Author: admin
ವಿದ್ಯಾಮಾತಾ ಅಕಾಡೆಮಿ ಅಧ್ಯಕ್ಷ ಭಾಗ್ಯೆಶ್ ರೈ ಪ್ರಥಮ ಬಾರಿಗೆ ಪುತ್ತೂರಿನಲ್ಲಿ ಆಯೋಜಿಸಿದ್ದ ಉದ್ಯೋಗ ಮೇಳವು ತುಂಬಾನೇ ಯಶಸ್ಸು ಕಂಡಿದೆ. ದೇಶ ಕಾಯೋ ವೀರ ಯೋಧರಿಗೂ, ರಾಜ್ಯದಲ್ಲಿ ಆರಕ್ಷಕರಾಗೋರಿಗೂ ಮಾತ್ರವಲ್ಲದೆ ನಾಡಿನ ಉತ್ತಮ ಪ್ರಜೆಗಳನ್ನು ತಯಾರು ಪಡಿಸುವಂತಹ ಶಿಕ್ಷಕ ವೃಂದವನ್ನೂ ಕೂಡ ಸಿದ್ದಪಡಿಸಿಕೊಡುತ್ತಿರುವ ಅಕಾಡೆಮಿ ಅಧ್ಯಕ್ಷರಿಗೆ ನನ್ನ ಸಹಸ್ರ ವಂದನೆಗಳು ಎಂದು ಪುತ್ತೂರಿನ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು. ಸೆ.28 ರಂದು ಸುಳ್ಯದಲ್ಲಿ ಪ್ರಾರಂಭಗೊಂಡ ಪುತ್ತೂರಿನ ವಿದ್ಯಾಮಾತಾ ಅಕಾಡೆಮಿ ಇದರ ಮೊದಲ ಶಾಖೆಯನ್ನು ದೀಪ ಪ್ರಜ್ವಲನೆ ಮೂಲಕ ಉದ್ಘಾಟಿಸಿ ಮಾತನಾಡಿದರು. ಬುದ್ದಿವಂತರ ಜಿಲ್ಲೆ ಎಂದೇ ಖ್ಯಾತಿ ಪಡೆದಿರುವ ದಕ್ಷಿಣ ಕನ್ನಡದಿಂದಲೇ ಮುಂದಿನ ದಿನಗಳಲ್ಲಿ ಐ.ಎ.ಎಸ್, ಐ.ಪಿ.ಎಸ್ ಹುದ್ದೆಗಳು ಸೃಷ್ಟಿಯಾಗಬೇಕು, ಇಲ್ಲವೆಂದಾದರೆ ಬುದ್ದಿವಂತರ ಜಿಲ್ಲೆಯೆಂದು ಕರೆಸಿಕೊಂಡು ಏನು ಪ್ರಯೋಜನ ಎಂದ ಅವರು, ಶೀಘ್ರದಲ್ಲೇ ವಿದ್ಯಾಮಾತಾ ಶಾಖೆ ಮಂಗಳೂರು, ಬಳಿಕ ಉಡುಪಿ ಯಲ್ಲೂ ಪ್ರಾರಂಭವಾಗಲಿ ಎಂದು ಹಾರೈಸಿದರು. ಪುತ್ತೂರು ರಾಮಕೃಷ್ಣ ಪ್ರೌಢಶಾಲಾ ಸಂಚಾಲಕ ಕಾವು ಹೇಮಾನಾಥ ಶೆಟ್ಟಿ ಮಾತನಾಡಿ, ಪುತ್ತೂರಿನಲ್ಲಿ ಯಶಸ್ವಿ ಸಾಧನೆ…
ದಕ್ಷಿಣ ಕನ್ನಡ ಜಿಲ್ಲಾ ಮಾಜಿ ಸೈನಿಕರ ಸಂಘ (ರಿ) ಮಂಗಳೂರು, ಇದರ ವಾರ್ಷಿಕ ಮಹಾಸಭೆ ಮಂಗಳೂರು ಬಾವುಟ ಗುಡ್ಡೆಯ ಸೈಂಟ್ ಅಲೋಶಿಯಸ್ ಕಾಲೇಜಿನ ಸಭಾಂಗಣದಲ್ಲಿ ಜರಗಿತು. ಹಾಲಿ ಅಧ್ಯಕ್ಷ ಸಾರ್ಜೆಂಟ್ ಶ್ರೀಕಾಂತ್ ಶೆಟ್ಟಿ ಬಾಳ 2023-25ರ ಸಾಲಿನ ಅಧ್ಯಕ್ಷರಾಗಿ ಅವಿರೋಧವಾಗಿ ಪುನರಾಯ್ಕೆಗೊಂಡರು. ಉಪಾಧ್ಯಕ್ಷರಾಗಿ ಕರ್ನಲ್ ಜಯಚಂದ್ರನ್, ಕಾರ್ಯದರ್ಶಿಯಾಗಿ ಕ್ಯಾಪ್ಟನ್ ದೀಪಕ್ ಅಡ್ಯಂತಾಯ, ಜೊತೆ ಕಾರ್ಯದರ್ಶಿಯಾಗಿ ಜೆಡಬ್ಲ್ಯೂಒ ಬಾಲಚಂದ್ರ, ಕೋಶಾಧಿಕಾರಿಯಾಗಿ ಪಿಒ ಸುಧೀರ್ ಪೈ ಮತ್ತು 20 ಮಂದಿ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು. ಲೆಫ್ಟಿನೆಂಟ್ ಕರ್ನಲ್ ಪ್ರಭಾಕರ್ ರೈಯವರು ಚುನಾವಣಾ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು. ಸಂಘದ ಚಟುವಟಿಕೆಗಳಲ್ಲಿ ವಿಶೇಷ ಸೇವೆ ಸಲ್ಲಿಸುತ್ತಿರುವ ಕರ್ನಲ್ ಭಂಡಾರಿ, ಕ್ಯಾಪ್ಟನ್ ದೀಪಕ್ ಅಡ್ಯಂತಾಯ ಮತ್ತು ಸಾರ್ಜೆಂಟ್ ಭಗವಾನ್ ದಾಸ್ ರವರನ್ನು ಸನ್ಮಾನಿಸಿ ಗೌರವಿಸಲಾಯಿತು. ಬ್ರಿಗೇಡಿಯರ್ ಐ ಎನ್ ರೈ ಮತ್ತು ಕರ್ನಲ್ ಶರತ್ ಭಂಡಾರಿಯವರು ಮಾಜಿ ಸೈನಿಕರಿಗೆ ಉಪಲಬ್ಧವಿರುವ ಸವಲತ್ತುಗಳ ಬಗ್ಗೆ ಮಾಹಿತಿ ಮತ್ತು ಸಲಹೆಗಳನ್ನು ನೀಡಿದರು. ನೂತನ ಅಧ್ಯಕ್ಷ ಸಾರ್ಜೆಂಟ್ ಶ್ರೀಕಾಂತ್ ಶೆಟ್ಟಿ…
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಪೋಷಕ, ಬಂಟರ ಸಂಘ ಮುಂಬಯಿಯ ಮಾಜಿ ಅಧ್ಯಕ್ಷ, ಬೊರಿವಿಲಿ ಎಜುಕೇಶನ್ ನ ಕಾರ್ಯಧ್ಯಕ್ಷ ಡಾ. ಪಿ ವಿ ಶೆಟ್ಟಿಯವರ 60 ನೇ ಹುಟ್ಟುಹಬ್ಬದ ಪ್ರಯುಕ್ತ ಬೊರಿವಿಲಿ ಮಹಿಷಮರ್ದಿನಿ ದೇವಸ್ಥಾನದಲ್ಲಿ ಪೂಜಾ ಕಾರ್ಯಗಳನ್ನು ನಡೆಸಿದರು. ಪೂಜಾ ಕಾರ್ಯದಲ್ಲಿ ಪಾಲ್ಗೊಂಡಿದ್ದ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಮತ್ತು ಚಂದ್ರಿಕಾ ಹರೀಶ್ ಶೆಟ್ಟಿಯವರು ಡಾ. ಪಿ ವಿ ಶೆಟ್ಟಿ ದಂಪತಿಯನ್ನು ಹೂಗುಚ್ಚ ನೀಡಿ ಅಭಿನಂದಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಮಹಾಪೋಷಕ ಬಿ ವಿವೇಕ್ ಶೆಟ್ಟಿ, ಪೋಷಕರಾದ ಸುಧಾಕರ್ ಹೆಗ್ಡೆ, ಶ್ರೀಮತಿ ರಂಜಿನಿ ಸುಧಾಕರ್ ಹೆಗ್ಡೆ, ಪದ್ಮನಾಭ್ ಪಯ್ಯಡೆ, ರವಿ ಶೆಟ್ಟಿ ಸಾಯಿ ಪ್ಯಾಲೇಸ್, ರತ್ನಾಕರ್ ಶೆಟ್ಟಿ ಮುಂಡ್ಕೂರು, ವಿಜಯ ಭಂಡಾರಿ ಮತ್ತು ಜಯ ಎ ಶೆಟ್ಟಿ ಶಿಮಂತೂರು ಉಪಸ್ಥರಿದ್ದು ಡಾ. ಪಿ ವಿ ಶೆಟ್ಟಿ ದಂಪತಿಯನ್ನು ಅಭಿನಂದಿಸಿದರು.
ಕಾಪು ಕ್ಷೇತ್ರ ನನ್ನ ಹುಟ್ಟೂರು. ನನ್ನ ಊರು ಮತ್ತು ನನ್ನ ಜನತೆಯ ಕಲ್ಯಾಣಕ್ಕಾಗಿ ನಿರಂತರವಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದೇನೆ. ಸಮಾಜ ಸೇವೆಯ ಮೂಲಕವಾಗಿ ಬೆಳೆದು ಬಂದಿರುವ ನನಗೆ ಬಿಜೆಪಿ ರಾಜಕೀಯ ಶಕ್ತಿ ಕೊಟ್ಟು ಶಾಸಕನಾಗಿ ಸ್ಪರ್ಧಿಸಲು ಅವಕಾಶ ಕೊಟ್ಟು, ಜನರ ಸಮಸ್ಯೆಗಳಿಗೆ ಸ್ಪಂಧಿಸುವ ದಾರಿಯನ್ನು ತೋರಿಸಿಕೊಟ್ಟಿದೆ. ನನ್ನ ಊರಿನ ಜನತೆ ನನ್ನ ಗೆಲುವಿಗಾಗಿ ಕೈ ಜೋಡಿಸಿದರೆ, ನನ್ನನ್ನು ಗೆಲ್ಲಿಸಿದ ಕ್ಷೇತ್ರದ ಜನರನ್ನು ಎಲ್ಲಿಯೂ ಸೋಲಲು ಬಿಡಲಾರೆ, ತಲೆ ತಗ್ಗಿಸಲು ಬಿಡುವುದಿಲ್ಲ. ಸತ್ಯ, ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಜನಸೇವೆ ಮಾಡುತ್ತೇನೆ ಎಂದು ಕಾಪು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು. ಕಾಪು ವಿಧಾನಸಭಾ ಕ್ಷೇತ್ರದ ವಿವಿಧ ಗ್ರಾಮ ಪಂಚಾಯತ್‌ಗಳಲ್ಲಿ ಮತಯಾಚನೆ ನಡೆಸಿ, ಪ್ರಚಾರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಬಿಲ್ಲವ ಸಮಾಜದ ಏಳಿಗೆಯೂ ಸೇರಿದಂತೆ ಸಮಸ್ತ ಹಿಂದುಳಿದ ವರ್ಗಗಳ ಜನರ ಕಲ್ಯಾಣಕ್ಕಾಗಿ ಬಿಜೆಪಿ ಸರಕಾರವು ಹಲವಾರು ಕೊಡುಗೆಗಳನ್ನು ನೀಡಿದೆ.…
ಶ್ರೀ ಕಟೀಲು ಮೇಳದಲ್ಲಿ ಕಳೆದ 42 ವರ್ಷ ಗಳಿಂದ ನಿರಂತರ ಯಕ್ಷಗಾನ ಕಲಾ ಸೇವೆ ಮಾಡುತ್ತಿರುವ ಅನುಭವಿ ಕಲಾವಿದ, ಮೇಳದ ಪ್ರಬಂಧಕ ಶ್ರೀ ಶ್ರೀಧರ ಪಂಜಾಜೆ ಅವರಿಗೆ 13, ಮೇ ಶನಿವಾರ ಕದ್ರಿ ಕಂಬಳ ಗುತ್ತು ನಲ್ಲಿ, ಡಾ.ಬಿ. ನಿಶಾಕಾಂತ ಶೆಟ್ಟಿ ಅವರ ಕಟೀಲು ಮೇಳದ ಸೇವೆ ಆಟದ ಸಂದರ್ಭದಲ್ಲಿ, ಕದ್ರಿ ಕಂಬಳ ಗುತ್ತು ಬಾಲಕೃಷ್ಣ ಶೆಟ್ಟಿ ಸ್ಮೃತಿ ಪ್ರಶಸ್ತಿ ನೀಡಲಾಗುವುದು ಎಂದು ಸಂಯೋಜಕ ಕದ್ರಿ ನವನೀತ ಶೆಟ್ಟಿ ತಿಳಿಸಿದ್ದಾರೆ. ಪುಂಡು ವೇಷಧಾರಿಯಾಗಿ ಪೌರಾಣಿಕ ಪಾತ್ರಗಳ ನಿರ್ವಹಣೆಯಲ್ಲಿ ಸಿದ್ದಿ ಪ್ರಸಿದ್ದಿ ಪಡೆದ ಸರಳ ಸಜ್ಜನಿಕೆಯ ವ್ಯಕ್ತಿತ್ವದ ಶ್ರೀಧರ್ ಅವರು ಕಲ್ಲಾಡಿ ವಿಠ್ಠಲ ಶೆಟ್ಟಿ ಅವರ ಪ್ರೇರಣೆ, ಮಾರ್ಗದರ್ಶನ ದಲ್ಲಿ ಯಕ್ಷಗಾನ ಕಲಿತು, ಮೇಳ ಸೇರಿದವರು.15 ವರ್ಷಗಳಿಂದ ಕಟೀಲು ಮೇಳದ ಪ್ರಭಂದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕದ್ರಿ ಶ್ರೀ ಮಂಜುನಾಥ ಯಕ್ಷಗಾನ ಸಂಘದಲ್ಲಿ ತಾಳಮದ್ದಳೆ ಅರ್ಥಧಾರಿಯಾಗಿ, ಸಂಘಟಕನಾಗಿ, ಮಂಗಳೂರು ನಗರದ ಹವ್ಯಾಸಿ ವಲಯದ ಹಿರಿಯ ಅರ್ಥಧಾರಿ ಗಳಾಗಿದ್ದ ಕೀರ್ತಿಶೇಷ ಕದ್ರಿ ಕಂಬಳ ಗುತ್ತು ಬಾಲಕೃಷ್ಣ…
ಬಂಟ್ವಾಳ ವಿಧಾನಸಭಾ ಕ್ಷೇತ್ರದ ಬಂಟನ ಆಯ್ಕೆ ನಡೆಯುವುದು ಬಂಟ ಸಮುದಾಯದ ಮಧ್ಯೆಯೇ. ಅದು ಇತ್ತೀಚಿನ ಟ್ರೆಂಡ್. ಅದಕ್ಕೇ ಈ ಕ್ಷೇತ್ರ ಖ್ಯಾತಿ. ಯಾಕೆಂದರೆ, 1985 ರಿಂದ ನಿರಂತರವಾಗಿ 8 ಅವಧಿಗೆ ಬಂಟ ಸಮುದಾಯದವರೇ ಶಾಸಕರಾಗಿ ಪ್ರತಿನಿಧಿಸಿದ್ದಾರೆ. ಸುಳ್ಯ ಪ.ಜಾತಿ ಮೀಸಲು ಕ್ಷೇತ್ರವಾಗಿರುವ ಕಾರಣ ಒಂದೇ ಸಮುದಾಯದವರು ಆಯ್ಕೆ ಯಾಗುವುದು ಸಾಮಾನ್ಯ. ಆದರೆ ಬಂಟವಾಳ ಕ್ಷೇತ್ರದಲ್ಲೂ ನಿರಂತರವಾಗಿ ಒಂದೇ ಸಮುದಾಯವರು ಶಾಸಕರಾಗುತ್ತಿರುವುದು ಜಿಲ್ಲೆಯಲ್ಲಿ ವಿಶೇಷ. 1985ರಲ್ಲಿ ಬಿ.ರಮಾನಾಥ ರೈ ಅವರು ಶಾಸಕರಾಗಿದ್ದು, 89, 94, 99, 2008 ಹಾಗೂ 2013ರಲ್ಲಿ ಗೆದ್ದರು. 2004ರಲ್ಲಿ ಬಿ.ನಾಗರಾಜ ಶೆಟ್ಟಿ, 2018ರಲ್ಲಿ ರಾಜೇಶ್ ಉಳಿಪ್ಪಾಡಿಗುತ್ತು ವಿಜಯಿಯಾದರು. ಇವರು ಮೂವರೂ ಒಂದೇ ಸಮುದಾಯದವರು. ಇದರೊಂದಿಗೆ ವಿಶೇಷವೆಂದರೆ 1989ರಿಂದ ಪಕ್ಷಗಳು ಬಿಜೆಪಿ ಹಾಗೂ ಕಾಂಗ್ರೆಸ್ ಎಂದಾದರೂ ಎರಡೂ ಕಡೆಯಿಂದ ಪರಸ್ಪರ ಜಿದ್ದಾಜಿದ್ದಿಗೆ ಇಳಿಯುವವರು ಬಂಟ ಸಮುದಾಯದವರೇ. ಬಿ.ರಮಾನಾಥ ರೈ ಅವರ ವಿರುದ್ಧ 1989ರಲ್ಲಿ ಎಚ್.ನಾರಾಯಣ ರೈ, 1994 ಹಾಗೂ 1999ರಲ್ಲಿ ಶಕುಂತಳಾ ಟಿ.ಶೆಟ್ಟಿ, 2004 ಹಾಗೂ 2008ರಲ್ಲಿ ಬಿ.ನಾಗರಾಜ ಶೆಟ್ಟಿ,…
ಕಲಾವಿದರು ಅಕಾಲವಾಗಿ ಕಾಲನ ಹೊಡೆತಕ್ಕೆ ಸಿಲುಕಿ ಅಪಮೃತ್ಯುವಿಗೆ ಈಡಾಗುತ್ತಿರುವುದನ್ನು ಕಾಣುತ್ತಿದ್ದೇವೆ, ಕೇಳುತ್ತಿದ್ದೇವೆ, ಅನುಭವಿಸುತ್ತಿದ್ದೇವೆ. ಪುತ್ರಶೋಕಂ ನಿರಂತರಂ ಎಂಬಂತೆ ಕಲಾವಿದರು ರಂಗದಿಂದ ಅಗಲಿದಾಗ ಕಲಾಮಾತೆಗೆ ಮಕ್ಕಳನ್ನು ಕಳಕೊಂಡ ಅನುಭವವಾಗುತ್ತದೆ. ಕಲಾಭಿಮಾನಿಗಳಿಗೂ, ಕಲಾಪೋಷಕರಿಗೂ ಇದೇ ಸೂತಕ ಭಾವ. ಹಾಗಂತ ಕಲಾವಿದರ ಮರಣಕ್ಕೆಲ್ಲಾ ಮೇಳದ ಯಜಮಾನರೇ ಕಾರಣ, ಕಾಲಮಿತಿಯೇ ಕಾರಣ ಎನ್ನುವುದು ಮೂರ್ಖತನದ ಹೇಳಿಕೆಯಾದೀತು. ಸ್ವಲ್ಪ ಕಟುವಾದರೂ ಕೆಲವು ವಾಸ್ತವಗಳನ್ನು ಅರಿಯಬೇಕು. ಎಲ್ಲೇ ಯಕ್ಷಗಾನ ಇರಲಿ ಅಲ್ಲಿ ಕಲಾವಿದರ ವಿಶ್ರಾಂತಿಗೆ ಬಿಡಾರದ, ವಸತಿ, ಊಟೋಪಹಾರದ ವ್ಯವಸ್ಥೆ ಮೊದಲಿನಿಂದಲೂ ನಡೆದುಬಂದಿದೆ. ಈಗ ಅದೇ ಮಾದರಿಯಲ್ಲಿ ವ್ಯವಸ್ಥೆ ಮಾಡಿದರೆ ಬೆಳಗಿನ ಉಪಾಹಾರಕ್ಕೆ, ಮಧ್ಯಾಹ್ನದ ಊಟಕ್ಕೆ, ರಾತ್ರಿ ಮಲಗಲು ಇರುವವರು ಎಷ್ಟು ಮಂದಿ ಎಂಬ ಲೆಕ್ಕ ಮಾಡಲು ಕೈ ಬೆರಳುಗಳೂ ಬೇಡ. ಕಲಾವಿದರ ಓಡಾಟಕ್ಕೆ ಬಹುತೇಕ ಎಲ್ಲ ಮೇಳಗಳಲ್ಲೂ ಬಸ್, ವಾಹನ ಇದೆ. ಹೋಗುವವರು ಎಷ್ಟು ಮಂದಿ? ಹಾಗಾದರೆ ಅಂತಹ ಕಲಾವಿದರ ಪೂರಕ ವ್ಯವಸ್ಥೆ ಕ್ರಮೇಣ ಮರೆಯಾಗಲು ಕಾರಣ ಯಾರು? ರಾತ್ರಿಯಿಂದ ಬೆಳಗಿನವರೆಗೆ ಚೌಕಿಯಲ್ಲಿದ್ದು, ಅಗತ್ಯ ಇದ್ದ ವೇಷಗಳನ್ನು ಮಾಡಿ…
ರಾಜ್ಯದಲ್ಲೇ ಪ್ರಥಮ ಹೈಟೆಕ್ ಬಸ್ ನಿಲ್ದಾಣವನ್ನು ಇಲ್ಲಿನ ಗೋವಿಂದ ದಾಸ್ ಕಾಲೇಜ್ ಮುಂಭಾಗ ಸೋಮವಾರ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ.ವೈ. ಭರತ್ ಶೆಟ್ಟಿ ಉದ್ಘಾಟಿಸಿದರು. ಈ ವೇಳೆ ಮಾತಾಡಿದ ಶಾಸಕರು, “ಸ್ಮಾರ್ಟ್ ಆಂಡ್ ಡಿಜಿಟಲ್ ಸುರತ್ಕಲ್” ಯೋಜನೆಯಡಿಯಲ್ಲಿ ಸುರತ್ಕಲ್ ಗೋವಿಂದ ದಾಸ್ ಕಾಲೇಜ್ ಮುಂಭಾಗ ರಾಜ್ಯದಲ್ಲೇ ಪ್ರಥಮವಾಗಿ ಸರ್ವ ರೀತಿಯಲ್ಲೂ ಸುಸಜ್ಜಿತವಾದ ಹೈಟೆಕ್ ಬಸ್ ನಿಲ್ದಾಣವನ್ನು ಲೋಕಾರ್ಪಣೆಗೊಳಿಸಲಾಗಿದೆ. ಶುದ್ಧ ಕುಡಿಯುವ ನೀರು, ಸಿಸಿ ಕೆಮರಾ ವ್ಯವಸ್ಥೆ ಸೇರಿದಂತೆ, ಮಹಿಳೆಯರು ಮತ್ತು ಹೆಣ್ಣುಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ತುರ್ತು ಸಂದರ್ಭದಲ್ಲಿ ನೇರವಾಗಿ ಸ್ಥಳೀಯ ಪೊಲೀಸ್ ಅಧಿಕಾರಿಗಳ ಮೊಬೈಲ್ ಗೆ ಸಂಪರ್ಕ ಕಲ್ಪಿಸುವಂತೆ ಎಮರ್ಜನ್ಸಿ ಕರೆ ವ್ಯವಸ್ಥೆಯನ್ನೂ ಮಾಡಲಾಗಿದೆ” ಎಂದು ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ. ವೈ. ಭರತ್ ಶೆಟ್ಟಿ ಹೇಳಿದರು. “ಯೋಜನೆಯ ಮುಂದುವರಿದ ಭಾಗವಾಗಿ ಸುರತ್ಕಲ್ ಬೀಚ್ ನಲ್ಲಿ ಪ್ರವಾಸಿಗರ ವಿಹಾರಕ್ಕೆ ಪಾರ್ಕ್, ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ. ಜನರು ಇವುಗಳನ್ನು ಯೋಗ್ಯ ರೀತಿಯಲ್ಲಿ ಬಳಸುವ ಮೂಲಕ ಸ್ವಚ್ಛತೆಯ ಕಡೆಗೆ ಗಮನ ನೀಡುವಂತಾಗಬೇಕು”…
ತುಳುಸಂಘ ಪಿಂಪ್ರಿ ಚಿಂಚ್ವಾಡ್ ಇದರ 10 ನೇ ವಾರ್ಷಿಕೋತ್ಸವ ಸಮಾರಂಭವು ಡಿ . 4 ರಂದು ರಾಮಕೃಷ್ಣ ಮೋರೆ ಸಭಾಗೃಹ ,ಚಿಂಚ್ವಾಡ್ ಇಲ್ಲಿ ಸಂಜೆ ಗಂಟೆ 3 ರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ . ಸಂಘದ ಅಧ್ಯಕ್ಷ ಹರೀಶ್ ಶೆಟ್ಟಿ ಕುರ್ಕಾಲ್ ಇವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದ್ದು ಮುಖ್ಯ ಅತಿಥಿಗಳಾಗಿ ಖ್ಯಾತ ವಾಗ್ಮಿ ,ಚಿಂತಕ ,ಪತ್ರಕರ್ತರಾದ ಶ್ರೀಕಾಂತ್ ಶೆಟ್ಟಿ ,ಗೌರವ ಅತಿಥಿಗಳಾಗಿ ಕರ್ನಾಟಕ ಸರಕಾರದ ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್ ಆಗಮಿಸಲಿದ್ದಾರೆ . ಈ ಸಂದರ್ಭ ಖ್ಯಾತ ಸಮಾಜಸೇವಕ, ಮೂಲಕ ಜನಾನುರಾಗಿಯಾಗಿರುವ ರವಿ ಕಟಪಾಡಿ ಇವರನ್ನು ವರ್ಷದ ವಿಶೇಷ ಸಾಧಕರನ್ನಾಗಿ ಸಮ್ಮಾನಿಸಲಾಗುವುದು . ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಸಮಿತಿ ಸದಸ್ಯರಿಂದ ನೃತ್ಯ ವೈವಿಧ್ಯಗಳು , ಹಾಗೂ ಮನೋರಂಜನೆಯಂಗವಾಗಿ ಶಿಮಂತೂರು ಚಂದ್ರಹಾಸ ಸುವರ್ಣ ನಿರ್ದೇಶನದಲ್ಲಿ ತುಳು ನಾಟಕ “ಆಲಡೆದ ಅಪ್ಪೆನ ಓಲಗ” ಪ್ರದರ್ಶನಗೊಳ್ಳಲಿದೆ . ಕಾರ್ಯಕ್ರಮದ ಕೊನೆಗೆ ಪ್ರೀತಿಭೋಜನದ ವ್ಯವಸ್ಥೆಯನ್ನು ಮಾಡಲಾಗಿದೆ . ಸಂಸ್ಥೆಯ ಕಾರ್ಯವೈಖರಿ ಕಳೆದ 10 ವರ್ಷಗಳ ಹಿಂದೆ…
ಮೂಡುಬಿದಿರೆ: ಶತಾಯುಷಿ ಮಿಜಾರುಗುತ್ತು ಆನಂದ ಆಳ್ವರ ಅಂತ್ಯಕ್ರಿಯೆಯು ಮಿಜಾರಿನ ಸ್ವಗೃಹದ ವಠಾರದಲ್ಲಿ ಬುಧವಾರ ನಡೆಯಿತು. ಬೆಳಿಗ್ಗೆ 9.30ರಿಂದ 11.45 ತನಕ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಬಂಟ ಸಮುದಾಯದ ಸಕಲ ವಿಧಿವಿಧಾನಗಳನ್ನು ಪೂರೈಸಿದ ನಂತರ ಸ್ವಗೃಹದ ತೋಟದಲ್ಲಿ ಪುತ್ರರು ಚಿತೆಗೆ ಅಗ್ನಿಸ್ಪರ್ಶ ಮಾಡಿದರು. ಧರ್ಮಸ್ಥಳದ ಧರ್ಮಾಧಿಕಾರಿ ಡಾ ಡಿ ವೀರೇಂದ್ರ ಹೆಗ್ಗಡೆ, ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ, ಕೇಮಾರು ಈಶ ವಿಠ್ಠಲ್‍ದಾಸ ಸ್ವಾಮೀಜಿ ಸಂತಾಪ ವ್ಯಕ್ತ ಪಡಿಸಿದರು. ಮಾಣಿಲ ಶ್ರೀಧಾಮದ ಮೋಹನದಾಸ ಸ್ವಾಮೀಜಿ, ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ, ಧರ್ಮಗುರುಗಳಾದ ರೆ. ಫಾದರ್ ಗೋಮ್ಸ್, ವಿಧಾನಸಭಾಧ್ಯಕ್ಷ ಯು ಟಿ ಖಾದರ್, ಸಂಸದ ನಳಿನಿ ಕುಮಾರ್ ಕಟೀಲ್, ಮೂಡುಬಿದಿರೆ ಶಾಸಕ ಉಮಾನಾಥ್ ಎ ಕೋಟ್ಯಾನ್, ಮಾಜಿ ಸಚಿವರುಗಳಾದ ಕೆ ಅಭಯಚಂದ್ರ ಜೈನ್, ಬಿ. ರಮಾನಾಥ್ ರೈ, ವಿನಯ್ ಕುಮಾರ್ ಸೊರಕೆ, ಬಿ ನಾಗರಾಜ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ, ಮಾಜಿ ವಿಧಾನ ಪರಿಷತ್ ಸದಸ್ಯರಾದ ಕ್ಯಾಪ್ಟನ್…














