ಪುಣೆ : ಪುಣೆ ತುಳುಕೂಟದ ಸಭೆಯು ನ 5ರಂದು ಕರ್ವೆ ರೋಡ್ ನಲ್ಲಿಯ ರತ್ನ ಹೋಟೆಲ್ ನ ಬ್ಯಾಂಕ್ವೆಟ್ ಹಾಲ್ ನಲ್ಲಿ ತುಳುಕೂಟದ ಅಧ್ಯಕ್ಷರಾದ ದಿನೇಶ್ ಶೆಟ್ಟಿ ಕಳತ್ತೂರು ರವರ ಅಧ್ಯಕ್ಷತೆಯಲ್ಲಿ ಜರಗಿತು .ವೇದಿಕೆಯಲ್ಲಿ ತುಳುಕೂಟದ ಸ್ಥಾಪಕ ಅಧ್ಯಕ್ಷ ಜಯ ಕೆ .ಶೆಟ್ಟಿ ,ರಜತ ಮಹೋತ್ಸವ ಸಮಿತಿಯ ಅಧ್ಯಕ್ಷ ಪ್ರವೀಣ್ ಶೆಟ್ಟಿ ಪುತ್ತೂರು , ತುಳುಕೂಟದ ನಿಕಟ ಪೂರ್ವ ಅಧ್ಯಕ್ಷ ಮೋಹನ್ ಶೆಟ್ಟಿ ಎಣ್ಣೆಹೊಳೆ ,ಸಲಹೆಗಾರರಾದ ಮಾಧವ್ ಶೆಟ್ಟಿಯವರು ಉಪಸ್ಥಿತರಿದ್ದರು .
ಈ ಸಂದರ್ಭದಲ್ಲಿ ಅಧ್ಯಕ್ಷ ದಿನೇಶ್ ಶೆಟ್ಟಿ ಕಳತ್ತೂರು ರವರು ಪುಣೆ ತುಳುಕೂಟದ ನೂತನ ಕಾರ್ಯಕಾರಿ ಸಮಿತಿಯನ್ನು ರಚಿಸಿ ಸಭೆಯಲ್ಲಿ ಪ್ರಕಟಿಸಿದರು ..ಗೌರವ ಅಧ್ಯಕ್ಷರಾಗಿ ಮೋಹನ್ ಶೆಟ್ಟಿ ಎಣ್ಣೆಹೊಳೆ ,ಉಪಾಧ್ಯಕ್ಷರುಗಳಾಗಿ ಮಾಧವ್ ಶೆಟ್ಟಿ ಆಶಿರ್ವಾದ್ ,ಉದಯ್ ಶೆಟ್ಟಿ ಕಳತ್ತೂರು ,ಶೇಖರ್ ಪೂಜಾರಿ ಅಂಬಿಕಾ ,ಪ್ರಧಾನ ಕಾರ್ಯದರ್ಶಿಯಾಗಿ ರಾಜಾರಾಮ್ ಶೆಟ್ಟಿ ,ಜೊತೆ ಕಾರ್ಯದರ್ಶಿಯಾಗಿ ಶರತ್ ಎಂ .ಭಟ್ ,ಕೋಶಾಧಿಕಾರಿಯಾಗಿ ಸಿ.ಎ.ಮನೋಹರ್ ಶೆಟ್ಟಿ ,ಜೊತೆ ಕೋಶಾಧಿಕರಿಯಾಗಿ ಪ್ರಕಾಶ್ ಪೂಜಾರಿ ಪಂಚಮಿ ,ಕಾನೂನು ಸಲಹೆಗಾರರಾಗಿ ನ್ಯಾಯವಾದಿ ಗುರುನಾಥ್ ಶೆಟ್ಟಿ ,ಜನ ಸಂಪರ್ಕಧಿಕಾರಿಗಳಾಗಿ ಸದಾನಂದ ಪೂಜಾರಿ ,ಆನಂದ್ ಶೆಟ್ಟಿ ಮಡಂತ್ಯಾರ್,,ಸಾಂಸ್ಕ್ರತಿಕ ವಿಭಾಗದ ಕಾರ್ಯಧ್ಯಕ್ಷರಾಗಿ ಸಂತೋಷ್ ಶೆಟ್ಟಿ ಎಣ್ಣೆಹೊಳೆ ,ಉಪ ಕಾರ್ಯಧ್ಯಕ್ಷರುಗಳಾಗಿ ಜಗದೀಪ್ ಶೆಟ್ಟಿ ,ತಾರಾನಾಥ್ ಶೆಟ್ಟಿ ಮಡಂತ್ಯಾರ್, ಕ್ರೀಡಾ ಸಮಿತಿ ಕಾರ್ಯಧ್ಯಕ್ಷರಾಗಿ ನಾರಾಯಣ್ ಹೆಗ್ಡೆ ಉಪಕಾರ್ಯಧ್ಯಕ್ಷರಾಗಿ ವಿನಯ್ ಹೆಗ್ಡೆ ,ಕ್ಯಾಟರಿಂಗ್ ಸಮಿತಿ ಕಾರ್ಯಧ್ಯಕ್ಷರಾಗಿ ಯಶವಂತ್ ಶೆಟ್ಟಿ ಉಳಾಯಿಬೆಟ್ಟು ,ಸಮಾಜ ಕಲ್ಯಾಣ ಸಮಿತಿ ಕಾರ್ಯಧ್ಯಕ್ಷರಾಗಿ ಮಹಾಬಲೇಶ್ವರ ದೇವಾಡಿಗ ,ಶಿಕ್ಷಣ ಸಮಿತಿ ಕಾರ್ಯಧ್ಯಕ್ಷರಾಗಿ ದಿವಾಕರ್ ಶೆಟ್ಟಿ ಮಾಣಿಬೆಟ್ಟು,ಅರೋಗ್ಯ ಮತ್ತು ವೈಧ್ಯಕಿಯ ಸಮಿತಿ ಕಾರ್ಯಾಧ್ಯಕ್ಷರಾಗಿ ಸುಧಾಕರ್ ಮೂಲ್ಯ ,,ಸದಸ್ಯ ನೋಂದಾವಣೆ ಸಮಿತಿ ಕಾರ್ಯಾಧ್ಯಕ್ಷರಾಗಿ ಬಾಲಕೃಷ್ಣ ಗೌಡ ,ಉಪ ಕಾರ್ಯಧ್ಯಕ್ಷರಾಗಿ ಮನೋಹರ್ ಶೆಟ್ಟಿ ಉಳಾಯಿ ಬೆಟ್ಟು ,ಪತ್ರಿಕಾ ಮತ್ತು ಮಾಧ್ಯಮ ಸಮಿತಿ ಕಾರ್ಯಧ್ಯಕ್ಷರಾಗಿ ಹರೀಶ್ ಮೂಡಬಿದ್ರಿ ಸಾಮಾಜಿಕ ಜಾಲತಾಣ ಸಮಿತಿ ಕಾರ್ಯಾಧ್ಯಕ್ಷರಾಗಿ ಸುಕೇಶ್ ಶೆಟ್ಟಿ ಮುಂಡ್ಕೂರ್, ಯುವ ವಿಬಾಗದ ಸಮನ್ವಯಕರಾಗಿ ಸುಮೀತ್ ಶೆಟ್ಟಿ ಸಮಿತಿ ಸದಸ್ಯರಾಗಿ ಪ್ರೇಮ್ ಮೊನಿಸ್ ,ದಿನೇಶ್ ಮೂಲ್ಯ ,ರಾಕೇಶ್ ಮಾಡ ,ಶರತ್ ಶೆಟ್ಟಿ ಪಡ್ಡಣಗುತ್ತು,ದಿವಾಕರ್ ಮಟ್ಟಾರ್,ಪ್ರವೀಣ್ ಹೆಗ್ಡೆ ಹಿರ್ಗಾನ,ನವೀನ್ ಬಂಟ್ವಾಳ್, ಶ್ರೀಧರ್ ಪ್ರಭು , ಶಂಕರ್ ಶೆಟ್ಟಿ ಹಿರಿಯಡ್ಕ ರವರನ್ನು ಆಯ್ಕೆ ಮಾಡಲಾಯಿತು ಆಯ್ಕೆಯಾದ ನೂತನ ಸಮಿತಿಯ ಪದಾಧಿಕಾರಿಗಳಿಗೆ ಅಧ್ಯಕ್ಷರಾದ ಕಳತ್ತೂರು ದಿನೇಶ್ ಶೆಟ್ಟಿಯವರು ಪುಷ್ಪಗುಚ್ಛ ನೀಡಿ ಅಭಿನಂದಿಸಿದರು .
ಈ ಸಂದರ್ಭದಲ್ಲಿ ಮಾತನಾಡಿದ ದಿನೇಶ್ ಶೆಟ್ಟಿ ಯವರು ನಮ್ಮ ಮಾತೃ ಭೂಮಿ ತುಳುನಾಡಿನ ಭಾಷೆ ,ಕಲೆ ಸಂಸ್ಕ್ರತಿಗೆ ,ಸಂಸ್ಕಾರಗಳಿಗೆ ಗೌರವ ನೀಡಿ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ತುಳುಕೂಟ ಕೆಲಸ ಮಾಡುತಿದೆ , ಸಣ್ಣ ಮಟ್ಟದಲ್ಲಿ ಸ್ಥಾಪನೆಯಾದ ಸಂಸ್ಥೆ ಇಂದು ಪುಣೆ ತುಳುವರ ಪ್ರತಿಷ್ಟಿತ ಸಂಘಟನೆಯಾಗಿ ಬೆಳೆದು ನಿಂತಿದೆ ,24 ವರ್ಷಗಳಲ್ಲಿ ಸೇವಾ ಕಾರ್ಯಗಳನ್ನು ಮಾಡುತ್ತಾ ಇದೀಗ ರಜತ ಮಹೋತ್ಸವ ವರ್ಷವನ್ನು ಆಚರಿಸಲು ಸಜ್ಜಾಗಿ ನಿಂತಿದೆ .ಅದೇ ರೀತಿ ತುಳುಕೂಟ ನೂತನ ಸಮಿತಿಯ ರಚನೆ ಕೂಡಾ ಆಗಿದೆ ,ರಜತ ಮಹೋತ್ಸವ ಸಮಿತಿ ಅಧ್ಯಕ್ಷರಾಗಿ ಪ್ರವೀಣ್ ಶೆಟ್ಟಿ ಯವರು ಆಯ್ಕೆಯಾಗಿ ಸಂಘಕ್ಕೆ ಬಲ ತುಂಬಿದ್ದಾರೆ . ಯುವ ವಿಭಾಗದ ಅಧ್ಯಕ್ಷರಾಗಿ ಅಭಿಜಿತ ಶೆಟ್ಟಿ ಯವರು ತಮ್ಮ ಕಾರ್ಯ ಗೈಯುತಿದ್ದಾರೆ ,ತುಳುಕೂಟದ ನೂತನ ಸಮಿತಿಯಲ್ಲಿ ಆಯ್ಕೆ ಆಗಿರುವ ಎಲ್ಲಾ ಪದಾಧಿಕಾರಿಗಳು ಮತ್ತು ಸದಸ್ಯರು ,ಹಿಂದಿನ ಮಾಜಿ ಅಧ್ಯಕ್ಷರುಗಳು ,ಸದಸ್ಯರುಗಳು ಹಾಗೂ ಎಲ್ಲಾ ತುಳುವರು ನಮ್ಮ ತುಳುವರ ಸಂಸ್ಥೆ ಎಂಬ ಅಭಿಮಾನ ದಿಂದ ಸಹಕಾರ ನೀಡಿ ಸಂಘದ ಮುಖಾಂತರ ನಡೆಯುವ ಸೇವಾ ಯೋಜನೆಗಳಿಗೆ ಪ್ರೋತ್ಸಾಹ ನೀಡಬೇಕು ಎಂದರು . ಮಹಿಳಾ ವಿಭಾಗ ನೂತನ ಅಧ್ಯಕ್ಷೆ ಮತ್ತು ಆಯ್ಕೆಯಾದ ಪದಾಧಿಕಾರಿಗಳಾದ ಮಾಧವ ಶೆಟ್ಟಿ ,ಉದಯ ಶೆಟ್ಟಿ ಕಳತ್ತೂರು ,ರಾಜಾರಾಮ್ ಶೆಟ್ಟಿ ,ಮನೋಹರ್ ಶೆಟ್ಟಿ,ಗೀತಾ ಪೂಜಾರಿ ಯವರು ಮಾತನಾಡಿದರು . ಸಂತೋಷ್ ಶೆಟ್ಟಿ ಎಣ್ಣೆಹೊಳೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು .
ವರದಿ ಹರೀಶ್ ಮೂಡಬಿದ್ರಿ