Author: admin
ರಾಷ್ಟ್ರ ರಾಜಧಾನಿ ದೆಹಲಿಯಲ್ಲೂ ತುಳುನಾಡಿನ ಮಣ್ಣಿನ ಆಚರಣೆ ನಡೆದಿದೆ. ಆಟಿ ಅಮಾವಾಸ್ಯೆಯ ದಿನವಾದ ಸೋಮವಾರ ಮುಂಜಾನೆ 6 ರಿಂದ 8 ವರೆಗೆ ದೆಹಲಿಯ ಕರ್ನಾಟಕ ಸಂಘದ ಬಳಿಯ ಹಾಳೆ ಮರದ ತೊಗಟೆಯ ಕಷಾಯ ಮತ್ತು ಮೆಂತ್ಯೆ ಗಂಜಿಯ ವ್ಯವಸ್ಥೆನ್ನು ಮಾಡಲಾಗಿತ್ತು. ನೆರೆದ ನೂರಾರು ಮಂದಿ ಈ ಕಾರ್ಯಕ್ರಮದಲ್ಲಿ ಮದ್ದು ಸೇವಿಸಿ ತಮ್ಮ ಆರೋಗ್ಯವರ್ಧನೆಯನ್ನು ಮಾಡಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಕಷಾಯ ಸೇವಿಸುವ ಮೂಲಕ ಮಾಡಿದ ಪೋರ್ಟೀಸ್ ಆಸ್ಪತ್ರೆಯ ಆಂಕಾಲಜೀ ವಿಭಾಜದ ಮುಖ್ಯಸ್ಥರು, ಕ್ಯಾನ್ಸರ್ ಸರ್ಜನ್ ಡಾ. ಬಿ. ನಿರಂಜನ್ ನಾಯ್ಕ್ ಅವರು ಮಾತನಾಡಿ ಆಟಿ ಅಮವಾಸ್ಯೆಯ ದಿನ ಹಾಳೆ ಮರದ ಕಷಾಯದಿಂದ ಆಗುವ ಉಪಯೋಗಗಳನ್ನು ನೆರೆದವರಿಗೆ ತಿಳಿಸಿ ಇಂತಹ ಸದುಪಯೋಗವನ್ನು ದೆಹಲಿಯಲ್ಲಿದ್ದೂ ಆಚರಿಸಲು ಅನುವು ಮಾಡಿದ ಆಯೋಜಕರನ್ನು ಪ್ರಶಂಸಿಸಿದರು. ಈ ಹಾಳೆ ಮರದ ತೊಗಟಿನ ಕಷಾಯ ಮತ್ತು ಮೆಂತ್ಯೆ ಗಂಜಿಯ ವ್ಯವಸ್ಥೆಯನ್ನು ಮಂಗಳೂರು ಮೂಲದ ಪ್ರಕಾಶ್ ಶೆಟ್ಟಿ ಉಳೆಪಾಡಿ ಅವರು ಉಚಿತವಾಗಿ ಹಂಚುವ ಮೂಲಕ ತಮ್ಮ ತಾಯ್ನಾಡಿನ ಆಚರಣೆಯನ್ನು ದೆಹಲಿಯಲ್ಲಿ ಪರಿಚಯಿಸಿದರು. ಕಾರ್ಯಕ್ರಮದಲ್ಲಿ…
ಕುಂದಾಪುರದ ಕೊರವಡಿ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ ದಿನಾಂಕ 12 ಜುಲೈ, 2023 ರಂದು ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ನ ಛೇರ್ಮನ್ ಹಾಗೂ ಉಡುಪಿ ಜಿಲ್ಲಾ ಟೆನಿಸ್ ಬಾಲ್ ಕ್ರಿಕೆಟ್ ಅಸೋಸಿಯೇಷನ್ ನ ಅಧ್ಯಕ್ಷರಾಗಿರುವ ಶ್ರೀಯುತ ಗೌತಮ್ ಶೆಟ್ಟಿಯವರ ಮೂಲಕ ಸರಳ ಇಂಗ್ಲಿಷ್ ಕಲಿಕೆಗೆ ಪೂರಕವಾಗಿರುವ ಚಟುವಟಿಕೆ ಆಧಾರಿತ ಪುಸ್ತಕಗಳನ್ನು ಉಚಿತವಾಗಿ ವಿತರಿಸಲಾಯಿತು. ”ಪ್ರತಿಯೊಬ್ಬರ ಜೀವನದಲ್ಲಿ ಶಿಕ್ಷಣವು ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ. ಶಿಕ್ಷಿತ ಮಗು ರಾಷ್ಟ್ರವನ್ನು ನಿರ್ಮಿಸುತ್ತದೆ” ಎಂಬ ಚಿಂತನೆಯನ್ನು ದಾನಿಗಳಾದ ಗೌತಮ್ ಶೆಟ್ಟಿಯವರು ಹೊಂದಿದ್ದು ಅವರ ಬೆಂಬಲದೊಂದಿಗೆ ಮಕ್ಕಳ ಶಿಕ್ಷಣದ ಅಭಿವೃದ್ಧಿಗಾಗಿ ಶಾಲಾ ಮಕ್ಕಳಿಗೆ ಉಪಯೋಗವಾಗುವ ಪುಸ್ತಕಗಳನ್ನು ಅವರು ಪ್ರಾಯೋಜಿಸಿದ್ದಾರೆ. ಇದು ಗೌತಮ್ ಶೆಟ್ಟಿಯವರ ಒಂದು ಸೂಕ್ಷ್ಮ ಯೋಜನೆ. ಬಡ ಶಾಲಾ ಮಕ್ಕಳು ಈ ಶಾಲಾ ಶಿಕ್ಷಣ ಪುಸ್ತಕಗಳಿಂದ ಪ್ರಯೋಜನ ಪಡೆಯಲಿದ್ದಾರೆ. ಬಡ ವಂಚಿತ ಮಕ್ಕಳಿಗೆ ಅವರ ಅಧ್ಯಯನದ ಸಮಯದಲ್ಲಿ ಯಾವುದೇ ರೀತಿಯ ಅನಾನುಕೂಲತೆ ಉಂಟಾಗದಂತೆ ಶಿಕ್ಷಣದ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಯೋಜನೆಯ ಮೂಲಕ, ಶಿಕ್ಷಣದ ಅಭಿವೃದ್ಧಿಗೆ ಸ್ವಲ್ಪ ಪ್ರಯತ್ನ ಮಾಡಿದರೆ ವಂಚಿತ…
ಒಂಜಿ ಪೆರಿಯೆರ್ನ ಬಾಯಿಡ್ ಕೇಂಡಿನ ಸಾಧಾರಣ ಸೊನ್ಪ ಸೊನ್ಪತ್ತೈನ್ ವರ್ಸೊರ್ದುಲ ದುಂಬು ನಡತಿನ ಕತೆ. ತುಲುನಾಡ್ಡ್ ಅವ್ವೊಂಜಿ ಕಾಲೊಡು ಸತ್ಯದ ಜೂವೊಲು ಧರ್ಮದ ನರಮಾನಿಲು ಬದ್ಕ್ ಬಾರೊಂದು ಇತ್ತಿನ ಕಾಲೊಗೆ.. ಆನಿದ ಕಾಲೊಡು ಧರ್ಮ ಮೀರಿನಾಯಗ್ ಮೂಜಿ ದಿನೊತ ಔಸ ಧರ್ಮೊಡ್ ನಡತಿನಾಯಗ್ ಸಾರ ದಿನೊತ ಔಸಗೆ.. ಆ ಕಾಲೊಡು ತುಲುನಾಡ ಮಣ್ಣ ಸತ್ಯ ಎಂಚ ಇತ್ತುಂಡು ಪಂಡ ಕಾಂಡೆ ಪಂಡಿನವು ಮಧ್ಯಾಹ್ನದ ದೊಂಬು ನೆತ್ತಿಗ್ ಬೂರೊಡ್ಡ ದುಂಬು ಪಂಡಿ ನಾಲಯಿ ದೊಂಡೆಡ್ ಕುಲ್ಲೊಡ್ಡ ದುಂಬು ಪಲಿತ್ ಬರೊಂದು ಇತ್ತುಂಡುಗೆ.. ಅಂಚಿನ ಒಂಜಿ ಕಾಲೊಡು ಒಂಜಿ ಪೊರ್ತುದ ಬಂಜಿ ದಿಂಜೊಡಾಂಡ ಕೋಲು ಕಾರ್ ಮುರ್ಕುನ ಕೆಸರ್ ದಿಂಜಿನ ತಾರುನ ಕಂಡೊಗು ಜಪ್ಪೊಡುಗೆ.. ಕಾಯುನ ದೊಂಬುಡು ನುಂಗೊಂದು ಬೂರುನ ಬರ್ಸೊಡು ಬೊದುಲೊಡುಗೆ.. ಅಲ್ಪ ನೆತ್ತೆರ್ ಬೆಗರ್ ಆವೊಡುಗೆ.. ಬೆಗರ್ ಬಾರ್ ಆವೊಡುಗೆ.. ಬಾರ್ ಬೆಯಿತ್ ಬೆಯಿತಿನೆ ಬರಕಲೊಡು ಉಜ್ಜೆರ್ಡ್ ಗುದು ಗುದುದು ಮಡಿ ಆದ್ ಅರಿ ಆವೊಡುಗೆ.. ಅರಿ ಮಣ್ಣ ಕರೊಟು ಅರ್ಲುನ…
ಉಡುಪಿ ಜಿಲ್ಲೆಯ ಬ್ರಹ್ಮಾವರದಿಂದ ಬಾರಕೂರಿಗೆ ಹೋಗುವ ಮುಖ್ಯರಸ್ತೆಯಲ್ಲಿ ದೊಡ್ಡ ಸೇತುವೆಗಿಂತ ಮುನ್ನ ಸಿಗುವ ಸಣ್ಣ ಸೇತುವೆಯ ಪೂರ್ವಕ್ಕೆ ಮಟಪಾಡಿ ಶೆಟ್ಟರ ಕುದ್ರುವಿನ ಗದ್ದೆ ಮಧ್ಯದಲ್ಲಿ ಬೊಬ್ಬರ್ಯನ ಸನ್ನಿಧಾನವಿದೆ. ಶೆಟ್ಟರಕುದ್ರಿನಲ್ಲಿ ಒಂದಿಷ್ಟು ಬಂಟರ ಮನೆಗಳಿದ್ದು ಅವರೇ ಆಡಳಿತೆದಾರರು. ನೂರು ವರ್ಷಗಳ ಹಿಂದೆ ಶೆಟ್ಟರು ಬ್ರಹ್ಮಾವರಕ್ಕೆ ಹೋಗುವುದು ಗದ್ದೆಯ ಅಂಚುಕಟ್ಟಿನಲ್ಲಿ ನಡೆದುಕೊಂಡು. ವಾಪಸು ಬರುವಾಗ ಕತ್ತಲೆಯಾದರೆ ನೆನಪಾಗುವುದು ಬೊಬ್ಬರ್ಯ. “ಓ ಬೊಬ್ಬರ್ಯ, ಮನೆಗೆ ಹೋಯ್ಕಲೆ ಮಾರಾಯ” ಎನ್ನುತ್ತಿದ್ದರಂತೆ. ಬೊಬ್ಬರ್ಯ ಎರಡು ಸೂಡಿ (ದೊಂದಿ- ಸೂಟೆ)ಗಳನ್ನು ಕಳುಹಿಸುತ್ತಿದ್ದನೋ, ಆತನೇ ಸೂಡಿಯಾಗಿ ಬರುತ್ತಿದ್ದನೋ ನಮ್ಮ ಮಂದಬುದ್ಧಿಗೆ ಅರ್ಥ ವಾಗದ್ದು. ಶೆಟ್ಟರು ಮನೆ ಸೇರುತ್ತಿದ್ದರು. ಇದನ್ನು ತಮ್ಮ ಸೋದರಮಾವ ದಿ| ಶೀನಪ್ಪ ಶೆಟ್ಟಿಯವರು ಹೇಳಿರುವು ದನ್ನು ಹಿರಿಯರಾದ ಕರುಣಾಕರ ಶೆಟ್ಟಿಯವರೂ, ತಾಯಿ ದಿ| ರತ್ನಾವತಿ ಶೆಟ್ಟಿಯವರು ಹೇಳುತ್ತಿದ್ದುದನ್ನು ಬ್ರಹ್ಮಾವರ ತಾ.ಪಂ. ಮಾಜಿ ಉಪಾಧ್ಯಕ್ಷ ಸುಧೀರ್ಕುಮಾರ್ ಶೆಟ್ಟಿಯವರೂ ನೆನಪು ಮಾಡುತ್ತಾರೆ. ಜೀವಂತ ಸಾಕ್ಷಿಗಳು 50 ವರ್ಷಗಳ ಹಿಂದಿನ ಘಟನೆ. ಮಾರ್ಟಿನ್ ಲೋಬೋ ಬೊಬ್ಬರ್ಯ ಕಟ್ಟೆ ಪಕ್ಕದಲ್ಲಿದ್ದ ಬಾವಿಯಿಂದ ನೀರು ತರು…
ಸಹಸ್ರಾರು ಸಂಖ್ಯೆಯ ಅಭಿಮಾನಿಗಳು, ಕಾರ್ಯಕರ್ತರು, ಬೆಂಬಲಿಗರ ಜಯಘೋಷದೊಂದಿಗೆ ಮೂಡುಬಿದಿರೆ ಪೇಟೆಯಲ್ಲಿ ಮೆರವಣಿಗೆ ನಡೆಸಿದ ಕಾಂಗ್ರೆಸ್ ಮುಖಂಡ ಮಿಥುನ್ ಎಂ. ರೈ ಅವರು ಸೋಮವಾರ ಮೂಡುಬಿದಿರೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಸ್ವರಾಜ್ ಮೈದಾನದಲ್ಲಿ ನಡೆದ ಬಹಿರಂಗ ಸಮಾವೇಶದ ಬಳಿಕ ಮಿಥುನ್ ಅವರು ತೆರೆದ ವಾಹನದಲ್ಲಿ ಕಾರ್ಯಕರ್ತರತ್ತ ಕೈ ಬೀಸುತ್ತಾ, ನಮಸ್ಕರಿಸುತ್ತಾ ಮೆರವಣಿಗೆಯಲ್ಲಿ ಸಾಗಿದರು. ಮಿಥುನ್ ಅವರ ಅಚ್ಚುಮೆಚ್ಚಿನ ಪಿಲಿ ನಲಿಕೆ ತಂಡಗಳು ಮತ್ತು ಚೆಂಡೆ ಬಳಗ ಜತೆಯಾಗಿದ್ದು, ಮೆರವಣಿಗೆಯ ರಂಗು ಹೆಚ್ಚಿಸಿತು. ಬಾವುಟಗಳನ್ನು ಬೀಸುತ್ತಾ ಸಾಗಿದ ಕಾರ್ಯತರ್ಕರ ಉದ್ಘೋಷ ಮುಗಿಲು ಮುಟ್ಟಿತ್ತು. ಪೇಟೆಯ ನಿಶ್ಮಿತಾ ಟವರ್ಸ್ ವರೆಗೆ ಸಾಗಿದ ಮೆರವಣಿಗೆ ವಾಪಸು ಆಡಳಿತ ಸೌಧದವರೆಗೆ ಬಂತು. ಇದಕ್ಕೂ ಮುನ್ನ ಕ್ಷೇತ್ರ ವ್ಯಾಪ್ತಿಯ ಕಟೀಲು ದುರ್ಗಾಪರಮೇಶ್ವರಿರೀ ದೇವಸ್ಥಾನ, ಬಪ್ಪನಾಡು ದುರ್ಗಾಪರಮೇಶ್ವರೀ ದೇವಸ್ಥಾನ, ಅಲಂಗಾರು ಮಹಾಗಣಪತಿ ಮಹಾಲಿಂಗೇಶ್ವರ ದೇವಸ್ಥಾನ, ಪುತ್ತಿಗೆ ಸೋಮನಾಥೇಶ್ವರ ದೇವಸ್ಥಾನ ಸೇರಿದಂತೆ ವಿವಿಧ ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡಿ ದೇವರ ದರ್ಶನ ಮಾಡಿದರು. ಬಹಿರಂಗ ಸಭೆಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್…
ಹೊಸದುರ್ಗ-ರಂಗ ಸುಹಾಸ ಟ್ರಸ್ಟ್ (ರಿ)ಸಾಣೇಹಳ್ಳಿ ಹಾಗೂ ಮೈಸೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ತರಬೇತಿ 1995-96 ನೆ ಸಾಲಿನ ವಿದ್ಯಾರ್ಥಿಗಳ ಗುರುವಂದನೆ ಹಾಗೂ ಅಭಿನಂದನಾ ಪುರಸ್ಕಾರ ಕಾರ್ಯಕ್ರಮ ಹಿರೇಮಗಳೂರಿನ ಎಲ್.ಜೆ.ಎಂ ಸಭಾಂಗಣದಲ್ಲಿ ಜರುಗಿತು. 1995-96 ನೇ ಸಾಲಿನ ಮೈಸೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ಶಿಕ್ಷಕರ ತರಬೇತಿ ಪಡೆದು ಪ್ರತಿಷ್ಠಿತ ಎಂ.ಆರ್.ಪಿ.ಎಲ್ ಶಾಲೆಯ ಕ್ರೀಡಾ ತರಬೇತುದಾರರಾಗಿ ಸುಮಾರು 20 ವರ್ಷಗಳ ಸೇವೆ ಸಲ್ಲಿಸಿ,1987 ರಲ್ಲಿ ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ಸ್ಥಾಪಿಸಿ ಹಲವಾರು ಕ್ರೀಡಾಕೂಟಗಳನ್ನು ಸಂಘಟಿಸಿ,ಅನೇಕ ಕ್ರೀಡಾಪಟುಗಳ ಬದುಕನ್ನು ರೂಪಿಸಿ,ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಸಹಕಾರ ನೀಡುತ್ತಿರುವ ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ಛೇರ್ಮನ್ ಮತ್ತು ಉಡುಪಿ ಜಿಲ್ಲಾ ಟೆನಿಸ್ ಬಾಲ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಗೌತಮ್ ಶೆಟ್ಟಿ ಕುಂದಾಪುರ ಇವರಿಗೆ “ಸಾರ್ಥಕ ಹೆಜ್ಜೆ ಗುರುತು ಅಭಿನಂದನಾ ಪುರಸ್ಕಾರ” ನೀಡಿ ಗೌರವಿಸಲಾಯಿತು. ಪುರಸ್ಕಾರವನ್ನು ಸ್ವೀಕರಿಸಿ ಮಾತನಾಡಿದ ಗೌತಮ್ ಶೆಟ್ಟಿ “ಕ್ರೀಡೆ ಜೀವನದ ಅಮೂಲ್ಯ ಆಸ್ತಿ. ಕ್ರೀಡೆಯಿಂದ ಜೀವನ ಕೌಶಲ್ಯವನ್ನು ಕಲಿಯುತ್ತೇವೆ.ಸೋಲು-ಗೆಲುವನ್ನು ಸಮನಾಗಿ ಸ್ವೀಕರಿಸಿ ಬದುಕನ್ನು ಸುಂದರವಾಗಿ ರೂಪಿಸಿಕೊಳ್ಳುತ್ತೇವೆ ಎಂದರು…
ತುಳುನಾಡಿನ ಸಂಸ್ಕೃತಿಗೆ ಬಲ ತುಂಬಿದ ಕೀರ್ತಿ ಇಲ್ಲಿನ ಗರಡಿಗಳಿಗೆ ಸಲ್ಲುತ್ತದೆ. ಅಧರ್ಮ ವಿರುದ್ಧ ಧರ್ಮದ ಕೀರ್ತಿ ಅರಳಿಸಿದವರು ತುಳುನಾಡಿನ ವೀರರಾದ ಕೋಟಿ ಚೆನ್ನಯರು. ತುಳುನಾಡಿನ ಜನರು ಸದಾ ಕ್ರಿಯಾಶೀಲರು ಎನ್ನುವುದು ಇಲ್ಲಿನ ಧರ್ಮಕಾರ್ಯವೇ ಸಾಕ್ಷಿ ಎಂದು ಶ್ರೀ ಕ್ಷೇತ್ರ ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು. ಕಂಕನಾಡಿ ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರದ “ಕಂಕನಾಡಿ ಗರಡಿ-150’ರ ಸಂಭ್ರಮದ ಮೂರನೇ ದಿನವಾದ ರವಿವಾರದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು. ಸಭಾ ಕಾರ್ಯಕ್ರಮ ಉದ್ಘಾಟಿಸಿದ ಶ್ರೀ ಕ್ಷೇತ್ರ ಹೊರನಾಡು ದೇವಾಲಯದ ಧರ್ಮಕರ್ತರಾದ ಭೀಮೇಶ್ವರ ಜೋಷಿ ಮಾತನಾಡಿ, ದೇವರು-ದೈವ ಮತ್ತು ಮನುಷ್ಯ ಸಂಬಂಧ ಒಟ್ಟಾದಾಗ ಜೀವನ ಪರಿಪೂರ್ಣತೆ ಕಾಣಲು ಸಾಧ್ಯ. ಪ್ರತಿಯೊಬ್ಬ ವ್ಯಕ್ತಿ ಧರ್ಮಯುಕ್ತವಾಗಿ ಜೀವನ ನಡೆಸಿ, ಪಡೆದ ಸಂಪತ್ತನ್ನು ಉತ್ತಮ ಕಾರ್ಯಕ್ಕೆ ವಿನಿಯೋಗಿಸಿ ಆತ್ಮತೃಪ್ತಿ ಕಾಣುವಂತಹ ಮೋಕ್ಷಗಾಮಿಯಾದಾಗ ಬದುಕು ಸಾರ್ಥಕ್ಯ ಕಾಣುತ್ತದೆ. ಧರ್ಮದ ವ್ಯಾಖ್ಯಾನ ಇಂತಹ ದೈವ-ದೇವರ ಗುಡಿ ಗೋಪುರದಲ್ಲಿ ಕಾಣಲು ಸಾಧ್ಯ ಎಂದರು. ಉದ್ಯಮಿ ರೋಹಿತ್ ಸನಿಲ್ ಅಧ್ಯಕ್ಷತೆ…
ಎನ್ ಎನ್ ಎಂ ಪ್ರೊಡಕ್ಷನ್ ಲಾಂಛನದಲ್ಲಿ ಆತ್ಮಾನಂದ ರೈ ನಿರ್ಮಿಸಿರುವ ಮಯೂರ್ ಆರ್ ಶೆಟ್ಟಿ ನಿರ್ದೇಶನದ ಪಿಲಿ ತುಳು ಚಲನಚಿತ್ರ ಫೆಬ್ರವರಿ 10 ರಂದು ತುಳುನಾಡಿನಾದ್ಯಂತ ಬಿಡುಗಡೆಗೊಳ್ಳಲಿದೆ. ಭರತ್ ಭಂಡಾರಿಯವರು ನಾಯಕ ನಟನಾಗಿ ಹಾಗೂ ನಾಯಕಿಯಾಗಿ. ಸ್ವಾತಿ ಶೆಟ್ಟಿ. ಚಿತ್ರದಲ್ಲಿ ಅಭಿನಯಿಸಿದ್ದಾರೆ, ಇತ್ತೀಚಿಗೆ ಚಿತ್ರದ ಟೀಸರ್ ಬಿಡುಗಡೆಗೊಂಡಿದ್ದು ಬಹು ಜನರ ಮೆಚ್ಚುಗೆ ಪಡೆದಿದೆ, ಚಿತ್ರದ ಬಗ್ಗೆ ಭರವಸೆ ಹುಟ್ಟಿಸಿದೆ. ಛಾಯಾಗ್ರಹಣ ಮತ್ತು ನಿರ್ದೇಶನ ಮಯೂರ್ ಆರ್ ಶೆಟ್ಟಿ, ಆತ್ಮಾನಂದ ರೈ ನಿರ್ಮಾಪಕರಾಗಿದ್ದು, ಭರತ್ ರಾಮ್ ರೈ ಸಹ ನಿರ್ಮಾಪಕರಾಗಿದ್ದಾರೆ, ಮಣಿಕಾಂತ್ ಕದ್ರಿಯವರ ಸಂಗೀತ ಸಾರಥ್ಯದಲ್ಲಿ ಅಧ್ಭುತವಾದ ನಾಲ್ಕು ಹಾಡುಗಳಿದ್ದು, ಪಟ್ಲ ಸತೀಶ್ ಶೆಟ್ಟಿ, ನಿಹಾಲ್, ಅನುರಾಧ ಭಟ್, ಕಲಾವತಿ, ಉಜ್ವಲ ಆಚಾರ್, ಮುಂತಾದವರು ಹಾಡಿದ್ದಾರೆ. ಪಟ್ಲ ಸತೀಶ್ ಶೆಟ್ಟಿಯವರ ಕಂಠ ಸಿರಿಯಲ್ಲಿ ಮೂಡಿ ಬಂದ ಶೀರ್ಷಿಕೆ ಗೀತೆಯು ಬಿಡುಗಡೆಗೊಂಡಿದ್ದು ಎಲ್ಲಾ ಕಡೆ ಸದ್ದು ಮಾಡುತ್ತಿದೆ, ಜನವರಿ ತಿಂಗಳಲ್ಲಿ ಚಿತ್ರದ ಎಲ್ಲಾ ಹಾಡುಗಳು ಬಿಡುಗಡೆಗೊಳ್ಳಲಿದೆ. ಪೆಭ್ರವರಿ ತಿಂಗಳಲ್ಲಿ ತುಳುನಾಡು ಮಾತ್ರವಲ್ಲದೆ, ಅರಬ್ ರಾಷ್ಟ್ರಗಳಲ್ಲಿ…
ಮಂಗಳೂರು: ಜಾಗತಿಕ ಬಂಟರ ಸಂಘಗಳ ಒಕ್ಕೂಟವು ದೇವರು ಮೆಚ್ಚುವ ಕೆಲಸವನ್ನು ಮಾಡುತ್ತಿದೆ. ಕಳೆದ 3ವರ್ಷಗಳಿಂದ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಮೂಲಕ ಐಕಳ ಹರೀಶ್ ಶೆಟ್ಟಿ ಅವರು ಸಮಾಜ ಸೇವೆಯನ್ನು ಕರ್ತವ್ಯದಂತೆ ಮಾಡುತ್ತಿದ್ದಾರೆ ಎಂದು ನಿಟ್ಟೆ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ. ಎನ್. ವಿನಯ್ ಹೆಗ್ಡೆ ಹೇಳಿದರು. ಅವರು ಜಾಗತಿಕ ಬಂಟರ ಸಂಘಗಳ ಒಕ್ಕೂಟ ಮಂಗಳೂರು ಇದರ ಆಶ್ರಯದಲ್ಲಿ ಅ.22ರಂದು ಬಂಟ್ಸ್ ಹಾಸ್ಟೇಲ್ ಬಳಿಯ ಸಿ.ವಿ. ನಾಯಕ್ ಹಾಲ್ ಸಭಾಂಗಣದಲ್ಲಿ ನಡೆದ ‘ಸಮಾಜ ಕಲ್ಯಾಣ ಯೋಜನೆಯ ಕಾರ್ಯಕ್ರಮ ಮತ್ತು ಗೌರವ ಸನ್ಮಾನ ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದರು. ಸಮಾಜದ ಎಲ್ಲಾ ವರ್ಗಕ್ಕೂ ಸಹಾಯ ಮಾಡುವುದು ನಮ್ಮ ಕರ್ತವ್ಯ ನಮ್ಮ ಸಂಸ್ಥೆಯು ಪ್ರತಿ ವರ್ಷ ಐದಾರು ಕೋಟಿಯಷ್ಟು ಹಣ ಸಹಾಯ ಧನ ನೀಡುತ್ತಿದೆ. ಮುಂದಿನ ದಿನಗಳಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟಕ್ಕೆ ತನ್ನಿಂದಾಗುವ ಸಹಕಾರ ನೀಡುವುದಾಗಿ ತಿಳಿಸಿದರು. ಸಭೆಯ ಅಧ್ಯಕ್ಷತೆಯನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ ಶೆಟ್ಟಿ ವಹಿಸಿ ಮಾತನಾಡಿ,…
ಹಣಕ್ಕಿಂತ ಮನುಷ್ಯತ್ವ ದೊಡ್ಡದಾಗಿದ್ದು ಮನುಷ್ಯತ್ವ ಇಲ್ಲದವರು ವೈದ್ಯಕೀಯ ವೃತ್ತಿಗೆ ಬರಬಾರದು ಎಂದು ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ನಿರ್ದೇಶಕ ಡಾ ಸಿ ರಾಮಚಂದ್ರ ತಿಳಿಸಿದರು. ಬಂಟರ ಸಂಘ ಬೆಂಗಳೂರು ವತಿಯಿಂದ ಹಮ್ಮಿಕೊಂಡಿದ್ದ ಎರಡನೇ ವರ್ಷದ ಸೇವಾ ಚೇತನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಬಂಟರ ಸಂಘ ಬೆಂಗಳೂರು ಸಮಾಜಸೇವಾ ಸಮಿತಿ ಮತ್ತು ಸೇವಾದಳ ಜಂಟಿಯಾಗಿ ಆಯೋಜಿಸಿದ್ದ ಉಚಿತ ವೈದ್ಯಕೀಯ ತಪಾಸಣಾ ಶಿಬಿರವನ್ನು ಅಬಕಾರಿ ಸಚಿವ ಕೆ ಗೋಪಾಲಯ್ಯ ಉದ್ಘಾಟನೆ ಮಾಡಿದರು. ಇದೇ ವೇಳೆ ಸುವರ್ಣ ವಾಹಿನಿಯ ಕರೆಂಟ್ ಅಫೇರ್ ವಿಭಾಗದ ಸಂಪಾದಕರು ಜಯಪ್ರಕಾಶ್ ಶೆಟ್ಟಿ ಅವರನ್ನು ಸನ್ಮಾನಿಸಿದರು. ಬೆಂಗಳೂರು ಬಂಟರ ಸಂಘದ ಅಧ್ಯಕ್ಷ ಉಪೇಂದ್ರ ಆರ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಮಧುಕರ್ ಎಂ ಶೆಟ್ಟಿ, ಸಮಾಜಸೇವಾ ಸಮಿತಿ ಮತ್ತು ಸೇವಾದಳದ ಅಧ್ಯಕ್ಷ ಮಂದಾರ್ತಿ ಉಮೇಶ್ ಶೆಟ್ಟಿ, ಸಂಚಾಲಕ ಅಜಿತ್ ಶೆಟ್ಟಿ, ಭಾಸ್ಕರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.