Author: admin
ಬಂಟರ ಯಾನೆ ನಾಡವರ ಮಾತೃ ಸಂಘದ ಮಂಗಳೂರು ತಾಲೂಕು ಸಮಿತಿಯ ವತಿಯಿಂದ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಆಗೋಸ್ಟ್ 15 ರಂದು ಬಂಟ್ಸ್ ಹಾಸ್ಟೇಲ್ ನಲ್ಲಿ ನಡೆಯಲಿದ್ದು, ಬಂಟ ಸಮಾಜದ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಮಂಗಳೂರು ತಾಲೂಕು ಸಮಿತಿಯು ಎಸ್‌ಎಸ್‌ಎಲ್ ಸಿ ಯಲ್ಲಿ 625 ಅಂಕಗಳಲ್ಲಿ 600 ಮತ್ತು ಅದಕ್ಕಿಂತ ಮೇಲ್ಪಟ್ಟು ಅಂಕ ಗಳಿಸಿದ ಹಾಗೂ ಪಿಯುಸಿ ಯಲ್ಲಿ 600 ರಲ್ಲಿ 575 ಮತ್ತು ಅದಕ್ಕಿಂತ ಅಧಿಕ ಅಂಕ ಗಳಿಸಿದ ಸಿಬಿಎಸ್ ಮತ್ತು ಐಸಿಎಸ್ ಸಿಲೆಬಸ್‌ನಲ್ಲಿ ಪಡೆದ ಗ್ರೇಡ್ ಎ++ ವಿದ್ಯಾರ್ಥಿಗಳಿಗೆ ಆಗೋಸ್ಟ್ 15ರಂದು ಬೆಳಿಗ್ಗೆ 11 ಗಂಟೆಗೆ ಬಂಟ್ಸ್ ಹಾಸ್ಟೇಲ್ ನಲ್ಲಿ ಪ್ರತಿಭಾ ಪುರಸ್ಕಾರ ಏರ್ಪಡಿಸಿದೆ. ಮಂಗಳೂರು ತಾಲೂಕು ವ್ಯಾಪ್ತಿಗೆ ಒಳಪಟ್ಟ ಬಂಟ ಸಮಾಜದ ವಿದ್ಯಾರ್ಥಿಗಳು ಅಂಕಪಟ್ಟಿ, ಆಧಾರ್ ಕಾರ್ಡ್‌ಗಳ ಪ್ರತಿ ಮತ್ತು ನಿಗದಿತ ಅರ್ಜಿ ನಮೂನೆಯೊಂದಿಗೆ ದಿನಾಂಕ 10.08.2023ರ ಒಳಗಡೆ ವಿದ್ಯಾರ್ಥಿಗಳ ಮೊಬೈಲ್ ಸಂಖ್ಯೆಯೊಂದಿಗೆ ಬಂಟ್ಸ್ ಹಾಸ್ಟೇಲ್ ನಲ್ಲಿರುವ ಬಂಟರ ಯಾನೆ ನಾಡವರ ಮಾತೃ ಸಂಘದ…
ಬಂಟರ ಸಂಘ(ರಿ) ಸುರತ್ಕಲ್ ಇದರ ವತಿಯಿಂದ ಅಭಿನಂದನೆ, ಸಹಾಯಹಸ್ತ ಮತ್ತು ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮ ಸುರತ್ಕಲ್ ಬಂಟರ ಭವನದಲ್ಲಿ ಜರುಗಿತು. ಕಾರ್ಯಕ್ರಮವನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ದೀಪ ಬೆಳಗಿಸಿ ಉದ್ಘಾಟಿಸಿದರು. ಸಭೆಯನ್ನು ಉದ್ದೇಶಿಸಿ ಮಾತಾಡಿದ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರು, “ಸುರತ್ಕಲ್ ಬಂಟರ ಸಂಘ ಸುಧಾಕರ್ ಪೂಂಜಾರ ಅವಧಿಯಲ್ಲಿ ಶ್ಲಾಘನೀಯ ಕಾರ್ಯವನ್ನು ಮಾಡಿದೆ. ಸಂಘ ಸಂಸ್ಥೆಗಳು ಕೇವಲ ಹೆಸರಿಗೆ ಮಾತ್ರ ಇರಬಾರದು. ಸುರತ್ಕಲ್ ಬಂಟರ ಸಂಘದಂತೆ ಬಡವರ, ಅಶಕ್ತರ ಆಶಾಕಿರಣವಾಗಿ ಸಮಾಜದಲ್ಲಿ ಹೆಸರನ್ನು ಅಚ್ಚಳಿಯದೆ ಉಳಿಯುವಂತೆ ನೋಡಿಕೊಳ್ಳಬೇಕು. ಶಿಕ್ಷಣ, ಮೂಲಭೂತ ಸೌಕರ್ಯಗಳಿಗೆ ಬಂಟರ ಸಂಘ ನೆರವು ನೀಡುತ್ತಾ ಬಂದಿದ್ದು ಮುಂದೆಯೂ ಇಂತಹ ಕೆಲಸಕ್ಕೆ ಬೆನ್ನೆಲುಬಾಗಿ ನಿಲ್ಲಲಿದೆ” ಎಂದರು. ಬಳಿಕ ಮಾತಾಡಿದ ಬಂಟರ ಯಾನೆ ನಾಡವರ ಮಾತೃ ಸಂಘದ ಉಪಾಧ್ಯಕ್ಷ ಕಾವು ಹೇಮಾನಾಥ್ ಶೆಟ್ಟಿ ಅವರು, “ಸುರತ್ಕಲ್ ಬಂಟರ ಸಂಘ ಸಮಾಜಮುಖಿ ಕಾರ್ಯಗಳ ಮೂಲಕ ಸಮಾಜದಲ್ಲಿ ಇಂದು…
ಸ್ವಾತಿ ಪ್ರಕಾಶ್ ಶೆಟ್ಟಿ ಈ ಹೆಸರು ಈಗ ಎಲ್ಲೆಲ್ಲೂ ಮನೆಮಾತಾಗಿದೆ. ಇದಕ್ಕೆ ಪ್ರಮುಖ ಕಾರಣ ಈಚೆಗೆ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಾಣುತ್ತಿರುವ ಗೌಜಿ ಗಮ್ಮತ್ತ್ ತುಳು ಸಿನಿಮಾ. ತುಂಬಿದ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿರುವ ಗೌಜಿ ಗಮ್ಮತ್ತ್ ತುಳು ಸಿನಿಮಾದಲ್ಲಿ ಇವರದ್ದು ನಾಯಕಿಯ ಪಾತ್ರ. ಈ ಚಿತ್ರದಲ್ಲಿ ಇವರ ಅಭಿನಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದ್ದು, ಇವರಿಗೆ ಸಿನಿಮಾ ರಂಗದಲ್ಲಿ ಉತ್ತಮ ಭವಿಷ್ಯ ಇದೆ ಎಂಬ ಮಾತು ಪ್ರೇಕ್ಷಕರಿಂದ ಕೇಳಿ ಬರುತ್ತಿದೆ. ಸಿನಿಮಾದಲ್ಲಿ ಇವರು ತಂದೆಯ ಜಿಪುಣತನವನ್ನು ವಿರೋಧಿಸುವ ಪಾತ್ರದಲ್ಲಿ ಉತ್ತಮ ಅಭಿನಯ ನೀಡಿದ್ದಾರೆ. ಕೊನೆಗೆ ತಂದೆ ಯಾಕಾಗಿ ಜಿಪುಣತನ ತೋರುತ್ತಿದ್ದರು ಎಂಬುದು ತಿಳಿದಾಗ ಸ್ವಾತಿ ಶೆಟ್ಟಿ ತೋರಿದ ಅಭಿನಯ ಎಲ್ಲರಿಂದಲೂ ಮೆಚ್ಚುಗೆಗೆ ಪಾತ್ರವಾಗಿದೆ. ಎಂ.ಕಾಂ. ಶಿಕ್ಷಣ ಪಡೆದಿರುವ ಈಕೆಗೆ ನಾಯಕಿಗೆ ಬೇಕಾಗುವಂಥ ಎಲ್ಲ ಅರ್ಹತೆಗಳೂ ಇವೆ. ರೂಪ, ಎತ್ತರ ದೇಹ, ಉತ್ತಮ ಸ್ವಭಾವ, ಆಕರ್ಷಕ ವ್ಯಕ್ತಿತ್ವ, ಉತ್ತಮ ಮಾತುಗಾರಿಕೆ ಎಲ್ಲವೂ ಇವರಲ್ಲಿದ್ದು, ಇವು ಇವರ ಸಿನಿಮಾ ರಂಗದ ಸಾಧನೆಯ ಪಥಕ್ಕೆ ಮಾರ್ಗಸೂಚಿಯಾಗಲಿದೆ ಎಂಬುದು…
ರಾಜ್ಯ ಸರಕಾರ ಸಾಧಕ ಬಾಧಕದ ಪಟ್ಟಿ ಮಲ್ಪುಲೆ ಪಂಡುದ್ ಇತ್ತೆ ಸಮಿತಿ ಮಲ್ದುಂಡ್, ಅವೆನ್ ನಮ ಯಾಪನೆ ವೀರೇಂದ್ರ ಹೆಗ್ಡೆರೆನ ಒಟ್ಟುಗು ಪೋದು ಪ್ರಧಾನಿಡನೆ ಕೊರ್ತ, ಒಂಜಿ ರಡ್ಡ್ ಸಲ ಅತ್ತ್ ಮೂಜಿ ಮೂಜಿ ಸಲ ಕೊರ್ತ. ನಮ ನಮ್ಮ ಹಕ್ಕ್‍ನ್ ಕೇನುನ ರೀತಿ ಬದಲಾವೊಡು, ನಮ್ಮ ರಾಜಕೀಯದಕುಲು “ಇದನ್ನು ಒಂದು ನೋಡಿ” ಪಂಡುದ್ ಮನವಿ ಕೊರ್ಪೆರ್, ಅವು ಬದಲಾವೊಡು “ಇದನ್ನು ಒಂದು ಮಾಡಿ” ಪನ್ಪಿನ ಸೊರ ಪಿದಾಡೊಡು. ಇಜ್ಜಿಡ ದುಂಬುದ ಸರ್ತಿದ ಓಟುದ ಪೊರ್ತುಗು ನಿಕಲೆನ್ ತೂವೊನುವ ಪನ್ಪಿನ ನಿರ್ಧಾರ ದೆತೊನೊಡು. ತುಳು ಭಾಷೆದ ವಿಷಯ ಬನ್ನಗ ನಮ್ಮ ನಡುಟು ಆ ಪಕ್ಷದಾಯೆ ಈ ಪಕ್ಷದಾಯೆ ಪನ್ಪಿನ ಬೇಧ ಬರಿಯರೆ ಬಲ್ಲಿ ಒಟ್ಟಾದ್ ತುಳುಕ್ಕು ಬೇಲೆ ಮಲ್ಪೊಡು ಪಂಡುದ್ ಆರ್ ಖಡಕ್ಕ್ ಎಚ್ಚರ್ಮೆ ಲಕ್ಕಾಯೆರ್. ಬೆಂಗಳೂರು ತುಳುವೆರೆ ಚಾವಡಿದ ಪರ್ಬದ ಬೊಳ್ಳಿ ಪರ್ಬದ ಪೊರ್ತುಡು ಪಾತೆರೊಂದು ಆರ್ ಇಂಚ ಪಂಡೆರ್. ರಾಜಕಾರಣಿಲು ತುಳು ಭಾಷೆದ ಸಭೆಕ್ಕ್ ಬರ್ಪುಜೆರ್, ಬತ್ತಿನಕುಲುಲಾ ರಡ್ಡ್…
ಉತ್ತರಕ್ಕೆ ದಿಕ್ಕಿಗೆ ಬಾಗಿರುವ ತೆಂಗಿನಮರದಿಂದ ತೆಂಗಿನಕಾಯಿಯನ್ನು ಭೂಮಿಗೆ ಸ್ಪರ್ಶ ಆಗದಂತೆ ಕಿತ್ತು , ಅದನ್ನ ಸಿಪ್ಪೆ ಬಿಡಿಸದೆ ಶುದ್ಧ ಬಾವಿಯ ನೀರಿಂದ ತೊಳೆದು ರುಂದನದ ಕಟ್ಟೆ ಅಥವಾ ತುಳಸಿಕಟ್ಟೆಯ ಮುಂದೆ ಒಂದು ಮಣೆ ಇಟ್ಟು ಅದರ ಮೇಲೆ ಬಾಳೆ ಕೊಡಿ ಇರಿಸಿ ತದನಂತರ ಆ ತೆಂಗಿನಕಾಯಿಯ ಸಣ್ಣ ಸಿಪ್ಪೆ ತೆಗೆದು ಜುಟ್ಟು ಮಾಡಿ ಬಾಳೆ ಎಲೆಯ ಮೇಲೆ ಇಡಲಾಗುತ್ತದೆ. ನಂತರ ಊರಿನಲ್ಲೇ ಸಿಗುವ ಕಾಡ ಕೇಪುಲ ಹೂವನ್ನು ಅದಕ್ಕೆ ಹಾಕಿ, ಯಾವ ದೈವವನ್ನ ನಮಗೆ ನಂಬಬೇಕಿದೆಯೋ ಅದರ ಹೆಸರನ್ನ ಕರೆದು ಉದಾಹರಣೆಗೆ ಸ್ವಾಮಿ ಪಂಜುರ್ಲಿ ಅಥವಾ ಸ್ವಾಮಿ ಜಿಮಾದಿ ಎಂದು ಕರೆದು ಮದಿಪುವಿನ ಮೂಲಕ ದೈವವನ್ನ ಆ ತೆಂಗಿನಕಾಯಿಗೆ ಆಕರ್ಷಣೆ ಮಾಡಲಾಗುತ್ತದೆ. ಇಲ್ಲಿ ರಾಜಂದೈವವಾದರೆ ಎರಡು ತೆಂಗಿನಕಾಯಿ ಹಾಗೂ ಬೇರೆ ದೈವವಾದರೆ ಒಂದು ತೆಂಗಿನಕಾಯಿ.ಗುಳಿಗ ಸುಲಭದಲ್ಲಿ ಬರುವವನಲ್ಲದ ಕಾರಣ ಆತನಿಗೆ ಜೊತೆಯಲ್ಲಿ ಒಂದು ಕರ್ಕ್ ಪುಳಿಯನ್ನ ಇಡಲಾಗುತ್ತದೆ. ನಂತರದಲ್ಲಿ ದೈವಕ್ಕೆ ಆವೇಶ ಬರಿಸುವ ಪೂಜಾರಿಯನ್ನ ಕರೆದು ಆತನಿಗೆ ಮನೆಯ ಅಥವಾ ಊರ…
ಸಮಾಜದ ಬಗ್ಗೆ ಜವಾಬ್ದಾರಿ ಅರಿತು ಕೆಲಸ ಮಾಡಬೇಕು. ಸಮಾಜದ ಬಲವರ್ಧನೆಗೆ ಎಲ್ಲರೂ ಸದಸ್ಯರಾಗ ಬೇಕು. ಶೇಕಡಾ 90 ರಷ್ಟು ಮಂದಿ ಸದಸ್ಯರಾಗದೆ ಉಳಿದಿದ್ದಾರೆ. ಅಂತವರನ್ನು ಒಟ್ಟು ಸೇರಿಸಿ ಸಮಾಜವನ್ನು ಕಟ್ಟುವ ಕೆಲಸ ನಡೆಯಬೇಕು. ಪರಸ್ಪರ ಬಾಂಧವ್ಯ, ಪ್ರೀತಿ, ವಿಶ್ವಾಸ, ಸಹಕಾರ ಬಂಟ ಸಮಾಜದ ಅಡಿಪಾಯವಾಗಿದ್ದು, ಅದು ಅಳಿವಿನಂಚಿನಲ್ಲಿದೆ. ನಮ್ಮ ಉನ್ನತ ಆಚಾರ ವಿಚಾರ, ಸಂಸ್ಕಾರ ಉಳಿಸ ಬೇಕು. ಈ ನಿಟ್ಟಿನಲ್ಲಿ ಬಾಂಧವ್ಯವನ್ನು ಬೆಸೆಯುವ ಸದುದ್ದೇಶದಿಂದ ಬಾಂಧವ್ಯ ಎಂಬ ಮಾಹಿತಿ ಸಂಗ್ರಹ ಕಾರ್ಯವನ್ನು ಕೈಗೊಂಡಿದ್ದೇವೆ ಎಂದು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ತಿಳಿಸಿದರು. ಬಂಟ್ಸ್ ಹಾಸ್ಟೇಲ್ ವಠಾರದಲ್ಲಿ ನಡೆದ ಬಂಟರ ಯಾನೆ ನಾಡವರ ಮಾತೃ ಸಂಘದ 102 ನೇ ವಾರ್ಷಿಕ ಸರ್ವ ಸದಸ್ಯರ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಬಂಟ ಸಮಾಜವನ್ನು ಕೇಂದ್ರ ಸರಕಾರದ ಮೀಸಲಾತಿ ಪಟ್ಟಿಯಲ್ಲಿ ಸೇರ್ಪಡೆಗೊಳಿಸಿಲ್ಲ. ರಾಜ್ಯದ ಮೀಸಲಾತಿ ಪಟ್ಟಿಯಲ್ಲಿ ಬಂಟ ಸಮಾಜವು ಪ್ರವರ್ಗ 2 ಎಯಲ್ಲಿ ಸೇರಲು ಅರ್ಹರಾಗಿದ್ದರೂ ನಮ್ಮನ್ನು…
ಜಗತ್ಪ್ರಸಿದ್ಧ ಸಂಕಷ್ಟ ನಿವಾರಕ ಜಡೆ ಗಣಪತಿ ಐತಿಹಾಸಿಕ ದೇಗುಲ…! ಸಾಕ್ಷಾತ್ ಸ್ತ್ರೀ ರೂಪ ಪಡೆದು, ಪಾರ್ವತಿಯ ಸ್ವರೂಪನಾಗಿ ನೆಲೆ ನಿಂತ ಬೃಹದಾಕಾರದ ಏಕಶಿಲೆ ಮೂರ್ತಿಯೇ – ಜಡೆ ಗಣಪತಿ ಸನ್ನಿಧಾನ…!
“ಗಜಮುಖನೆ ಗಣಪತಿಯೇ ನಿನಗೆ ವಂದನೆ, ನಂಬಿದವರ ಪಾಲಿನ ಕಲ್ಪತರು ನೀನೆ….!”ಎನ್ನುವುದು ಭಾರತೀಯ ಸಂಸ್ಕೃತಿಯಲ್ಲಿ ವಾಡಿಕೆ ಬರುವಂತಹ ವಿಶೇಷ ಶ್ಲೋಕ….!ಅದೇ ರೀತಿ ಗಣಪತಿ ಮತ್ತು ಇನ್ನಿತರ ದೇವತೆಗಳನ್ನು ಸ್ಮರಿಸುವುದಾದರೆ ಗಣಪತಿಗೆ ಮೊದಲ ಪಂತಿಯ ಅಗ್ರಸ್ಥಾನ ಹಾಗೂ ಗಣಪತಿಗೆ ಮೊದಲ ಆರಾಧಿತ ಎಂದು ಕರೆಯುತ್ತೇವೆ. ಮೋದಕ ಗಣೇಶ, ಹಾಗೆ ಹೊಟ್ಟೆ ಗಣೇಶ, ಜಡೆ ಗಣೇಶ, ಇವುಗಳಲ್ಲಿ ವಿಶೇಷವಾದಂತಹ ಗಣಪತಿಯು ಮಾನವನ ಬದುಕಿನ ಜೊತೆಗೆ ಅವಿನಾಭವ ಸಂಬಂಧವನ್ನು ಹೊಂದಿದೆ. ಯಾಕೆಂದರೆ ಮನುಷ್ಯನಿಗೆ ಕಷ್ಟಗಳು ಬಂದಾಗ ಮೋದಕ ಪ್ರಿಯನಾ ನೆನಪು ಮಾಡಿಕೊಂಡು, ಆ ಕಷ್ಟವನ್ನ ಭಗವಂತನಲ್ಲಿ ಸ್ಮರಿಸುತ್ತೇವೆ. ಕಷ್ಟಗಳು ನಿವಾರಣೆಯಾದಾಗ ಗಣಪತಿಗೆ ಹರಿಕೆ ರೂಪದಲ್ಲಿ ಹಣ್ಣು ಕಾಯಿಯನ್ನ ಅರ್ಪಿಸಿ ನಾವು ನಮಸ್ಕರಿಸುತ್ತೇವೆ. ಅದೇ ರೀತಿ ವಿಶೇಷವಾದ ಗಣಪತಿಯನ್ನು ನಾವಿಂದು ತಿಳಿದುಕೊಳ್ಳಾದರೆ ನೇರವಾಗಿ ಚಿತ್ರದುರ್ಗ ಜಿಲ್ಲೆಯತ್ತ ಧಾವಿಸಿದರೆ, ನಮಗೆ ಜಡೆ ಗಣಪತಿಯಾ ದರುಶನವಾಗುತ್ತದೆ. ಬದುಕಿನ ಸಂಕಷ್ಟಗಳನ್ನ ನಿವಾರಿಸುವ ಜಡೆ ಗಣಪತಿಯು ಜಿಲ್ಲೆಯ ಸಮಸ್ತ ಭಕ್ತಾದಿಗಳನ್ನ ತನ್ನತ್ತ ಸೆಳೆದುಕೊಳ್ಳುವ ಚಾಕ ಚಕ್ಯತೆ ಈ ಗಣೇಶನಿಗೆ ಇದೆ. ಯಾಕೆಂದರೆ ಹಲವಾರು ಬಾರಿ…
ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ನಡೆದ ರಾಜ್ಯೋತ್ಸವ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಸಮಾಜ ಸೇವೆಗಾಗಿ ರವಿ ಶೆಟ್ಟಿ ಮೂಡಂಬೈಲ್ ಪ್ರಶಸ್ತಿ ಸ್ವೀಕರಿಸಿದರು. ರವಿ ಶೆಟ್ಟಿ ಮೂಡಂಬೈಲ್ ಸಮಾಜ ಸೇವಕ, ಉದ್ಯಮಿಯಾಗಿದ್ದಾರೆ. ಅವರು ಸಮಾಜ ಸೇವೆಗಾಗಿ ರಾಜ್ಯೋತ್ಸವ ಪ್ರಶಸ್ತಿ ಪಡೆದಿದ್ದಾರೆ. ಮೂಡಂಬೈಲ್ ತಿಮ್ಮಪ್ಪ ಶೆಟ್ಟಿ-ದೋಣಿಂಜೆಗುತ್ತು ಸರೋಜಿನಿ ಶೆಟ್ಟಿ ದಂಪತಿಯ ಪುತ್ರನಾಗಿ ಬಂಟ್ವಾಳ ತಾಲೂಕಿನ ಮೂಡಂಬೈಲುನಲ್ಲಿ 1963 ಜು.20 ರಂದು ಜನಿಸಿದ ರವಿ ಶೆಟ್ಟಿ ಅವರು ಎಂಜಿನಿಯರಿಂಗ್ ಹಾಗೂ ಎಂಬಿಎ ಪದವೀಧರರಾಗಿದ್ದಾರೆ. ಭಾರತದಲ್ಲಿ ಹಲವಾರು ಪ್ರಮುಖ ಕಂಪನಿಗಳಲ್ಲಿ ಪ್ರತಿಷ್ಠಿತ ಹುದ್ದೆಗಳನ್ನು ನಿಭಾಯಿಸಿರುವ ರವಿಶೆಟ್ಟಿಯವರು ಕೆಲವು ವರ್ಷಗಳಿಂದ ಕತಾರ್‌ನಲ್ಲಿ ಎಟಿಎಸ್ ಸಮೂಹದ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಕರ್ನಾಟಕ ಸಂಘ ಕತಾರ್, ತುಳುಕೂಟ ಕತಾರ್, ಬಂಟ್ಸ್ ಕತಾರ್ ಹಾಗೂ ಜಿಲ್ಲೆಯ ಹಲವು ಸಂಘಸಂಸ್ಥೆಗಳಲ್ಲಿ ಅಧ್ಯಕ್ಷರಾಗಿ, ಮಹಾಪೋಷಕರಾಗಿ ತೊಡಗಿಸಿಕೊಂಡು ಸೇವೆ ಸಲ್ಲಿಸುತ್ತಿದ್ದಾರೆ. ರವಿಶೆಟ್ಟಿಯವರ ಜೀವನದ ಬಗ್ಗೆ ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗವು ರವಿತೇಜ ಎಂಬ ಪುಸ್ತಕವನ್ನು ಇತ್ತೀಚೆಗೆ ಪ್ರಕಟಿಸಿತ್ತು. “ನನ್ನ ಸಮಾಜ ಸೇವೆಯನ್ನು ಗುರುತಿಸಿ…
ಮಂಗಳೂರು, ಮಣಿಪಾಲಕ್ಕೆ ಮಾತ್ರ ಸೀಮಿತವಾಗಿದ್ದ ಮಲ್ಟಿಫ್ಲೆಕ್ಸ್ ಸಿನಿಮಾ ಥಿಯೇಟರ್ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಮೂರು ಸಿನಿಮಾ ಹಾಲ್ ಗಳೊಂದಿಗೆ ಮಾಚ್೯ 25 ಶುಕ್ರವಾರದಿಂದ ಸುರತ್ಕಲ್ ಹೃದಯಭಾಗದಲ್ಲಿರುವ ಅಭಿಷ್ ಮಾಲ್ ನಲ್ಲಿ ಶುಭಾರಂಭಗೊಳ್ಳಲಿದೆ. ಈ ಬಗ್ಗೆ ಮಾಹಿತಿ ನೀಡಿದ ಸಂಸ್ಥೆಯ ಮಾಲಕ ಶಶಿಧರ್ ಕೋಡಿಕಲ್ ಅವರು, “ಸುರತ್ಕಲ್, ಪಡುಬಿದ್ರೆ, ಮೂಲ್ಕಿ, ಬಜಪೆ ಕಾಟಿಪಳ್ಳ ಕೃಷ್ಣಾಪುರ ಸುತ್ತಮುತ್ತಲಿನ ಗ್ರಾಮೀಣ ಭಾಗಗಳ ಜನರಿಗೆ ಮಲ್ಟಿ ಫ್ಲೆಕ್ಸ್ ನಲ್ಲಿ ಕೂತು ಕುಟುಂಬ ಸಮೇತ ಸಿನಿಮಾ ನೋಡುವ ಕನಸನ್ನು ಸುರತ್ಕಲ್ ನಲ್ಲಿ ಸಿನಿ ಗ್ಯಾಲಕ್ಸಿ ಚಿತ್ರಮಂದಿರ ನನಸು ಮಾಡಲಿದೆ. ಸಿನಿಗ್ಯಾಲಕ್ಸಿಯಲ್ಲಿ ಹವಾನಿಯಂತ್ರಿತ ಮೂರು ಪರದೆಗಳಿವೆ. ಉತ್ತಮ ತಂತ್ರಜ್ಞಾನ, ಸೌಂಡ್, ವಿಡಿಯೋ ಗುಣಮಟ್ಟ ಯಾವುದರಲ್ಲೂ ರಾಜಿ ಮಾಡಿಕೊಳ್ಳದೆ ಮೂರು ಪ್ರತ್ಯೇಕ ಸಿನಿಮಾ ಹಾಲ್ ಗಳನ್ನು ನಿರ್ಮಿಸಿದ್ದು ಒಟ್ಟು 417 ಆಸನ ಸಾಮರ್ಥ್ಯ ಹೊಂದಿದೆ” ಎಂದು ಶಶಿಧರ್ ಕೋಡಿಕಲ್ ಹೇಳಿದರು. ಯು ಎಫ್ ಒ ತಂತ್ರಜ್ಞಾನದೊಂದಿಗೆ ಸಿನಿಮಾ ಹಾಲ್ ತಯಾರಾಗಿದ್ದು ರಾಕರ್, ಗೋಲ್ಡ್ ಸೋಫಾ ಸೀಟ್ಸ್, ಕುಟುಂಬಕ್ಕಾಗಿ ಖಾಸಗಿ ಕ್ಲಬ್ ಕ್ಲಾಸ್ ಸೀಟ್ಸ್…
ಬದುಕಿನ ಪಯಣವನ್ನು ಮುಗಿಸಿ ಪಂಚಭೂತಗಳಲ್ಲಿ ಲೀನರಾದ ಕಾಪು ಪ್ರಶಾಂತ್ ಆಸ್ಪತ್ರೆಯ ಸಂಸ್ಥಾಪಕರಾದ ಡಾ.ಕೆ ಪ್ರಭಾಕರ್ ಶೆಟ್ಟಿಯವರ ಆತ್ಮಕ್ಕೆ ಸದ್ಗತಿ ದೊರೆಯಲೆಂದು ಸಮಸ್ತ ಬಂಟ ಸಮಾಜದ ಪರವಾಗಿ ಪ್ರಾರ್ಥಿಸುತ್ತಿದ್ದೇವೆ.














