‘ಬರಿ ಹಣ ಇರುವವನು ಆಳಿಗೆ ಮಾತ್ರ ಯಜಮಾನ ಆದರೆ ಗುಣ ಇರುವವನು ಮನುಷ್ಯ ಕುಲಕ್ಕೆ ಯಜಮಾನ’ ಎಂಬ ಮಾತಿದೆ. ಶ್ರೀಯುತ ಚೇತನ್ ಎಸ್. ಶೆಟ್ಟಿಯವರು ಅತ್ಯಂತ ಕಿರಿಯ ವಯಸ್ಸಿನಲ್ಲಿ ಉದ್ಯಮಿಯಾಗಿ ಬೆಳೆದು ಯುವಕರಿಗೆ ಮಾದರಿಯಾದವರು. 19.02.1992 ರಲ್ಲಿ ಜನಿಸಿದ ಇವರು ಮೆಕ್ಯಾಟ್ರೋನಿಕ್ಸ್ ಇಂಜಿನಿಯರಿಂಗ್ನಲ್ಲಿ ಡಿಪ್ಲೋಮೋ ಪದವಿದರರು. ತಂದೆ ದಿವಂಗತ ಸುಧಾಕರ ಶೆಟ್ಟಿ ಚಾರ ಮಣಿಬಟ್ಟಲು ಹೆಬ್ರಿ ಸಮೀಪದ ಒಂದು ಹಳ್ಳಿಯವರು. ತಾಯಿ ಸೂರಾಳು ಸಾವಂತ್ರಾಡಿ ವಸಂತಿ ಶೆಟ್ಟಿಯವರು.
ಬಂಟ್ಸ್ ನೌ ಮಾಧ್ಯಮ ಸಂಸ್ಥೆಯ ಮಹಾಪೋಷಕರಾಗಿರುವ ಚೇತನ್ ಶೆಟ್ಟಿಯವರ ಇಬ್ಬರು ಸೋದರರು ಸಚಿನ್ ಶೆಟ್ಟಿ ಹಾಗೂ ನಿತಿನ್ ಶೆಟ್ಟಿ ಉನ್ನತ ಉದ್ಯೋಗದಲ್ಲಿದ್ದಾರೆ. ನಿತಿನ್ (ಅಸಿಸ್ಟೆಂಟ್ ಮ್ಯಾನೇಜರ್ ಫೆಡರಲ್ ಬ್ಯಾಂಕ್, ತಿಪಟೂರು, ತುಮಕೂರು ಜಿಲ್ಲೆ), ಸಚಿನ್ (ಟೀಮ್ ಲೀಡರ್ ಕ್ಯಾಶ್ ಫ್ರೀ ಪೇಮೆಂಟ್ ಇಂಡಿಯಾ ಲಿಮಿಟೆಡ್, ಬೆಂಗಳೂರು). ಪತ್ನಿ ದೀಪ್ತಿ ಶೆಟ್ಟಿಯವರು ಡಾಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
ಬೆಳಗಾವಿಯಲ್ಲಿ ಹೋಟೇಲು ಉದ್ಯಮಿಯಾಗಿರುವ ಇವರು ಸೂರಜ್ ಬಾರ್ ಅಂಡ್ ರೆಸ್ಟೋರೆಂಟನ್ನು ಹೊಂದಿದ್ದಾರೆ. ತನ್ನ ತವರೂರು ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಪೇತ್ರಿ ಚೇರ್ಕಾಡಿಯಲ್ಲಿ ಸೂರಜ್ ಬಾರ್ ಅಂಡ್ ರೆಸ್ಟೋರೆಂಟ್ ಲಾಡ್ಜ್ ಸಹಿತ ಹೊಂದಿದ್ದಾರೆ. ಬೆಳಗಾವಿಯಲ್ಲಿ ಶ್ರೀ ಮಹಾಗಣಪತಿ ವಿವಿದೋದ್ದೇಶ ಸಹಕಾರಿ ಬ್ಯಾಂಕ್ನ ಡೈರೆಕ್ಟರ್ ಆಗಿರುವ ಚೇತನ್ ಶೆಟ್ಟಿಯವರು ತಮ್ಮ ಸದ್ಗುಣದಿಂದ ಜನ ಮಾನಸವನ್ನು ಗೆದ್ದಿದ್ದಾರೆ.
ಬಂಟರ ಯಾನೆ ನಾಡವರ ಸಂಘ ಬೆಳಗಾವಿಯಲ್ಲಿ ಕಾರ್ಯದರ್ಶಿಯಾಗಿ ಸಮುದಾಯದೊಳಗೆ ಗುರುತಿಸಿಕೊಂಡಿರುವ ಶ್ರೀಯುತರು ನವದುರ್ಗ ಅಯ್ಯಪ್ಪ ದೇವಸ್ಥಾನ ಬೆಳಗಾವಿಯಲ್ಲಿ ಕಮಿಟಿ ಸದಸ್ಯರಾಗಿ ಧಾರ್ಮಿಕ ಕಾರ್ಯ ಚಟುವಟಿಕೆಗಳನ್ನು ನಡೆಸುತ್ತಾ ಜನಾನುರಾಗಿಯಾಗಿದ್ದಾರೆ. ಮಾತಿನಲ್ಲಿ ಸ್ವಭಾವದಲ್ಲಿ ಸಂಸ್ಕಾರಗಳಲ್ಲಿ ಸರಳತೆ ಹೊಂದಿರುವ ವ್ಯಕ್ತಿಗಳು ಎಂದಿಗೂ ಯಾರಿಗೂ ಹೊರೆಯಾಗುವುದಿಲ್ಲ, ಸರ್ವರಿಗೂ ಪ್ರಿಯರಾಗುತ್ತಾರೆ ಎಂಬ ಮಾತು ಸಾರ್ಥಕವೆನ್ನುವಂತೆ ಹೊರನಾಡಿನಲ್ಲಿ ತನ್ನ ಬದುಕು ರೂಪಿಸಿಕೊಳ್ಳುತ್ತಿರುವ ಶ್ರೀಯುತ ಚೇತನ್ ಎಸ್ ಶೆಟ್ಟಿಯವರ ಬದುಕು ಉಜ್ವಲವಾಗಲಿ ಎಂಬ ಆಶಯ ಶುಭ ಹಾರೈಕೆಗಳು ನಮ್ಮದು.