ಬೆಂಗಳೂರಿನ ಕುಂದಲಹಳ್ಳಿ ಗೇಟ್ ನ ಬೇಕರಿಯ ಗಲಭೆ ಹಾಗೂ ಇಲೆಕ್ಟ್ರಾನಿಕ್ ಸಿಟಿಯ ವಿಲೇಜ್ ರೆಸ್ಟೊರೆಂಟ್ ಹತ್ತಿರ ಪುಡಿ ರೌಡಿಗಳು ಗಲಾಟೆ ಮಾಡಿ ದಾಂದಲೆ ನಡೆಸಿದ್ದರು.
ಈ ಗಲಬೆಯನ್ನು ಉಲ್ಲೇಖಿಸಿ ಮಾನ್ಯ ಮುಖ್ಯಮಂತ್ರಿಯವರನ್ನು ಅವರ ಆರ್ ಟಿ ನಗರದ ನಿವಾಸದಲ್ಲಿ ಭೇಟಿ ಮಾಡಿ ಮಿತಿ ಮೀರಿದ ಪುಂಡರ ಹಾವಳಿಯನ್ನು ಹತ್ತಿಕ್ಕುವಲ್ಲಿ ಪೋಲಿಸ್ ಇಲಾಖೆಯಿಂದ ಕಠಿಣ ಕ್ರಮದ ಜಾರಿಗೆ ಒತ್ತಾಯಿಸಿ ಬೆಂಗಳೂರು ಬಂಟರ ಹೊಟೇಲು ಮಾಲಿಕರ ಸಂಘದ ವತಿಯಿಂದ ಮನವಿ ಪತ್ರವನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಮಧುಕರ ಎಂ ಶೆಟ್ಟಿ, ಗೌರವ ಕಾರ್ಯದರ್ಶಿ ಸಂತೋಷ ಕುಮಾರ ಶೆಟ್ಟಿ ಹಾಗೂ ಉಪಾದ್ಯಕ್ಷರಾದ ಶ್ರೀನಿವಾಸ ಶೆಟ್ಟಿ ಉಪಸ್ಥಿತರಿದ್ದರು.










































































































