ಬಂಟರ ಸಂಘ ಮುಂಬಯಿಯ ಗೌರವ ಪ್ರಧಾನ ಕಾರ್ಯದರ್ಶಿ, ಸಂಜೀವಿನಿ ಟ್ರಸ್ಟ್ ಸಂಸ್ಥಾಪಕ, ಇಸ್ಸಾರ್ ಫೈನಾನ್ಸಿಯಲ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ನ ಆಡಳಿತ ನಿರ್ದೇಶಕ ಡಾ| ಆರ್.ಕೆ ಶೆಟ್ಟಿ ಅವರು ಆಗಸ್ಟ್ 24 ರ ರವಿವಾರದಂದು ಚೀನಾದ ಮಾಕಾವ್ ನಲ್ಲಿ ನಡೆಯಲಿರುವ ಎಮ್.ಡಿ.ಆರ್.ಟಿ ಗ್ಲೋಬಲ್ ಮಿಲಿಯನ್ ಡಾಲರ್ ರೌಂಡ್ ಟೇಬಲ್ ಜಗತ್ತಿನ ಅತ್ಯುತ್ತಮ ವಿಮಾ ಮತ್ತು ಹಣಕಾಸು ತಜ್ಞರನ್ನು ಪ್ರತಿನಿಧಿಸುವ ಪ್ರಖ್ಯಾತ ಜಾಗತಿಕ ಸಂಘಟನೆ ಆಯೋಜಿಸಿರುವ ಸಭೆಯಲ್ಲಿ ಸ್ವೀಕರ್ ಆಗಿ ಮಾತನಾಡಲಿದ್ದಾರೆ. ಪ್ರತಿಯೊಬ್ಬ ಕ್ರಿಕೆಟ್ ಆಟಗಾರನಿಗೂ ಲಾರ್ಡ್ಸ್ನಲ್ಲಿ ಆಡುವುದು ಕನಸು ಇದ್ದಂತೆ. ಪ್ರತಿಯೊಬ್ಬ ವಿಮಾ ಸಲಹೆಗಾರನಿಗೂ ಎಮ್.ಡಿ.ಆರ್.ಟಿ ಸದಸ್ಯರಾಗುವುದು ಶ್ರೇಷ್ಠತೆ, ನೈತಿಕತೆ ಮತ್ತು ಸಾಧನೆಯ ಸಂಕೇತವಾಗಿದೆ. ಅಂತಹ ಸದಸ್ಯತನದಲ್ಲಿ ನಿರಂತರವಾಗಿ 21 ವರ್ಷಗಳಲ್ಲಿ ಎಂ.ಡಿ.ಆರ್.ಟಿ ಆಗಿ ಕಾರ್ಯನಿರ್ವಹಿಸುತ್ತಿರುವ ಡಾ| ಆರ್ ಕೆ ಶೆಟ್ಟಿಯವರು ವಿಮಾ ಮತ್ತು ಹಣಕಾಸು ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ಗುರುತಿಸಲ್ಪಟ್ಟ ಸಾಧಕರು.

ಡಾ| ಆರ್.ಕೆ ಶೆಟ್ಟಿ ಅವರ ವೃತ್ತಿಪರ ಸಾಧನೆಗಳನ್ನು ಹೆಸರಿಸುವುದಾದರೆ, ಎಮ್.ಡಿ.ಆರ್.ಟಿ ಸದಸ್ಯತ್ವ 28 ಬಾರಿ (USA), ಕೋರ್ಟ್ ಆಫ್ ದ ಟೇಬಲ್ ಗೌರವ 23 ಬಾರಿ, ಟಾಪ್ ಆಫ್ ದ ಟೇಬಲ್ ಅವಿರತವಾಗಿ 19 ಬಾರಿ ಅರ್ಹತೆ (ಎಮ್ಡಿಆರ್ಟಿನ ಅತೀ ಉನ್ನತ ಗೌರವ) ಪಡೆದಿದ್ದಾರೆ. ಇವರು ಎಮ್.ಡಿ.ಆರ್.ಟಿ ಪ್ರದೇಶ ಅಧ್ಯಕ್ಷರಾಗಿ ಭಾರತ ದೇಶದ ಅಧ್ಯಕ್ಷ ಹಾಗೂ ಝೋನ್ ಅಧ್ಯಕ್ಷರಾಗಿ ಭಾರತ, ನೇಪಾಳ, ಪಾಕಿಸ್ತಾನ (2 ವರ್ಷ) ಇಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಎಮ್.ಡಿ.ಆರ್.ಟಿ ಇತಿಹಾಸದಲ್ಲಿ ಮೊದಲ ಭಾರತೀಯ ವಿಭಾಗೀಯ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಎಮ್.ಡಿ.ಆರ್.ಟಿ ವ್ಯವಸ್ಥಾಪನ ಮಂಡಳಿಯಲ್ಲಿ 16 ಜಾಗತಿಕ ನಾಯಕರೊಂದಿಗೆ ಕಾರ್ಯನಿರ್ವಹಣೆ ನಡೆಸಿದ್ದಾರೆ. ಎಮ್.ಡಿ.ಆರ್.ಟಿ ವಾರ್ಷಿಕ ಸಭೆ (ಡೆನ್ವರ್, ಕೊಲೊರಾಡೋ) ಉದ್ಘಾಟನಾ ಸಮಾರಂಭದಲ್ಲಿ ಎಮ್.ಡಿ.ಆರ್.ಟಿ ಜಾಗತಿಕ ಧ್ವಜ ಹೊತ್ತ ಏಕೈಕ ವ್ಯಕ್ತಿಯಾಗಿದ್ದಾರೆ. ಎಮ್.ಡಿ.ಆರ್.ಟಿ ಅಧ್ಯಕ್ಷ ರಾಂಡಿ ಎಲ್ ಸ್ಕ್ರಿಚ್ಫೀಲ್ಡ್ (2022) ಅವರಿಂದ ವೈಯಕ್ತಿಕ ಪತ್ರದ ಮೂಲಕ ‘ಕ್ವಾರ್ಟರ್ ಸೆಂಚುರಿ ಕ್ಲಬ್’ ಗೌರವ ಪಡೆದಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯದ 43ನೇ ಸ್ಥಾಪನಾ ದಿನಾಚರಣೆಯಲ್ಲಿ ‘ಜಾಗತಿಕ ಸಾಧಕ ಪ್ರಶಸ್ತಿ’ ಪಡೆದಿದ್ದಾರೆ. ಎಮ್.ಡಿ.ಆರ್.ಟಿ ವಾರ್ಷಿಕ ಸಮ್ಮೇಳನಗಳಾದ ಇಂಡಿಯಾನಾಪೊಲಿಸ್ (ಅಮೆರಿಕ), ಆರ್ಲ್ಯಾಂಡೋ (ಅಮೆರಿಕ) ಇಲ್ಲಿ 300ಕ್ಕೂ ಅಧಿಕ ಪ್ರಭಾವಿ ಭಾಷಣ, ಟಾಪ್ ಆಫ್ ದ ಟೇಬಲ್ ವಾರ್ಷಿಕ ಸಭೆಯ ಮುಖ್ಯ ವೇದಿಕೆ ಮೇಲೆ ಭಾಷಣ ಮಾಡಿದ ಮೊದಲ ಭಾರತೀಯ ಸ್ಪೀಕರ್ ಆಗಿ ಗೌರವ ಪಡೆದಿದ್ದಾರೆ.ಎಮ್.ಡಿ.ಆರ್.ಟಿ ಗ್ಲೋಬಲ್ ಕಾನ್ಫರೆನ್ಸ್ 2025 ಆಗಸ್ಟ್ 24 ರಿಂದ 27ರವರೆಗೆ ಚೀನಾದ ಮಾಕಾವ್ ನಲ್ಲಿ ನಡೆಯಲಿದೆ. ಆಗಸ್ಟ್ 24ರಂದು ಸ್ವೀಕರ್ ಆಗಿ ಜಾಗತಿಕ ಮಟ್ಟದ ಘನ ವೇದಿಕೆಯಲ್ಲಿ “ವಿಮಾ ಉದ್ಯಮದ ಭವಿಷ್ಯದ ಧೋರಣಿಗಳು” ಬಗ್ಗೆ ಪುನಃ ಭಾಷಣ ಮಾಡಲು ಆಯ್ಕೆಯಾಗಿರುವುದು ಇದು ಇವರ ಪ್ರತಿಭೆಗೆ ಸಂದ ಗೌರವ ವಾಗಿದೆ. ಇದು ವಿಶ್ವದ 11,000ಕ್ಕಿಂತ ಅಧಿಕ ಶ್ರೇಷ್ಠ ಹಣಕಾಸು ತಜ್ಞರನ್ನು ಒಟ್ಟುಗೂಡಿಸುವ ಅನನ್ಯ ವೇದಿಕೆಯಾಗಿದ್ದು, ಜಾಗತಿಕ ನೆಟ್ವರ್ಕಿಂಗ್, ವೃತ್ತಿಪರ ಪ್ರೇರಣೆ ಮತ್ತು ಭವಿಷ್ಯಮುಖಿ ಚಿಂತನೆಗಾಗಿ ದೊಡ್ಡ ಅವಕಾಶವನ್ನೂ ಒದಗಿಸುತ್ತದೆ. ಭಾರತ ದೇಶದ ಪ್ರತಿನಿಧಿಯಾಗಿ ಚೀನ ದೇಶದಲ್ಲಿ ತಮ್ಮ ಅನುಭವದ ಮಾತುಗಳನ್ನು ಜಗತ್ತಿಗೆ ನೀಡಲಿರುವ ಡಾ. ಆರ್.ಕೆ ಶೆಟ್ಟಿಯವರ ಸಾಧನೆಗೆ ಮುಂಬಯಿ ಬಂಟರ ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ ಮತ್ತು ಪದಾಧಿಕಾರಿಗಳು, ಜಾಗತಿಕ ಬಂಟರ ಸಂಘಗಳು ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಮತ್ತು ಪದಾಧಿಕಾರಿಗಳು ಅಭಿನಂದನೆಯನ್ನು ಸಲ್ಲಿಸಿದ್ದಾರೆ.