Author: admin

ತುಳು ರಂಗಭೂಮಿಯಲ್ಲಿ ಸಂಚಲನ ಸೃಷ್ಟಿಸಿದ ವಿಜಯ್‌ ಕುಮಾರ್‌ ಕೊಡಿಯಾಲ್‌ಬೈಲ್‌ ನಿರ್ದೇಶನದ ಕಲಾಸಂಗಮ ಕಲಾವಿದರ ಅಭಿನಯದ “ಶಿವದೂತೆ ಗುಳಿಗೆ” ನಾಟಕದ 555 ಪ್ರದರ್ಶನದ ಸಂಭ್ರಮ ಕಾರ್ಯಕ್ರಮ ಜ.11ರಂದು ಸಂಜೆ 5ಕ್ಕೆ ನಗರದ ಅಡ್ಯಾರ್‌ ಗಾರ್ಡನ್‌ನಲ್ಲಿ ನಡೆಯಲಿದೆ. ಪತ್ರಿಕಾಗೋಷ್ಠಿಯಲ್ಲಿ ನಿರ್ದೇಶಕ ವಿಜಯ್‌ ಕುಮಾರ್‌ ಕೊಡಿಯಾಲ್‌ಬೈಲ್‌ ಮಾತನಾಡಿ, ತುಳು ರಂಗಭೂಮಿಯಲ್ಲಿ ಅತೀ ಕಡಿಮೆ ಅವಧಿಯಲ್ಲಿ ಅತೀ ಹೆಚ್ಚು ಪ್ರದರ್ಶನ ಕಂಡು, ಅತೀ ಹೆಚ್ಚು ಪ್ರೇಕ್ಷಕರು ವೀಕ್ಷಿಸಿ ಚಾರಿತ್ರಿಕ ದಾಖಲೆ ನಿರ್ಮಿಸಿದ ನಾಟಕ ಶಿವದೂತೆ ಗುಳಿಗೆ ದೇಶ, ವಿದೇಶದಲ್ಲಿ ಯಶಸ್ವಿ ಪ್ರದರ್ಶನ ನಡೆಯುತ್ತಿದೆ. ತುಳು ಹಾಗೂ ಕನ್ನಡ ಪ್ರದರ್ಶನ ನಡೆಯುತ್ತಿದ್ದು, ಸದ್ಯದಲ್ಲಿ ಮಲಯಾಳ ಹಾಗೂ ಇತರ ಭಾಷೆಯಲ್ಲಿಯೂ ನಾಟಕ ಪ್ರದರ್ಶನವಾಗಲಿದೆ ಎಂದರು. ಈ ಸಂಭ್ರಮ ಕಾರ್ಯಕ್ರಮದಲ್ಲಿ ಪತ್ರಕರ್ತ, ರಂಗಕರ್ಮಿ ಪರಮಾನಂದ ವಿ. ಸಾಲಿಯಾನ್‌ ಅವರಿಗೆ 2024ನೇ ವರ್ಷದ ದಿ. ವನಿತಾ ಆನಂದ ಶೆಟ್ಟಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಶ್ರೀ ವಿನಯ ಗುರೂಜಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಡಾ. ಎಂ.ಎನ್‌.ರಾಜೇಂದ್ರ ಕುಮಾರ್‌ ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರಮುಖರಾದ ಐಕಳ ಹರೀಶ್‌ ಶೆಟ್ಟಿ,…

Read More

ವೈಯಕ್ತಿಕ ಕಲಿಕೆಯಲ್ಲೂ ವಿಸ್ತøತ ಚಿಂತನೆ ಇರಲಿ ವಿದ್ಯಾಗಿರಿ: ‘ವೈಯಕ್ತಿಕ ಕಲಿಕೆಯಲ್ಲೂ ವಿಸ್ತøತ ಚಿಂತನೆ ಇರಬೇಕು. ಒಳಿತು ಬದುಕಿನ ಧ್ಯೇಯವಾಗಬೇಕು’ ಎಂದು ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್ ಹೇಳಿದರು. ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಮತ್ತು ವಿಜ್ಞಾನ ಪದವಿಯ ಅನಿಮೇಶನ್ ವಿಭಾಗದ ಸಹಯೋಗದಲ್ಲಿ ಉಜಿರೆಯ ಎಸ್‍ಡಿಎಂ ಕಾಲೇಜಿನ ಬಿವೊಕ್ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ’10 ದಿನಗಳ ಅನಿಮೇಶನ್ ಮತ್ತು ಆಫ್ಟರ್ ಎಫೆಕ್ಟ್ ಪ್ರಶಿಕ್ಷಣಾರ್ಥಿ ಶಿಬಿರ’ದಲ್ಲಿ ಅವರು ಮಾತನಾಡಿದರು. ‘ಬದುಕಿನಲ್ಲಿ ಗುಣಾತ್ಮಕ ಹಾಗೂ ಧನಾತ್ಮಕ ಚಿಂತನೆ ಇದ್ದಾಗ, ತಂತ್ರಜ್ಞಾನದಲ್ಲೂ ಒಳಿತನ್ನೇ ಮಾಡಬಹುದು. ಅತಿ ಬಳಕೆಯಿಂದ ಉಪಯುಕ್ತ ವಸ್ತುವೂ ಅಪಾಯಕಾರಿ ಆಗಬಹುದು. ಈ ಕುರಿತ ಎಚ್ಚರಗಳು ನಮ್ಮೊಳಗೆ ಸದಾ ಇರಬೇಕು’ ಎಂದರು. ‘ಮೊಬೈಲ್‍ನ ಗುಣಾವಗುಣಗಳು ಅದರ ಬಳಕೆಯ ಮೇಲೆ ನಿಂತಿದೆ. ಅಂತೆಯೇ ಬದುಕು ಕೂಡಾ’ ಎಂದು ವಿವರಿಸಿದರು. ‘ಹಾಸ್ಟೆಲ್ ಎಂದರೆ ಕೇವಲ ಊಟ-ವಾಸ್ತವ್ಯದ ಗೂಡಲ್ಲ. ಹಾಸ್ಟೆಲ್ ಜೀವನ ಕಲಿಕೆಯ ಕೇಂದ್ರ. ಬದುಕಿನ ಪ್ರಗತಿಯ ತಾಣ’ ಎಂದು ಬಣ್ಣಿಸಿದರು. ‘ಒಳ್ಳೆಯ ವಿದ್ಯಾರ್ಥಿಗಳನ್ನು ಸೃಜಿಸುವುದೇ ಶಿಕ್ಷಣ…

Read More

ಯಕ್ಷ ಮಿತ್ರರು ಸುರತ್ಕಲ್ ಇದರ 18 ನೇ ವರ್ಷದ ಪ್ರಯುಕ್ತ ಅ.8 ರಂದು ಭಾನುವಾರ ಸುರತ್ಕಲ್ ಇಡ್ಯಾ ಮಹಾಲಿಂಗೇಶ್ವರ ದೇವಸ್ಥಾನದ ಸಿದ್ದಕಟ್ಟೆ ಚೆನ್ನಪ್ಪ ಶೆಟ್ಟಿ ವೇದಿಕೆಯಲ್ಲಿ ಕರ್ಣಾವಸಾನ ಯಕ್ಷಗಾನ ತಾಳಮದ್ದಳೆ ನಡೆಯಿತು. ಈ ಸಂದರ್ಭದಲ್ಲಿ ಯಕ್ಷಗಾನ ಕಲಾವಿದ, ಅರ್ಥಧಾರಿ ಸದಾಶಿವ ಆಳ್ವ ತಲಪಾಡಿ ಅವರನ್ನು ಸನ್ಮಾನಿಸಲಾಯಿತು. ದಿನೇಶ್ ಶೆಟ್ಟಿ ಕಾವಳಕಟ್ಟೆ ಅಭಿನಂದನಾ ಭಾಷಣದಲ್ಲಿ ಸದಾಶಿವ ಆಳ್ವರ ಕಲಾ ಸೇವೆಯನ್ನು ಕೊಂಡಾಡಿದರು. ತಾಳಮದ್ದಲೆ ಅರ್ಥಧಾರಿ ಯಾಗಿ ಸದಾಶಿವ ಆಳ್ವರವರ ಮಾತುಗಾರಿಕೆ, ತುಳು ಭಾಷೆಯಲ್ಲಿ ಅವರಿಗಿರುವ ಹಿಡಿತ ಇಂದಿನ ಯುವ ಕಲಾವಿದರಿಗೆ ಸ್ಪೂರ್ತಿಯಾಗಿದ್ದಾರೆ. ಈ ಹಿಂದೆ ಕಾಂಚನ ಸಂಜಿವ ರೈ, ಬೆಳ್ಳಾರೆ ವಿಶ್ವನಾಥ ಶೆಟ್ಟಿ ತುಳು ಭಾಷೆಯ ಬಗ್ಗೆ ಇದ್ದ ಒಲವು, ಭಾಷಾ ಶುದ್ಧತೆಯನ್ನು ಈಗ ನಾವು ಸದಾಶಿವ ಆಳ್ವರಲ್ಲಿ ಕಾಣಬಹುದು ಎಂದರು. ಇಡ್ಯಾ ದೇವಸ್ಥಾನದ ಆಡಳಿತ ಮೊಕ್ತೇಸರ ಐ. ರಮಾನಂದ ಭಟ್ ರವರ ಆಶೀರ್ವಚನದಲ್ಲಿ ಯಕ್ಷಮಿತ್ರರು ಯಕ್ಷಗಾನ ಕಲೆಯನ್ನು ಆರಾಧಿಸುತ್ತಾರೆ. ನಿರಂತರ ತಾಳಮದ್ದಳೆಯನ್ನು ಮಾಡುವ ಮೂಲಕ ಯಕ್ಷ ಕಲೆಗೆ ಪ್ರೋತ್ಸಾಹ ನೀಡುತ್ತಾರೆ. ಸದಾಶಿವ…

Read More

ಮೂಲ್ಕಿ ತಾಲೂಕಿನ ಕರ್ನಿರೆ ಗ್ರಾಮದ ಗ್ರಾಮ‌ ದೇವರಾದ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಜನವರಿ 17 ರಿಂದ 23 ರವರೆಗೆ ಬ್ರಹ್ಮಕಲಶೋತ್ಸವ ನಡೆಯಲಿದ್ದು ಈ ಬಗ್ಗೆ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ಕರ್ನಿರೆ ವಿಶ್ವನಾಥ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಗೋರೆಗಾಂ ಪೂರ್ವದ ಹೋಟೆಲ್ ಬಾಂಬೆ 63, ಇಲ್ಲಿ ಮುಂಬಯಿಯಲ್ಲಿ ವಾಸವಾಗಿರುವ ಗ್ರಾಮದ ಪ್ರಮುಖರೊಂದಿಗೆ ಸಮಾಲೋಚನಾ ಸಭೆ ನಡೆಯಿತು. ಸಭೆಯನ್ನು ಊರಿನ ಮತ್ತು ಮುಂಬಯಿಯ ಬ್ರಹ್ಮಕಲಶ ಸಮಿತಿಯ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ಬ್ರಹ್ಮಕಲಶೋತ್ಸವ ಗೌರವ ಅಧ್ಯಕ್ಷ ರವೀಂದ್ರ ಸಾಧು ಶೆಟ್ಟಿಯವರು ದೀಪ ಪ್ರಜ್ವಲಿಸಿ ಉದ್ಘಾಟನೆ ಮಾಡಿದರು. ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ರಾದ ಕರ್ನಿರೆ ವಿಶ್ವನಾಥ ಶೆಟ್ಟಿಯವರು ಸಭೆಯಲ್ಲಿ ಭಾಗವಹಿಸಿದ ಪ್ರಮುಖರ ಪರಿಚಯ ನೀಡಿ ಕರ್ನಿರೆ ಗ್ರಾಮದಲ್ಲಿರುವ ದೈವಸ್ಥಾನವಾಗಲಿ, ದೇವಸ್ಥಾನವಾಗಲಿ, ಮತ್ತು ಧಾರ್ಮಿಕ ಸಾಮಾಜಿಕ ಚಟುವಟಿಕೆಗಳಿಗೆ ಮುಂಬಯಿಯಲ್ಲಿ ನೆಲೆ ನಿಂತಿರುವ ಗ್ರಾಮಸ್ಥರ‌ ಕೊಡುಗೆ ಅಪಾರವಾಗಿದೆ.‌ ಗ್ರಾಮದ‌ ದೈವ ದೇವರುಗಳ ಮೇಲೆ ಅವರಿಟ್ಟಿರುವ ಭಕ್ತಿ ಎಲ್ಲಿ ಹೋದರೂ ಗ್ರಾಮದತ್ತ‌ ಸೆಳೆಯುತ್ತದೆ ಮತ್ತು ಅದರ ಯಾವುದೇ ಅಭಿವೃದ್ಧಿಯ ಕಾರ್ಯದಲ್ಲಿ…

Read More

ಜನಪ್ರಿಯ ಸಂಘಟಕ, ಸಜ್ಜನ ಸಹೃದಯಿ ಬಂಧು, ಉದ್ಯಮಿ ಶ್ರೀ ಉದಯ್ ಎಮ್ ಶೆಟ್ಟಿ ಮಲಾರ ಬೀಡು ಅವರು ಬಂಟ್ಸ್ ಫೋರಂ ಮೀರಾ ಭಾಯಂದರ್ ಇದರ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಾಮಾಜಿಕ, ಧಾರ್ಮಿಕ ಕ್ಷೇತ್ರ, ಹೀಗೆ ಹತ್ತು ಹಲವಾರು ಸಂಘ ಸಂಸ್ಥೆಗಳಲ್ಲಿ ಉದಯ್ ಶೆಟ್ಟಿಯವರು ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ.

Read More

ನವಿಮುಂಬಯಿಯ ನೆರುಲ್ ಪಶ್ಚಿಮದಲ್ಲಿರುವ ನೋಂದಾಯಿತ ಚಾರಿಟೇಬಲ್ ಟ್ರಸ್ಟ್ ಆಗಿರುವ ನೆರುಲ್ ಜಿಮ್ಖಾನದ ಪ್ರಸ್ತುತ ಗೌರವ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿರುವ ಐಕಳಬಾವ ವಿಕಾಸ್ ಎಚ್ ಶೆಟ್ಟಿಯವರು ತನ್ನ ಮಾದರಿ ಕಾರ್ಯಗಳಿಂದ ಎಲ್ಲರ ಗಮನ ಸೆಳೆಯುತ್ತಿದ್ದಾರೆ ಹಾಗೂ ಬಂಟ ಬಾಂಧವರಿಗೆ ಸಹಾಯಹಸ್ತ ಚಾಚುತ್ತಿದ್ದಾರೆ. ದಿವಂಗತ ಐಕಳಬಾವ ಸರ್ವಾಣಿ ಶೆಟ್ಟಿ ಮತ್ತು ಹಿರಿಯಣ್ಣ ಶೆಟ್ಟಿ ಕೆಂಜೂರು ದಂಪತಿಯ ಪುತ್ರರಾಗಿರುವ ವಿಕಾಸ್ ಶೆಟ್ಟಿಯವರು ಸ್ವಂತ ಉದ್ಯಮವನ್ನು ನಡೆಸಿಕೊಂಡು ಬರುತ್ತಿದ್ದಾರೆ. ಮುಂಬಯಿ ವಿಶ್ವವಿದ್ಯಾಲಯದಿಂದ ಪದವಿಯನ್ನು ಪಡೆದಿದ್ದಾರೆ. ಸಮರ್ಥ ನಾಯಕರೂ, ದೂರಗಾಮಿ ಚಿಂತಕರೂ ಆಗಿರುವ ವಿಕಾಸ್ ಶೆಟ್ಟರು ಜವಾಬ್ದಾರಿ ವಹಿಸಿಕೊಂಡಿರುವ ಎಲ್ಲಾ ಸಂಘ ಸಂಸ್ಥೆಗಳಲ್ಲೂ ನಿಸ್ವಾರ್ಥದಿಂದ ದುಡಿಯುವ ಮೂಲಕ ಸಂಘ ಹಾಗೂ ಅದರ ಆಶ್ರಿತರಿಗೆ ಸಹಾಯ ಮಾಡಿಕೊಂಡು ಬರುತ್ತಿದ್ದಾರೆ. ವಿಕಾಸ್ ಶೆಟ್ಟರಿಗೆ ಬಾಲ್ಯದಿಂದಲೂ ಬಡವರ ಬಗ್ಗೆ ವಿಶೇಷ ಪ್ರೀತಿ, ಒಲವು, ಕಾಳಜಿ. ನಾಯಕತ್ವ ಹಾಗೂ ಆಡಳಿತ ನಿರ್ವಹಣೆಯಲ್ಲಿ ಎತ್ತಿದ ಕೈಯಾಗಿರುವ ಇವರು ಕಠಿಣ ಪರಿಶ್ರಮಿ. ತಾನು ಯಾವುದೇ ಕೆಲಸ ಮಾಡಿದರೂ ಅದರಲ್ಲಿ ನಿಷ್ಠೆ, ಬದ್ಧತೆ, ಅರ್ಪಣಾ ಮನೋಭಾವನೆ, ಗುಣಮಟ್ಟವನ್ನು ಕಾಪಾಡಿಕೊಂಡು ಬಾಂದವರು…

Read More

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಹಾಗೂ ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜು ಆಸ್ಪತ್ರೆ ವತಿಯಿಂದ ಧನ್ವಂತರಿ ಪೂಜಾ ಮಹೋತ್ಸವ, ಶಿಷ್ಯೋಪನಯನ ಸಂಸ್ಕಾರ, ಆಳ್ವಾಸ್ ಧನ್ವಂತರಿ ಪ್ರಶಸ್ತಿ ಪ್ರದಾನ ಮತ್ತು ಕಾಲೇಜು ವಾರ್ಷಿಕೋತ್ಸವ ಸಮಾರಂಭ ಕಾಲೇಜಿನ ಆವರಣದಲ್ಲಿ ಮಂಗಳವಾರ ಜರುಗಿತು. ಆಳ್ವಾಸ್ ಧನ್ವಂತರಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಆಯುರ್ವೇದ ಚಿಕಿತ್ಸಾ ತಜ್ಞ ಡಾ ಶ್ರೀಪತಿ ಕಿನ್ನಿಕಂಬಳ, ಈ ಪುರಸ್ಕಾರಕ್ಕೆ ಆಯ್ಕೆ ಮಾಡಿರುವುದು ನನ್ನನ್ನು ಹೆಚ್ಚು ಚಕಿತಗೊಳಿಸುವುದರ ಜೊತೆಗೆ ಅತೀವ ಸಂತೋಷವನ್ನು ನೀಡಿದೆ. ಈ ಪ್ರಶಸ್ತಿಯನ್ನು ನನ್ನ ಗುರುವೃಂದ ಹಾಗೂ ತಂದೆ-ತಾಯಿಗೆ ಅರ್ಪಿಸಲು ಬಯಸುತ್ತೆನೆ. ತಾವು ಹಾಗೂ ಮೋಹನ್ ಆಳ್ವರ ಸ್ನೇಹತ್ವ ಅರ್ಧ ಶತಮಾನಕ್ಕಿಂತಲೂ ಅಧಿಕವಾದುದ್ದು. ಪದವಿ ಶಿಕ್ಷಣದಲ್ಲಿ ಆರಂಭವಾದ ಸ್ನೇಹ, ಇಂದಿಗೂ ಶಾಶ್ವತವಾಗಿ ಉಳಿದಿದೆ. ಆ ದಿನಗಳಲ್ಲಿ ವಿದ್ಯಾಗಿರಿಯ ಗುಡ್ಡದ ತುದಿಯಲ್ಲಿ ನಿಂತು ವಿದ್ಯಾಕಾಶಿಯ ಕನಸು ಕಂಡಿದ್ದ ಆಳ್ವರು ಇಂದು ಆ ಕನಸನ್ನು ಸಂಪೂರ್ಣ ನನಸಾಗಿಸಿದ್ದಾರೆ. ಆಳ್ವಾಸ್‍ನಂತಹ ವಿದ್ಯಾಸಂಸ್ಥೆಯನ್ನು ಬೆಳೆಸಿದ ಮೋಹನ್ ಆಳ್ವರು ನಮ್ಮ ಕಾಲದ ಅದ್ಭುತ ವ್ಯಕ್ತಿ , ಅವರ ಶಕ್ತಿ…

Read More

ಎರಡು ದಿನಗಳ ಕಾಲ ಅರಮನೆ ಮೈದಾನದಲ್ಲಿ ನಡೆದ “ಬೆಂಗಳೂರು ಕಂಬಳ ನಮ್ಮ-ಕಂಬಳ”ಕ್ಕೆ ರವಿವಾರ ರಾತ್ರಿ ತೆರೆ ಬಿತ್ತು. ರಿಷಬ್‌ ಶೆಟ್ಟಿ ಅಭಿನಯದ “ಕಾಂತಾರ’ ಚಿತ್ರದಲ್ಲಿ ಓಡಿದ್ದ ಕೋಣ ಚಿನ್ನದ ಪದಕ ಪಡೆದುಕೊಂಡಿತು. ಬೊಳಂಬಳ್ಳಿ ಪರಮೇಶ್ವರ್‌ ಭಟ್ಟ ಅವರ ಅಪ್ಪು ಕುಟ್ಟಿ 6.5 ಕೋಲು ನೀರು ಚಿಮ್ಮಿಸಿ ಕೆನೆಹಲಗೆ ವಿಭಾಗದಲ್ಲಿ ಮೊದಲ ಚಿನ್ನದ ಪದಕ ಪಡೆದಿದೆ. ಇನ್ಮುಂದೆ ಮುಂಬಯಿಯಲ್ಲೂ ಆಯೋಜಿಸುವ ಚಿಂತನೆ ವ್ಯಕ್ತವಾಗಿದೆ. ಜತೆಗೆ ಪ್ರೀಮಿಯರ್‌ ಲೀಗ್‌ನಂತೆ ಕಂಬಳದ ಲೀಗ್‌ ನಡೆಸುವ ಮುನ್ಸೂಚನೆ ಮೇಲ್ಮೋಟಕ್ಕೆ ಕಂಡ ಬರುತ್ತಿದೆ. ಕಂಬಳ ಆಯೋಜನೆ ಬಗ್ಗೆ ಮಾಹಿತಿಯನ್ನು ಸಂಬಂಧಪಟ್ಟವರು ಪಡೆದುಕೊಂಡಿದ್ದಾರೆ. ಕಂಬಳವನ್ನು ರಜಾದಿನಗಳಲ್ಲಿ ಹಮ್ಮಿಕೊಂಡ ಕಾರಣ 8 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿ ಸಂಭ್ರಮಿಸಿದರು. ಕೊನೆಯ ದಿನದ ಕಂಬಳದಲ್ಲಿ ಎಲ್ಲಿ ನೋಡಿದರೂ ಜನರ ದಂಡು, ನೂಕು ನುಗ್ಗಲು, ಜಾತ್ರೆಯ ವಾತಾವರಣ ವಿಶೇಷವಾಗಿತ್ತು. ವೀಕ್ಷಕರ ವಿವರಣೆಗೆ 30 ಮಂದಿ! ಕಂಬಳದಲ್ಲಿ ಕೋಣಗಳು ಓಡುವುದು ಎಷ್ಟು ಮುಖ್ಯವೋ ವೀಕ್ಷಕ ವಿವರಣೆ ಕೂಡ ಅಷ್ಟೇ ಮುಖ್ಯ. ಈ ಬಾರಿ ಬೆಂಗಳೂರು ಕಂಬಳಕ್ಕೆ…

Read More

ಯಕ್ಷಗಾನ ಕಲಾವಿದರಿಗೆ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟಿನ ಯೋಜನೆಗಳಲ್ಲಿ ಒಂದಾದ ಯಕ್ಷಾಶ್ರಯದಡಿ ಮನೆ ನಿರ್ಮಾಣಕ್ಕೆ ಆರ್ಥಿಕ ಸಹಾಯವನ್ನು ಟ್ರಸ್ಟ್ ಕಚೇರಿಯಲ್ಲಿ ವಿತರಿಸಲಾಯಿತು. ಸುಂಕದಕಟ್ಟೆ ಮೇಳದ ಜಯೇಂದ್ರ ಕಿದೂರ್, ಸಸಿಹಿತ್ಲು ಮೇಳದ ಗುಡ್ಡಪ್ಪ ಸುವರ್ಣ ಇವರುಗಳಿಗೆ 2ನೇ ಕಂತು ಮತ್ತು ಬಪ್ಪನಾಡು ಮೇಳದ ನಾಗಪ್ಪ ಪಡುಮಲೆ ಇವರಿಗೆ ಕೊನೆಯ ಕಂತಿನ ಮೊತ್ತದ ಚೆಕ್ಕನ್ನು ಸ್ಥಾಪಕಾಧ್ಯಕ್ಷರಾದ ಪಟ್ಲ ಸತೀಶ್ ಶೆಟ್ಟಿಯವರು ವಿತರಿಸಿದರು. ಈ ಸಂದರ್ಭದಲ್ಲಿ ಫೌಂಡೇಶನ್ನಿನ ಪ್ರಧಾನ ಕಾರ್ಯದರ್ಶಿ ಅಡ್ಯಾರ್ ಪುರುಷೋತ್ತಮ ಭಂಡಾರಿ, ಕೋಶಾಧಿಕಾರಿ ಸಿಎ ಸುದೇಶ್ ಕುಮಾರ್ ರೈ, ಜತೆ ಕಾರ್ಯದರ್ಶಿ ರವಿ ಶೆಟ್ಟಿ ಅಶೋಕನಗರ, ಬಪ್ಪನಾಡು ಮೇಳದ ದಿನೇಶ್ ಕೊಡಪದವು ಜತೆಗಿದ್ದರು.

Read More

ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಹೆಚ್ಚಿಸಿ ಸ್ಫೂರ್ತಿ ತುಂಬಲು ವಿದ್ಯಾರ್ಥಿ ವೇತನ ಸಹಕಾರಿಯಾಗುತ್ತದೆ. ಆತ್ಮವಿಶ್ವಾಸದಿಂದ ಸಿಕ್ಕ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ನಿಶ್ಚಿತ ಗುರಿ ಇರಿಸಿಕೊಂಡು ಮುನ್ನುಗ್ಗಿದರೆ ಯಶಸ್ಸು ಕಾಣಬಹುದು ಎಂದು ಜೆಸಿಬಿ ಇಂಡಿಯಾ ಸೌತ್ ಎಷ್ಯಾ ಆಂಡ್ ಆಫ್ರಿಕಾ ಈಸ್ಟ್ ಸಿಇಓ ಮತ್ತು ಎಂಡಿ ದೀಪಕ್ ಶೆಟ್ಟಿ ಅಭಿಪ್ರಾಯಪಟ್ಟರು. ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು, ಉಡುಪಿ ತಾಲೂಕು ಸಮಿತಿ ವ್ಯಾಪ್ತಿಯ ಬಂಟರ ಸಂಘಗಳ ಆಶ್ರಯದಲ್ಲಿ ಅಮ್ಮಣಿ ರಾಮಣ್ಣ ಶೆಟ್ಟಿ ಸ್ಮಾರಕ ಸಭಾಭವನದಲ್ಲಿ ರವಿವಾರ ನಡೆದ ದಿ. ಕೆ. ಸತೀಶ್ಚಂದ್ರ ಹೆಗ್ಡೆ ವಿದ್ಯಾರ್ಥಿವೇತನ ವಿತರಣೆ, ಬಂಟ ಸಮ್ಮಿಲನವನ್ನು ಉದ್ಘಾಟಿಸಿ ಅವರು ಮಾತನಾಡಿದರು. ದತ್ತು ಸ್ವೀಕಾರ ಕಾರ್ಯಕ್ರಮವನ್ನು ರಿಮೋಟ್ ಒತ್ತುವ ಮೂಲಕ ಉದ್ಘಾಟಿಸಿದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು, ಕಷ್ಟದಲ್ಲಿರುವವರನ್ನು ಗುರುತಿಸಿ ಅವರಿಗೆ ಸಹಾಯಹಸ್ತ ನೀಡುವುದು ದೇವರು ಮೆಚ್ಚುವ ಕಾರ್ಯ. ನಮ್ಮ ಬದುಕು ದೇವರಿಗೆ ಸಮರ್ಪಣೆಯಾಗುವಂತೆ ಇರಬೇಕು ಎಂದು ಹೇಳಿದರು. ವಿದ್ಯಾರ್ಥಿವೇತನಕ್ಕೆ ಚಾಲನೆ ನೀಡಿದ ಜಾಗತಿಕ ಬಂಟರ ಸಂಘದ ಅಧ್ಯಕ್ಷ ಐಕಳ ಹರೀಶ್…

Read More