

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ) ಮಂಗಳೂರು ವತಿಯಿಂದ ನಡೆಸಲಾಗುವ ಯಕ್ಷಧ್ರುವ ಯಕ್ಷಶಿಕ್ಷಣ 2026 -27ನೇ ಸಾಲಿನ ತರಬೇತಿಯನ್ನು ಇತ್ತೀಚೆಗೆ ಬಿಇಎಂ ಪ್ರೌಢ ಶಾಲೆ ಮಂಗಳೂರು ವಿದ್ಯಾಸಂಸ್ಥೆಯಲ್ಲಿ ಪಟ್ಲ ಫೌಂಡೇಶನ್ ಕೇಂದ್ರ ಘಟಕದ ಸಂಘಟನಾ ಕಾರ್ಯದರ್ಶಿ ಪ್ರದೀಪ್ ಆಳ್ವ ಕದ್ರಿಯವರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಯಕ್ಷಗಾನ ಕಲಿಕೆಯಿಂದ ಪುರಾಣ ಜ್ಞಾನ, ವೃದ್ಧಿಸುವುದರ ಜೊತೆಗೆ, ಸಂಭಾಷಣ ಚತುರತೆ, ಶಾರೀರಿಕ ವ್ಯಾಯಾಮ ದೊರೆತು ಒಳ್ಳೆಯ ಜ್ಞಾನ ಲಭಿಸುತ್ತದೆ. ಯಕ್ಷಗಾನ ಕಲಿಕಾ ವಿದ್ಯಾರ್ಥಿಗಳು ಶಾಲಾ ಕಲಿಕೆಯಲ್ಲೂ ಮುಂದಿರುವುದು ಕಂಡು ಬರುತ್ತಿದೆ ಎಂದು ಅಭಿಪ್ರಾಯ ಪಟ್ಟರು. ಬಿಇಎಂ ವಿದ್ಯಾಸಂಸ್ಥೆಯ ಸಂಚಾಲಕರಾದ ರೆ| ಮನೋಜ್ ಅವರು ಅಧ್ಯಕ್ಷತೆ ವಹಿಸಿದ್ದರು.



ಯಕ್ಷಧ್ರುವ ಪಟ್ಲ ಫೌಂಡೇಶನ್ ಮಂಗಳೂರು ಘಟಕದ ಅಧ್ಯಕ್ಷ ಲ| ತಾರಾನಾಥ ಶೆಟ್ಟಿ ಬೋಳಾರ, ಪ್ರಧಾನ ಕಾರ್ಯದರ್ಶಿ ಕೃಷ್ಣ ಶೆಟ್ಟಿ ತಾರೆಮಾರ್, ಕೋಶಾಧಿಕಾರಿ ಗೋಪಿನಾಥ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಯಕ್ಷಗಾನ ನಾಟ್ಯಗುರುಗಳಾದ ಅಶ್ವಥ್ ಮಂಜನಾಡಿ ಉಪಸ್ಥಿತರಿದ್ದು, ತರಗತಿಯ ಬಗ್ಗೆ ಮಾಹಿತಿ ನೀಡಿದರು. ಬಿಇಯಂ ಪ್ರೌಢಶಾಲಾ ಮುಖ್ಯ ಶಿಕ್ಷಕ ಯಶವಂತ ಮಾಡ ಟಿ, ಬಿಇಎಂ ಪದವಿಪೂರ್ವ ಕಾಲೇಜು ಉಪನ್ಯಾಸಕಿ ಶ್ರೀಮತಿ ಸಾಧನಾ ಉಪಸ್ಥಿತರಿದ್ದರು. ಶಾಲಾ ಶಿಕ್ಷಕಿ ಶ್ರೀಮತಿ ಶಿಲ್ಪಶ್ರೀ ಎಫ್ ನಿರೂಪಿಸಿ, ಯೋಗೀಶ ರಾವ್ ಚಿಗುರುಪಾದೆ ಸ್ವಾಗತಿಸಿ, ಶಿಕ್ಷಕಿ ಶ್ರೀಮತಿ ಸಂಧ್ಯಾ ಕೆ ಧನ್ಯವಾದಗೈದರು.





























































































































