ಗುರುಪುರ ಬಂಟರ ಮಾತೃ ಸಂಘದ ಯುವ ವಿಭಾಗದ ವತಿಯಿಂದ ಜರಗಿದ ಗಂಜಿಮಠದ ರಾಜ್ಅಕಾಡೆಮಿ ಶಾಲಾ ಮೈದಾನದಲ್ಲಿ ನಡೆದ ಬಂಟ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಕ್ರೀಡಾ, ಶಿಕ್ಷಣ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ಮಾಡಿದ ಡಾ| ಎ. ಸದಾನಂದ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.ಸನ್ಮಾನ ಸ್ವೀಕರಿಸಿ, ಮಾತನಾಡಿದ ಅವರು ಗುರುಪುರ ಬಂಟರ ಮಾತೃ ಸಂಘದ ಸಂಘಟನೆ ಕಾರ್ಯಗಳು ನಿಜವಾಗಿಯೂ ಮೆಚ್ಚುವಂಥದ್ದು. ಕ್ರೀಡೆಯಲ್ಲಿ ವಿಜಯಿಯಾದವರು ಸೋತವರನ್ನು ಅಭಿನಂದಿಸಿದರೆ ಅವರ ಹೃದಯ ವೈಶಾಲ್ಯತೆಯನ್ನು ತೋರಿಸುತ್ತದೆ. ನಾನು ಒಬ್ಬ ಕ್ರೀಡಾಪಟುವಾಗಿರುವುದರಿಂದ ಈ ಕ್ರೀಡಾಕೂಟದಲ್ಲಿ ಭಾಗವಹಿಸಿರುವುದು ಸಂತೋಷವಾಗಿದೆ. ಬಂಟರು ಒಟ್ಟಾಗಿ ಸಮಾಜದ ಏಳಿಗೆಗೆ ದುಡಿಯೋಣ ಎಂದು ಹೇಳಿದರು.
ಈ ಸಂದರ್ಭದಲ್ಲಿ ಡಾಕ್ಟರೇಟ್ ಪದವಿ ಪಡೆದ ರಿತೇಶ್ ಪಕ್ಕಳ ಪೆರ್ಮಂಕಿಗುತ್ತು, ಕಲಾಕ್ಷೇತ್ರದಲ್ಲಿ ಸಾಧನೆಗೈದ ಶ್ರೀದರ್ ಶೆಟ್ಟಿ ತೆಕ್ಕಿಬೆಟ್ಟು, ಕ್ರೀಡಾಕ್ಷೇತ್ರದಲ್ಲಿ ಅನುಷ್ ನಾಯ್ಕ್, ಶಿಕ್ಷಣ ಕ್ಷೇತ್ರದಲ್ಲಿ ನಿಷ್ಕರ್ಷ್ ಚೌಟ ಅವರನ್ನು ಸನ್ಮಾನಿಸಲಾಯಿತು. ಅನಾರೋಗ್ಯದಿಂದ ಬಳಲುತ್ತಿರುವ ಬಡಕುಟುಂಬದ ಕವಿರಾಜ್ ಶೆಟ್ಟಿಯವರಿಗೆ ಸಂಘದ ವತಿಯಿಂದ ಸಹಾಯಧನ ನೀಡಲಾಯಿತು. ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಬೆಳಿಗ್ಗೆ ನಡೆದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಬಂಟ್ವಾಳ ಕ್ಷೇತ್ರದ ಶಾಸಕರಾದ ಶ್ರೀ ರಾಜೇಶ್ ನಾಯ್ಕ್ ಇವರು ಮಾತನಾಡುತ್ತಾ, ಆರೋಗ್ಯಕ್ಕೆ ಕ್ರೀಡೆ ಮುಖ್ಯ. ಕ್ರೀಡೆಯ ಮೂಲಕ ಯುವಕರನ್ನು ಹಾಗೂ ಸಮಾಜದ ಎಲ್ಲರನ್ನೂ ಒಗ್ಗೂಡಿಸುವ ಕಾರ್ಯ ಇಲ್ಲಿ ನಡೆಯುತ್ತಿರುವುದು ತುಂಬಾ ಸಂತೋಷವಾಗುತ್ತಿದೆ. ಇಂದಿನ ದಿನಗಳಲ್ಲಿ ಶಾರೀರಿಕ ಹಾಗೂ ಮಾನಸಿಕವಾಗಿ ಎದುರಿಸುವ ಮೂಲಕ ಎಲ್ಲರೂ ಆರೋಗ್ಯ ಕಾಪಾಡುವುದು ಮುಖ್ಯವಾಗಿದೆ.
ಗಂಜಿಮಠ ರಾಜ್ ಅಕಾಡೆಮಿ ಶಾಲೆಯ ಸಂಚಾಲಕಿ ಮಮತಾ ವೈ ಶೆಟ್ಟಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಮಕ್ಕಳ ಬೆಳವಣಿಗೆಯಲ್ಲಿ ಕ್ರೀಡೆ ಮುಖ್ಯ. ಕ್ರೀಡೆಯಲ್ಲಿದ್ದವರಲ್ಲಿ ನಾವು ಶಿಸ್ತನ್ನು ಕಾಣುವ ಮೂಲಕ ಅವರು ಶಿಕ್ಷಣ ಹಾಗೂ ಇತರ ಕ್ಷೇತ್ರಗಳಲ್ಲಿ ಸಾಧನೆಯನ್ನು ತೋರುತ್ತಿದ್ದಾರೆ. ಬಿ.ಜೆ.ಪಿ. ಜಿಲ್ಲಾ ವಕ್ತಾರ ಜಗದೀಶ್ ಶೇಣವ ವಾಮಂಜೂರು ಇವರು ಮಾತನಾಡಿ ಸಮಾಜದ ಮಕ್ಕಳನ್ನು ಯುವಕ-ಯುವತಿ ಹಾಗೂ ಮಹಿಳೆಯರನ್ನು
ಒಗ್ಗೂಡಿಸುವ ಕಾರ್ಯವನ್ನು ಗುರುಪುರ ಬಂಟರ ಮಾತೃ ಸಂಘವು ಮಾಡುತ್ತಿವೆ. ಸಮಾಜದ ಸಾಧಕರನ್ನು ಗುರುತಿಸುವುದು ಅಗತ್ಯ ಎಂದರು. ಬಂಟರ ಯಾನೆ ನಾಡವರ ಮಾತೃಸಂಘ ಇದರ ತಾಲೂಕು ಸಂಚಾಲಕರಾದ ವಸಂತ ಶೆಟ್ಟಿಯವರು ಧ್ವಜಾರೋಹಣ ನೆರವೇರಿಸಿದರು.
ಗುರುಪುರ ವೈದ್ಯನಾಥ ದೈವಸ್ಥಾನದ ಗಡಿಪ್ರಧಾನರಾದ ಪ್ರಮೋದ್ ಕುಮಾರ್ ರೈ, ಗುರುಪುರ ಬಂಟರ ಮಾತೃಸಂಘದ
ಮಾಜಿ ಅಧ್ಯಕ್ಷ ರಾಜ್ಕುಮಾರ್ ಶೆಟ್ಟಿ ತಿರುವೈಲುಗುತ್ತು ಮಾತನಾಡಿದರು. ರಾಷ್ಟ್ರೀಯ ಅಂಗವಿಕಲರ ಕ್ರಿಕೆಟ್ಗೆ ಆಯ್ಕೆಯಾದ ಅನುಷ್ ನಾಯ್ಕ್ ಅವರ ತಂಡ ಕ್ರೀಡಾಜ್ಯೋತಿಯನ್ನು ಬೆಳಗಿಸಿತು. ರಂಗಕಲಾವಿದ, ಸಮಾಜ ಸೇವಕ ಕಾಪು ಲೀಲಾಧರ ಶೆಟ್ಟಿ ಹಾಗೂ ಅವರ ಪತ್ನಿಯ ನಿಧನಕ್ಕೆ ಸಂತಾಪ ಸೂಚಿಸಲಾಯಿತು. ಗುರುಪುರ ಬಂಟರ ಮಾತೃ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಶೆಡ್ಡೆ ಹೊಸಲಕ್ಕೆ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉದ್ಯಮಿ ದಶರಥ ಯತಿರಾಜ್ ಶೆಟ್ಟಿ ನಿಟ್ಟೆಗುತ್ತು, ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಗಿರೀಶ್ ಆಳ್ವ, ಗುರುಪುರ ಬಂಟರ ಮಾತೃ ಸಂಘದ ಮಾಜಿ ಅಧ್ಯಕ್ಷ ವಿನಯ ಕುಮಾರ್ ಶೆಟ್ಟಿ ಮಾಣಿಬೆಟ್ಟುಗುತ್ತು, ಮಹಿಳಾ ವಿಭಾಗದ ಅಧ್ಯಕ್ಷ ಇಂದಿರಾಕ್ಷಿ ಶೆಟ್ಟಿ, ತೀರ್ಪುಗಾರರಾದ ಪ್ರೇಮನಾಥ ಶೆಟ್ಟಿ, ದಯಾನಂದ ಮಾಡ, ಕೃಷಿಕ ಪಣಿಮಜಲು ಮಹಾಬಲ ಶೆಟ್ಟಿ, ಸಂಘದ ಹಿರಿಯ ಸದಸ್ಯ ರಾಮಕೃಷ್ಣ ಮಾಣೈ ಉಳಾಯಿಬೆಟ್ಟು, ಉದ್ಯಮಿಗಳಾದ ರಾಜ್ಗೋಪಾಲ್ ರೈ, ದೇವಿಚರಣ್ ಶೆಟ್ಟಿ, ಅರುಣ್ ಪಕ್ಕಳ ಪೆರ್ಮಂಕಿಗುತ್ತು, ಓಂಪ್ರಕಾಶ್ ಶೆಟ್ಟಿ ವಾಮಂಜೂರು, ರವೀಂದ್ರನಾಥ ಮಾರ್ಲ, ಯುವ ವಿಭಾಗದ ಅಧ್ಯಕ್ಷ ದೀಪಕ್ ಶೆಟ್ಟಿ ಲಿಂಗಮಾರುಗುತ್ತು ಮೊದಲಾದ ಗಣ್ಯರು ಉಪಸ್ಥಿತರಿದ್ದರು.
ಕ್ರೀಡೆ ಹಾಗೂ ಸಾಂಸ್ಕøತಿಕ ಸಂಚಾಲಕ ಸುದರ್ಶನ್ ಶೆಟ್ಟಿ ಪೆರ್ಮಂಕಿ ಸ್ವಾಗತಿಸಿದರು. ಉಪಾಧ್ಯಕ್ಷ ಪ್ರವೀಣ್ ಆಳ್ವ ಗುಂಡ್ಯ ಹಾಗೂ ಪ್ರಖ್ಯಾತ್ ಶೆಟ್ಟಿ ಮೂಡುಶೆಡ್ಡೆ ವಂದಿಸಿದರು. ಕಿರಣ್ ಪಕ್ಕಳ ಪೆರ್ಮಂಕಿಗುತ್ತು, ಉದಯ ಶೆಟ್ಟಿ ಬೆಳ್ಳೂರುಗುತ್ತು, ಮನೋಜ್ ರೈ ಶೆಡ್ಡೆ ಕಾರ್ಯಕ್ರಮ ನಿರೂಪಿಸಿದರು.