ಪುಣೆ ಬಂಟರ ಸಂಘದ ವತಿಯಿಂದ ಸಂಘದ ಕಾರ್ಯಕಾರಿ ಸಮಿತಿಯ ಸಮಾಲೋಚನಾ ವಿಶೇಷ ಸಭೆಯೊಂದು ಜೂನ್ 15 ರಂದು ನಗರದ ಕೊರೊನೇಟ್ ಹೋಟೆಲ್ ಸಭಾಂಗಣದಲ್ಲಿ ಸಂಘದ ಅಧ್ಯಕ್ಷರಾದ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಇವರ ಅಧ್ಯಕ್ಷತೆಯಲ್ಲಿ ನಡೆಯಿತು . ಈ ಸಭೆಯಲ್ಲಿ ಸಂಘದ ಮೂಲಕ ಭವಿಷ್ಯದಲ್ಲಿ ಸಮಾಜಬಾಂಧವರಿಗೆ ಉಪಯೋಗವಾಗುವಂತಹ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸುವ ಬಗ್ಗೆ ಚರ್ಚೆ ನಡೆಸಲಾಯಿತು .
ಈ ಸಂದರ್ಭ ಸಂತೋಷ್ ಶೆಟ್ಟಿಯವರು ಮಾತನಾಡಿ ಸಂಘದ ಮೂಲಕ ಸಮಾಜಕ್ಕೆ ನೆರವಾಗುವಂತಹ ವಿವಿಧ ಕಾರ್ಯಯೋಜನೆಗಳನ್ನು ಸದ್ಯೋಭವಿಷ್ಯದಲ್ಲಿ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗುವುದು . ಶಿಕ್ಷಣ ,ಆರೋಗ್ಯ ,ಸಾಂಸ್ಕೃತಿಕ ,ಧಾರ್ಮಿಕ ,ಸಾಮಾಜಿಕ ಕಾರ್ಯಗಳು ಸಂಘದ ಆದ್ಯತೆಯಾಗಿದ್ದು ಸಂಘದಿಂದ ಹಮ್ಮಿಕೊಳ್ಳುವ ಯಾವುದೇ ಯೋಜನೆಗಳು ಸಮಾಜಬಾಂಧವರ ಹಿತದೃಷ್ಟಿಯಿಂದ ರೂಪಿಸಲು ನಾವು ಚಿಂತನೆ ನಡೆಸುತ್ತಿದ್ದೇವೆ . ಇದರ ಅಂಗವೆಂಬಂತೆ ಆಗಸ್ಟ್ ಮೊದಲ ವಾರದಲ್ಲಿ ಸಮಾಜದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು . ಈ ಸಂದರ್ಭ ಸಾಂಸ್ಕೃತಿಕ ಸಮಿತಿಯ ಆಯೋಜನೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ,ಸಮಾಜದ ವಿವಿಧ ಕ್ಷೇತ್ರದ ಸಾಧಕರನ್ನು ಗುರುತಿಸಿ “ಕಲ್ಪವೃಕ್ಷ ಸೇವಾ ಸಾಧಕ ಪ್ರಶಸ್ತಿ ಪ್ರದಾನ ,ಸಂಘದ ಭವನಕ್ಕೆ ಹಾಗೂ ಸಂಘದ ಅಭ್ಯುದಯಕ್ಕೆ ವಿಶೇಷ ಕೊಡುಗೆ ನೀಡಿದ ದಿ . ಗುಂಡೂರಾಜ್ ಶೆಟ್ಟಿ ಹಾಗೂ ದಿ . ಜಗನ್ನಾಥ ಬಿ ಶೆಟ್ಟಿಯವರ ಪ್ರತಿಮೆಯನ್ನು ಭವನದಲ್ಲಿ ಅನಾವರಣಗೊಳಿಸುವ ಕಾರ್ಯಕ್ರಮ ಹಾಗೂ ದಿವಂಗತ ಜಗನ್ನಾಥ ಶೆಟ್ಟಿಯವರಿಗೆ ನುಡಿನಮನ ಸಲ್ಲಿಸುವ ಕಾರ್ಯಕ್ರಮ ಆಯೋಜನೆಗೊಳ್ಳಲಿದೆ . ಸಂಘದ ಕಾರ್ಯಕಾರಿ ಸಮಿತಿ ಸದಸ್ಯರು ,ಉತ್ತರ ಪ್ರಾದೇಶಿಕ ಸಮಿತಿ ,ದಕ್ಷಿಣ ಪ್ರಾದೇಶಿಕ ಸಮಿತಿ ,ಯುವ ವಿಭಾಗ ಮತ್ತು ಮಹಿಳಾ ವಿಭಾಗದ ಎಲ್ಲಾ ಸದಸ್ಯರು ಸೇರಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸುವಲ್ಲಿ ಶ್ರಮಿಸಬೇಕು ಎಂದರು . ಅದೇ ರೀತಿ ಸಮಾಜಬಾಂಧವರಿಗೆ ಅತೀ ಕಡಿಮೆ ವೆಚ್ಚದಲ್ಲಿ ಸಂಪೂರ್ಣ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲು ಚಿಂತನೆ ನಡೆಸಿದ್ದೇವೆ ಎಂದರು . ಸದಸ್ಯರೆಲ್ಲರ ಸಲಹೆ ಸೂಚನೆಗಳನ್ನು ಪಡೆದುಕೊಳ್ಳಲಾಯಿತು .
ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಪ್ರವೀಣ್ ಶೆಟ್ಟಿ ಪುತ್ತೂರು ,ಪ್ರಧಾನ ಕಾರ್ಯದರ್ಶಿ ಅಜಿತ್ ಹೆಗ್ಡೆ ,ಕೋಶಾಧಿಕಾರಿ ಶ್ರೀನಿವಾಸ ಶೆಟ್ಟಿ ,ಪದಾಧಿಕಾರಿಗಳಾದ ಸತೀಶ್ ಶೆಟ್ಟಿ ,ದಿನೇಶ್ ಶೆಟ್ಟಿ ಕಳತ್ತೂರು ,ಚಂದ್ರಶೇಖರ ಶೆಟ್ಟಿ ನಿಟ್ಟೆ ,ತಾರಾನಾಥ ರೈ ಮೇಗಿನಗುತ್ತು ,ವಸಂತ್ ಶೆಟ್ಟಿ ಬೈಲೂರು ,ರವಿ ಕೆ ಶೆಟ್ಟಿ,ನ್ಯಾಯವಾದಿ ಶಶಿ ಎಸ್ ಶೆಟ್ಟಿ ,ಕಿಶೋರ್ ಹೆಗ್ಡೆ ,ಸುಜಿತ್ ಶೆಟ್ಟಿ ,ಕಲ್ಪವೃಕ್ಷ ತ್ರೈಮಾಸಿಕ ಪತ್ರಿಕೆಯ ಸಂಪಾದಕ ವಿಶ್ವನಾಥ ಶೆಟ್ಟಿ ಪಾಂಗಾಳ ,ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಲತಾ ಎಸ್ ಶೆಟ್ಟಿ ,ಸದಸ್ಯರಾದ ಶಮ್ಮಿ ಎ ಹೆಗ್ಡೆ ,ಸುಚಿತ್ರಾ ಎಸ್ ಶೆಟ್ಟಿ ,ನಯನಾ ಜೆ ಶೆಟ್ಟಿ , ಉತ್ತರ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ಗಣೇಶ್ ಪೂಂಜಾ ,ಪದಾಧಿಕಾರಿ ವಸಂತ್ ಶೆಟ್ಟಿ ,ದಕ್ಷಿಣ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ಶೇಖರ್ ಸಿ ಶೆಟ್ಟಿ ,ಪದಾಧಿಕಾರಿಗಳಾದ ದಾಮೋಧರ್ ಶೆಟ್ಟಿ ,ರತ್ನಾಕರ ಶೆಟ್ಟಿ ,ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಯಶೋದಾ ಶೆಟ್ಟಿ ,ಸದಸ್ಯರಾದ ವಿನೋದಾ ಶೆಟ್ಟಿ ,ರೋಹಿಣಿ ಶೆಟ್ಟಿ ,ಸಂಘದ ಯುವ ವಿಭಾಗದ ಕಾರ್ಯಾಧ್ಯಕ್ಷ ಉದಯ್ ಶೆಟ್ಟಿ ಉಪಸ್ಥಿತರಿದ್ದರು .