ದೇಹದಲ್ಲಿನ ನಿಶಕ್ತಿ ,ಕೊಬ್ಬಿನಂಶವನ್ನು ತ್ಯಜಿಸುವ , ಅಗಾಧ ಕ್ಯಾಲ್ಸಿಯಂ ಮತ್ತು ವಿಟಮಿನ್ ಪೂರೈಸುವ ರಾಗಿ ಉತ್ತಮ ಆರೋಗ್ಯಕ್ಕೆ ರಹದಾರಿ…..!
ರಾಗಿಯಲ್ಲಿ ದೇಹಕ್ಕೆ ಬೇಕಾಗಿರುವಂತಹ ಹಲವು ಪೌಷ್ಟಿಕಾಂಶಗಳು ಇವೆ. ರಾಗಿ ರೊಟ್ಟಿ ರಾಗಿ ಮುದ್ದೆ ರಾಗಿ ಅಂಬಲಿ ಸೇವಿಸುವುದರಿಂದ ಉತ್ತಮವಾದ ಆರೋಗ್ಯವನ್ನು ಪಡೆಯಬಹುದು. ಅಷ್ಟೇ ಅಲ್ಲದೆ ಈ ಗ್ಯಾಸ್ಟಿಕ್ ಸಮಸ್ಯೆ ಅನ್ನುವುದು ಕೂಡ ಇರುವುದಿಲ್ಲ. ದೇಹಕ್ಕೆ ತಂಪು ನೀಡುವಂತಹ ರಾಗಿ ಅಂಬಲಿಯನ್ನು ಸೇವಿಸುವುದರಿಂದ ಯಾವೆಲ್ಲ ಲಾಭವಿದೆ ಅನ್ನುವುದನ್ನು ತಿಳಿಸಿಕೊಡುತ್ತೇವೆ. ರಾಗಿ ಅಂಬಲಿ ಯಲ್ಲಿ ಪ್ರೋಟಿನ್ ಹಾಗೂ ಕ್ಯಾಲ್ಸಿಯಂ ಅಂಶ ಇರುವುದರಿಂದ ಇದರ ಸೇವನೆಯಿಂದ ದೇಹಕ್ಕೆ ಉತ್ತಮ ಎನರ್ಜಿ ಹಾಗೂ ಶಕ್ತಿ ಸಿಗುತ್ತದೆ. ಅಷ್ಟೇ ಅಲ್ಲದೆ ದೇಹದಲ್ಲಿನ ಮೂಳೆಗಳು ಬಲಿಷ್ಠವಾಗಿ ಬೆಳೆಯಲು ಸಹಾಯವಾಗುತ್ತದೆ. ಮತ್ತು ಆಂಟಿಆಕ್ಸಿಡೆಂಟ್ ಗುಣಗಳನ್ನು ಹೊಂದಿರುವಂತಹ ಈ ರಾಗಿಯಲ್ಲಿಉತ್ತಮ ಆರೋಗ್ಯ ಸಿಗುವುದರ ಜೊತೆಗೆ ಸೌಂದರ್ಯ ಕೂಡ ವೃದ್ಧಿಯಾಗುತ್ತದೆ. ರಾಗಿ ಅಂಬಲಿಯನ್ನು ಸೇವಿಸುವುದರಿಂದ ತಲೆ ಕೂದಲ ಆರೋಗ್ಯ ಹಾಗೂ ವಿಟಮಿನ್ ಡಿ ಸಮಸ್ಯೆ ನಿವಾರಣೆಯಾಗುವುದು. ಅಷ್ಟೇ ಅಲ್ಲದೆ ರಾತ್ರಿ ವೇಳೆ ರಾಗಿಯಿಂದ ತಯಾರಿಸಿದ ಊಟವನ್ನು ಮಾಡುವುದರಿಂದ ಸುಖವಾದ ನಿದ್ರೆಯನ್ನು ಮಾಡಬಹುದು . ನಿಮಗೆ ಗೊತ್ತಿರಬಹುದು ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾಗಿ ರಾಗಿಮುದ್ದೆ ರೊಟ್ಟಿ ಅಂಬಲಿಯನ್ನು ಸೇವಿಸುವುದರಿಂದ ಗಟ್ಟಿಯಾಗಿರುತ್ತದೆ. ಹಾಗೂ ಶಕ್ತಿಶಾಲಿಯಾಗಿ ಇರುತ್ತಾರೆ .
ಹಲವು ರೀತಿಯ ಜಂಕ್ ಫುಡ್ ಗಳು ತಿಂದು ದೇಹದಲ್ಲಿ ಬೊಜ್ಜು ಬೆಳೆಸಿಕೊಳ್ಳುವ ಬದಲು ಇದನ್ನು ಸೇವಿಸುವುದರಿಂದ ದೇಹದಲ್ಲಿ ಹಾಗೂ ರಕ್ತದಲ್ಲಿ ಕೊಬ್ಬಿನ ಅಂಶ ಇರುವುದಿಲ್ಲ. ಮಧುಮೇಹ ಸಮಸ್ಯೆ ಇರುವವರು ವಾರದಲ್ಲಿ ಮೂರು ನಾಲ್ಕು ಸಲ ಕುಡಿದರೆ ಮಧುಮೇಹ ದೂರವಾಗುತ್ತದೆ ಮತ್ತು ದೇಹ ತಣ್ಣಗಿರಲು ಇದು ಸಹಕಾರಿಯಾಗುತ್ತದೆ ಎನ್ನುವುದೇ ವಿಶೇಷ ಅದಲ್ಲದೆ ದೇಹದಲ್ಲಿನ ವಿವಿಧ ಹಾನಿಕಾರಕ ವಿಷ ಪದಾರ್ಥಗಳನ್ನ ಹೊರಹಾಕುವಲ್ಲಿ ಮತ್ತು ಜಂಗ್ ಫುಡ್ ಗಳನ್ನ ತಿಂದು ದೇಹ ಹಾಳು ಮಾಡಿಕೊಳ್ಳುವ ಬದಲು ದಿನಾಲು ಅಥವಾ ವಾರಕ್ಕೊಮ್ಮೆಯಾದರೂ ರಾಗಿಯನ್ನ ಶುದ್ಧ ನೀರಿನಲ್ಲಿ ಮಿಶ್ರಣ ಮಾಡಿ ಸೇವಿಸಿದರೆ ದೇಹದಲಾಗುವ ವಿಶೇಷ ಲಾಭಾಂಶ ದೊರೆಯುತ್ತದೆ. ಅದಲ್ಲದೆ ದೇಹದಲ್ಲಿನ ಬಡವಣಿಗೆಗಳನ್ನ ವಿಶೇಷ ರೀತಿಯಲ್ಲಿ ನಡೆಸುವುದರೊಂದಿಗೆ ಕೊಬ್ಬಿನಂಶ ಹಾಗೂ ಇನ್ನಿತರ ಸಮಸ್ಯೆಗಳು ದೂರ ತಳ್ಳುತ್ತದೆ. ಆರೋಗ್ಯ ಸಮಸ್ಯೆಗಳನ್ನ ಹಾಗೂ ದೇಹದಲ್ಲಿನ ತೇವಾಂಶ ಭರಿತ ವಾತಾವರಣಗಳನ್ನ ಹಿಡಿದಿಟ್ಟುಕೊಳ್ಳುವಲ್ಲಿ ಮತ್ತು ದೇಹದ ಉಷ್ಣಾಂಶ ಹಾಗೂ ಅದರಲ್ಲಿನ ವಿಶೇಷವಾದಂತಹ ಹಾನಿಕಾರಕ ಪದಾರ್ಥಗಳನ್ನ ಹೊರಹಾಕುವುದರೊಂದಿಗೆ ದೇಹ ತಂಪಾಗಿರುತ್ತದೆ ಇದು ಸಹಕಾರಿ ಮಾಡುತ್ತದೆ ಹಾಗೂ ರಾಗಿ ಸೇವನೆಯೂ ಆರೋಗ್ಯದ ಹಿತದೃಷ್ಟಿಯಿಂದ ತುಂಬಾ ಒಳ್ಳೆಯದು ಇದು ದೇಹಕ್ಕೆ ಹೆಚ್ಚು ಶಕ್ತಿಯನ್ನು ನೀಡುತ್ತದೆ. ಅಕ್ಕಿಯನ್ನು ಇತ್ತೀಚೆಗೆ ಹೆಚ್ಚು ಸೇವಿಸಲಾಗುತ್ತದೆ. ಅದಕ್ಕೆ ಅನುಗುಣವಾಗಿ ರಾಗಿಯನ್ನು ಕೂಡ ಸೇವಿಸುವ ಅಭ್ಯಾಸವನ್ನು ಮಾಡಿಕೊಳ್ಳಿ. ರಾಗಿಯು ದೇಹಕ್ಕೆ ತುಂಬಾ ತಂಪು. ಉರಿಯೂತದ ಸಮಸ್ಯೆ ಇರುವವರು ರಾಗಿ ಸೇವಿಸುವುದು ಉತ್ತಮ. ರಾಗಿ ಮುದ್ದೆ ತಿಂದರೆ ಎಂತಹ ಕೆಲಸವನ್ನಾದರೂ ಮಾಡುವ ಶಕ್ತಿ ನಮ್ಮ ದೇಹಕ್ಕೆ ದೊರೆಯುತ್ತದೆ ಎಂದು ಹಿರಿಯರು ಹೇಳುತ್ತಾರೆ. ಯಾವಾಗಲೂ ರಾಗಿ ಮುದ್ದೆ ಮಾಡಲು ಸಾಧ್ಯವಿಲ್ಲ. ಇದಕ್ಕೆ ಹೆಚ್ಚು ಸಮಯ ಬೇಕಾಗುತ್ತದೆ. ಹೀಗಾಗಿ ಸುಲಭವಾಗಿ ರಾಗಿ ಅಂಬಲಿ ಮಾಡಿ ನಮ್ಮ ಆರೋಗ್ಯವನ್ನು ನಾವು ಕಾಪಾಡಿಕೊಳ್ಳಬಹುದು. ವಿಶೇಷವಾಗಿ ತೂಕ ಇಳಿಸಿಕೊಳ್ಳಲು ಬಯಸುವವರಿಗೆ ರಾಗಿ ಅಂಬಲಿ ಹೆಚ್ಚು ಸಹಾಯಕವಾಗಿದೆ. ಇಂದು ರಾಗಿ ಅಂಬಲಿಯನ್ನು ಹೇಗೆ ತಯಾರಿಸುವುದು ಮತ್ತು ಇದನ್ನು ಕುಡಿಯುವುದರಿಂದ ಯಾವೆಲ್ಲಾ ಪ್ರಯೋಜನಗಳಿವೆ ಎಂದು ತಿಳಿದುಕೊಳ್ಳೋಣ. ರಾಗಿ ಅಂಬಲಿಯನ್ನು ಸಿದ್ಧಪಡಿಸುವ ರೀತಿ ಹಾಗೆ ಬೇಕಾಗುವ ಪದಾರ್ಥಗಳನ್ನು ಗಮನಿಸುತ್ತಾ ಹೋಗೋಣ.
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್)
1)3 ಟೇಬಲ್ ಚಮಚ ರಾಗಿ ಹಿಟ್ಟು
2)2 ಕಪ್ ನೀರು
3)1 ಕಪ್ ಮಜ್ಜಿಗೆ
4)ಒಂದು ಚಿಟಿಕೆ ಇಂಗು
5)ರುಚಿಗೆ ಉಪ್ಪು
6)ಅರ್ಧ ಈರುಳ್ಳಿ ಸಣ್ಣಗೆ ಹೆಚ್ಚಿದ್ದು
7)4 – 5 ಕರಿಬೇವಿನ ಎಲೆ ಸಣ್ಣಗೆ ಹೆಚ್ಚಿದ್ದು
8)ಸ್ವಲ್ಪ ಕೊತ್ತಂಬರಿ ಸೊಪ್ಪು (ಬೇಕಾದಲ್ಲಿ)
ರಾಗಿ ಅಂಬಲಿ ಮಾಡುವ ವಿಧಾನ:
1)ಒಂದು ಬಟ್ಟಲಿನಲ್ಲಿ ರಾಗಿ ಹಿಟ್ಟು ತೆಗೆದುಕೊಳ್ಳಿ.
2)ಅದಕ್ಕೆ ಅರ್ಧ ಕಪ್ ನೀರು ಹಾಕಿ ಗಂಟಿಲ್ಲದಂತೆ ಕಲಸಿಕೊಳ್ಳಿ.
3)ಇನ್ನೊಂದು ಪಾತ್ರೆಯಲ್ಲಿ ಒಂದೂವರೆ ಕಪ್ ನೀರು ಕುದಿಯಲು ಇಡೀ.
4)ನೀರು ಕುದಿಯಲು ಪ್ರಾರಂಭಿಸಿದಾಗ, ನೀರಲ್ಲಿ ಕಲಸಿದ ರಾಗಿ ಹಿಟ್ಟು ಹಾಕಿ.
5)ಮಗುಚುತ್ತಾ ಒಂದೈದು ನಿಮಿಷ ಸಣ್ಣ ಉರಿಯಲ್ಲಿ ಕುದಿಸಿ. ಸ್ಟವ್ ಆಫ್ ಮಾಡಿ.
6)ಸಂಪೂರ್ಣ ಬಿಸಿ ಆರಿದ ಮೇಲೆ ಉಪ್ಪು, ಮಜ್ಜಿಗೆ ಮತ್ತು ಇಂಗು ಹಾಕಿ ಕಲಸಿ.
7)ಆಮೇಲೆ ಸಣ್ಣಗೆ ಹೆಚ್ಚಿದ ಈರುಳ್ಳಿ ಮತ್ತು ಕರಿಬೇವು ಹಾಕಿ ಮಗುಚಿ.
ಉತ್ತಮ ಮತ್ತು ಸದೃಢ ಆರೋಗ್ಯಕ್ಕೆ ವಿಶೇಷವಾಗಿ ರಾಗಿ ಉತ್ಪನ್ನಗಳನ್ನು ಬಳಸುವುದರಿಂದ ದೇಹದಲ್ಲಿನ ಉಷ್ಣತೆ ಮತ್ತು ತಾಪಮಾನ ಸಕ್ರಿಯವಾಗಿ ಕಾಯ್ದಿರಿಸುತ್ತದೆ. ದೇಹದಲ್ಲಿನ ವಿಶೇಷವಾದಂತಹ ವಿಟಮಿನ್ ಶಕ್ತಿ ಹಾಗೂ ಕ್ಯಾಲ್ಸಿಯಂ ಬಿಡುಗಡೆಗೆ ಸಹಕರಿಸುತ್ತದೆ, ದೇಹದಲ್ಲಿನ ವಿಶೇಷವಾದಂತಹ ಗುಣಲಕ್ಷಣಗಳನ್ನು ಈ ರೀತಿಯಾಗಿ ನೋಡುವುದಾದರೆ, ರಾಗಿ ಅಂತಹ ಉತ್ಪನ್ನಗಳು ಗಟ್ಟಿಮುಟ್ಟಾಗುವುದರೊಂದಿಗೆ, ಮೂಳೆಯ ಸದೃಢತೆಯು ಕೂಡ ರಾಗಿ ಸಹಕಾರಿಯಾಗುತ್ತದೆ. ರಾಗಿ ಅಂಬಲಿಯನ್ನು ನಾವು ವಿಶೇಷವಾಗಿ ತಯಾರಿಸಿ ಕುಡಿಯುವುದರಿಂದ ದೇಹದಲ್ಲಿನ ದೇಹದಾಢ್ಯತೆ ಮತ್ತು ಆಯಾಸ ಬದಲಿನ ವಿಶೇಷವಾದಂತಹ ಕ್ಯಾಲ್ಸಿಯಂ ಬಿಡುಗಡೆಗೆ ಸಹಕರಿಸುತ್ತದೆ. ಉತ್ಪನ್ನಗಳನ್ನು ವಿಶೇಷವಾಗಿ ಬಳಸುವುದರಿಂದ ಆರೋಗ್ಯ ಸುರಕ್ಷತೆ ದಡೆಗೆ ಸಹಕಾರಿಯಾಗುತ್ತದೆ.
– ಕೆ. ಸಂತೋಷ್ ಶೆಟ್ಟಿ, ಮೊಳಹಳ್ಳಿ ಕುಂದಾಪುರ .ಉಡುಪಿ ಜಿಲ್ಲೆ (ಪತ್ರಕರ್ತರು & ಅಂಕಣಕಾರರು) Mob:9632581508.(santhoshmolahalli@gmail.com)