Author: admin
ಮುಂಬಯಿಯಲ್ಲಿ ನೆಲೆಸಿ ಡೊಂಬಿವಲಿ ಬಂಟರ ಸಂಘದಲ್ಲಿ ವಿವಿಧ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿಭಾಯಿಸಿ, ಓರ್ವ ಉತ್ತಮ ಸಂಘಟಕಿಯಾಗಿ, ಸಮಾಜಸೇವೆ ಮಾಡುತ್ತಿರುವ ಸದಾ ಹಸನ್ಮುಖಿ, ಮುಗ್ದ ಮನಸ್ಸಿನ ಶ್ರೀಮತಿ ಉದಯಾ ಶೆಟ್ಟಿಯವರಿಗೆ ಸಮಸ್ತ ಬಂಟ ಸಮಾಜದ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇವೆ.
ಮೀರಾ ಭಾಯಂದರ್ ಅವಳಿ ನಗರ ಮಹಾರಾಷ್ಟ್ರದಲ್ಲೊಂದು ಪುಟ್ಟ ಮಂಗಳೂರು ಎಂದೂ, ಥಾಣೆ ಜಿಲ್ಲೆಯ ಸಾಂಸ್ಕೃತಿಕ ನಗರವೆಂದೂ ಪ್ರಸಿದ್ಧಿ ಪಡೆದಿದೆ. ಇಲ್ಲಿ ನಮ್ಮೂರ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ವಾಸ್ತವ್ಯ ಹೂಡಿದ್ದು, ಸಂಬಂಧಿಸಿದ ಸಂಘ ಸಂಸ್ಥೆಗಳ ಸಂಖ್ಯೆಯೂ ಇನ್ನೂರು ಮೀರುತ್ತಿದೆ. ನಮ್ಮ ಸಮುದಾಯದ ಹೆಚ್ಚಿನ ಸಂಘಟಕರು, ಸಮಾಜ ಸೇವಕರು, ರಾಜಕೀಯ ನಾಯಕರು, ಧಾರ್ಮಿಕ ಸಾಂಸ್ಕೃತಿಕ ಕ್ಷೇತ್ರದ ಮುಂದಾಳುಗಳು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಹಾಗೂ ಸಾಕಷ್ಟು ಪ್ರಭಾವಿಗಳೂ ಇರುವುದರಿಂದ ಇಲ್ಲಿ ನಾಯಕತ್ವಕ್ಕೆ ಸ್ಫರ್ಧಿಗಳೂ ಹೆಚ್ಚು. ಒಂದಕ್ಕಿಂತ ಹೆಚ್ಚು ಸಮಾನ ಯೋಗ್ಯತೆ ಇರುವ ಈ ಪ್ರದೇಶದಲ್ಲಿ ಹೆಚ್ಚಿನ ಸಂದರ್ಭಗಳಲ್ಲಿ ನಮ್ಮ ಕೇಂದ್ರ ಸಮಿತಿಯ ಮುಖ್ಯಸ್ಥರು ಹಾಗೂ ಸ್ಥಾನೀಯ ಮುಖ್ಯಸ್ಥರೊಂದಿಗೆ ಸೌಹಾರ್ದದ ಸಮಾಲೋಚನೆ ನಡೆಸಿ ನಾಯಕತ್ವದ ಆಯ್ಕೆಯಾಗುತ್ತದೆ. ಹಾಗೆ ತುಸು ವಿಳಂಬವಾದರೂ ಕೊನೆಗೂ ಸಮಿತಿಗೆ ಸಮರ್ಥ ನಾಯಕತ್ವದ ಆಯ್ಕೆಯಾಗಿದೆ. ಬಂಟರ ಸಂಘ ಮೀರಾ ಭಾಯಂದರ್ ಪ್ರಾದೇಶಿಕ ಸಮಿತಿಯ ಈ ಸಾಲಿನ ಮೂರು ವರ್ಷಗಳ ಅವಧಿಗೆ ಗುತ್ತಿನಾರ್ ರವೀಂದ್ರ ಶೆಟ್ಟಿ ಬಳ್ಕುಂಜೆ ಗುತ್ತು ಅವರು ಆಯ್ಕೆಯಾಗಿದ್ದಾರೆ. ಕರ್ನಾಟಕ ರಾಜ್ಯದ ಉಡುಪಿ…
ಅಗೋಳಿ ಮಂಜಣ್ಣ ತುಳುನಾಡಿನ ಭೀಮನೆಂದು ಪ್ರಸಿದ್ಧನಾದ ಐತಿಹಾಸಿಕ ಪುರುಷ. ಅಪ್ರತಿಮ ಶಕ್ತಿ ಸಾಹಸಗಳಿಗೆ ಹೆಸರಾದ ವ್ಯಕ್ತಿ. ಅದ್ಭುತ ಜೀರ್ಣಶಕ್ತಿಯುಳ್ಳ ತಿನಿಸಿಗ. ‘ಅಗೋಳಿ’ ಎಂಬ ತುಳು ಶಬ್ದಕ್ಕೆ ಅರ್ಥ ಗುಡಾಣ, ಹಂಡೆ ಅಥವಾ ಅಂತಹದೇ ಭಾರಿ ಗಾತ್ರದ ಪಾತ್ರೆ ಎಂದು. ಆ ಪಾತ್ರೆಯಲ್ಲಿ ಊಟ ಮಾಡುವವನು ಅಗೋಳಿ ಮಂಜಣ್ಣ. ಮಂಗಳೂರು ಆಕಾಶವಾಣಿಯ ಕೃಷಿರಂಗ ಕಾರ್ಯಕ್ರಮದಲ್ಲಿ ಅಗೋಳಿ ಮಂಜಣ್ಣನ ಕಥಾನಕವನ್ನು ತುಳು-ಕಬಿತೆ ರೂಪದಲ್ಲಿ ಅಪರೂಪಕ್ಕೊಮ್ಮೆ ಪ್ರಸಾರಮಾಡುತ್ತಾರೆ. ಅದರಲ್ಲಿ ಮಂಜಣ್ಣನ ಅಪೆಟೈಟ್ ಹೇಗಿತ್ತು ಎಂಬ ವರ್ಣನೆಯ ಸಾಲುಗಳನ್ನು ನೋಡಿ: ಬಜಿಲ್ ಒಂಜಿ ಕಳಾಸೆ ಆಂಡಾಲಾ ಒರೊರೊ ಅರಾ ಅರಾ ಆಪುಂಡ್ ಗೋಂಟ್ ತಾರಾಯಿ ಇರ್ವತ್ತೈನ್‌ಲಾ ಬಾಯಿಡೆ ಗಾಣ ಪಾಡುಂಡ್… ಅವಲಕ್ಕಿ ಒಂದು ಕಳಸಿಗೆಯಷ್ಟಿದ್ದರೂ (1 ಕಳಸಿಗೆ ಅಂದರೆ 14 ಸೇರು; 3 ಕಳಸಿಗೆ ಅಂದರೆ 1 ಮುಡಿ) ಕೆಲವೊಮ್ಮೆ ಕಡಿಮೆಯೇ ಆಗುತ್ತದೆ. ಒಣತೆಂಗಿನಕಾಯಿ ಇಪ್ಪತ್ತೈದು ಇದ್ದರೂ ಬಾಯಿಯಲ್ಲೇ ಗಾಣಹಾಕುತ್ತಾನೆ. ಸುಮಾರು ನಾಲ್ಕೈದು ತಲೆಮಾರುಗಳ ಹಿಂದೆ ಮಂಗಳೂರಿನ (ತುಳುವಿನಲ್ಲಿ ‘ಕುಡ್ಲ’ ಎನ್ನುವುದು) ಹತ್ತಿರದ ತೊರ್ತಲ್ತ್ ಎಂಬ ಹೆಸರಿನ…
ಯಕ್ಷಧ್ರುವ ಪಟ್ಲ ಪೌಂಡೇಶನ್ ವತಿಯಿಂದ ತೋಕೂರು ರಾಮಣ್ಣ ಶೆಟ್ಟಿ ಮೆಮೋರಿಯಲ್ ಶಾಲೆಯಲ್ಲಿ ನಡೆದ ಯಕ್ಷದ್ರುವ ಯಕ್ಷ ಶಿಕ್ಷಣ ಕಾರ್ಯಕ್ರಮ ಉದ್ಘಾಟನೆ ನಡೆಯಿತು. ಈ ಸಂದರ್ಭ ಶಾಲೆಯ ಪ್ರಾಂಶುಪಾಲರನ್ನು ಪಟ್ಲ ಫೌಂಡೇಶನ್ ವತಿಯಿಂದ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಯಕ್ಷದ್ರುವ ಯಕ್ಷ ಶಿಕ್ಷಣದ ಪ್ರಧಾನ ಸಂಚಾಲಕರಾದ ವಾಸುದೇವ ಐತಾಳ್, ಮೀನಾಕ್ಷಿ ಐತಾಳ್, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಸ್ವರಾಜ್ ಶೆಟ್ಟಿ, ಶಾಲಾ ಪ್ರಾಂಶುಪಾಲೆ ಶ್ರೀ ಲತಾ ರಾವ್, ಸತೀಶ್ ಶೆಟ್ಟಿ ಎಕ್ಕಾರು, ಉಪಸ್ಥಿತರಿದ್ದರು. ಅಜಿತ್ ಕೆರೆಕಾಡು ಸ್ವಾಗತಿಸಿ ಶಿಕ್ಷಕಿ ವಾಣಿ ಧನ್ಯವಾದ ಸಮರ್ಪಿಸಿದರು. ಶಿಕ್ಷಕಿ ಸುರೇಖ ನಿರೂಪಿಸಿದರು.
ಸ್ವಾವಲಂಬಿ ಮಕ್ಕಳನ್ನು ನಾವು ಹೇಗೆ ಬೆಳೆಸಬಹುದು? ಅಂದರೆ ಯಾವುದೇ ಕೆಲಸಗಳಾದರೂ ಮುಂಚೂಣಿಯಲ್ಲಿ ನಿಲ್ಲುವ, ಗಟ್ಟಿತನ ಹೊಂದಿರುವ ಮತ್ತು ಯಾವುದೇ ಸಮಸ್ಯೆಗಳನ್ನು ಬಗೆಹರಿಸುವಂಥ ಮಕ್ಕಳನ್ನು ನಾವು ಹೇಗೆ ಬೆಳೆಸುತ್ತೇವೆ? ಸೇಫ್ ಝೋನ್‌ನಿಂದ ಹೊರಗೆ ನೋಡುವ ಜೀವನದಲ್ಲಿ ರಿಸ್ಕ್ ತೆಗೆದುಕೊಳ್ಳಲು ಮುಂದೆ ಬರುವಂಥ ಧೈರ್ಯವನ್ನು ನಾವು ಮಕ್ಕಳಲ್ಲಿ ಬೆಳೆಸಬೇಕಲ್ಲವೇ? ನಾನು ಮೂರು ಮಕ್ಕಳ ತಾಯಿ. ನನ್ನಂತೆಯೇ ನೀವು ಕೂಡ ಪೋಷಕರಾಗಿದ್ದರೆ ಇದೇ ರೀತಿಯ ಪ್ರಶ್ನೆಗಳನ್ನು ಕೇಳುತ್ತಿದ್ದೀರಿ. ನನಗೆ ಗೊತ್ತಿದೆ; ಎಲ್ಲ ತಂದೆ-ತಾಯಂದಿರು ತಮ್ಮ ಮಕ್ಕಳನ್ನು ಹೀಗೆಯೇ ಬೆಳೆಸಬೇಕು ಅಂದುಕೊಂಡಿರುತ್ತಾರೆ. ಆದರೆ ಎಲ್ಲೋ ಒಂದು ಕಡೆ ನಾವು ಇದಕ್ಕೆ ವಿರುದ್ಧವಾಗಿ ಹೋಗುತ್ತಿದ್ದೇವೆ ಎಂದೆನಿಸುತ್ತಿದೆ. ನಮ್ಮ ಮಕ್ಕಳು ಖುಷಿಯಾಗಿ ಮತ್ತು ಯಶಸ್ವಿಯಾಗಿ ಬೆಳೆಯಲಿ ಎಂದು ಆಶಿಸುತ್ತೇವೆ. ಹೀಗಾಗಿಯೇ ನಾವು ಅವರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಗುರಾಣಿಯಾಗಿ ನಿಂತು ಬೆಳೆಸುತ್ತೇವೆ. ಅವರ ಆತ್ಮಗೌರವದ ಬಗ್ಗೆ ಆತಂಕವಿದ್ದು, ಅವರು ಏನು ಮಾಡಿದರೂ ನಾವು ಹೊಗಳಲು ಶುರು ಮಾಡುತ್ತೇವೆ. ಕೆಲವೊಂದಕ್ಕೆ ಅವರು ಸಮರ್ಥರಿದ್ದಾರೋ ಇಲ್ಲವೋ ಎಂಬುದನ್ನೂ ನೋಡುವುದಿಲ್ಲ. ನಾವು ಅಂಥ ಕೆಲಸ…
ಐ-ಲೇಸಾದ ಜೂಮ್ ವೇದಿಕೆಯಲ್ಲಿ ನೀರಿಳಿಸಿ, ನೀರುಳಿಸಿ ಜನಜಾಗೃತಿ ಕಾರ್ಯಕ್ರಮ ಜು.02: ಸಸ್ಯ ಮತ್ತು ಜೈವಿಕ ವಿಜ್ಞಾನಿ ಡಾ| ಕೇಶವ ಹೆಗ್ಡೆ ಕೊರ್ಸೆ ಅವರಿಂದ ಉಪನ್ಯಾಸ
ಮುಂಬಯಿ (ಆರ್‌ಬಿಐ), ಜೂ.28: ಜಲ ಸಂರಕ್ಷಣೆಯ ಬಗ್ಗೆ , ಕೆರೆಗಳ ಪುನರುಜ್ಜೀವನದ ಬಗ್ಗೆಸಂಬಂಧಪಟ್ಟ ತಜ್ಞ ಸಂಪನ್ಮೂಲ ವ್ಯಕಿಗಳ ಭಾಗವಹಿಸುವಿಕೆಯೊಂದಿಗೆ ಸತತ ಕಾಯಕ್ರಮವನ್ನು ಮಾಡುತ್ತಿರುವ ಐ-ಲೇಸಾ ದಿ ವಾಯ್ಸ್ ಆಫ್ ಓಷನ್ ಸಂಸ್ಥೆ ಈ ಸಾರಿ ಮಳೆ ನೀರು ಕೊಯ್ಲು, ಸಂಗ್ರಹಣೆ ಮತ್ತು ನೀರನ್ನು ಭೂಮಿಗೆ ಇಂಗಿಸುವ ಬಗ್ಗೆ ಗಮನ ಹರಿಸಿದೆ. ಐ-ಲೇಸಾವು ಜು.೦2, ಭಾನುವಾರ ಸಂಜೆ 7:30 ಗಂಟೆಗೆ ಝೂಮ್ ವಸ್ತುತಃ ವೇದಿಕೆಯಲ್ಲಿ ಮಳೆ ನೀರು ಕೊಯ್ಲು ಮತ್ತು ನೀರು ಇಂಗಿಸುವಿಕೆ ಬಗ್ಗೆ ಜನಜಾಗೃತಿ ಕಾರ್ಯಕ್ರಮ ಆಯೋಜಿಸಿದೆ. ಶಿರಸಿಯ ಸಂರಕ್ಷಣಾ ಜೀವನ ಶಾಸ್ತ್ರ ಮತ್ತು ಸುಸ್ಥಿರ ಅಭಿವೃದ್ಧಿ ಅಧ್ಯಯನ ಕೇಂದ್ರದ ನಿರ್ದೇಶಕ, ಪರಿಸರ ಪ್ರೇಮಿಸಸ್ಯ ಮತ್ತು ಜೈವಿಕ ವಿಜ್ಞಾನಿ ಡಾ| ಕೇಶವ ಹೆಗ್ಡೆ ಕೊರ್ಸೆ ಇವರು ನೀರಿನ ಕೊಯ್ಲಿನ ಪ್ರಾಮುಖ್ಯತೆ, ಮನೆ ಮನೆಗಳಲ್ಲಿ ಮಳೆ ನೀರಿನ ಸಂಗ್ರಹಣೆ ಮತ್ತು ಬಳಕೆ ಹಾಗೂ ಮಳೆಯ ನೀರನ್ನು ಅಂತರ್ಜಲವಾಗಿ ಭೂಮಿಗಿಳಿಸುವ ವೈಜ್ಞಾನಿಕ ಪ್ರಕ್ರಿಯೆಗಳ ಬಗ್ಗೆ ತಿಳಿಸಿ ಕೊಡಲಿದ್ದಾರೆ. ಐ-ಲೇಸಾದ ಅನಂತ್ ರಾವ್ ನಡೆಸಲಿದ್ದಾರೆ. ಆಸಕ್ತ ನಾಗರೀಕರು,…
ಪೊರ್ಕೋಡಿ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಪರಿಸರದಲ್ಲಿ ಸೋಮವಾರ ಒಂದೆಡೆ ಉಳುಮೆ, ಇನ್ನೊಂದೆಡೆ ನೇಜಿ ಕೀಳುವ ಹಾಗೂ ನಾಟಿ ಮಾಡುವ ಕಾರ್ಯ ಆರಂಭವಾಗಿದೆ. ಮಳೆ ಕೊಂಚ ತಡವಾದರೂ ಕಾದು ಸ್ವಲ್ಪ ಮಳೆಗೆ ತನ್ನ ಅನಿ ವಾರ್ಯ, ಅಗತ್ಯದ ಕಾಯಕವನ್ನು ಬಿಡುವಂತಿಲ್ಲವಾಗಿದೆ. ಸಮಯಕ್ಕೆ ತಕ್ಕಂತೆ ಹೊಂದಿಕೊಂಡು ಕೃಷಿಗೆ ಪ್ರಾಧಾನ್ಯವನ್ನು ನೀಡಬೇಕಾಗಿದೆ. ಪೊರ್ಕೋಡಿ ಶ್ರೀ ಸೋಮನಾಥೇಶ್ವರ ದೇವಸ್ಥಾನದ ವತಿಯಿಂದ ಚೌತಿಯಂದು ನಡೆಯುವ ತೆನೆ ಹಬ್ಬಕ್ಕೆ ತೆನೆಯನ್ನು ನೀಡಲು ಈ ಗದ್ದೆ ಉಳುಮೆ ಮತ್ತು ನಾಟಿ. ಪ್ರತಿ ವರ್ಷದಂತೆ ಈ ಬಾರಿಯೂ ದೇವಸ್ಥಾನದ ವತಿಯಿಂದ ಭಕ್ತರಿಗೆ ತೆನೆಯನ್ನು ನೀಡಲು ಈಗಾಗಲೇ ಸಿದ್ಧತೆ ಮಾಡಲಾಗಿದೆ. ಕಳೆದ ಬಾರಿ 2 ಸಾವಿರ ಕ್ಕಿಂತಲೂ ಅಧಿಕ ಭಕ್ತರು ದೇಗುಲದಿಂದ ತೆನೆಯನ್ನು ಮನೆಗೆ ಕೊಂಡೊಯ್ದಿದ್ದರು. ಈ ಬಾರಿಯೂ ಅದಕ್ಕಿಂತಲೂ ಹೆಚ್ಚಿನ ಭಕ್ತರು ತೆನೆಯನ್ನು ಕೊಂಡೊಯ್ಯಲು ಬರುವ ನಿರೀಕ್ಷೆ ಇದೆ. 75 ಸೆಂಟ್ಸ್ ಗದ್ದೆಯಲ್ಲಿ ಭತ್ತದ ಕೃಷಿ ಈ ಬಾರಿ 75 ಸೆಂಟ್ಸ್ ಗದ್ದೆಯಲ್ಲಿ ಭತ್ತ ಬೇಸಾಯಕ್ಕೆ ತಯಾರು ಮಾಡಲಾಗಿದೆ. ಇದು ವರ್ಷ ಕಳೆದಂತೆ…
ಆಸ್ಪತ್ರೆ, ಶಿಕ್ಷಣ, ತಂತ್ರಜ್ನಾನ, ಪ್ರವಾಸೋದ್ಯಮ, ಸರಕಾರಿ ಕಚೇರಿಗಳ ಸಂಕೀರ್ಣ, ಕೈಗಾರಿಕೆ ಅಭಿವೃದ್ಧಿ, ವಸತಿ – ನಿವೇಶನ ಸಹಿತವಾಗಿ ಅಭಿವೃದ್ಧಿಗೆ ಪೂರಕವಾಗುವ ನವ ಕಾಪು ನಿರ್ಮಾಣ ಘೋಷಣೆಯ ದೂರದರ್ಶಿತ್ವದ ಚಿಂತನೆಯುಳ್ಳ ಕಾಪು ಕ್ಷೇತ್ರದ ಬಿಜೆಪಿ ಪ್ರಣಾಳಿಕೆಯನ್ನು ಬುಧವಾರ ಬಿಡುಗಡೆಗೊಳಿಸಲಾಯಿತು. ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಸರ್ವ ವ್ಯಾಪಿ ಮತ್ತು ಸರ್ವ ಸ್ಪರ್ಷಿಯಾಗಿ ಕ್ಷೇತ್ರದ ಜನತೆಯ ಅಗತ್ಯತೆಗಳನ್ನು ಪಟ್ಟಿ ಮಾಡಿಕೊಂಡು, ಜನಾಭಿಪ್ರಾಯದಂತೆ ನವ ಕಾಪು ನಿರ್ಮಾಣದ ಸಂಕಲ್ಪಕ್ಕೆ ಪೂರಕವಾಗುವ ಪ್ರಣಾಳಿಕೆಯನ್ನು ಸಿದ್ಧ ಪಡಿಸಲಾಗಿದೆ. ನಾಗರಿಕರು ಮತ್ತು ಜನಪ್ರತಿನಿಽಗಳ ಅಭಿಪ್ರಾಯ, ಸಲಹೆ, ಸೂಚನೆಗಳೊಂದಿಗೆ ಕಾಪು ಕ್ಷೇತ್ರವನ್ನು ರಾಜ್ಯಕ್ಕೇ ಮಾದರಿಯಾಗುವಂತಹ ಕ್ಷೇತ್ರವನ್ನಾಗಿ ಪರಿವರ್ತಿಸಬೇಕೆಂಬ ಕಲ್ಪನೆಯಿದೆ. ಅದಕ್ಕಾಗಿ ಬಿಜೆಪಿಯನ್ನು ಬಹುಮತದಿಂದ ಗೆಲ್ಲಿಸಿ, ಮೋದಿ ಅವರ ಕೈ ಬಲಪಡಿಸಲು ಪ್ರೋತ್ಸಾಹ ನೀಡುವಂತೆ ವಿನಂತಿಸಿದರು. ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಮಾತನಾಡಿ, ಕಾಪು ಕ್ಷೇತ್ರದ ಹೆಜಮಾಡಿಯಿಂದ ಹಿಡಿದು ಹಿರಿಯಡಕದವರೆಗಿನ ಎಲ್ಲ ಪ್ರದೇಶಗಳ ಅಭಿವೃದ್ಧಿಗೆ ಪೂರಕವಾಗುವಂತೆ ಪ್ರಣಾಳಿಕೆ ಸಿದ್ಧ ಪಡಿಸಲಾಗಿದೆ. ರಾಜ್ಯ ಮತ್ತು ಕೇಂದ್ರದಲ್ಲಿ…
ನಮ್ಮ ಬಾಲ್ಯದಲ್ಲಿ ಸಂಬಂಧಿಕರು ಮನೆಗೆ ಬಂದರೆ ಎರಡು ಮೂರು ದಿನವಾದರೂ ಇರುತ್ತಿದ್ದರು. ತಿನಿಸುಗಳು ಕೂಡ ಎಂದಿನಂತೆ ಇರುತ್ತಿದ್ದವು. ಅವರಿಗಾಗಿಯೇ ವಿಶೇಷವಾಗಿ ಏನನ್ನೂ ಮಾಡುತ್ತಿರಲಿಲ್ಲ. ಹೊರಾಂಗಣ ಹಾಸಿಗೆಗಳ ಮೇಲೆ ಮಲಗುವುದು. ಹರಟೆ ಹೊಡೆಯುವುದು ಮತ್ತು ಮಲಗುವುದು. ಮೂರ್ನಾಲ್ಕು ದಿನದ ನಂತರ ಅವರು ಹಿಂತಿರುಗುವ ಹೊತ್ತಿಗೆ ಅವರ ಚಪ್ಪಲಿಗಳು ಎಲ್ಲೂ ಕಾಣುತ್ತಿರಲಿಲ್ಲ. ಮನೆಯ ಎಲ್ಲಾ ಕಡೆ ಹುಡುಕಾಡಿದರೂ ಪತ್ತೆಯಾಗುತ್ತಿರಲಿಲ್ಲ. ಅಷ್ಟರಲ್ಲಿ ಅವರು ಹತ್ತಿ ಹೊರಡಬೇಕಾದ ಬಸ್ಸು ಬಂದು ಹೋಗಿ ಬಿಡುತ್ತಿತ್ತು. ಆಗ ದಿನಕ್ಕೆ ಒಂದೋ ಎರಡೋ ಬಸ್ ಸಂಚಾರವಿರುತ್ತಿತ್ತು. ಕೆಲವು ಹಳ್ಳಿಗಳಲ್ಲಿ ಅವೂ ಇರಲಿಲ್ಲ. ಬಸ್ಸು ಹೊರಟ ತಕ್ಷಣ ಚಪ್ಪಲಿ ಕಾಣಿಸುತ್ತಿತ್ತು. ಸಂಬಂಧಿಕರು ಇನ್ನಷ್ಟು ದಿನ ಇರಲಿ ಎಂಬ ಆಸೆಯಿಂದ ಕುಟುಂಬದ ಸದಸ್ಯರು ಚಪ್ಪಲಿಯನ್ನು ಬಚ್ಚಿಡುತ್ತಿದ್ದರು. ಆದರೆ ಈಗ ತದ್ವಿರುದ್ಧ ಬಂದವರು ಯಾವಾಗ ಹೊರಡುವರು ಎಂಬ ಕಾತುರ. ಬರು ಬರುತ್ತಾ ನಾವು ಆಧುನಿಕರಾದ ನಂತರ ಬಂಧುತ್ವ, ಸಂಬಂಧಗಳು ಇನ್ನೂ ಶಿಥಿಲಗೊಳ್ಳುತ್ತಿವೆ. ಮತ್ತು ಕಳೆದ ಎರಡ್ಮೂರು ದಶಕಗಳಲ್ಲಿ ರಕ್ತ ಸಂಬಂಧಗಳೇ ಶಾಪವಾಗಿ ಪರಿಣಮಿಸುತ್ತಿವೆ, ಅವಿಭಕ್ತ, ಕೂಡು…
ಕುಂಬಳೆ ಸಮೀಪದ ಪುತ್ತಿಗೆಯ ಪಂಜಳ ನಿವಾಸಿ, ನಿವೃತ್ತ ಮುಖ್ಯೋಪಾಧ್ಯಾಯ, ಹಿರಿಯ ರಂಗಕರ್ಮಿ ಬಾಯಾರುಗುತ್ತು ಮಂಜುನಾಥ ಭಂಡಾರಿ (83) ಅವರು ಜ. 26ರಂದು ಸ್ವಗೃಹದಲ್ಲಿ ನಿಧನ ಹೊಂದಿದರು. ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಬಿಪಿಎಂ ಭಂಡಾರಿ ಎಂದೇ ಖ್ಯಾತರಾಗಿದ್ದ ಇವರು 26 ವರ್ಷಗಳ ಕಾಲ ಕಳತ್ತೂರಿನ ಎಎಸ್‌ಬಿಎಸ್ ಇಚ್ಲಂಪಾಡಿ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದು, 1995ರಲ್ಲಿ ಮುಖ್ಯೋಪಾಧ್ಯಾಯರಾಗಿ ನಿವೃತ್ತಿ ಹೊಂದಿದ್ದರು. ಕರ್ನಾಟಕ ನಾಟಕ ಅಕಾಡೆಮಿ ನೇತೃತ್ವದಲ್ಲಿ ಉಡುಪಿಯ ಎಂಜಿಎಂ ಕಾಲೇಜಿನಲ್ಲಿ ನಡೆದಿದ್ದ ಅದ್ದೂರಿ ಕಾರ್ಯಕ್ರಮವೊಂದರಲ್ಲಿ ಇವರನ್ನು ರಂಗಸೇವೆಗಾಗಿ ಸಮ್ಮಾನಿಸಲಾಗಿತ್ತು. ಪ್ರಸ್ತುತ ಸುವರ್ಣ ಸಂಭ್ರಮದಲ್ಲಿರುವ ಪುತ್ತಿಗೆಯ ಎಸ್‌ಕೆಎಸ್ ಆರ್ಟ್ಸ್ ಆ್ಯಂಡ್ ನ್ಪೋರ್ಟ್ಸ್ ಕ್ಲಬ್‌ನ ಸ್ಥಾಪಕ ಸದಸ್ಯರಾಗಿದ್ದರು. ಬಂಟರ ಸಂಘದ ಪುತ್ತಿಗೆ ಪಂಚಾಯತ್ ಘಟಕದ ಅಧ್ಯಕ್ಷರಾಗಿ, ಕಾಸರಗೋಡು ಜಿಲ್ಲಾ ಬ್ಯಾಂಕಿನ ನಿರ್ದೇಶಕರಾಗಿ, ಅಂಗಡಿಮೊಗರು ಸಹಕಾರಿ ಬ್ಯಾಂಕಿನ ನಿರ್ದೇಶಕರಾಗಿ, ಪುತ್ತಿಗೆ ಶ್ರೀ ಸುಬ್ರಾಯ ದೇವಸ್ಥಾನದ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶ ಸಮಿತಿಯ ಕಾರ್ಯಾಧ್ಯಕ್ಷರಾಗಿದ್ದ ಇವರು ತಾಳಿಪ್ಪಾಡಿ ಶ್ರೀ ಧೂಮಾವತಿ ದೈವಸ್ಥಾನದ ಜೀರ್ಣೋದ್ಧಾರದ ನೇತೃತ್ವ…














