ಬಾರ್ಕೂರು ಮಹಾಸಂಸ್ಥಾನ ಭಾರ್ಗವ ಬೀಡುವಿನಲ್ಲಿ ಅಳಿಯ ಕಟ್ಟು ಪರಂಪರೆಯ ಮೂಲ ಅರಸ ಭೂತಾಳ ಪಾಂಡ್ಯ ರಾಜನ ಕುಂಡೋಧರ ದೈವಸ್ಥಾನದಲ್ಲಿ ಮೂರು ವರ್ಷಕೊಮ್ಮೆ ನಡೆಯುವ ರಾಜನ್ ದೈವಗಳ ನಡಾವಳಿ ಮತ್ತು ನೇಮೋತ್ಸವ ವಿಶ್ವ ಸಂತೋಷ ಭಾರತಿ ಸ್ವಾಮೀಜಿ ಅವರ ಉಪಸ್ಥಿತಿಯಲ್ಲಿ ನಡೆಯಿತು.
ಚಲನಚಿತ್ರ ನಟ, ನಿರ್ದೇಶಕ ರಿಷಬ್ ಶೆಟ್ಟಿ ನೇಮೋತ್ಸವದಲ್ಲಿ ಭಾಗಿಯಾದರು. ಸಂಸ್ಥಾನದ ವತಿಯಿಂದ ಅವರನ್ನು ಗೌರವಿಸಲಾಯಿತು. ಸಂಸ್ಥಾನದ ಅಧ್ಯಕ್ಷ ಕೆ. ಎಂ. ಶೆಟ್ಟಿ, ಪದಾಧಿಕಾರಿಗಳಾದ ಮನೋಹರ ಶೆಟ್ಟಿ, ಗೋಪಾಲಕೃಷ್ಣ ಶೆಟ್ಟಿ, ಅನಿಲ್ ಕುಮಾರ್ ಶೆಟ್ಟಿ, ನಾಗರಾಜ್ ನಾಯ್ಕ್, ರಾಘವೇಂದ್ರ ಶೆಟ್ಟಿ, ಸಂತೋಷ್ ಶೆಟ್ಟಿ ಇನ್ನಾ ಬಾಳಿಕೆ ಕುರ್ಕಿಲ್ ಬೆಟ್ಟು ಇದ್ದರು. ಸಾವಿರಾರು ಭಕ್ತಾದಿಗಳ ಉಪಸ್ಥಿತಿಯಲ್ಲಿ ದೊಂದಿ ಬೆಳಕಿನಲ್ಲಿ ನೇಮೋತ್ಸವ ನಡೆದದ್ದು ವಿಶೇಷವಾಗಿತ್ತು.
