Author: admin
ಡಿ.30 ರಂದು ಡಾ.ಕರುಣಾಕರ ಶೆಟ್ಟಿ, ಪಾಂಗಳ ವಿಶ್ವನಾಥ ಶೆಟ್ಟಿ ಮತ್ತು ಶೃತಿ ಅಭಿಷೇಕ್ ಶೆಟ್ಟಿಯವರ ಒಟ್ಟು 14 ಕೃತಿಗಳ ಲೋಕಾರ್ಪಣೆ
ಡಾ.ಕರುಣಾಕರ ಶೆಟ್ಟಿ ಪಣಿಯೂರು, ಪಾಂಗಳ ವಿಶ್ವನಾಥ ಶೆಟ್ಟಿ ಮತ್ತು ಶೃತಿ ಅಭಿಷೇಕ್ ಶೆಟ್ಟಿಯವರು ಬರೆದಿರುವ ಒಟ್ಟು 14 ಕೃತಿಗಳು ಡಿಸೆಂಬರ್ 30ರಂದು ಥಾಣೆ ಪೂರ್ವ, ಎಲ್.ಬಿ.ಎಸ್ ಮಾರ್ಗ, ರಹೇಜಾ ಗಾರ್ಡನ್ ಎದುರಿಗಿರುವ ವುಡ್ ಲ್ಯಾಂಡ್ ರಿಟ್ರೇಟ್ ಹೋಟೆಲ್ ಲ್ಲಿ ಸಂಜೆ 4 ಗಂಟೆಗೆ ಸರಿಯಾಗಿ ಲೋಕಾರ್ಪಣೆಗೊಳ್ಳಲಿದೆ. ಬಾಳೊಂದು ಉಯ್ಯಾಲೆ ಮತ್ತು ದೂರದ ಬೆಟ್ಟ (ಕಥಾ ಸಂಕಲನ), ವಿಚಾರ ವಿಮರ್ಶೆ -4 ಅನಾವರಣ (ಕೃತಿ ಸಮೀಕ್ಷೆ), ಕಾರಂತ ಪ್ರೇಮಚಂದ್ರ ಅನುಸಂಧಾನ, ಪ್ರದೀಪ ಅನಾವರಣ, ಓದಿದ್ದು ಹೊಳೆದದ್ದು, ಪಾಂಗಳದ ಪಿಂಗಾರ (ಅಭಿನಂದನಾ ಗ್ರಂಥ) ಹೀಗೆ ಡಾ. ಕರುಣಾಕರ ಶೆಟ್ಟಿ ಪಣಿಯೂರು ಅವರ ಲೇಖನಿಯಿಂದ ರೂಪುಗೊಂಡಿರುವ ಹತ್ತು ಕೃತಿ ರತ್ನಗಳು ಬಿಡುಗಡೆಗೊಳ್ಳಲಿದೆ. ಪುಣೆಯ ಕವಿ ಪಾಂಗಾಳ ವಿಶ್ವನಾಥ ಶೆಟ್ಟಿಯವರ ಸಾವಿರ ನೆನಪಿನ ಗೂಡು, (ಬಾಲ್ಯದ ನೆನಪುಗಳು), ಮಾತು ಮುತ್ತಾದಾಗ (ಕವನ ಸಂಕಲನ), ಧರೆಗಿಳಿದ ಸೂರ್ಯ (ಕಥಾ ಸಂಕಲನ) ಕೃತಿ ಲೋಕಾರ್ಪಣೆಯಾಗಲಿದೆ. ತಂದೆಯವರ ಸಾಹಿತ್ಯದಿಂದ ಪ್ರೇರಿತರಾಗಿ ಇಂಗ್ಲಿಷ್ ನಲ್ಲಿ ‘ಅಬ್ ಸ್ಟ್ರಾಕ್ಟ್ -ಪೀಸ್ ಆಫ್ ಮೈ ಮೈಂಡ್’…
ತುಳು ಸಿನಿಮಡ್ ನಮ ನಾಟಕ ತೂವೊಂದಿತ್ತ. ಆಂಡ ಇತ್ತೆ ನಾಟಕೊಡೇ ಎಡ್ಡೆ ಸಿನಿಮಾ ತೂವೊಂದುಲ್ಲ. ಇದು ಅಕ್ಷರಬ್ರಹ್ಮ, ಕಲಾಮಾಣಿಕ್ಯ ವಿಜಯಕುಮಾರ್ ಕೋಡಿಯಾಲ್‌ಬೈಲ್‌ರವರ ‘ಮೈತಿದಿ’ ಸಾಮಾಜಿಕ ನಾಟಕ ನೋಡಿದ ಬಳಿಕ ಪ್ರೇಕ್ಷಕ ವರ್ಗದಿಂದ ಕೇಳಿಬರುವ ಪ್ರಶಂಸನೀಯ ಮಾತುಗಳು. ಚಾರಿತ್ರಿಕ ದಾಖಲೆಯೊಂದಿಗೆ ಮುನ್ನುಗ್ಗುತ್ತಿರುವ ‘ಶಿವಧೂತೆ ಗುಳಿಗೆ’ ಎಂಬ ಪೌರಾಣಿಕ ಕಥಾ ಹಂದರದಿಂದ ಹೊರ ಬಂದು ಸಾಮಾಜಿಕ ನೆಲೆಗಟ್ಟಿನ ಕಥೆಯಿಂದ ಹೆಣೆದ ನಾಟಕದ ಪ್ರತಿಯೊಂದು ದೃಶ್ಯವೂ ಪ್ರೇಕ್ಷಕನನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ಸಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಸದಾ ಹೊಸತನ ಮೂಲಕವೇ ಹೆಸರು ಮಾಡಿರುವ ಕೋಡಿಯಾಲ್‌ಬೈಲ್ ಅವರ ‘ಮೈತಿದಿ’ ನಾಟಕ ನವರಸಗಳ ಮಿಳಿತದೊಂದಿಗೆ ರಂಗಭೂಮಿಗೆ ಹೊಸ ಆಯಾಮ ನೀಡಿದೆ. ಇದು ಬರೀ ನಾಟಕವಲ್ಲ ನಮ್ಮ ನಿಮ್ಮೊಳಗಿನ ಜೀವನದ ಕಥೆ. ಸಮಾಜದಲ್ಲಿ ಈಗ ನಡೆಯುತ್ತಿರುವ ಪಿಡುಗುಗಳನ್ನು ನವರಸಗಳ ಪಾಕದೊಂದಿಗೆ ಮನಮುಟ್ಟುವಂತೆ ಕಟ್ಟಿಕೊಟ್ಟಿದ್ದಾರೆ ಕೋಡಿಯಾಲಬೈಲ್. ನಾಟಕದ ತುಂಬಾ ಬಡತನದ ನೋವಿದೆ. ಖುಷಿ ಇದೆ. ದೇಶಪ್ರೇಮ ಇದೆ. ಸಾಮರಸ್ಯ ಇದೆ. ನೈಜತೆ ಇದೆ. ಅಕ್ಕರೆಯೂ ಇದೆ. ಕೆಲವೊಂದು ದೃಶ್ಯದಲ್ಲಿ ಪ್ರೇಕ್ಷಕರ ಕಣ್ಣಂಚನ್ನು ತೇವಗೊಳಿಸುವ…
ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿ ಸಮಾಲೋಚನಾ ಸಭೆ – ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಭಾಗಿ
ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿಯ ಸಮಾಲೋಚನಾ ಸಭೆಯಲ್ಲಿ ದಿನಾಂಕ 03-10-2023 ರಂದು ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷರು, ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಭಾಗವಹಿಸಿದರು. ದೇಶ ವಿದೇಶದಲ್ಲಿರುವ ಭಕ್ತಾಭಿಮಾನಿಗಳ ಸಹಕಾರದೊಂದಿಗೆ ದೇವಸ್ಥಾನ ಜೀರ್ಣೋದ್ಧಾರಗೊಳ್ಳುತ್ತಿದ್ದು ಉಡುಪಿ ಜಿಲ್ಲೆಯಾದ್ಯಂತ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಗ್ರಾಮ ಸಮಿತಿ ರಚಿಸುವ ಬಗ್ಗೆ ಸಮಾಲೋಚನೆ ನಡೆಸಲಾಯಿತು. ಈ ಸಂದರ್ಭದಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಯಶ್ ಪಾಲ್ ಸುವರ್ಣ, ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಕಿರಣ್ ಕುಮಾರ್ ಕೊಡ್ಗಿ, ಮಟ್ಟಾರ್ ರತ್ನಾಕರ್ ಹೆಗ್ಡೆ, ಅಶೋಕ್ ಶೆಟ್ಟಿ, ವಿವಿಧ ಸಮುದಾಯದ ಮುಖಂಡರು, ವಿವಿಧ ಪಕ್ಷಗಳ ಮುಖಂಡರು, ಕಾಪು ಹೊಸ ಮಾರಿಗುಡಿ ದೇವಸ್ಥಾನದ ಅಡಳಿತ ಮಂಡಳಿ ಸದಸ್ಯರು, ಅಭಿವೃದ್ಧಿ ಸಮಿತಿಯ ಪದಾಧಿಕಾರಿಗಳು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.
ದ.ಕ, ಉಡುಪಿ ಹಾಗೂ ಕಾಸರಗೋಡು ಜಿಲ್ಲಾ ಕಂಬಳ ಸಮಿತಿಯ ಸರ್ವ ಸದಸ್ಯರ ಸಭೆಯಲ್ಲಿ ಮುಂದಿನ ಎರಡು ವರ್ಷಗಳ ಅವಧಿಗೆ ಸಮಿತಿಯ ಅಧ್ಯಕ್ಷರಾಗಿ ಐಕಳಬಾವ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ನೂತನ ಅಧ್ಯಕ್ಷರಿಗೆ ನಿಕಟಪೂರ್ವ ಅಧ್ಯಕ್ಷ ಎರ್ಮಾಳು ರೋಹಿತ್ ಹೆಗ್ಡೆ ಅವರು ಅಧಿಕಾರ ಹಸ್ತಾಂತರಗೈದರು. ಕಂಬಳ ಸಮಿತಿಯ ನೂತನ ಕಾರ್ಯಾಧ್ಯಕ್ಷರಾಗಿ ಗುಣಪಾಲ ಕಡಂಬ, ಪ್ರಧಾನ ಕಾರ್ಯದರ್ಶಿಯಾಗಿ ಲೋಕೇಶ್ ಶೆಟ್ಟಿ ಮುಚ್ಚೂರು ಹಾಗೂ ಕೋಶಾಧಿಕಾರಿಯಾಗಿ ಚಂದ್ರಹಾಸ ಸಾಧು ಸನಿಲ್, ತೀರ್ಪುಗಾರರ ಸಂಚಾಲಕರಾಗಿ ವಿಜಯ ಕುಮಾರ್ ಕಂಗಿನಮನೆ ಆಯ್ಕೆಯಾಗಿದ್ದಾರೆ. ನವೆಂಬರ್ ತಿಂಗಳಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ಕಂಬಳದ ಪೂರ್ವ ತಯಾರಿಯ ಬಗ್ಗೆ ಶಾಸಕ ಅಶೋಕ್ ರೈ ಮಾಹಿತಿಯಿತ್ತರು. ಕಂಬಳದ ಸೊಬಗನ್ನು ರಾಜ್ಯ ರಾಜಧಾನಿಯಲ್ಲಿ ಪಸರಿಸಲು ಎಲ್ಲರ ಬೆಂಬಲವನ್ನೂ ಶಾಸಕ ರೈ ಬಯಸಿದರು. ನವೆಂಬರ್‌ನಲ್ಲಿ ಆರಂಭವಾಗಲಿರುವ ಕಂಬಳ ಋತುವನ್ನು ಶಿಸ್ತುಬದ್ಧವಾಗಿ ನಡೆಸಬೇಕು. 24 ಗಂಟೆಯೊಳಗೆ ಕಂಬಳವನ್ನು ಮುಗಿಸಬೇಕು. ಈ ಕುರಿತಾಗಿ ಸರಕಾರದ ಆದೇಶವನ್ನು ಎಲ್ಲರೂ ಪಾಲಿಸುವಂತೆ ಶಿಸ್ತು ಸಮಿತಿಯ ಅಧ್ಯಕ್ಷ ಇರ್ವತ್ತೂರು ಭಾಸ್ಕರ…
ಸ್ವಾತಂತ್ರ್ಯ ಹೋರಾಟಗಾರ ದಿ. ಶ್ರೀ ಕುಳಾಲು ಅಣ್ಣಪ್ಪ ಭಂಡಾರಿ ಮತ್ತು ಅವರ ಸಹಧರ್ಮಿಣಿ ದಿ. ಅಗರಿ ಲೀಲಾವತಿ ಭಂಡಾರಿ ಅವರ ಸ್ಮರಣಾರ್ಥ ಅಸೈಗೋಳಿಯಲ್ಲಿರುವ ಅಭಯಾಶ್ರಮದವರಿಗೆ ಮಧ್ಯಾಹ್ನದ ಊಟವನ್ನು ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಶ್ರೀ ತೋಡಾರ್ ಆನಂದ ಶೆಟ್ಟಿ (ನಿವೃತ್ತ ಸ್ಟೇಷನ್ ಮ್ಯಾನೇಜರ್ ಮಂಗಳೂರು, ಆಗಿನ ಇಂಡಿಯನ್ ಏರ್ ಲೆಯಿನ್ಸ್) ಮತ್ತು ಅವರ ಧರ್ಮಪತ್ನಿ ಶ್ರೀಮತಿ ಇಂದಿರಾ ಎ ಶೆಟ್ಟಿ (ಕುಳಾಲು ಅಣ್ಣಪ್ಪ ಭಂಡಾರಿಯವರ ಪುತ್ರಿ) ಅವರ ವೈವಾಹಿಕ ಸ್ವರ್ಣ ಮಹೋತ್ಸವದ ಅಂಗವಾಗಿ ಅಭಯಾಶ್ರಮದ ಅಧ್ಯಕ್ಷ ಹಾಗೂ ಬಂಟರ ಯಾನೆ ನಾಡವರ ಮಾತೃ ಸಂಘದ ಮಾಜಿ ಅಧ್ಯಕ್ಷ ಶ್ರೀ ಶ್ರೀನಾಥ ಹೆಗ್ಡೆಯವರ ಸಮ್ಮುಖದಲ್ಲಿ ಆಶ್ರಮಕ್ಕೆ ಆರ್ಥಿಕ ಸಹಾಯ ಮಾಡಿದರು.
ಕಳೆದ ಶುಕ್ರವಾರವಷ್ಟೇ ಭಾರತೀಯ ರಿಸರ್ವ್ ಬ್ಯಾಂಕ್ ಸೆ.30ರಿಂದ 2,000 ರೂ. ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ವಾಪಸ್ ಪಡೆಯುವುದಾಗಿ ಹೇಳಿದೆ. 2018-19ರಲ್ಲೇ ಈ ನೋಟುಗಳ ಮುದ್ರಣ ನಿಲ್ಲಿಸಲಾಗಿದ್ದು, ಈಗ ಚಲಾವಣೆ ಸ್ಥಗಿತಗೊಳಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಜತೆಗೆ 2,000 ಮುಖಬೆಲೆಯ ನೋಟುಗಳು ಇದ್ದವರು ಸೆ.30ರೊಳಗೆ ಯಾವುದೇ ಬ್ಯಾಂಕ್‌ಗೆ ಹೋಗಿ ಬದಲಾವಣೆ ಮಾಡಿಕೊಳ್ಳಬಹುದು ಅಥವಾ ಅಕೌಂಟ್‌ಗೆ ಹಾಕಬಹುದು ಎಂದು ಸೂಚನೆ ನೀಡಲಾಗಿದೆ. 2016ರಲ್ಲಿ ನೋಟು ಅಮಾನ್ಯದ ಬಳಿಕ ಜನ ಹಳೆಯ 1,000 ರೂ. ಮತ್ತು 500 ರೂ. ಮುಖಬೆಲೆಯ ನೋಟುಗಳನ್ನು ಬದಲಾಯಿಸಿಕೊಳ್ಳಲು ಅನುಕೂಲವಾಗಲಿ ಎಂಬ ಕಾರಣದಿಂದ ಭಾರತೀಯ ರಿಸರ್ವ್ ಬ್ಯಾಂಕ್ 2,000 ರೂ. ಮುಖಬೆಲೆಯ ನೋಟುಗಳನ್ನು ಜಾರಿಗೆ ತಂದಿದ್ದು. ಆಗ ಈ ನೋಟು ಪರಿಚಯಿಸಿದ್ದಕ್ಕೆ ಸಾಕಷ್ಟು ಆಕ್ಷೇಪಗಳೂ ವ್ಯಕ್ತವಾಗಿದ್ದವು. ಕಪ್ಪು ಹಣ ನಿಯಂತ್ರಣ ಕಾರಣದಿಂದಾಗಿ ನೋಟು ಅಮಾನ್ಯ ಮಾಡಲಾಗಿದ್ದು, ಈಗ ಮತ್ತೆ ಗರಿಷ್ಠ ಮುಖಬೆಲೆಯ ನೋಟು ಜಾರಿಗೆ ತಂದರೆ ಮತ್ತೆ ಕಾಳಧನ ಸಂಗ್ರಹಕ್ಕೆ ದಾರಿ ಮಾಡಿಕೊಟ್ಟ ರೀತಿ ಆಗುತ್ತದೆ ಎಂಬ ಮಾತುಗಳೂ ಕೇಳಿಬಂದಿದ್ದವು. ಆರಂಭದ ಹಂತದಲ್ಲಿ…
ಕಾರ್ಕಳದಲ್ಲಿ ಬಿಜೆಪಿ ಭ್ರಷ್ಟಾಚಾರ ಹಾಗೂ ದರ್ಪ ರಾಜಕೀಯದಿಂದ ಬೇಸತ್ತ ಜನ ಬದಲಾವಣೆ ಬಯಸಿದ್ದು ದಕ್ಷ ಹಾಗೂ ಪ್ರಮಾಣಿಕ ಜನ ಸೇವಕ ಮುನಿಯಾಲು ಉದಯ ಶೆಟ್ಟಿ ಅವರನ್ನು ಜನ ಬೆಂಬಲಿಸುತ್ತಿದ್ದು ಪ್ರತಿಯೊಂದು ಕಡೆ ನಡೆಯುವ ಪ್ರಚಾರ ಸಭೆಗಳಲ್ಲಿ ಸೇರುತ್ತಿರುವ ಜನ ಸಾಗರವೇ ಸಾಕ್ಷಿಯಾಗಿದ್ದು ಬಹುಮತದಿಂದ ಉದಯಕುಮಾರ್ ಶೆಟ್ಟಿ ಅವರ ಗೆಲುವು ಖಚಿತವಾಗಿದೆ ಎಂದು ಕಾಂಗ್ರೆಸ್ ರಾಜ್ಯ ವಕ್ತಾರ ಸುಧೀರ್ ಕುಮಾರ್ ಮರೋಳಿ ಹೇಳಿದರು. ಅವರು ಮೇ 6 ರಂದು ಹೆಬ್ರಿ ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ಹೆಬ್ರಿ ಬಸ್ ತಂಗುದಾಣದ ವಠಾರದಲ್ಲಿ ನಡೆದ ಕಾಂಗ್ರೆಸ್ ಬಹಿರಂಗ ಪ್ರಚಾರ ಸಭೆಯಲ್ಲಿ ಮಾತನಾಡಿದರು. ಕಾರ್ಕಳ ಜನತೆಯ ಗೆಲುವು: ಸಮಾಜ ಕಟ್ಟ ಕಡೆಯ ವ್ಯಕ್ತಿಯನ್ನು ತಲುಪುವುದು ಮತ್ತು ಅವರ ಸಮಸ್ಯೆಗಳಿಗೆ ಸ್ಪಂದಿಸುವುದು ನಿಜವಾಗ ಅಭಿವೃದ್ಧಿ ಎಂದು ತಿಳಿದ ಉದಯಕುಮಾರ್ ಶೆಟ್ಟಿ ಅವರ ಅಭಿವೃದ್ಧಿ ಪರ ಚಿಂತನೆ ಕಾರ್ಕಳಕ್ಕೆ ವರದಾನವಾಗಲಿದೆ. ಉತ್ಸವ ಅಬ್ಬರದ ಪ್ರಚಾರದಿಂದ ಜನರ ಬದುಕು ಕಟ್ಟಿಕೊಳ್ಳಲು ಸಾಧ್ಯವಿಲ್ಲ. ಯಾವುದೇ ಅಹಂ ಇಲ್ಲದೆ ಸಾಮಾನ್ಯ ಕಾರ್ಯಕರ್ತನನ್ನು ತಲುಪಬೇಕು ಆಗ…
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವರ್ಷಾವಧಿ ಉತ್ಸವದ ಪ್ರಯುಕ್ತ ಎ. 21ರಂದು ಸಂಜೆ ಎಕ್ಕಾರು ಸವಾರಿ, ಕಟ್ಟೆ ಪೂಜೆ, ಶಿಬರೂರು ಕೊಡಮಣಿತ್ತಾಯ ದೈವದ ಭೇಟಿ, ರಥ ಬಲಿ, ರಾತ್ರಿ ರಥೋತ್ಸವ, ಎ. 22ರಂದು ಮುಂಜಾನೆ ಅಜಾರು ನಂದಿನಿ ನದಿಯಲ್ಲಿ ಜಳಕದ ಉತ್ಸವ, ಬಳಿಕ ರಕ್ತೇಶ್ವರೀ ಗುಡ್ಡದಲ್ಲಿ ಅತ್ತೂರು-ಕೊಡೆತ್ತೂರು ಗ್ರಾಮಸ್ಥರ ತೂಟೆದಾರ (ತೆಂಗಿನ ಗರಿಗಳನ್ನು ಒಟ್ಟಗೂಡಿಸಿ ಕಟ್ಟಿ ಬೆಂಕಿ ಉರಿಸಿ ಪರಸ್ಪರ ಎಸೆಯುವ ಹರಕೆ ಸೇವೆ) ಪ್ರಾರಂಭ ಆಗಿ ಬಳಿಕ ರಥಬೀದಿಯಲ್ಲಿ ತೂಟೆದಾರ ನಡೆದ ಬಳಿಕ ಓಕುಳಿ ಸ್ನಾನ ಪ್ರಸಾದ ವಿತರಣೆ ನಡೆಯಿತು. ಜಳಕದ ಬಲಿ ಸಂದರ್ಭ ಶಿಬರೂರು ಕೊಡಮಣಿತ್ತಾಯ ಹಾಗೂ ದೇವರ ಭೇಟಿ ದರ್ಶನ ನಡೆದ ಬಳಿಕ ವಸಂತ ಪೂಜೆ, ಚಿನ್ನದ ರಥೋತ್ಸವ, ಧ್ವಜಾವರೋಹಣ, ಬೀದಿಯಲ್ಲಿ ಕೊಡಮಣಿತ್ತಾಯ ದೈವದ ನೇಮ ನಡೆಯಿತು. ತಂತ್ರಿಗಳಾದ ವೇದವ್ಯಾಸ ತಂತ್ರಿ ಹಾಗೂ ಕೃಷ್ಣರಾಜ ತಂತ್ರಿ ಧಾರ್ಮಿಕ ವಿಧಿಗಳನ್ನು ನೆರವೇರಿಸಿದರು. ಅಡಳಿತ ಸಮಿತಿ ಅಧ್ಯಕ್ಷ ಹಾಗೂ ಆನುವಂಶಿಕ ಮೊಕ¤ೇಸರ ಸನತ್ ಕುಮಾರ್ ಶೆಟ್ಟಿ ಕೊಡೆತ್ತೂರು ಗುತ್ತು, ಆನುವಂಶಿಕ…
ಶ್ರೀ ಕ್ಷೇತ್ರ ಕಮಲಶಿಲೆ ಶ್ರೀ ಬ್ರಾಹ್ಮೀ ದುರ್ಗಾ ಪರಮೇಶ್ವರೀ ದೇವಸ್ಥಾನದಲ್ಲಿ ಬುಧವಾರ ಶ್ರೀ ಮನ್ಮಹಾರಥೋತ್ಸವ ಸಂಭ್ರಮದಿಂದ ಸಂಪನ್ನಗೊಂಡಿತು. ಕ್ಷೇತ್ರದ ಕೂಡುವಳಿಗೆಯ 7 ಗ್ರಾಮದ ಗ್ರಾಮಸ್ತರು ಮತ್ತು ರಾಜ್ಯದ ನಾನಾ ಮೂಲೆಗಳಿಂದ ಸಾವಿರಾರೂ ಸಂಖ್ಯೆಯಲ್ಲಿ ಭಕ್ತರು ಕ್ಷೇತ್ರಕ್ಕೆ ಆಗಮಿಸಿ, ದೇವಿಯ ದರ್ಶನ ಪಡೆದರು. ಭಕ್ತರನ್ನು ದೇಗುಲದ ಅನುವಂಶಿಕ ಆಡಳಿತ ಧರ್ಮದರ್ಶಿ ಶೆಟ್ಟಿಪಾಲು ಸಚ್ಚಿದಾನಂದ ಚಾತ್ರ, ಸಹ ಮೊಕ್ತೇಸರ ಚಂದ್ರಶೇಖರ ಶೆಟ್ಟಿ ಹೆನ್ನಾಬೈಲು ಅವರು ಬರಮಾಡಿಕೊಂಡರು.
ತುಳು ರಂಗಭೂಮಿಯಲ್ಲಿ ದಾಖಲೆ ಬರೆದ ವಿಜಯ್ ಕುಮಾರ್ ಕೊಡಿಯಾಲ್‌ಬೈಲ್ ನಿರ್ದೇಶನದ “ಶಿವದೂತೆ ಗುಳಿಗೆ’ ತುಳು ನಾಟಕ ಈಗ ಸೀಮೋಲ್ಲಂಘನಕ್ಕೆ ಅಣಿಯಾಗಿದೆ. ಕರಾವಳಿಯಾದ್ಯಂತ ಜನಮೆಚ್ಚುಗೆ ಪಡೆದಿದ್ದ “ಶಿವದೂತೆ ಗುಳಿಗೆ’ ನಾಟಕ ಬಳಿಕ ರಾಜ್ಯದ ವಿವಿಧ ಭಾಗಗಳು, ಇತ್ತೀಚೆಗೆ ಹೊರರಾಜ್ಯದಲ್ಲಿಯೂ ಯಶಸ್ವಿಯಾಗಿದ್ದು, ಈಗ ವಿದೇಶದಲ್ಲಿ ಪ್ರದರ್ಶನಕ್ಕೆ ಸಿದ್ಧವಾಗಿದೆ. 2020 ಜ. 2ರಂದು ಮೊದಲ ಪ್ರದರ್ಶನ ಕಂಡ ಈ ನಾಟಕದ 423 ಹಾಗೂ 424ನೇ ಪ್ರದರ್ಶನ ಮಾ. 19ರಂದು ಅಪರಾಹ್ನ 2.30 ಹಾಗೂ ಸಂಜೆ 6 ಗಂಟೆಗೆ ದುಬಾೖಯ ಅಲ್ ನಸರ್ ಲಿಸರೆಲ್ಯಾಂಡ್ ನಲ್ಲಿ ನಡೆಯಲಿದೆ. ಜತೆಗೆ ಕುವೈತ್, ಕತಾರ್, ಬಹ್ರೈನ್‌ನಲ್ಲಿಯೂ ಪ್ರಯೋಗಕ್ಕೆ ಸಿದ್ಧತೆ ನಡೆಯುತ್ತಿದೆ. ಮಸ್ಕತ್‌ನಲ್ಲಿ 480ನೇ ಪ್ರದರ್ಶನ ನಾಟಕ ಮೇ 12ರಂದು ಮಸ್ಕತ್‌ನ ರೂಮಿಯ ಅಲ್ ಫಲಾಜ್ ಹೊಟೇಲ್‌ನ ಗ್ರಾÂಂಡ್ ಹಾಲ್‌ನಲ್ಲಿ ಕನ್ನಡ ಹಾಗೂ ತುಳುವಿನಲ್ಲಿ 2 ಪ್ರದರ್ಶನ ಕಾಣಲಿದೆ. ಇದು 479 ಹಾಗೂ 480ನೇ ಪ್ರದರ್ಶನ. “ಕಾಂತಾರ’ ಸಿನೆಮಾದಲ್ಲಿ “ಗುರುವ’ ನಾಗಿ ಮಿಂಚಿರುವ ಸ್ವರಾಜ್ ಶೆಟ್ಟಿ ಶಿವದೂತೆ ಗುಳಿಗೆ ನಾಟಕದಲ್ಲಿ “ಗುಳಿಗ’ನಾಗಿ…















