕೂರು ಲಾಂಛನದಲ್ಲಿ ಸತೀಶ್ ಪೂಜಾರಿ ಬಾರ್ಕೂರು ನಿರ್ಮಾಣದಲ್ಲಿ ತಯಾರಾದ ಗಬ್ಬರ್ ಸಿಂಗ್ ಸಿನಿಮಾಕ್ಕೆ ಸುರತ್ಕಲ್, ಚಿತ್ರಾಪುರ, ಬೈಕಂಪಾಡಿ ಮೊದಲಾದ ಪ್ರದೇಶಗಳಲ್ಲಿ ಸಿನಿಮಾಕ್ಕೆ ಮೂರು ಹಂತಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ನಾಯಕ ನಟನಾಗಿ ಶರಣ್ ಶೆಟ್ಟಿ, ನಾಯಕಿಯಾಗಿ ವೆನ್ಸಿಟಾ ಅಭಿನಯಿಸಿದ್ದಾರೆ. ಸಮಾಜದಲ್ಲಿ ಅಶಾಂತಿ ಸೃಷ್ಟಿಯಾದಾಗ ಮತ್ತೆ ಶಾಂತಿ ನೆಲೆಸುವಂತೆ ಮಾಡುವ ಖಡಕ್ ಅಧಿಕಾರಿ ಪಾತ್ರದಲ್ಲಿ ಶರಣ್ ಶೆಟ್ಟಿ ಕಾಣಿಸಿಕೊಂಡಿದ್ದಾರೆ. “ಗಬ್ಬರ್ ಸಿಂಗ್” ಆಕ್ಷನ್ ಥ್ರಿಲ್ಲರ್ ಫ್ಯಾಮಿಲಿ ಓರಿಯೆಂಟೆಡ್ ಫಿಲ್ಮ್ ಆಗಿದೆ. ಮುಂದಿನ ಡಿಸೆಂಬರ್ ಹೊತ್ತಿಗೆ ತುಳುವರ ಮುಂದೆ ಹಾಜರಾಗುವ ಇರಾದೆ ಚಿತ್ರತಂಡಕ್ಕಿದೆ. ಸಿನಿಮಾಕ್ಕೆ ಕತೆ, ಚಿತ್ರಕತೆ, ನಿರ್ದೇಶನದ ಜವಾಬ್ದಾರಿಯನ್ನು ಪ್ರದೀಪ್ ಬೈಕಾಡಿ ವಹಿಸಿದ್ದಾರೆ. ಮಧು ಸುರತ್ಕಲ್ ಸಂಭಾಷಣೆ ರಚಿಸಿದ್ದಾರೆ. ಮುಖ್ಯ ಪಾತ್ರದಲ್ಲಿ ನವೀನ್ ಡಿ ಪಡೀಲ್, ಅರವಿಂದ ಬೋಳಾರ್,…
ಆಧುನಿಕ ಜೀವನ ಶೈಲಿ, ಜಂಕ್ ಫುಡ್ ಸೇವನೆ, ವ್ಯಾಯಾಮದ ಕೊರತೆ, ಒತ್ತಡದ ಬದುಕು ಇವೆಲ್ಲವುಗಳನ್ನು ನಿಭಾಯಿಸುವಲ್ಲಿ ವಿಫಲವಾಗಿರುವ ಭಾರತವು ಇಂದು ಮಧುಮೇಹಿಗಳ ರಾಷ್ಟ್ರವಾಗುತ್ತಿದೆ. ದಿ ಲ್ಯಾನ್‌ಸೆಟ್ ಜರ್ನಲ್ ಇತ್ತೀಚಿಗೆ ಪ್ರಕಟಿಸಿದ ಸಮೀಕ್ಷೆಯ ವರದಿಯಲ್ಲಿ ಈ ಮಾಹಿತಿ ಹೊರಬಿದ್ದಿದೆ. ಭಾರತದ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆಸಿದ ಆರೋಗ್ಯ ಸಮೀಕ್ಷೆಯಲ್ಲಿ ದೇಶದಲ್ಲಿ ಮಧುಮೇಹ ಸಮಸ್ಯೆಗೆ ಒಳಗಾಗಿರುವವರ ಸಂಖ್ಯೆ ಅಧಿಕವಾಗಿದ್ದು ಈ ನಿಟ್ಟಿನಲ್ಲಿ ಶೀಘ್ರವಾಗಿ ಕ್ರಮ ತೆಗೆದು ಕೊಳ್ಳಬೇಕು ಎಂದು ವರದಿ ಹೇಳಿದೆ. ಏನಿದು ವರದಿ ? ವರದಿಯಲ್ಲೇನಿದೆ? ಎಂಬ ಮಾಹಿತಿ ಇಲ್ಲಿದೆ. ಯಾರ ಸಮೀಕ್ಷೆ ? ಮದ್ರಾಸ್ ಡಯಾಬಿಟಿಕ್ಸ್ ರಿಸರ್ಚ್ ಫೌಂಡೇಶನ್ (ಎಂಡಿಆರ್‌ಆಫ್ ), ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್), ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಜಂಟಿಯಾಗಿ ಮಧುಮೇಹ ಹಾಗೂ ಕ್ರೋನಿಕ್ ನಾನ್ ಕಮ್ಯುನಿಕೇಬಲ್ ಡಿಸೀಸ್‌ನ (ಎನ್‌ಸಿಡಿ ) ಮೇಲೆ ಕೈಗೊಂಡ ದೇಶದ ಅತೀ ದೊಡ್ಡ ಸಮೀಕ್ಷೆ ಇದಾಗಿದೆ. ಗೋವಾದಲ್ಲಿ ಅಧಿಕ ಈ ಸಮೀಕ್ಷೆಯ ಪ್ರಕಾರ 2019-2021ರ…
ಡಾ. ಸುಧಾಕರ ಶೆಟ್ಟಿ ಇವರ ನೇತೃತ್ವದಲ್ಲಿ ಅತೀ ಶೀಘ್ರದಲ್ಲೇ ಕಟೀಲ್ ಬೇಬಿ ಫ್ರೆಂಡ್ ಮಕ್ಕಳ ಸಂಚಾರಿ ಕ್ಲಿನಿಕ್ ಆರಂಭ
ಪುಣೆಯ ಖ್ಯಾತ ಮಕ್ಕಳ ತಜ್ಞ ಡಾ. ಸುಧಾಕರ ಶೆಟ್ಟಿಯವರು ದಕ್ಷಿಣ ಕನ್ನಡ ಜಿಲ್ಲಾ ಕರ್ನಾಟಕ ಸರಕಾರದ ರಾಜ್ಯೋತ್ಸವ ಪ್ರಶಸ್ತಿ-2022 ಪುರಸ್ಕೃತರು. ಇವರು ಕೇಂದ್ರ ಸರಕಾರದ ರಕ್ಷಾ ಮಂತ್ರಿ ಪ್ರಶಸ್ತಿ ಪುರಸ್ಕೃತ ತಂಡದ ಸದಸ್ಯರು. ಪುಣೆ ಕಂಟೋನ್ಮೆಂಟ್ ಬೋರ್ಡ್ ಆಸ್ಪತ್ರೆ ತಂಡದ ಸದಸ್ಯರು ಕೂಡಾ ಹೌದು. ಇವರ ಮಗ ಡಾ. ವೀರೆನ್ ಶೆಟ್ಟಿಯವರು ಹೋಮಿಯೋಪತಿಯಲ್ಲಿ ಮಕ್ಕಳ ವೈದ್ಯಕೀಯ ವಿಭಾಗದಲ್ಲಿ ಎಂ.ಡಿ. ಪದವೀಧರರು. ಖ್ಯಾತ ಸಮಾಜಸೇವಕರು, ಮಾನವೀಯ ಮೌಲ್ಯಗಳಿಗೆ ಜೀವ ತುಂಬುವ ಡಾ. ಸುಧಾಕರ ಶೆಟ್ಟಿಯವರಿಗೆ ಹುಟ್ಟೂರು ಎಂದರೆ ಪಂಚಪ್ರಾಣ. ಅದಕ್ಕಾಗಿ ಮೂಡಬಿದ್ರೆ ಮತ್ತು ಕಟೀಲ್‌ನಲ್ಲಿ ಬೇಬಿ ಫ್ರೆಂಡ್ ಸಂಚಾರಿ ಮಕ್ಕಳ ಕ್ಲಿನಿಕ್ ಅನ್ನು ಆರಂಭಿಸುವ ಯೋಜನೆ ಹೊಂದಿದ್ದಾರೆ. ಇದು ತುಳುನಾಡಿನ ನಾಗರಿಕರಿಗೆ ಸಂತಸದ ಸುದ್ಧಿ. “ನಗು ಮುಖದ ಮಗುವೇ ನಮ್ಮ ಅಂತಿಮ ಗುರಿ” ಎಂಬ ಧ್ಯೇಯ ವಾಕ್ಯದೊಂದಿಗೆ ಮಕ್ಕಳ ಆರೋಗ್ಯ ಭಾಗ್ಯಕ್ಕಾಗಿ ಡಾ. ಸುಧಾಕರ ಶೆಟ್ಟಿಯವರು ಬೇಬಿ ಫ್ರೆಂಡ್ ಸಂಚಾರಿ ಮಕ್ಕಳ ಕ್ಲಿನಿಕ್ ನ್ನು ಆರಂಭಿಸಲಿದ್ದಾರೆ. ಬೇಬಿ ಫ್ರೆಂಡ್ ಎಂದರೆ ಪುಣೆಯಲ್ಲಿ ಅವರು…
ಕೆದಂಬಾಡಿ ರಾಮಯ್ಯ ಗೌಡರ ನಾಯಕತ್ವದ ತುಳುನಾಡಿನ ವೀರ ರೈತಾಪಿ ಸೇನೆಯು ಬಾವುಟ ಗುಡ್ಡೆಯಲ್ಲಿ ಬ್ರಿಟಿಷ್ ಧ್ವಜ ಕಿತ್ತೆಸೆದು ತುಳುನಾಡಿನಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಪ್ರಥಮ ವಿಜಯ ಪತಾಕೆ ಹಾರಿಸಿದ ಸ್ಮರಣಾರ್ಥ “ಅಮರ ಸುಳ್ಯ ಸ್ವಾತಂತ್ರ್ಯ ಸಂಗ್ರಾಮ- ಸಂಸ್ಮರಣ ದಿನ’ ಕಾರ್ಯಕ್ರಮವನ್ನು ಎ. 5ರಂದು ಬೆಳಗ್ಗೆ 10.30ಕ್ಕೆ ನಗರದ ಅಲೋಶಿಯಸ್ ಕಾಲೇಜಿನ ಲೊಯೊಲ್ಲಾ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡ ಸ್ಮಾರಕ ಉಸ್ತುವಾರಿ ಸಮಿತಿ ವತಿಯಿಂದ ನಡೆಯುವ ಸಮಾರಂಭದಲ್ಲಿ ಕೆದಂಬಾಡಿ ರಾಮಯ್ಯ ಗೌಡ ರಾಜ್ಯ ಶೌರ್ಯ ಪ್ರಶಸ್ತಿಗಾಗಿ ಭಾರತೀಯ ಭೂ ಸೇನೆಯ ನಿವೃತ್ತ ಯೋಧ, 2016ರಲ್ಲಿ ನಿಗೂಢವಾಗಿ ಕಣ್ಮರೆಯಾಗಿ ಇನ್ನೂ ಪತ್ತೆಯಾಗದ ವಿಮಾನದಲ್ಲಿದ್ದ ಸುಬೇದಾರ್ ಏಕನಾಥ ಶೆಟ್ಟಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸಮಿತಿ ಅಧ್ಯಕ್ಷ ಎಂ.ಬಿ. ಕಿರಣ್ ಬುಡ್ಲೆಗುತ್ತು ಅವರು ಸೋಮವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿ ಗೋಷ್ಠಿಯಲ್ಲಿ ತಿಳಿಸಿದರು. ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ| ನಿರ್ಮಲಾ ನಂದನಾಥ ಮಹಾಸ್ವಾಮೀಜಿ ಅನುಗ್ರಹ ಸಂದೇಶ ನೀಡುವರು. ಮಂಗಳೂರು ಶಾಖಾ ಮಠದ…
ಒಂದು ತರಹದ ಕಿರುನಗು ಹಾಗೂ ಆಶ್ಚರ್ಯ ಮೂಡಿದರು ಹೆದ್ದಾರಿ ತಡೆಗೋಡೆಗೆ ಬಿದಿರು ಉಪಯೋಗ ಅನ್ನುವುದನ್ನು ಕೇಳಿದಾಗ. ಆದರೂ ಇದು ಸತ್ಯ. ವಿಶ್ವದಲ್ಲೆ ಮೊದಲ ಪ್ರಯತ್ನವಿದು. ರಾಷ್ಟ್ರೀಯ ಹೆದ್ದಾರಿ ಅಕ್ಕ ಪಕ್ಕ ಪ್ರಾಣಿಗಳು ರಸ್ತೆ ಗಿಳಿಯದಂತೆ ತಡೆಯಲು ಮತ್ತು ವಾಹನಗಳು ಡಿಕ್ಕಿ ಹೊಡೆದಾಗ ದೊಡ್ಡ ಪ್ರಮಾಣದ ಅನಾಹುತ ತಪ್ಪಿಸಲು ಉಕ್ಕಿನ ತಡೆಗೋಡೆ ಹಾಕುವುದು. ಮಣ್ಣಿನ, ಇಟ್ಟಿಗೆಯ ಕಬ್ಬಿಣದ ಕಂಬ, ಕಲ್ಲುಕಂಬದ ಬಳಕೆ ಸಾಮಾನ್ಯ. ಕೇಂದ್ರ ಸರಕಾರದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಇದೇ ಮೊದಲ ಬಾರಿಗೆ ಗುಣಮಟ್ಟದ ಅಂದರೆ ಉಕ್ಕಿನ ಗೋಡೆ ಹೆಚ್ಚಿನ ಶಕ್ತಿ ಎಂಬುದು ಎಲ್ಲರ ಭಾವನೆ ಆದರೆ ಬಿದಿರು ತಡೆಗೋಡೆಯನ್ನು ಅದಕ್ಕಿಂತ ಶಕ್ತಿ ಶಾಲಿ ಮಾಡಲು ಬಂಬೂಸಾ ಬಲ್ಕೋವಾ ಎಂಬ ಜಾತಿಗೆ ಸೇರಿದ ಬಿದಿರನ್ನು ಬಳಸಲಾಗುತ್ತದೆ . ಈ ತಡೆ ಗೋಡೆಯನ್ನು ಇಂದೋರ್‌ನ ಪ್ರೀತಂ ಪುರದಲ್ಲಿರುವ ರಾಷ್ಟ್ರೀಯ ವಾಹನ ಪರೀಕ್ಷಾ ಕೇಂದ್ರದಲ್ಲಿ ಕಠಿಣ ಪರೀಕ್ಷೆಗೆ ಒಳಪಟ್ಟಿದೆ. ಮಹಾರಾಷ್ಟ್ರ ಚಂದ್ರಪುರ ಮತ್ತು ಯವತ್ಮಾಳ ಜಿಲ್ಲೆಗಳನ್ನು ಸಂಪರ್ಕಿಸುವ ಹೆದ್ದಾರಿಯಲ್ಲಿ ಬರುವ ವಾಣಿ…
ಗೋಲ್ಕೊಂಡ ಕೋಟೆ ಅಥವಾ ಗೊಲ್ಲಕೊಂಡ ಕೋಟೆ ಹೈದರಾಬಾದ್ ನಗರದಿಂದ 15 ಕಿಮೀ ದೂರದಲ್ಲಿದೆ. ಇದನ್ನು ಮಂಗಳಗಿರಿ ಎಂದು ಕರೆಯುತ್ತಾರೆ . ಕುರಿಗಾಹಿಗಳ ದಿಟ್ಟ ಎಂಬ ಅರ್ಥವೂ ವಿದೆ. ಇಲ್ಲಿಗೆ ಗುಂಪಿನಲ್ಲಿ ಹೋಗಿ ನೋಡಿ ಬರಬಹುದು. ಏಕಾಂಗಿಯಾಗಿ ಹೋದರೆ ಅಪಾಯ ಕಟ್ಟಿಟ್ಟ ಬುತ್ತಿ. ಲೂಟಿಕೊರರು, ವಂಚಕರ ತಾಣವಿದು, ಇಲ್ಲಿ ಕಾವಲುಗಾರರಿದ್ದಾರೆ ಆದರೆ ಅವರು ಬರೆ ಲೆಕ್ಕಕ್ಕೆ ಅಷ್ಟೇ. ಯಾದವ ರಾಜವಂಶದ ಅವಧಿಯಲ್ಲಿ ನಿರ್ಮಾಣವಾಗಿದ್ದ ಈ ಕೋಟೆ ಒಬ್ಬ ದನ ಕಾಯುವವನಿಗೆ ಇಲ್ಲಿ ಒಂದು ದೇವತಾ ಮೂರ್ತಿ ದೊರೆತ ಕಾರಣ ಆಗಿನ ರಾಜರು ಈ ಸ್ಥಳದಲ್ಲಿ ಮಣ್ಣಿನ ಕೋಟೆಯನ್ನು ನಿರ್ಮಾಣ ಮಾಡಿದ್ದರು. ದನ ಕಾಯುವ ಗೊಲ್ಲನಿಗೆ ಮೂರ್ತಿ ಸಿಕ್ಕಿ ಅರಮನೆ ಕಟ್ಟಲು ಕಾರಣವಾದುದಕ್ಕೆ ಈ ಕೋಟೆಗೆ ಗೊಲ್ಲಕೊಂಡ ಅಂತಲೂ ನಂತರ ಗೋಲ್ಕೊಂಡ ಕೋಟೆ ಎಂದು ಕರೆಯಲಾಯಿತು. ಈ ಅರಮನೆ 5 ಕಿ.ಮಿಗೂ ಹೆಚ್ಚಿನ ವಿಸ್ತಾರ ಹೊಂದಿದೆ. 400 ಅಡಿ ಎತ್ತರದ ಒಂದು ಗ್ರಾನೈಟ್ ಪರ್ವತದ ಮೇಲೆ 4 ಪ್ರತ್ಯೇಕವಾದ ಕೋಟೆ ಮತ್ತು ಕೋಟೆಯ ಸುತ್ತಲೂ…
ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡಿದ್ದ ಕಟಪಾಡಿ ಅಚ್ಚಡದ ಪೊಸೊಕ್ಕೆಲ್ ವಾಸು ವಿ. ಶೆಟ್ಟಿ (108) ಅವರು ಜ. 23ರಂದು ಸ್ವಗೃಹದಲ್ಲಿ ನಿಧನ ಹೊಂದಿದರು.ಮೃತರು ಪುತ್ರ, ಪುತ್ರಿಯನ್ನು ಅಗಲಿದ್ದಾರೆ. ಮೂಲತಃ ಪಡುಬಿದ್ರಿಯವರಾದ ವಾಸು ಶೆಟ್ಟಿ ತನ್ನ 9ನೇ ವಯಸ್ಸಿನಲ್ಲಿ ಮುಂಬಯಿಗೆ ತೆರಳಿದ್ದು, ಹೊಟೇಲು ವ್ಯಾಪಾರ ನಡೆಸುತ್ತಿದ್ದರು. 9 ವರ್ಷ ಟಾಟಾ ಕಂಪೆನಿಯಲ್ಲಿ ಬಳಿಕ ದಾದರ್ ಬಿಇಎಸ್‌ಟಿ ಡಿಪೋದಲ್ಲಿ ಮೆಕ್ಯಾನಿಕ್ ಆಗಿ ದುಡಿಯುತ್ತಿದ್ದರು. ತನ್ನ 30ರ ಹರೆಯದಲ್ಲಿ ಮುಂಬಯಿಯಲ್ಲಿ ಸರ್ದಾರ್ ವಲ್ಲಭಾಭಾಯಿ ಪಟೇಲ್, ಗಾಂಧೀಜಿ, ಸುಭಾಸ್‌ಚಂದ್ರ ಬೋಸ್ ಸಹಿತ ಅನೇಕ ನಾಯಕರ ಮೋರ್ಚಾಗಳಲ್ಲಿ ಜನ ಸೇರಿಸಿಕೊಂಡು ಸ್ವಾತಂತ್ರ್ಯಕ್ಕಾಗಿ ಉಗ್ರ ಸ್ವರೂಪದ ಹೋರಾಟ ನಡೆಸಿದ್ದರು. ಸ್ವಾತಂತ್ರ್ಯ ಒಂದೇ ಗುರಿ ಎಂಬ ಧ್ಯೇಯದಡಿ ಹೋರಾಟದಲ್ಲಿ ಪಾಲ್ಗೊಂಡಿದ್ದು, ಕೆಲವೆಡೆ ಬಾಂಬು ದಾಳಿ ನಡೆದಾಗ ಅಪಾಯದಲ್ಲಿ ಸಿಲುಕಿದವರನ್ನು ಆಸ್ಪತ್ರೆಗೆ ಸಾಗಿಸುವ, ಮರಣ ಹೊಂದಿದವರ ಮೃತದೇಹಗಳನ್ನು ಸುಡುವ ಕೆಲಸದಲ್ಲೂ ತೊಡಗಿಸಿಕೊಂಡಿದ್ದರು. ಶಿಸ್ತನ್ನು ಮೈಗೂಡಿಸಿಕೊಂಡಿದ್ದ ಅವರು ನಿವೃತ್ತಿಯ ಬಳಿಕ ಊರಿಗೆ ಹಿಂದಿರುಗಿದ್ದು, ಗೇಣಿಗೆ ಪಡೆದು ಕೃಷಿ ಕಾಯಕ ನಡೆಸುತ್ತಿದ್ದರು. ಸ್ಥಳೀಯವಾಗಿ ಸಂಘ ಸಂಸ್ಥೆಗಳು ಅವರನ್ನು…















