ಬ್ರಹ್ಮಾವರದಲ್ಲಿರುವ ಫಾರ್ಚ್ಯೂನ್ ಅಕಾಡೆಮಿಕ್ ಆಂಡ್ ಚಾರಿಟೆಬಲ್ ಟ್ರಸ್ಟ್ ನ ಆಡಳಿತಕ್ಕೊಳಪಟ್ಟ ಫಾರ್ಚ್ಯೂನ್ ಅಕಾಡೆಮಿ ಆಫ್ ಹೆಲ್ತ್ ಸೈನ್ಸಸ್ ಹಾಗೂ ಮಾಬುಕಳ ಬಿ.ಡಿ. ಶೆಟ್ಟಿ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭ ಜರಗಿತು.
ಅತಿಥಿಗಳಾಗಿ ಹಂಗಾರಕಟ್ಟೆ ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷ, ಉದ್ಯಮಿ ಬಿ. ಭರತ್ ಕುಮಾರ್ ಶೆಟ್ಟಿ, ಕಾರ್ಯದರ್ಶಿ ಎಚ್. ಇಬ್ರಾಹಿಂ ಸಾಹೇಬ್, ಚೇತನಾ ಪ್ರೌಢಶಾಲೆಯ ಕಲ್ಪನ ಶೆಟ್ಟಿ ಉಪಸ್ಥಿತರಿದ್ದರು. ಫಾರ್ಚ್ಯೂನ್ ಅಕಾಡೆಮಿ ಆಫ್ ಹೆಲ್ತ್ ಸೈನ್ಸಸ್ ನ ಅಧ್ಯಕ್ಷ ಡಾ. ದೈವಿಕ್ ಟಿ. ಶೆಟ್ಟಿ ಅಧ್ಯಕ್ಷತೆ ವಹಿಸಿ, ವಿದ್ಯಾರ್ಥಿಗಳಿಗೆ ಪ್ರಾವೀಣ್ಯತ ಪ್ರಶಸ್ತಿ ವಿತರಿಸಿದರು. ಕಾಲೇಜಿನ ಚೇರ್ ಮೆನ್ ತಾರನಾಥ್ ಶೆಟ್ಟಿ ವಿವಿಧ ಸ್ವರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ರತ್ನಾಕರ್ ಶೆಟ್ಟಿ, ನಿವೃತ್ತ ಪ್ರಾಂಶುಪಾಲ ಮೇಜರ್ ಜಿ. ಬಾಲಕೃಷ್ಣ ಶೆಟ್ಟಿ, ವಿದ್ಯಾರ್ಥಿ ನಾಯಕರಾದ ಧ್ರುವ ಧನುಷ್ ಇದ್ದರು. ಪ್ರಾಂಶುಪಾಲ ಪ್ರೊ.ಸ್ಮಿತಾಮೊಲ್ ಎಂ. ಸ್ವಾಗತಿಸಿ, ಉಪನ್ಯಾಸಕರಾದ ಸುಪ್ರೀತಾ, ಪೂರ್ಣಿಮಾ, ಸುಕುಮಾರ್ ಶೆಟ್ಟಿಗಾರ್ ಬಹುಮಾನ ವಿಜೇತರ ವಿವರ ವಾಚಿಸಿದರು. ಅಶ್ವಿನಿ ನಿರೂಪಿಸಿ, ಜೆರಿಕ್ ಡಿ ‘ಸಿಲ್ವ ವಂದಿಸಿದರು.