ಮಹಾನಗರದಲ್ಲಿ ಬೀದಿ ನಾಯಿಗಳ ಅಟ್ಟಹಾಸ ; ಮಕ್ಕಳ ಸಾವಿಗೆ ಬೀದಿ ನಾಯಿಗಳೇ ಕಾರಣ ; ನಾಯಿ ಹಿಡಿಯುವ ನೆಪದಲ್ಲಿ ಕೋಟಿ ಕೋಟಿ ಬೊಕ್ಕಸಕ್ಕೆ ಪಂಗನಾಮ ಇಟ್ಟ ಬಿಬಿಎಂಪಿ….! ಸಾರ್ವಜನಿಕರ ಹಣ ದುಂದು ವೆಚ್ಚ ….!?
– ಕೆ. ಸಂತೋಷ ಶೆಟ್ಟಿ ಮೊಳಹಳ್ಳಿ ಕುಂದಾಪುರ, ಉಡುಪಿ ಜಿಲ್ಲೆ. (ಪತ್ರಕರ್ತರು & ಮಾಧ್ಯಮ ವಿಶ್ಲೇಷಕರು)
ಬೆಂಗಳೂರು:
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳು ನಾಯಿ ಹಿಡಿಯುವ ನೆಪದಲ್ಲಿ ಕೋಟಿ ಕೋಟಿ ಬಂಡವಾಳ ಹಾಕಿದ್ದೇವೆ ಎಂದು ಲೆಕ್ಕಪತ್ರವನ್ನ ಸರ್ಕಾರಕ್ಕೆ ರವಾನಿಸಿದ್ದಾರೆ. ಬೆಂಗಳೂರಿನ ವಿವಿಧ ಬಡಾವಣೆಗಳಲ್ಲಿ ಅದಲ್ಲದೆ ಮಾಂಸಹಾರ ಇರುವ ಅಂಗಡಿ ಪ್ರದೇಶಗಳಲ್ಲಿ ಬೀದಿ ನಾಯಿಗಳು ರವಾನೆ ಆಗಿರುತ್ತದೆ ಅದಲ್ಲದೆ ಬೀದಿನಾಯಿಗಳ ಉಪಟಳವನ್ನು ತಡೆಯಲು ಬಿಬಿಎಂಪಿ ಹರಸಾಹಸ ಪಡುತ್ತಿದೆ ಎಂದು ಸರ್ಕಾರಕ್ಕೆ ಲೆಕ್ಕ ಪತ್ರ ವಿಚಾರವನ್ನು ತಿಳಿಸಿದೆ, ಆದರೆ ಬಿಬಿಎಂಪಿ ಲೆಕ್ಕ ಪ್ರಕಾರ ಕೋಟಿ ಕೋಟಿ ದುಂದು ವೆಚ್ಚ ಮಾಡುತ್ತಿರುವುದು ಸಾರ್ವಜನಿಕರ ಕಣ್ಣು ಕೆಂಪಗಾಗಿಸಿದೆ ಅದಲ್ಲದೆ ಸರ್ಕಾರ ಇದರ ಬಗ್ಗೆ ಮುತುವರ್ಜಿಯನ್ನು ವಹಿಸದೆ ಬಿಬಿಎಂಪಿಯ ಅಧಿಕಾರಕ್ಕೆ ಕೊಟ್ಟು ದುಂದು ವೆಚ್ಚ ಮಾಡುವಲ್ಲಿ ಬಿಬಿಎಂಪಿ ಕಾದು ಕುಳಿತಿದೆ. ಸಾರ್ವಜನಿಕರ ತೆರಿಗೆ ಹಣದಲ್ಲಿ ಇಂತಹ ಹಣವನ್ನು ಪೋಲು ಮಾಡುತ್ತಿರುವುದು ದೂರದಷ್ಟಕರ ಎನ್ನುತ್ತಿದೆ ಸಾರ್ವಜನಿಕ ವಲಯ. ಸಿಲಿಕಾನ್ ಸಿಟಿಯ ಯಾವುದೇ ಏರಿಯಾಗೆ ಹೋಗಿ, ಯಾವುದೇ ರೋಡ್ಗೆ ಹೋಗಿ ಅಲ್ಲಿ ನಿಮಗೆ ಸ್ವಾಗತ ಮಾಡೋದು ಮಾತ್ರ ಬೀದಿನಾಯಿಗಳು (Stray Dogs). ಸಿಲಿಕಾನ್ ಸಿಟಿಯಲ್ಲಿ ದಿನದಿಂದ ದಿನಕ್ಕೆ ನಾಯಿಗಳ ಸಂಖ್ಯೆ ಏರಿಕೆಯಾಗುತ್ತಿದೆ. ಅದೇ ರೀತಿ ನಾಯಿಗಳಿಂದ ಕಚ್ಚಿಸಿಕೊಂಡವರ ಸಂಖ್ಯೆಯೂ ಅಷ್ಟೇ ಏರಿಕೆಯಾಗ್ತನೇ ಇದೆ. ಜೊತೆಗೆ ಬಿಬಿಎಂಪಿ (BBMP) ನಾಯಿಗಳ ನಿಯಂತ್ರಣಕ್ಕೆ ಕ್ರಮ ಕೈಗೊಂಡಿದ್ದು, ಇದಕ್ಕಾಗಿ ಕೋಟ್ಯಂತರ ರೂ. ಖರ್ಚು ಮಾಡುತ್ತಿದೆ. ನಾಯಿಗಳ ದಾಳಿಯಿಂದ ಅದೆಷ್ಟೋ ಜನ ಆಸ್ಪತ್ರೆಗೆ ಸೇರಿದ್ದಾರೆ. ಅದರಲ್ಲೂ ಬೀದಿನಾಯಿಗಳ ಗುಂಪು ಮಕ್ಕಳ ಮೇಲೆ ದಾಳಿ ಮಾಡಿ ಪ್ರಾಣವನ್ನೇ ತೆಗೆಯೋ ಮಟ್ಟಿಗೆ ಹೋಗಿದ್ದ ನಿದರ್ಶನಗಳು ಬೆಂಗಳೂರಿನಲ್ಲಿ ನಡೆದಿದೆ. ಬೀದಿನಾಯಿಗಳನ್ನು ನಿಯಂತ್ರಣ ಮಾಡಬೇಕು, ಅದರ ಸಂತಾನವನ್ನು ಕಡಿಮೆ ಮಾಡಬೇಕು, ಪ್ರತಿಬೀದಿ ನಾಯಿಗೂ ರೇಬಿಸ್ ಇಂಜೆಕ್ಷನ್ ನೀಡಬೇಕು ಅಂತಾ ಬಿಬಿಎಂಪಿ ಕೋಟ್ಯಂತರ ರೂ. ಖರ್ಚು ಮಾಡ್ತಿದೆ. ಬೆಂಗಳೂರಿನಲ್ಲಿ ಬೀದಿ ನಾಯಿಗಳ ಹಾವಳಿ ಮಿತಿ ಮೀರಿದೆ. ಬೆಂಗಳೂರಿನಲ್ಲಿ ಒಟ್ಟು 3 ಲಕ್ಷ ನಾಯಿಗಳಿದ್ದು ಅದರಲ್ಲಿ ಅರ್ಧ ಬೀದಿನಾಯಿಗಳಾದರೆ, ಉಳಿದವು ಸಾಕು ನಾಯಿಗಳು. ಬಿಬಿಎಂಪಿಯ ಅಂಕಿ ಅಂಶಗಳ ಪ್ರಕಾರ ಕಳೆದ ಒಂದು ವರ್ಷದಲ್ಲಿ 17 ಸಾವಿರಕ್ಕೂ ಹೆಚ್ಚು ಜನರಿಗೆ ನಾಯಿ ಕಚ್ಚಿದೆ. ಬಿಬಿಎಂಪಿ ನಿರಂತರ ಪ್ರಯತ್ನದಿಂದ ನಾಯಿಗಳ ನಿಯಂತ್ರಣ ಆಗ್ತಿದೆ. ಕಳೆದ ಮೂರು ವರ್ಷದಿಂದ 40 ಸಾವಿರಕ್ಕೂ ಹೆಚ್ಚು ಜನರಿಗೆ ಕಚ್ಚಿತ್ತು. ಅದರ ಸಂಖ್ಯೆ ಕಡಿಮೆಯಾಗಿದೆ. ಜೊತೆಗೆ ನಾಯಿ ಸಂತಾನ ನಿಯಂತ್ರಣದ ಚುಚ್ಚುಮದ್ದುನ್ನು ಪ್ರತಿ ತಿಂಗಳು ಕನಿಷ್ಠ 10,000 ನಾಯಿಗಳಿಗೆ ನೀಡಲಾಗ್ತಿದೆ. ಹಾಗೆಯೇ ರೇಬಿಸ್ ಲಸಿಕೆಯನ್ನು ಸಹ ನೀಡಲಾಗ್ತಿದೆ ಅಂತಾ ಬಿಬಿಎಂಪಿ ಪಶುಪಾಲನೆ ಅಧಿಕಾರಿ ಡಾ. ರವಿ ಕುಮಾರ್ ತಿಳಿಸಿದ್ದಾರೆ.
ದಿನಕ್ಕೆ ಸರಾಸರಿ 70ಕ್ಕೂ ಹೆಚ್ಚು ಜನಕ್ಕೆ ಬೀದಿ ನಾಯಿಗಳು ಕಚ್ಚುತ್ತಿವೆ. ಸಿಲಿಕಾನ್ ಸಿಟಿಯಲ್ಲಿರೋ ನಾಯಿಗಳ ಸಂಖ್ಯೆ ಎಷ್ಟು, ನಾಯಿಗಳ ಕಡಿತದ ಸಂಖ್ಯೆ ಎಷ್ಟು ಎಂಬ ಅಂಕಿ ಅಂಶಗಳನ್ನು ನೋಡೋದಾದರೆ, 2019-2020 – 42,818 ಪ್ರಕರಣ ದಾಖಲಾಗಿತ್ತು. 2020-2021 – 18,629 ಪ್ರಕರಣ, 2021-2022 – 17,610 ಪ್ರಕರಣ ದಾಖಲಾಗುವ ಮೂಲಕ ಒಟ್ಟು – 70,057 ಪ್ರಕರಣ ದಾಖಲಾಗಿದೆ. ನಗರದಲ್ಲಿ ಬೀದಿ ನಾಯಿಗಳ ಹಾವಳಿ ತಡೆಯೋಕೆ ಬಿಬಿಎಂಪಿ ಕೂಡ ಮುಂದಾಗಿದ್ದು, ನಾಯಿಗಳ ಹಾವಳಿ ತಡೆಯೋಕೆ ವರ್ಷಕ್ಕೆ 3 ರಿಂದ 5 ಕೋಟಿ ರೂ. ಖರ್ಚು ಮಾಡುತ್ತಿದೆ. ಹಾಗೆಯೇ ಸಂತಾನಹರಣ ಶಸ್ತ್ರಚಿಕಿತ್ಸೆ ಹಾಗೂ ನಾಯಿಗಳಿಗೆ ರೇಬಿಸ್ ಲಸಿಕೆ ಹಾಕೋಕೆ ಕೋಟಿ, ಕೋಟಿ ಖರ್ಚು ಆಗ್ತಿದೆ. ಆದರೆ, ನಾಯಿಗಳ ನಿಯಂತ್ರಣ ಮಾತ್ರ ಸಾಧ್ಯವಾಗ್ತಿಲ್ಲ. ಇದಕ್ಕೆ ಕಾರಣವನ್ನು ನೀಡಲು ಬಿಬಿಎಂಪಿ ವಿಫಲವಾಗಿದೆ. ಬಿಬಿಎಂಪಿ ಅಧಿಕಾರಿಗಳು ಹೇಳುವ ಪ್ರಕಾರ ನಾಯಿಗಳಿಗೆ ರೇಬಿಸ್ ಚುಚ್ಚುಮದ್ದು ಲಸಿಕೆ ಅದಲ್ಲದೆ ,ನಾಯಿ ಸಂರಕ್ಷಣಾ ಆಸ್ಪತ್ರೆ, ಪಶು ಸಂಗೋಪನ ಆಸ್ಪತ್ರೆ, ನಾಯಿಗಳಿಗೆ ಬೇಕಾದಂತಹ ಹಾರೈಕೆ ಇವೆಲ್ಲವನ್ನು ಸಕಾಲಕ್ಕೆ ನಾವು ನೀಡುತ್ತೇವೆ ಎಂದು ಅಧಿಕಾರಿಗಳ ವಾದ, ಇನ್ನೊಂದೆಡೆ ಕೋಟಿ ಕೋಟಿ ಖರ್ಚು ಮಾಡಿ ನಾಯಿಗಳಿಗೆ ರೇಬಿಸ್ ಮದ್ದು ಹಾಗೂ ನಾಯಿಗಳನ್ನ ತೆರವುಗೊಳಿಸುವ ಕಾರ್ಯವನ್ನು ಕೂಡ ಮಾಡಲಾಗುತ್ತಿದೆ ಎಂದು ಬಿಬಿಎಂಪಿ ಹೇಳುತ್ತಿದೆ. ಒಟ್ಟಾರೆಯಾಗಿ ಬಿಬಿಎಂಪಿ ಲೆಕ್ಕಾಚಾರ ಪ್ರಕಾರ ಸರ್ಕಾರ ಮೌನವಾಗಿದ್ದು ದುರಂತ….!