ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವತಿಯಿಂದ ಮಹಾ ನಿರ್ದೇಶಕ ಹಾಗೂ ಮುಂಬಯಿಯ ವಿ.ಕೆ. ಗ್ರೂಪ್ ಆಫ್ ಕಂಪೆನಿಯ ಸಿಎಂಡಿ ಕೆ.ಎಂ. ಶೆಟ್ಟಿಯವರ ಪ್ರಾಯೋಜಕತ್ವದಲ್ಲಿ ಸಮಾಜ ಕಲ್ಯಾಣ ಬೃಹತ್ ಆರ್ಥಿಕ ನೆರವು ವಿತರಣೆ ಹಾಗೂ ದಕ್ಷಿಣ ಕನ್ನಡ ನೂತನ ಸಂಸದ ಕ್ಯಾ. ಬ್ರಿಜೇಶ್ ಚೌಟ ಮತ್ತು ಉಡುಪಿ- ಚಿಕ್ಕಮಗಳೂರು ಸಂಸದ ಕೋಟ ಶ್ರೀ ನಿವಾಸ್ ಪೂಜಾರಿ ಅವರಿಗೆ ಸನ್ಮಾನ ಸಮಾರಂಭವು ಜೂನ್ 17 ರಂದು ಬೆಳಗ್ಗೆ 10 ರಿಂದ ಮಂಗಳೂರಿನ ಪುರಭವನದಲ್ಲಿ ಅದ್ದೂರಿಯಾಗಿ ನಡೆಯಲಿದೆ.
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಒಕ್ಕೂಟದ ಮಹಾದಾನಿ ಮತ್ತು ಹೇರಂಬಾ ಇಂಡಸ್ಟ್ರೀಸ್ ಲಿ. ನ ಸಿಎಂಡಿ ಕನ್ಯಾನ ಸದಾಶಿವ ಶೆಟ್ಟಿ, ಒಕ್ಕೂಟದ ವಿಶೇಷ ಮಹಾ ನಿರ್ದೇಶಕರು ಮತ್ತು ಆರ್ಗಾನಿಕ್ ಗ್ರೂಪ್ ಆಫ್ ಇಂಡಸ್ಟ್ರೀಸ್ ನ ಸಿಎಂಡಿ ತೋನ್ಸೆ ಆನಂದ್ ಎಂ.ಶೆಟ್ಟಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವಿಶೇಷ ಮಹಾ ನಿರ್ದೇಶಕ, ಬಂಟರ ಸಂಘ ಮುಂಬಯಿ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ, ಮಹಾ ನಿರ್ದೇಶಕರಾದ ಎಂಆರ್ ಜಿ ಗ್ರೂಪ್ಸ್ ನ ಸಿಎಂಡಿ ಕೆ. ಪ್ರಕಾಶ್ ಶೆಟ್ಟಿ, ಶಶಿ ಕೇಟರಿಂಗ್ ಸರ್ವಿಸಸ್ ನ ಆಡಳಿತ ನಿರ್ದೇಶಕ ಶಶಿಧರ ಶೆಟ್ಟಿ ಬರೋಡ, ಎಸ್ ಸಿಡಿಸಿಸಿ ಬ್ಯಾಂಕ್ ನ ಕಾರ್ಯಾಧ್ಯಕ್ಷ ಡಾ.ಎಂ. ಎನ್. ರಾಜೇಂದ್ರ ಕುಮಾರ್, ರಾಕ್ಷಿ ಬಿಲ್ಡರ್ಸ್ ನ ಸಿಎಂಡಿ ರಾಜೇಶ್ ಎನ್. ಶೆಟ್ಟಿ ಅಲಿಯನ್ಸ್ ಇಂಫ್ರಾಸ್ಟ್ರಕ್ಚರ್ ರಿಯಲ್ಟರ್ಸ್ ನ ಸಿಎಂಡಿ ಅರವಿಂದ್ ಆನಂದ್ ಶೆಟ್ಟಿ, ಫಾರ್ಚುನ್ ಗ್ರೂಪ್ ಆಫ್ ಹೊಟೇಲ್ಸ್ ನ ಸಿಎಂಡಿ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ, ಮೆರಿಟ್ ಹಾಸ್ಟಿಟಾಲಿಟಿ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ನ ಆಡಳಿತ ನಿರ್ದೇಶಕ ಬೆಳ್ಳಾಡಿ ಅಶೋಕ್ ಎಸ್. ಶೆಟ್ಟಿ, ವಿ.ಕೆ. ಗ್ರೂಪ್ ಆಫ್ ಕಂಪೆನೀಸ್ ನ ಸಿಎಂಡಿ ಕೆ. ಎಂ. ಶೆಟ್ಟಿ, ಪಂಜುರ್ಲಿ ಗ್ರೂಪ್ ಆಫ್ ಹೊಟೇಲ್ಸ್ ನ ಸಿಎಂಡಿ ರಾಜೇಂದ್ರ ವಿ ಶೆಟ್ಟಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ್ ಶೆಟ್ಟಿ, ಗೌರವ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ, ಕೋಶಾಧಿಕಾರಿ ಉಳ್ತೂರು ಮೋಹನ್ ದಾಸ್ ಶೆಟ್ಟಿ, ಜತೆ ಕಾರ್ಯದರ್ಶಿ ಚಂದ್ರಹಾಸ್ ಡಿ. ಶೆಟ್ಟಿ ರಂಗೋಲಿ ಹಾಗೂ ಇತರ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಪಾಲ್ಗೊಳ್ಳಲಿದ್ದಾರೆ.
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ನಿರ್ದೇಶಕರು, ಮಹಾಪೋಷಕರು, ಪೋಷಕರು, ದಾನಿಗಳು, ಬಂಟರ ಸಂಘಗಳ ಅಧ್ಯಕ್ಷರು ಹಾಗೂ ಕಾರ್ಯಕಾರಿ ಸಮಿತಿ ಸರ್ವ ಸದಸ್ಯರು ಪಾಲ್ಗೊಂಡು ಸಮಾರಂಭದ ಯಶಸ್ವಿಗೆ ಸಹಕರಿಸುವಂತೆ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಪ್ರಕಟಣೆ ತಿಳಿಸಿದೆ.