ಲೇಖನ – ವಿವೇಕ್ ಆಳ್ವ.
ಕ್ಲಾಸಲ್ಲಿ ಗಮನವಿರದ ಒಬ್ಬ ವಿದ್ಯಾರ್ಥಿಯಲ್ಲಿ ಕಾರಣವೇನಿರಬಹುದು ಎಂದು ಮಾತನಾಡಿಸಿದಾಗ ಒಂದು ವಿಷಯ ಬೆಳಕಿಗೆ ಬಂತು. ಆತ 9 ಗಂಟೆಗೆ ಕ್ಯಾಂಪಸ್ ಗೆ ಕಾಲಿಡಬೇಕಾದರೆ ಬೆಳ್ಳಂಬೆಳಗ್ಗೆ 6.20ರ ಬಸ್ಸಿಗೆ ಹೊರಡಲೇಬೇಕಂತೆ. ಬಸ್ ಮಿಸ್ ಆಯಿತೆಂದರೆ ಮಧ್ಯಾಹ್ನ ನಂತರವೇ ಕ್ಲಾಸ್. ಇದು ದೂರದ ಹಳ್ಳೀ ಕಡೆಯಿಂದ ಬರುವ ಮಕ್ಕಳ ನೈಜ ಚಿತ್ರಣ. ಇದು ಒಂದು ಎಕ್ಸಾಂಪಲ್ ಅಷ್ಟೇ. ಅಮೇರಿಕಾದ ಶಾಲೆಗಳಲ್ಲಿ ಮಕ್ಕಳನ್ನು ಜಾಯಿನ್ ಮಾಡಬೇಕಾದರೆ ಶಾಲೆಯಿಂದ ಮೂರು ಮೈಲಿ ದೂರದೊಳಗಿನ ಶಾಲೆಗೇ ಸೇರಿಸಬೇಕಂತೆ. ಅದಕ್ಕೆ ಸ್ಕೂಲ್ ಡಿಸ್ಟ್ರಿಕ್ಟ್ ಅಂತ ಹೆಸರೂ ಕೊಟ್ಟಿದ್ದಾರೆ. ಅಂದರೆ ನೀವೇನಾದರೂ ದೂರದ ಶಾಲೆಗೆ ನಿಮ್ಮ ಮಗುವನ್ನು ಸೇರಿಸಬೇಕಾದರೆ ನೀವು ಮನೆಯನ್ನೇ ಶಾಲೆಗೆ ಹತ್ತಿರ ಬರುವ ರೀತಿಯಲ್ಲಿ ಬದಲಾಯಿಸಬೇಕಾಗುತ್ತದೆ..!.
ಮಗುವಿನ ಮುಂದಿನ ಭವಿಷ್ಯದ ದೃಷ್ಟಿಯಿಂದ ಅವರು ಯಾವ ತ್ಯಾಗಕ್ಕೂ ಸಿಧ್ದವಿರಬೇಕು ಎಂಬ ಲೆಸನ್ ಅವರಿಂದ ಕಲಿತಂತಾಯಿತು.
ಡಿಸ್ಟೆನ್ಸ್ ವಿಷಯ ನಮ್ಮಲ್ಲಿ ಸುಲಭವಿಲ್ಲ ಅಂತ ನನಗೂ ಗೊತ್ತು ನಿಮಗೂ ಗೊತ್ತು.
ನಮ್ಮ ರಿಯಲ್ ಮ್ಯಾಟರ್ ಗೆ ಬರೋಣ. ನಾನು ಹೇಳಿದ ಆ ಹುಡುಗ ತುಂಬಾನೇ ಕ್ಷೀಣವಾಗಿಯೇ ಇದ್ದ. ಆತನ ವಯಸ್ಸಿಗೆ ಸರಿಯಾದ ಬೆಳವಣಿಗೆ ಕಂಡಿರಲಿಲ್ಲ. ಮತ್ತೂ ವಿಚಾರಿಸಿದಾಗ ಒಂದು ಶಾಕಿಂಗ್ ನ್ಯೂಸ್ ಹೇಳಿದ್ದಾನೆ. ಬೆಳಗ್ಗಿನ ಬ್ರೇಕ್ ಫಾಸ್ಟ್ ಮಾಡದೆ ಒಂದು ವರ್ಷಕ್ಕೂ ಮೇಲಾಯಿತು ಅಂತ. ಕೇಳಿ ತುಂಬ ಸಂಕಟವಾಯಿತು. ಏನಿದ್ದರೂ ಮಧ್ಯಾಹ್ನದ ಊಟ. ನಂತರ ಮನೆಗೆ ಮುಟ್ಟಿದ ನಂತರ ರಾತ್ರಿ ಊಟ. ಇದು ದಿನಚರಿ. ಆತ ಇದಕ್ಕೆ ಒಗ್ಗಿಹೋಗಿದ್ದಾನೆ ನಿಜ. ಆದರೆ ಮುಂದೆ ಆರೋಗ್ಯ ಸ್ಥಿತಿ ಹೇಗಾಗಬೇಡ.ಬುದ್ಧಿ ಶಕ್ತಿ, ಶರೀರ ಬೆಳೆಯುವ ಹಂತದಲ್ಲಿ ಎಷ್ಟೊಂದು ಆಹಾರದ ಅಗತ್ಯವಿದೆ. ಇಲ್ಲಿ ಮಾಲ್ ನ್ಯೂಟ್ರೀಷಿಯನ್ ನಿಂದ ಬಳಲುವ ವಿದ್ಯಾರ್ಥಿಗಳ ಸಂಖ್ಯೆ ತುಂಬಾನೇ ದೊಡ್ಡ ದಿದೆ ಅಂತ ಅನ್ನಿಸಿತು. ಯಾವ ಫುಡ್ ಎಕ್ಸ್ಪರ್ಟ್ ಗಳನ್ನು ಕೇಳಿದರೂ ಬೆಳಗಿನ ಬ್ರೇಕ್ ಫಾಸ್ಟ್ ಮಿಸ್ ಮಾಡಬೇಡಿ ಅಂತಾರೆ. ಒಮ್ಮೆಗೆ ಒಂದಷ್ಟು ತಿಂದು ಹೊಟ್ಟೆ ಖಾಲಿಬಿಡಬೇಡಿ ಅಂತಾರೆ. ನಾವು ಶಾಲೆಗೆ ಹೋಗುವಾಗ ವಾಟರ್ ಬೆಲ್ ಅಂತ ಇತ್ತು. ಹೆಸರೇ ಸೂಚಿಸುವಂತೆ ಶಾಲೆಯಲ್ಲಿರುವ ಎಲ್ಲಾ ಮಕ್ಕಳು ಒಂದು ರೌಂಡ್ ನೀರು ಕುಡಿದು ಬರಲಿ ಅಂತ ಕೊಡುವ ಬೆಲ್. ಶರೀರ ಡೀಹೈಡ್ರೇಶನ್ ಆಗಬಾರದೆಂಬ ಕಾಳಜಿಯ ಬೆಲ್ ಅದು.
ಈಗಂತು ನಾಲೆಡ್ಜ್ ಅನ್ನುವುದು ಪಬ್ಲಿಕ್ ಡೊಮೈನ್. ಕೇವಲ ಒಂದೈದು ನಿಮಿಷ ಮೊಬೈಲ್ ಮಾಹಿತಿಗಾರನಲ್ಲಿ ಆಹಾರದ ಬಗ್ಗೆ ಕೇಳಿದರೆ ಸಾಕು ಭೂಲೋಕದ ಎಲ್ಲಾ ಆಹಾರದ ಮಾಹಿತಿಗಳನ್ನು ಕೆಲವೇ ನಿಮಿಷಗಳಲ್ಲಿ ನಿಮಗೆ ಉಣಬಡಿಸುತ್ತವೆ. ವಿವಿಧ ದೇಶಗಳು ಮಕ್ಕಳ ಬ್ಯಾಲೆನ್ಸಡ್ ಆಹಾರದ ಬಗ್ಗೆ ಎಷ್ಟೊಂದು ಕಾಳಜಿ ವಹಿಸುತ್ತವೆ ಅಂತ ತಿಳಿಯಬಹುದು. ಎಲ್ಲವನ್ನೂ ಗಮನಿಸಿದಾಗ ನನಗೆ ಕಂಡದ್ದು ನಮ್ಮದೇಶದಲ್ಲಿ ಯಾವುದಕ್ಕೂ ಕೊರತೆಯಿಲ್ಲ. ಯಾವ ಬೆಳಯನ್ನಾದರೂ ಇಲ್ಲಿ ಬೆಳೆಯಬಹುದಾದ ವಾತಾವರಣ ಇದೆ. ಅವರಂತೆ ಎಲ್ಲಾ ಆಹಾರದೊಟ್ಟಿಗೆ ಮಾಂಸಾಹಾರವನ್ನು ಬೆರೆಸುವ ಪರಿಪಾಠ ನಮಗಿಲ್ಲ. ಕೇವಲ ಮೈದಾದಿಂದ ಮಾಡಿದ ಬ್ರೆಡ್, ಚೀಸ್,ಪೊಟೇಟೋಸ್, ಮಯೋನೀಸ್,ಸಾಸ್, ಫ್ರೆಂಚ್ ಫ್ರೈ, ನೂಡಲ್ಸ್,ಡೋನಟ್, ಸಲಾಡ್ ಗಳ ಒಳಗಡೆ ಅವರ ಲೈಫ್ಸ್ಟೈಲ್ ಗಳಿದ್ದರೆ, ನಮ್ಮ ಬೆಳಗ್ಗಿನ ತಂಡಿಗಳ ಮೆನು ನೋಡಿದರೆ ಅವರ ಬಾಡಿ ವೈಬ್ರೇಶನ್ ಆಗುವುದಂತೂ ಗ್ಯಾರಂಟಿ. ನಮ್ಮಲ್ಲಿ ಎಲ್ಲವೂ ಇತ್ತು. ಈಗಲೂ ಇದೆ, ಆದರೆ ಆಸಕ್ತಿ ಬದಲಾವಣೆಯಾಗಿದೆ ಅಷ್ಟೆ.
ಮಕ್ಕಳ ಆಹಾರದ ವಿಷಯದಲ್ಲಿ ನಾವು ರಾಜಿಮಾಡಲೇಬಾರದು.ಅವರಿಗೆ ಕಾಲಕಾಲಕ್ಕೆ ಯಾವರೀತಿಯ ಆಹಾರಕೊಡಬೇಕು ಅಂತ ನಾವು ತಿಳಿದುಕೊಂಡಿರಬೇಕು. ಬೆಳೆಯುವ ಮಕ್ಕಳಿಗೆ ಸತ್ವಯುತ, ರಾಸಾಯನಿಕ ರಹಿತ, ಪೌಷ್ಟಿಕ ಆಹಾರದ ಅಗತ್ಯವಿರುತ್ತದೆ. ಅದು ಅವರ ಭವಿಷ್ಯದಲ್ಲಿ ನೇರಪರಿಣಾಮ ಬೀರುತ್ತದೆ. ಇತ್ತೀಚೆಗೆ ಪ್ರಸಿದ್ದ ವೈದ್ಯರೊಬ್ಬರು ಮಾತನಾಡುವಾಗ ಹೇಳುತ್ತಿದ್ದರು ಅಮೇರಿಕಾದ ಶಾಲೆಗಳಲ್ಲಿ ” ನೆಲಕಡಲೆ ಬೀಜ ಗಳ ನಿಷೇಧಿತ ತರಗತಿ ” ಅಂತ ವಿಂಗಡಣೆ ಮಾಡಿರುತ್ತಾರೆ, ಏಕೆಂದರೆ ಕಡಲೆಬೀಜದ ಗಾಳಿ ಸೋಕಿದರೂ ಅಲರ್ಜಿಯಾಗುವ ಮಕ್ಕಳಿರುತ್ತಾರೆ.ಅವರಿಗೆ ಇದರಿಂದ ತೊಂದರೆಯಾಗಬಾರದೆಂದು ಯಾರೂ ತಮ್ಮ ಟಿಫಿನ್ ಬಾಕ್ಸ್ ಗಳಲ್ಲಿ ತರುವಹಾಗಿಲ್ಲ ಎಂಬ ರೂಲ್ಸ್ ಮಾಡಿರುತ್ತಾರಂತೆ.
ಇದು ಕಾಳಜಿ ಅಂದರೆ. ನಾವೂ ನಮ್ಮ ಮಕ್ಕಳ ಸೂಕ್ಷ್ಮ ಸಂವೇದನೆಯ ಮನಸ್ಸನ್ನು ಅರಿತಾಗಲೇ ಸ್ವಸ್ಥ ಸಮಾಜದ ನಿರ್ಮಾಣ ಮಾಡಲು ಸಾಧ್ಯ. ಏನಂತೀರಿ.
ಭಾವನೆಗಳನ್ನು ಬಂಧಿಸಬೇಡಿ !
ಹತ್ತು ದಿನಗಳ ಹೋರಾಟದ ನಂತರ ಒಬ್ಬ ವ್ಯಕ್ತಿಯು ತನ್ನ ಕರೋನಾ ನೆಗೆಟಿವ್ ವರದಿಯೊಂದಿಗೆ ಆಸ್ಪತ್ರೆಯ ರಿಸೆಪ್ಶನ್ ನಲ್ಲಿ ನಿಂತಿದ್ದ.
ಕೆಲವರು ಅವನನ್ನು ಹೊಗಳುತ್ತಾ ಚಪ್ಪಾಳೆ ತಟ್ಟುತ್ತಿದ್ದರು. ದೊಡ್ಡ ಯುದ್ಧದಿಂದ ಗೆದ್ದ ಬಂದಂತೆ.
ಆದರೆ ಆ ವ್ಯಕ್ತಿಯ ಮುಖದಲ್ಲಿ ಆತಂಕದ ಚಿಂತೆ ಇತ್ತು. ಯಾಕೋ ಸಂತಸ ಮನದಲ್ಲಿ ಅಥವಾ ವ್ಯಕ್ತಿತ್ವದಲ್ಲಿ ತೋರಿ ಬರುತ್ತಿರಲಿಲ್ಲ.
ಆಸ್ಪತ್ರೆಯಿಂದ ಹೊರಬಂದು ಕಾರಿನಲ್ಲಿ ಮನೆಗೆ ಹೋಗುವಾಗ ಕಳೆದ “ಐಸೊಲೇಷನ್ ” ಎಂಬ ಅಪಾಯಕಾರಿ ಮತ್ತು ಅಸಹನೀಯ ಸಮಯವನ್ನು ನೆನಪಿಸಿಕೊಳ್ಳುತ್ತಿದ್ದ.
ಸಿಗದ ಕನಿಷ್ಠ ಸೌಲಭ್ಯಗಳು, ಸಾಕಷ್ಟು ಬೆಳಕು ಮತ್ತು, ಯಾವುದೇ ಮನರಂಜನಾ ವಿಧಾನಗಳ ಅಲಭ್ಯತೆ, 10 ದಿನದಲ್ಲಿ ಬಂದು ಯಾರೂ ಮಾತನಾಡಿಸಲಿಲ್ಲ ಅಥವಾ ಯಾರೊಬ್ಬರೂ ಹತ್ತಿರ ಬರಲಿಲ್ಲ. ಆಹಾರವನ್ನು ಸಹ ಸರಳವಾಗಿ ಒಂದು ತಟ್ಟೆಯಲ್ಲಿ ತುಂಬಿಸಿ ಕೈದಿಗೆ ನೀಡುವಂತೆ ನೀಡಲಾಗುತ್ತಿತ್ತು
ಆ 10 ದಿನಗಳನ್ನು ಅವನು ಹೇಗೆ ಕಳೆದ ಅ ಆತಂಕ ಮಾನಸಿಕ ವೇದನೆ ತಮ್ಮವರ ಅನುಪಸ್ಥಿತಿಯಲ್ಲಿ ಯಾರು ನಮ್ಮವರು ಯಾರು ಪರರು ಎಂದು ತಿಳಿಯದೆ ಒಬ್ಬಂಟಿಯಾಗಿ ಕಳೆದ ರಾತ್ರಿ-ಹಗಲು ಇನ್ನೊಮ್ಮೆ ಮನದಲ್ಲಿ ಬಂದು ಮರೆಯಾಗುತ್ತದೆ.
ಮನೆಗೆ ತಲುಪಿದಾಗ ಸ್ವಾಗತಕ್ಕಾಗಿ ನಿಂತ ಉತ್ಸಾಹಭರಿತ ಹೆಂಡತಿ ಮತ್ತು ಮಕ್ಕಳನ್ನು ನಿರ್ಲಕ್ಷಿಸಿ ಮನೆಯ ಮೂಲೆಯ ಕೋಣೆಗೆ ಹೋದ ಅಲ್ಲಿ ಆತನ ತಾಯಿ ಕಳೆದ ಐದು ವರ್ಷಗಳಿಂದ ಅಸೌಖ್ಯದಿಂದ ಮಲಗಿದ್ದಳು.
ತಾಯಿಯನ್ನು ಕಂಡೊಡನೆ ತಾಯಿಯ ಪಾದಕ್ಕೆ ಬಿದ್ದು ಗೊಳೋ ಎಂದು ಅತ್ತು ಬಿಡುತ್ತಾನೆ ಹಾಗೂ ತನ್ನ ಅಮ್ಮನನ್ನು ಎತ್ತಿಕೊಂಡು ಕೋಣೆಯಿಂದ ಹೊರಬರುತ್ತಾನೆ.
ತಂದೆಯ ಮರಣದ ನಂತರ, ಕಳೆದ 5 ವರ್ಷಗಳಿಂದ ಪ್ರತ್ಯೇಕತೆಯ ಐಸೋಲೇಶನ್ ನಲ್ಲಿ ತಾಯಿ ಇದ್ದಳು. ಅನಾರೋಗ್ಯದಿಂದ ಬಳಲುತ್ತಿರುವ ತಾಯಿಗೆ ಹೇಳಿದ”ಅಮ್ಮ ಇವತ್ತಿನಿಂದ ನಾವ್ಯಾರು ಬೇರೆಬೇರೆಯಾಗಿ ಜೀವಿಸುವ ಅಗತ್ಯವಿಲ್ಲ” ನಾವೆಲ್ಲರೂ ಒಂದೇ ಸೂರಿನಡಿ ಒಟ್ಟಿಗೆ
ಬದುಕೋನ ಎಂದು ತಾಯಿಯನ್ನು ಅಪ್ಪಿಕೊಂಡ.
ಮಗನು ತನ್ನ ಹೆಂಡತಿಯ ಮುಂದೆ ಇದನ್ನು ಹೇಳಲು ಹೇಗೆ ಧೈರ್ಯಮಾಡಿದನು ಎಂದು ತಾಯಿ ಕೂಡ ಆಶ್ಚರ್ಯ ದೊಂದಿಗೆ ಮನದೊಳಗೆ ಸಂತಸ ಪಟ್ಟಳು.
ಹೃದಯದ ಇಷ್ಟು ದೊಡ್ಡ ಬದಲಾವಣೆ ಇದ್ದಕ್ಕಿದ್ದಂತೆ ಹೇಗೆ ಸಂಭವಿಸಿತು? ಎಂದು ತಾಯಿ ಯೋಚಿಸುವ ಮೊದಲೇ ಮಗನು ತನ್ನ ಏಕಾಂತತೆಯ ಎಲ್ಲಾ ವಿಷಯಗಳನ್ನು ತಾಯಿಗೆ ತಿಳಿಸಿದನು ಮತ್ತು ಏಕಾಂತತೆ ಎಷ್ಟು ನೋವಿನಿಂದ ಕೂಡಿದೆ ಎಂಬುದನ್ನು ಈಗ ನಾನು ಅರಿತುಕೊಂಡೆ ಎಂದು ಹೇಳಿ ಇನ್ನೊಮ್ಮೆ ದುಃಖಪಟ್ಟ.
ಮಗನ ಈ ನಕಾರಾತ್ಮಕ ವರದಿಯು ಅವನ ತಾಯಿಯ ಜೀವನದ ಸಕಾರಾತ್ಮಕ ವರದಿಯಾಯಿತು.
ಹೀಗೆಯೇ ಜೀವನ ಒಬ್ಬರನ್ನು ಒಬ್ಬರಿಂದ ಕಸಿದು ಕೊಂಡರು ಕೂಡ ಒಂದಲ್ಲ ಒಂದು ದಿನ ಪುನ ಸರಿದಾರಿಗೆ ಬಂದೇ ಬರುತ್ತದೆ. ಆದರೆ ಅದನ್ನು ಅರ್ಥಮಾಡಿಕೊಳ್ಳುವ ಒಳಮನಸ್ಸು ಗಳು ಇರಬೇಕು ಅಷ್ಟೆ. ಇಂತಹ ಅನೇಕ ನಿಜ ಕಥೆಗಳನ್ನು ನಾವು ಅನುದಿನವು ಕೇಳುತ್ತಿರುತ್ತೇವೆ ಬದುಕಿನ ಕೊನೆಯ ಕ್ಷಣಗಳು ಎಷ್ಟು ದೈನ್ಯತೆಯಿಂದ ಕೂಡಿದೆ ಎಂಬುವುದನ್ನು ಎಲ್ಲರೂ ಬಲ್ಲರು. ಆದರೂ ಕೂಡ ನಾವು ನಮ್ಮದು ನನ್ನದು ಎಂಬ ಜಿಜ್ಞಾಸೆಯಲ್ಲಿ ಬಿದ್ದು ಬದುಕನ್ನು ನರಕವನ್ನಾಗಿಸಿ ಕೊಂಡಿದ್ದೇವೆ. ಅರ್ಥಮಾಡಿಕೊಳ್ಳುವವರು ಮಾತ್ರ ಕಡಿಮೆಯೇ.
ಒಂದು ನಿರ್ದಿಷ್ಟ ಸಮಯದವರೆಗೆ ಬದುಕು ಕೊಡುವ ಈ ಜೀವನ. ಯಾವಾಗ ಕೊನೆಗೊಳ್ಳುತ್ತದೆ ಎಂದು ತಿಳಿದಿಲ್ಲ, ಅಥವಾ ಜೀವನವು ಯಾವಾಗ ಬೇಕಾದರೂ ಕೊನೆಗೊಳ್ಳುವ ನೀರಿನ ಗುಳ್ಳೆಯಂತಿದೆ ಎಂಬುದು ತಿಳಿದ ವಿಷಯ.
ಹಾಗಾದರೆ ಈ ಅಮೂಲ್ಯ ಜೀವನದ ಒಂದು ಕ್ಷಣವೂ ನಾವು ಸರಿಯಾಗಿ ಬದುಕುವುದಿಲ್ಲ. ಜೀವನದಲ್ಲಿ ಎಷ್ಟು ಕ್ಷಣಗಳಿವೆ ಎಂದು ಒಬ್ಬರೇ ಯೋಚಿಸಬಾರದು, ಆದರೆ ಒಂದು ಕ್ಷಣದಲ್ಲಿ ಎಷ್ಟು ಜೀವನವಿದೆ ಎಂದು ಯೋಚಿಸಬೇಕು. ಕಳೆದ ಕ್ಷಣಗಳು ಕಳೆದು ಹೋಗಿದೆ ಅದರ ಬಗ್ಗೆ ಈಗ ಕುರಿತು ಪಶ್ಚಾತ್ತಾಪ ಪಡಬಾರದು. ಇನ್ನು ಬರುವ ಕ್ಷಣಗಳ ಬಗ್ಗೆ ಪಕ್ವವಾಗಬೇಕು ಇನ್ನೊಮ್ಮೆ ಎದ್ದುನಿಂತು ಸಮಯದ ಪರಿವೇ ಇಲ್ಲದಂತೆ ಜೀವನ ದಲ್ಲಿ ಬದುಕಿ ತೋರಿಸಬೇಕು.
ನಿಮ್ಮ ಅಮೂಲ್ಯ ಜೀವನವನ್ನು ಯಾವುದೇ ರೀತಿ ವ್ಯರ್ಥ ಮಾಡಬೇಡಿ. ಇದು ಅಮೂಲ್ಯವಾದುದು, ಅದನ್ನು ಸಾಧ್ಯವಾದಷ್ಟು ಸಂತೋಷದಿಂದ ಅನುಭವಿಸಿ. ಸಂತೋಷವು ನಮ್ಮ ಸುತ್ತಲೂ ಇದೆ. ಅಲ್ಲಿ ಸಂತಸವನ್ನು ಹುಡುಕಿ ನಿಮ್ಮ ಸಂತೋಷಕ್ಕೆ ಒಂದು ದಾರಿ ಅಲ್ಲಿ ಖಂಡಿತ ದೊರೆಯುತ್ತದೆ. ಜೀವನ ತುಂಬಾ ನಗುವಿನ ಅಲೆಗಳಿವೆ ಸುಂದರ ಅಲೆಗಳ ನಡುವೆ ನಮ್ಮ ಕೌಟುಂಬಿಕ ಜೀವನ ಕೂಡ ಬೆರೆತುಕೊಂಡಿದೆ. ಆ ನಗುವಿನ ಅಲೆಗಳನ್ನು ಹಿಡಿದಿಟ್ಟುಕೊಳ್ಳಿ . ಅದನ್ನು ಮಾಲೆಯಂತೆ ಪೋಣಿಸಿ ಬದುಕಿನ ಕೊರಳಿಗೆ ಹಾಕಿಕೊಳ್ಳಿ. ನಿಮ್ಮ ಬದುಕು ಸಂತಸದ ಹೊನಲು ಆಗಿಯೇ ಅಗುತ್ತದೆ. ಅದನ್ನು ಅನುಭವಿಸಿದಾಗ ಮಾತ್ರ ಈ ಜೀವನ ಅರ್ಥಪೂರ್ಣವಾಗಿರುತದೆ ಹಾಗೂ ಪರಿಪೂರ್ಣವಾಗುತ್ತದೆ.
ನಮ್ಮ ಕುಟುಂಬ ಮತ್ತು ಸಂಬಂಧಿಕರು ಹಾಗೂ ಪರಿಚಯಸ್ಥರನ್ನು ಇನ್ನೊಮ್ಮೆ ಸಂಪರ್ಕಕ್ಕೆ ತರಲು ಪ್ರಯತ್ನಿಸಿ, ಯಾರನ್ನೂ ದ್ವೇಷಿಸಬೇಡಿ. ಸಣ್ಣ ಸಣ್ಣ ಭೇಟಿ ಗಳಿಗೆ ಸ್ಪಂದನೆ ನೀಡಿ . ಕಹಿ ಅಥವಾ ಪ್ರೀತಿ ತುಂಬಿರುವ ಮನಸ್ಸುಗಳನ್ನು ಒಂದಾಗಿ ಬರಮಾಡಿಕೊಳ್ಳಿ ಆಗ ಬದುಕಿನ ಸುಂದರತೆ ನಿಮ್ಮ ಮನದಾಳದಲ್ಲಿ ಖಂಡಿತ ಬರುತ್ತದೆ.
ನಮ್ಮ ಜೀವನದಲ್ಲಿ ಶಾಲೆಯಿಂದ ಹಿಡಿದು ಇಷ್ಟರವರೆಗೆ ನಮ್ಮ ಬದುಕಿನಲ್ಲಿ ಬಂದುಹೋದ ಸ್ನೇಹಿತರನ್ನು ಅಥವಾ ಸಂಬಂಧಿಕರನ್ನು ಜೀವನದಲ್ಲಿ ಯಾವಾಗಲಾದರೂ ನೆನಪು ಮಾಡಿಕೊಂಡಿದ್ದೀರಾ? ನಿಮ್ಮ ಜೀವನದಲ್ಲಿ ನಿಮಗಾಗಿ ಅವರು ಮಾಡಿರುವ ತ್ಯಾಗಗಳು ಸಹಾಯಗಳನ್ನು ಎಂದಾದರೂ ಈ ಜೀವನದಲ್ಲಿ ಇನ್ನೊಮ್ಮೆ
ಯೋಚಿಸಿದ್ದಿರ?. ನೆನಪು ಮಾಡಿ ಇಂತಹ ಸ್ನೇಹಿತರ ಒಂದು ಪಟ್ಟಿ ಮಾಡಿಕೊಳ್ಳಿ. ಇನ್ನೊಮ್ಮೆ ಅವರನ್ನು ಹತ್ತಿರ ಕರೆಯುವ ಮಾತನಾಡುವ ಪ್ರಯತ್ನಪಡಿ. ಅವರ ಖುಷಿ ಯಲ್ಲಿ ಪಾಲು ಪಡೆದುಕೊಳ್ಳಿ.ನಮ್ಮ ಸ್ನೇಹಿತರು, ನಮ್ಮ ಸಂಬಂಧಿಕರು ಒಮ್ಮೆ ಮಾತ್ರ ನಮಗೆ ಸಿಕ್ಕಿರಬಹುದು ಆದರೆ ಈ ಬದುಕಿನ ಜಂಜಾಟಗಳ ನಡುವೆ ಮಾತನಾಡಲು ಸಮಯ ಇಲ್ಲದಿದ್ದರೂ ಕೂಡ ಈ ಮಾತುಗಳನ್ನು ಮನದಲ್ಲಿ ಕಲ್ಪಿಸಿಕೊಳ್ಳಿ. ಬಿಟ್ಟುಹೋದ ನೆನಪುಗಳನ್ನು ಹಸನಾಗಿಸಿ. ಈ ಜಗತ್ತನ್ನು ತೊರೆದ ನಂತರ, ಯಾರೂ ಮತ್ತೆ ಯಾರನ್ನೂ ಭೇಟಿಯಾಗಲು ಬರುವುದಿಲ್ಲ, ಅವರು ನಿಮ್ಮನ್ನು ಶಾಶ್ವತವಾಗಿ ಭೇಟಿಯಾಗಿ ಎಂದೆಂದಿಗೂ ಹಿಂದೆ ಬರದೆ ಹೋಗುವವರ ಸಾಲಿನಲ್ಲಿ ಸೇರಿ ಹೋಗುತ್ತಾರೆ. ನಂತರ ನಾವು ಎಷ್ಟೇ ಪ್ರಯತ್ನಿಸಿದರೂ ಕೂಡ ಒಂದು ಸೆಕೆಂಡಿಗೆ ಸಹ, ಅವರನ್ನು ಭೇಟಿಯಾಗಲು ಆಗುವುದಿಲ್ಲ . ಅದರ ನಂತರ ನೆನಪುಗಳು ಮತ್ತು ವಿಷಾದಗಳು ಮಾತ್ರ ಶಾಶ್ವತವಾಗಿ ಎಂದೆಂದಿಗೂ ಉಳಿದುಬಿಡುತ್ತದೆ.
ನಮ್ಮ ಮನಸ್ಸಿನ ಭಾವನೆ ಏನೆಂದರೆ, ಮೊದಲಿಗೆ ನಾವು ಯಾವುದೇ ಮನುಷ್ಯನಲ್ಲಿ ಯಾವುದೇ ಒಳ್ಳೆಯತನವನ್ನು ಕಾಣುವುದಿಲ್ಲ. ಮತ್ತು ಅವನ ಮರಣದ ನಂತರ ನಾವು ಯಾವುದೇ ಕೊರತೆಯನ್ನು ಕೂಡ ಕಾಣುವುದಿಲ್ಲ. ಅವನ ದೋಷಗಳು ಸಹ ಅರ್ಹತೆಗಳಾಗಿ ಬದಲಾಗುತ್ತವೆ. ಆದರೆ ಸತ್ತನಂತರ ಉಳಿದ ಕೊರತೆಯನ್ನು ಎಂದಿಗೂ ಪೂರೈಸಲು ಸಾಧ್ಯವಿಲ್ಲ. ಹಾಗಿರುವಾಗ ನಾವು ಸಮಯಕ್ಕೆ ಮಹತ್ವನೀಡಿ ನಮ್ಮ ಜೀವನವನ್ನು ಪೂರ್ಣವಾಗಿ ಆನಂದಿಸ ಬೇಕು. ದುಃಖದ ಕುಲುಮೆಯಲ್ಲಿ ಅದನ್ನು ಸುಡದೆ .ಕಾರ್ಯನಿರತರಾಗಬೇಕು.
ಒಳ್ಳೆಯತನದಿಂದ ವ್ಯರ್ಥ ಮಾಡುತ್ತಿರುವ ಜೀವನದ ಮೌಲ್ಯವನ್ನು ಅವ ನು ಈಗ ತಿಳಿದುಕೊಂಡಿದ್ದಾನೆ, ಅದು ಅಮೂಲ್ಯವಾದುದು. ಈ ಪ್ರಪಂಚದ ಜಗತ್ತಿನಲ್ಲಿ ಸಿಕ್ಕಿಹಾಕಿಕೊಳ್ಳಬೇಡಿ, ನೀವು ಬದುಕಲು ಇನ್ನೊಮ್ಮೆ ಕಲಿಯಿರಿ . ನಿಮ್ಮನ್ನು ಸಂತೋಷದಿಂದ ದೂರವಿಡಬೇಡಿ. ಪ್ರತಿ ಸಂತೋಷವನ್ನು ಅನುಭವಿಸಿ. ನಿಮ್ಮ ಮನಸ್ಸನ್ನು ಬಂಧಿಸಬೇಡಿ ಮತ್ತು ಅದನ್ನು ಹಾರಲು ಬಿಡಿ. ನಾವು ಜೀವನದಲ್ಲಿ ಮುಂದೆ ಸಾಗಬೇಕು ಏಕೆಂದರೆ ನಿಶ್ಚಲತೆಯು ಜೀವನವಲ್ಲ.
ವಿವೇಕಾನಂದರು ಸರಿಯಾಗಿ ಹೇಳಿದ್ದಾರೆ, “ಎದ್ದೇಳಿ, ಎಚ್ಚರಗೊಳ್ಳಿ ಮತ್ತು ಗುರಿ ಸಾಧಿಸುವವರೆಗೆ ನಿಲ್ಲಿಸಬೇಡಿ.” ಇದು ಜೀವನಶ್ರೇಷ್ಠ ಮಾತುಗಳಾಗಿವೆ ಹಲವು ಕಾರಣದಿಂದಾಗಿ ತಮ್ಮ ಗುರಿಗಳನ್ನು ತ್ಯಜಿಸುವ ಜನರು ಯೋಚಿಸುತ್ತಾರೆ ಇದಕ್ಕಿಂತ ದೊಡ್ಡ ವೈಫಲ್ಯವಿಲ್ಲ ಎಂದು. ಯಶಸ್ಸು ಮತ್ತು ವೈಫಲ್ಯವು ಒಂದೇ ನಾಣ್ಯದ ಎರಡು ಮುಖಗಳು ಪ್ರಯತ್ನವಿಲ್ಲದೆ ವೈಫಲ್ಯವಿಲ್ಲ. ವೈಫಲ್ಯವಿಲ್ಲದ ಬದುಕು ಬದುಕಲ್ಲ ಇಲ್ಲಿ ಕಲಿಕೆಗೆ ದಾರಿಯಿಲ್ಲ. ಆದ್ದರಿಂದ ಮನಸ್ಸನ್ನು ಮನಸ್ಸಿನಂತೆ ಬಿಡಿ. ಭಾವನೆಗಳನ್ನು ಬಂಧಿಸಬೇಡಿ.!
ದಿವಾಕರ್ ಶೆಟ್ಟಿ ಅಡ್ಯಾರ್.
divvakarshetty@Gmail.com