Author: admin
ಬಂಟರ ಯಾನೆ ನಾಡವರ ಮಾತೃ ಸಂಘ ಉಡುಪಿ ತಾಲೂಕು ಸಮಿತಿ ವತಿಯಿಂದ ಸಂಘದ ಕಾರ್ಯ ವ್ಯಾಪ್ತಿಯಾದ ಉಡುಪಿ, ಕಾಪು, ಬ್ರಹ್ಮಾವರ ತಾಲೂಕಿನ ಗ್ರಾಮೀಣ ಬಂಟರ ಸಂಘದ 36 ಪ್ರತಿಭಾನ್ವಿತ ಆರ್ಥಿಕವಾಗಿ ಸಂಕಷ್ಟದಲ್ಲಿರುವ ದ್ವಿತೀಯ ಪಿ. ಯು. ಸಿ ಯ ಬಂಟ ವಿದ್ಯಾರ್ಥಿಗಳಿಗೆ ನೀಟ್ ಸಿಇಟಿ ಉಚಿತ ತರಬೇತಿ ಶಿಬಿರ ಉಡುಪಿಯ ವಿನಯ್ ಅಕಾಡೆಮಿಯಲ್ಲಿ ನಡೆಯಲಿದೆ. ಎ.1 ರಿಂದ ಮೇ.5 ರ ತನಕ ಬೆಳಗ್ಗೆ 9.30ರಿಂದ ಸಂಜೆ 5.30 ರ ತನಕ 35 ದಿನಗಳ ತರಬೇತಿಯು ನಡೆಯಲಿದ್ದು ಸಂಘದ ವ್ಯಾಪ್ತಿಯಲ್ಲಿ ಇಬ್ಬರು ವಿದ್ಯಾರ್ಥಿಗಳಿಗೆ ಅವಕಾಶವಿದೆ. ನಿಗದಿತ ಅರ್ಜಿ ನಮೂನೆ ಸಂಘದ ಕಚೇರಿಯಲ್ಲಿ ಲಭ್ಯವಿದ್ದು ಮಾ.20 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಹೆಚ್ಚಿನ ಮಾಹಿತಿಗಾಗಿ ಶ್ರೀಧರ ಕೆ. ಶೆಟ್ಟಿ ಕುತ್ಯಾರು ಬೀಡು (8884130064) ಅವರನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ಪ್ರವಾಸೋದ್ಯಮ ಇಲಾಖೆಯಿಂದ ಮಾನ್ಯತೆ ಪಡೆದ ಶಿರ್ವ ಮಂಚಕಲ್ ಪೇಟೆಯ ಮುಖ್ಯರಸ್ತೆ ಬಳಿಯ ಶಾಮ್ಸ್ ಸ್ಕ್ವೇರ್ ವಾಣಿಜ್ಯ ಸಂಕೀರ್ಣ ಮತ್ತು ವಸತಿಗೃಹದ ಪ್ರವರ್ತಕರ ಭಾರತ್ ಪೆಟ್ರೋಲಿಯಂನ ನೂತನ ಪೆಟ್ರೋಲ್‌ಪಂಪ್ ಆನ್ಯ ಫ್ಯೂಯೆಲ್ಸ್ ಕಾರ್ಕಳ-ನಿಟ್ಟೆ ರಾಜ್ಯ ಹೆದ್ದಾರಿಯ ಬಳಿ ಶುಭಾರಂಭಗೊಂಡಿತು. ಸಂಸ್ಥೆಯ ಪ್ರವರ್ತಕರಾದ ಶಿರ್ವ ಅಟ್ಟಿಂಜ ಶೆಟ್ಟಿ ನಿವಾಸ ಹೇಮಲತಾ ಶೆಟ್ಟಿ ಮತ್ತು ಶಂಭು ಶೆಟ್ಟಿ ದಂಪತಿ ಆನ್ಯ ಫ್ಯೂಯೆಲ್ಸ್‌ನ್ನು ಉದ್ಘಾಟಿಸಿದರು. ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಆಗಮ ವಿದ್ವಾಂಸ ವೇ|ಮೂ| ಕುತ್ಯಾರು ಕೇಂಜ ಶ್ರೀಧರ ತಂತ್ರಿ ಮಾತನಾಡಿ, ಮನುಷ್ಯ ತಾನು ಮಾಡಿದ ಸಂಪಾದನೆಯ ಒಂದಂಶವನ್ನು ಸಮಾಜಕ್ಕೆ ವಿನಿಯೋಗಿಸಿದರೆ ಜನ್ಮ ಸಾರ್ಥಕವಾಗುತ್ತದೆ. ಸಮಾಜದ ಒಳಿತಿಗಾಗಿ ವಿವಿಧ ಕೊಡುಗೆ ನೀಡುತ್ತಿರುವ ಅಟ್ಟಿಂಜೆ ಶಂಭು ಶೆಟ್ಟಿ ದಂಪತಿ ಮತ್ತು ಮಕ್ಕಳ ವ್ಯವಹಾರ,ಉದ್ದಿಮೆ ಯಶಸ್ವಿ ಪಥದತ್ತ ಮುನ್ನಡೆಯಲಿ ಎಂದು ಹೇಳಿದರು. ಕಾರ್ಕಳ ಅತ್ತೂರು ಸೈಂಟ್ ಲಾರೆನ್ಸ್ ಬಸಿಲಿಕಾದ ಸಹಾಯಕ ಧರ್ಮಗುರು ವಂ| ಆಲ್ಬನ್ ಡಿಸೋಜಾ ಮಾತನಾಡಿ ಸರ್ವಧರ್ಮ ಸಮನ್ವಯದ ಮೂಲಕ…
ಕಾರ್ಕಳ ಈಗ ಜನರ ಗಮನ ಸೆಳೆಯುತ್ತಿದೆ. ಜೊತೆಗೆ ತುಳುನಾಡಿಗರ ಆಕ್ರೊಶಕ್ಕೂ ಕಾರಣವಾಗಿದೆ. ಕಾರ್ಕಳದಲ್ಲೊಂದು ಪರಶುರಾಮ ಥೀಮ್ ಪಾರ್ಕ್ ರಚನೆ ಮಾಡಿದೆ ಘನ ಸರಕಾರ. ಇಂಡಾಲಜಿ ವಿದ್ಯಾರ್ಥಿಗಳಾಗಿ ಇಂದಿರ ಗಾಂಧಿ ನ್ಯಾಶನಲ್ ಮ್ಯೂಸಿಯಂಗೆ ನಾವು ಭೇಟಿ ನೀಡಿದ್ದಾಗ ತುಳುನಾಡಿನ ಉಯ್ಯಾಲೆಯಲ್ಲಿ ಇರುವಂತ ಸಣ್ಣ ಸಣ್ಣ ಹಿತ್ತಾಳೆಯ ಪ್ರತಿಮೆಗಳನ್ನು ನಾನು ಅಲ್ಲಿ ಗಮನಿಸಿದೆ. ಈ ಬಗ್ಗೆ ನಮ್ಮ ಇಂಡಾಲಜಿ ಗುರುಗಳಾದ ಎಸ್ ನಾಗರಾಜು ಅವರಲ್ಲಿ ಚರ್ಚೆ ನಡೆಯಿತು. “ನಿಮ್ಮ ಕಡೆ ಅಧ್ಯಯನ ನಡೆಯಲು ಬಹಳಷ್ಟು ಇದೆ. ಪರಂಪರೆಯನ್ನು ಉಳಿಸಿಕೊಳ್ಳುವುದರಲ್ಲಿ ನಿಮ್ಮನ್ನು ಮೆಚ್ಚಬೇಕು. ನೀವು ರಾಕೆಟ್ ಯುಗಕ್ಕೆ ಹೋದರೂ ಲೋಹಯುಗದ ಪಳೆಯುಳಿಕೆಗಳನ್ನು ಬಿಟ್ಟಿಲ್ಲ ಎಂದರು. ಅದು ನಿಜವೇ. ಜಗದಗಲ ತಮ್ಮ ಛಾಪನ್ನು ಛಾಪಿಸಿದ ತುಳುವರು ಆದಿ ಕಾಲದ ಭೂತಾರಾಧನೆಯನ್ನು ಅಭಿಮಾನದಿಂದ ಸಮರ್ಪಣಾ ಭಕ್ತಿಯಿಂದ ಮುಂದುವರಿಸಿಕೊಂಡು ಬರುತ್ತಿದ್ದಾರೆ. “ ತುಳುವ ನಂಬಿಕೆಯ ಪ್ರಕಾರ ‘ನಾರಾಯಣ (ಸೂರ್ಯ) ಚಂದ್ರರ ಉದಯದೊಂದಿಗೆ ನೀರು ತುಂಬಿಕೊಂದ್ದ ಭೂಮಿಯಲ್ಲಿ ಜೀವಿಗಳೂ ಹುಟ್ಟಿದುವು. ಆದ್ದರಿಂದಲೇ ಏನೋ ತುಳುನಾಡಿನ ದೇವಾಲಯಗಳ ಬಾಗಿಲಲ್ಲಿ ಸೂರ್ಯ ಚಂದ್ರರ ಚಿಹ್ನೆಗಳನ್ನು…
ಸುರತ್ಕಲ್: “ರಾಜ್ಯಕ್ಕೆ ಮಾದರಿ ಶಾಲೆ ಎನಿಸಿರುವ ಮಧ್ಯ ಸರಕಾರಿ ಪ್ರಾಥಮಿಕ ಶಾಲೆಗೆ ಸರಕಾರದ ವತಿಯಿಂದ ಆಟದ ಮೈದಾನ ನಿರ್ಮಿಸಲು 2 ಎಕ್ರೆ ಜಾಗ ದೊರೆತಿದ್ದು ಅದರಲ್ಲಿ ಟ್ರಸ್ಟ್ ಗೌರವಾಧ್ಯಕ್ಷರಾದ ಕರುಣಾಕರ ಎಂ ಶೆಟ್ಟಿ ಇವರ ನೇತೃತ್ವದಲ್ಲಿ ಸುಮಾರು 2 ಕೋಟಿ ಅಂದಾಜು ವೆಚ್ಚದಲ್ಲಿ ಶಾಲೆಗೆ ಹೆಚ್ಚುವರಿ ಕೊಠಡಿ ಮತ್ತು 9 ಮತ್ತು 10 ನೇ ತರಗತಿ ಹಾಗೂ ಸುಸಜ್ಜಿತವಾದ ಆಟದ ಮೈದಾನವನ್ನು ನಿರ್ಮಿಸಲು ಯೋಜನೆ ರೂಪಿಸಲಾಗಿದೆ” ಎಂದು ವಿದ್ಯಾನಿಧಿ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. 2015-16 ರ ಸಾಲಿನಲ್ಲಿ 75 ಮಕ್ಕಳನ್ನು ಹೊಂದಿದ್ದ ಶಾಲೆಯು ಸುವರ್ಣ ಮಹೋತ್ಸವ ಆಚರಣೆಯ ಸಂದರ್ಭದಲ್ಲಿ ಟ್ರಸ್ಟ್ ನ ಗೌರವಾಧ್ಯಕ್ಷರಾದ ಕರುಣಾಕರ ಎಂ.ಶೆಟ್ಟಿ ಮಧ್ಯ ಗುತ್ತು ಮತ್ತು ಮೋಹನ್ ಚೌಟ ಮಧ್ಯ ಇವರ ಮುತುವರ್ಜಿಯಿಂದ ಮುಂಬೈಯ ಉದ್ಯಮಿಗಳಿಂದ, ಮಹಾ ದಾನಿಗಳಿಂದ, ಸಂಘ ಸಂಸ್ಥೆಗಳಿಂದ, ಊರಿನ ಹಿರಿಯರಿಂದ, ಹಳೆ ವಿದ್ಯಾರ್ಥಿಗಳಿಂದ, ಸರಕಾರದಿಂದ ಮತ್ತು ಜನಪ್ರತಿನಿಧಿಗಳಿಂದ ಹಾಗೂ ವಿದ್ಯಾಭಿಮಾನಿಗಳ ಸಹಕಾರದಿಂದ ಶಾಲೆಯ ಚಿತ್ರಣವೇ ಬದಲಾಗಿ,…
ಗುರುಪುರ ಬಂಟರ ಮಾತೃ ಸಂಘ(ರಿ) ಇದರ ಸಾಮಾಜಿಕ ಸೇವಾ ಯೋಜನೆಯಡಿ ಕಡು ಬಡತನದಲ್ಲಿರುವ ಮೂಡುಶೆಡ್ಡೆಯ ಸುಶೀಲಾ ಶೆಟ್ಟಿಯವರಿಗೆ ಉಚಿತ ಮನೆ ನಿರ್ಮಿಸಿ ಕೊಡಲಿದ್ದು, ಮೂಡುಶೆಡ್ಡೆಯಲ್ಲಿ ಹೊಸ ಮನೆ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿತು. ಜಾಗತಿಕ ಬಂಟರ ಸಂಘದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ ಮಾತನಾಡಿ ಬಂಟ ಸಮಾಜದ ಅರ್ಹ ಫಲಾನುಭವಿಗಳನ್ನು ಗುರುತಿಸಿ ನೆರವಾಗುವಂತಹ ಕೆಲಸ ಇದಾಗಿದ್ದು, ಜಾಗತಿಕ ಬಂಟರ ಸಂಘವು ಇದುವರೆಗೆ ೧೮೨ ಬಡ ಕುಟುಂಬಕ್ಕೆ ಮನೆ ನಿರ್ಮಿಸಿಕೊಟ್ಟಿದೆ. ಕಳೆದ ಸಾಲಿನಲ್ಲಿ ಸಮಾಜದ ಅರ್ಹರಿಗಾಗಿ ಒಂಬತ್ತು ಕೋಟಿ ರೂಪಾಯಿಗಳನ್ನು ವ್ಯಯಿಸಲಾಗಿತ್ತು ಎಂದರು. ಗುರುಪುರ ಬಂಟರ ಮಾತೃ ಸಂಘದ ಮಾಜಿ ಅಧ್ಯಕ್ಷ ರಾಜ್‌ಕುಮಾರ್ ಶೆಟ್ಟಿ ತಿರುವೈಲುಗುತ್ತು ಮಾತನಾಡಿ ಸಂಘದ ಪ್ರಯೋಜನ ಪಡೆಯುವಂತಹ ಕುಟುಂಬಗಳ ಮಕ್ಕಳು ಭವಿಷ್ಯದಲ್ಲಿ ಉತ್ತಮ ಸ್ಥಿತಿವಂತರಾಗಿ ಸಮಾಜದ ಏಳಿಗೆಗೆ ನೆರವಾಗಬೇಕು ಎಂದರು. ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಹೊಸಲಕ್ಕೆ ಮೂಡುಶೆಡ್ಡೆ ಮಾತನಾಡಿ ಗುರುಪುರ ಬಂಟರ ಮಾತೃ ಸಂಘವು ಬಂಟ ಸಮಾಜದ ಬಡ ಕುಟುಂಬಗಳನ್ನು ಗುರುತಿಸಿ, ನೆರವು ನೀಡುವ ಕೆಲಸ ಮಾಡುತ್ತಿದೆ. ಪ್ರಸ್ತುತ…
ಪುರಾಣದ ಸತ್ವ ಸಾರುತ್ತಾ, ಭಕ್ತಿ ಭಾವನೆ ಪಸರಿಸುತ್ತಾ, ಮಾನವೀಯ ಹಾಗೂ ಕೌಟುಂಬಿಕ ಮೌಲ್ಯದ ಸಾರ ಹೆಚ್ಚಿಸುವ ಚಲಿಸುವ ವಿಶ್ವವಿದ್ಯಾಲಯ ಯಕ್ಷಗಾನ. ಕಲೆ ಕಾಸು, ಕಾಲಯಾಪನೆಗೆ ಹುಟ್ಟಿಕೊಂಡಿರುವ ಹರಕೆ, ಡೇರೆ ಮೇಳವಾದರೂ ಸಹ ಸಾರುವುದು ಮಾತ್ರ ಸನಾತನ ಸಂಸ್ಕೃತಿಯ ಮೌಲ್ಯ. ಗಂಡು ಕಲೆಯೆನಿಸಿದ ಯಕ್ಷಗಾನ ರಂಗದಲ್ಲಿ ದುಡಿದವರು ಅದೆಷ್ಟೊ ಮಂದಿ. ಕಲೆಯ ಕಂಪನ್ನು ಸೂಸುತ್ತಾ, ಪುರಾಣದ ಸತ್ವವನ್ನು ಜನಮಾನಸಕ್ಕೆ ತಲುಪಿಸುವಲ್ಲಿ ಬಯಲಾಟ ಅಥವಾ ಡೇರೆ ಮೇಳಗಳ ಕಲಾವಿದರ ಪಾತ್ರ ಹಿರಿದು. ಅನೇಕ ಕಲಾವಿದರು ಯಕ್ಷಗಾನ ರಂಗದಲ್ಲಿ ಅವಿರತವಾಗಿ ದುಡಿದು ಯಕ್ಷಗಾನದಿಂದಲೆ ಬದುಕು ಕಟ್ಟಿಕೊಂಡ ಅನೇಕ ಕಲಾ ಕುಸುಮಗಳಿದ್ದಾರೆ. ನಿಜ ಜೀವನದಲ್ಲಿ ಅನೇಕ ನೋವುಗಳಿದ್ದರೂ ಸಹ ಅದನ್ನು ರಂಗದಲ್ಲಿ ತೋರಗೊಡದೆ, ಜೀವನ ಮೌಲ್ಯ, ನವರಸಾದಿಗಳನ್ನು ಮೇಳವಿಸಿ ಮಹಾನ್ ಪುರುಷರ ಜೀವನದೊಳಗೆ ಪರಾಕಾಯ ಪ್ರವೇಶ ಮಾಡಿ, ತಾನು ತಾನಾಗಿರದೆ, ಕಥಾವಸ್ತುವಿನ ಪ್ರಮುಖ ಪಾತ್ರವಾಗಿ, ಮನರಂಜನೆ ನೀಡುವಲ್ಲಿ ಸತತ ಪ್ರಯತ್ನ ಮಾಡುವ ಗುಣ ನೈಜ ಕಲಾವಿದನದಾಗಿದೆ. ಅಂಥ ಬಂಟ ಸಮುದಾಯದ ಕಲಾವಿದರುಗಳಿಗೆ ಸಮುದಾಯದ ಸಂಸ್ಥೆ ಗೌರವ ಸೂಚಿಸಲು…
ಕತ್ತಲೆಯ ಮೇಲೆ ಬೆಳಕಿನ ವಿಜಯ, ಅಜ್ಞಾನದ ಮೇಲೆ ಜ್ಞಾನದ ವಿಜಯ, ಕೆಟ್ಟದ್ದರ ಮೇಲೆ ಒಳ್ಳೆಯತನದ ವಿಜಯವನ್ನು ಸಂಕೇತಿಸುವ ಬೆಳಕಿನ ಹಬ್ಬ ದೀಪಾವಳಿಯ ಸಡಗರ ಪ್ರತಿ ಮನ ಮನೆಗಳಲ್ಲಿ ವಿಜ್ರಂಬಿಸುತಿರಲು, ನಮ್ಮ ತುಳು ಭಾಂದವರ ಮನಸ್ಸುಗಳ ಮನೆ ತುಳುಕೂಟದ ಕಚೇರಿಯಲ್ಲಿ ದೀಪಾವಳಿ ಸಡಗರದಿಂದ ಆಚರಿಸಿ ಮನ ತುಂಬಿದೆ. ಮೈ ಮನಸ್ಸುಗಳನ್ನು ಸ್ವಚ್ಛಗೊಳಿಸುವ ಮತ್ತು ಹೊಸತನ ವೊಂದು ಮೂಡಿ ಬರಲು ಮನ ಮನಸ್ಸುಗಳು ಕೂಡಿ ಮಾಡುವ ಹಬ್ಬದ ಆಚರಣೆಗೆ ಮಹತ್ವವಿದೆ. ಇಂತಹ ದೀಪಾವಳಿ ಹಬ್ಬವನ್ನು ನಮ ಕಚೇರಿಯಲ್ಲಿ ಲಕ್ಷ್ಮಿ ಪೂಜೆ ಮಾಡಿ ದೀಪ ಜ್ಯೋತಿ ಬೆಳಗಿಸಿ ತುಳುನಾಡ ಸಂಪ್ರದಾಯದ ಪ್ರಕಾರ ಬಲಿಯೇಂದ್ರ ಕರೆಯುವ ಮೂಲಕ ನಮ್ಮ ತುಳು ಸಂಸ್ಕ್ರತಿಯ ಅನಾವರಣವೆ ಇಲ್ಲಿ ಆಗಿದೆ ಎಂದರೆ ತಪ್ಪಾಗಲಾಗದು. ಸಾಂಸ್ಕ್ರತಿಕ ಕಾರ್ಯಾಧ್ಯಕ್ಷ ಸಂತೋಷ್ ಶೆಟ್ಟಿ ಮತ್ತು ಸಮಿತಿ, ಮಹಿಳಾ ವಿಭಾಗದವರ ಕೂಡುವಿಕೆಯಲ್ಲಿ ಸಂಪ್ರದಾಯ ಪ್ರಕಾರ ದೀಪಾವಳಿಯ ಆಚರಣೆಯಲ್ಲಿ ತುಳು ಭಾಂದವರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದೀರಿ, ದೀಪಗಳ ಹಬ್ಬ ದೀಪಾವಳಿಯು ಎಲ್ಲರ ಬಾಳಿನಲ್ಲಿ ಶುಭವನ್ನು ತರಲಿ, ಸರ್ವರಿಗೂ ಸುಖ…
ಪ್ಲಾಂಟ್ ಫಾರ್ ದಿ ಪ್ಲಾನೆಟ್ ಕಾರ್ಯಕ್ರಮದಡಿ ಕುಂತಳನಗರದಲ್ಲಿನ ಉಡುಪಿ ಗ್ರಾಮೀಣ ಬಂಟರ ಸಂಘದ ಆಶಾ ಪ್ರಕಾಶ್ ಶೆಟ್ಟಿ ಕನ್ವೆನ್ಷನ್ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ ಕ್ಯಾಂಪಸ್ ನಲ್ಲಿ ಉಪಯುಕ್ತ ಗಿಡಗಳನ್ನು ನೆಡುವ ಕಾರ್ಯಕ್ರಮಕ್ಕೆ ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಮುನಿಯಾಲು ಉದಯ ಕುಮಾರ್ ಶೆಟ್ಟಿ ಚಾಲನೆಯನ್ನು ನೀಡಿದರು. ಮುಂಬಯಿ ಶಿವಿಕಾ ಪ್ಲಾಸ್ಟಿಕ್ಸ್ ಪ್ರೈ. ಲಿ. ಇದರ ಮ್ಯಾನೇಜಿಂಗ್ ಡೈರೆಕ್ಟರ್ ಮಧುಕರ್ ಶೆಟ್ಟಿ, ನಿಟ್ಟೆ ಜಸ್ಟಿಸ್ ಕೆಎಸ್ ಹೆಗ್ಡೆ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ಇದರ ಪ್ಲೇಸ್ಮೆಂಟ್ ಎಡ್ಮಿಷನ್ಸ್ ಮುಖ್ಯಸ್ಥರಾದ ಗುರುಪ್ರಶಾಂತ್ ಭಟ್ ಕೆ., ಪ್ರೋ. ದಿವ್ಯಾರಾಣಿ ಪ್ರದೀಪ್, ಉಡುಪಿ ಗ್ರಾಮೀಣ ಬಂಟರ ಸಂಘದ ಅಧ್ಯಕ್ಷರಾದ ಡಾ. ಎಚ್. ಬಿ. ಶೆಟ್ಟಿ, ಕಾರ್ಯದರ್ಶಿ ವಿಜಿತ್ ಶೆಟ್ಟಿ, ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಅಶೋಕ್ ಕುಮಾರ್ ಶೆಟ್ಟಿ, ಪ್ರಮುಖರಾದ ಪದ್ಮನಾಭ ಹೆಗ್ಡೆ, ಗೋಪಾಲ ಶೆಟ್ಟಿ, ಹರೀಂದ್ರ ಹೆಗ್ಡೆ, ದಯಾನಂದ ಶೆಟ್ಟಿ ಕಲ್ಮಂಜೆ, ರಂಜಿನಿ ಹೆಗ್ಡೆ, ಮೈಸ್ ಸಂಸ್ಥೆಯ ಆಡಳಿತಾಧಿಕಾರಿ ಗಾಯತ್ರಿ ಉಪಾಧ್ಯಾಯ, ಟ್ರೈನರ್ ವಿಷ್ಣುಮೂರ್ತಿ…
ಹಿರಿಯ ಕೃಷಿಕ ನಕ್ರೆ ವರ್ಣಬೆಟ್ಟು ರಘುರಾಮ್ ನಾಯ್ಕ್ ಅವರ ಪತ್ನಿ ಶಿರ್ವ ನಡಿಬೆಟ್ಟು ಮನೆತನದ ಪುಷ್ಪಾ ಆರ್. ಹೆಗ್ಡೆ (70) ಅವರು ಸೆ.13ರಂದು ನಡಿಬೆಟ್ಟುವಿನ ಸ್ವಗೃಹದಲ್ಲಿ ನಿಧನ ಹೊಂದಿದರು. ಮೃತರು ಪತಿ, ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ. ಶಿರ್ವ ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ನ್ಯಾರ್ಮ ಶ್ರೀ ಧರ್ಮ ಜಾರಂದಾಯ ದೈವಸ್ಥಾನ ಹಾಗೂ ನಡಿಬೆಟ್ಟು ಶ್ರೀ ಬಬ್ಬುಸ್ವಾಮಿ ದೈವಸ್ಥಾನಗಳ ಜೀರ್ಣೋದ್ದಾರ ಕಾರ್ಯಗಳಲ್ಲಿ ಭಾಗವಹಿಸಿ ಸೇವೆ ಸಲ್ಲಿಸಿದ್ದ ಅವರು ಶಿರ್ವ ನಡಿಬೆಟ್ಟು ಸೂರ್ಯಚಂದ್ರ ಜೋಡುಕೆರೆ ಕಂಬಳದ ಪೋಷಕರಾಗಿದ್ದರು. ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಮತ್ತಿತರ ಗಣ್ಯರು ಆಗಮಿಸಿ ಸಂತಾಪ ಸೂಚಿಸಿದ್ದಾರೆ.
ತುಳು ಕನ್ನಡ ವೆಲ್ಫೇರ್ ಅಸೋಸಿಯೇಶನ್ ಮೀರಾ ಭಯಂದರ್ ಆಯೋಜನೆಯಲ್ಲಿ ಅಗೋಸ್ಟ್ 6 ರವಿವಾರದಂದು ಆಟಿದ ನೆಂಪು – 2023 ಹಾಸ್ಯಗೋಷ್ಠಿ ಶ್ರೀ ನಾರಾಯಣ ಗುರು ಹಾಲ್, ಒಂದನೇ ಮಹಡಿ, ಜಹಾಂಗೀರ್ ಸರ್ಕಲ್, ಎಂ. ಟಿ. ಎನ್. ಎಲ್ ರೋಡ್, ಮೀರಾರೋಡ್ (ಪೂ). ಇಲ್ಲಿ ಅರ್ಥಗರ್ಭಿತವಾಗಿ ನೆರೆದ ಜನ ಸಮೂಹದ ಎದುರು ನೆರವೇರಿತು. ಮೀರಾ ಭಯಂದರ್ ತುಳು ಕನ್ನಡ ವೆಲ್ಫೇರ್ ಅಸೋಸಿಯೇಶನ್ ಸಂಸ್ಥೆಯು ಕಳೆದ ಒಂದು ದಶಕಗಳಿಂದ ನಮ್ಮ ನಾಡಿನ ಜನಪದ ಕಲೆ ಮತ್ತು ಸಂಸ್ಕೃತಿ ಸಂಸ್ಕಾರಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ವರ್ಷವಿಡೀ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುತ್ತದೆ. ಅದರಂತೆ ಆಟಿಯ ಆಚರಣೆಯ ಜೊತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಇಲ್ಲಿ ನಡೆದ ಹಾಸ್ಯಗೋಷ್ಠಿಯಲ್ಲಿ ಮುಂಬಯಿಯ ಸಾಹಿತಿಗಳಿಂದ ವಿಶೇಷ ಕಾರ್ಯಕ್ರಮ ನಡೆದಿದ್ದು ಸಭಾಧ್ಯಕ್ಷತೆಯನ್ನು ಹಾಸ್ಯ ಕವಿ ಖ್ಯಾತಿಯ ಸೋಮನಾಥ್ ಕರ್ಕೇರರು ವಹಿಸಿದ್ದು ನಗು ಶಾರೀರಿಕ ಹಾಗೂ ಮಾನಸಿಕ ಬೆಳವಣಿಗೆಗೆ ಉತ್ತಮ ಎಂದು ಕವಿಗಳು ಪ್ರಸ್ತುತಪಡಿಸಿದ ಗೋಷ್ಠಿಯ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಹಾಗೂ ಕೆಲವು ಹಾಸ್ಯ…