Author: admin
ನಮ್ಮ ತುಳುನಾಡ ಪದ್ಧತಿ, ಸಂಸ್ಕ್ರತಿ ಅಚಾರ ವಿಚಾರಗಳ ಬಗ್ಗೆ ಅರಿತು ಜೀವನದಲ್ಲಿ ಮುನ್ನಡೆಯುವ ನಾವು ಇನ್ನೊಮ್ಮೆ ತುಳುನಾಡಲ್ಲೆ ಹುಟ್ಟಿ ಬರಬೇಕು ಎಂದು ಆಶಿಸುತ್ತೇವೆ, ಆದರೆ ನಮ್ಮ ಜೀವನ ಧರ್ಮ ಅಧರ್ಮದ ನಡುವೆ ನಾವು ಮಾಡಿದ ಕರ್ಮ ಪಲ ಎನಿದೆಯೋ ಅದರ ಲೆಕ್ಕಾಚಾರದಂತೆ ನಡೆಯುತ್ತದೆ ಹುಟ್ಟು ಮತ್ತು ಬದುಕು. ಸಮಾಗಾರಿಕೆಯಲ್ಲಿ ಜವಾಬ್ದಾರಿಯನ್ನು ಅರಿತು ಮಾಡುವ ಕೆಲಸದಿಂದ ನಮ್ಮ ಯೋಗ್ಯತೆ ತಿಳಿಯುತ್ತದೆ .ಸತ್ಯಯುಗ, ತ್ರೇತಾಯುಗ, ದ್ವಾಪರಯುಗ, ಕಲಿಯುಗ ಈ ಯುಗಗಳಲ್ಲಿ ನಡೆದ ಸಂಘರ್ಷವನ್ನು ಅರಿತಾಗ ನಾವಿರುವ ಈ ಕಲಿಯುಗದಲ್ಲಿ ನಮಗೆ ನಾವೇ ಮಿತ್ರರೂ ಹೌದು ಶತ್ರುಗಳು ಹೌದು. ಅಂದರೆ ಜನ್ಮ ಜನ್ಮಾಂತರಗಳಿಂದ ನಾವು ಮಾಡಿದ ಕರ್ಮ ಪಲಗಳ ಪ್ರಾರಬ್ದ ಏನಿದೆಯೋ ಅನುಭವಿಸಲೇ ಬೇಕು, ತಲೆಗೆ ಹೊಯ್ದ ನೀರು ಕಾಲಿಗೆ ಇಳಿದ ಹಾಗೆ. ನಮ್ಮ ತುಳುನಾಡ ಜಾನಪದ ಸಂಸ್ಕ್ರತಿ ದೈವಾರಾಧನೆ, ನಾಗಾರಾಧನೆ ಅಚಾರ ವಿಚಾರ ಸಂಸ್ಕಾರ ಇವೆಲ್ಲವನ್ನು ಅರಿತವರು ನಮ್ಮ ಮಕ್ಕಳಿಗೆ ತಿಳಿಸಿಕೊಡುವ ಕಾರ್ಯ ಮಾಡಬೇಕು ಹಾಗು ಮಕ್ಕಳಲ್ಲಿ ತಿಳಿದುಕೊಳ್ಳುವ ಮನಸ್ಸು ಮೂಡಿ ಬರಬೇಕು. ಬಂಗಾರದಂತ…
ಕಟ್ಟಡ ಪ್ರಧಾನವಾಗದೆ ’ಕಟ್ಟಳೆಗಳೇ’ ಮುಖ್ಯವಾಗಿರುವ ಆದಿಮ ಆಚರಣೆಯ ಸತ್ವಗಳನ್ನು ಉಳಿಸಿಕೊಂಡು, ಬದಲಾವಣೆಯ ಯಾವುದೇ ಸುಳಿಗೆ ಸಿಗದೆ ತನ್ನ ಮೂಲ ಸ್ವರೂಪದಲ್ಲಿ ಸಂಪ್ರದಾಯಬದ್ಧವಾಗಿ ಆಚರಣೆಗಳ ವೈವಿಧ್ಯಗಳೊಂದಿಗೆ ಪಡುಬಿದ್ರಿಯ ’ಬ್ರಹ್ಮಸ್ಥಾನ’ವು (ಬೆರ್ಮಸ್ಥಾನ) ರಾಜ್ಯದಾದ್ಯಂತ ಆಸ್ತಿಕರ, ಚಿಂತಕರ, ವಾಸ್ತವವಾದಿಗಳ, ಸಂಶೋಧಕರ ಗಮನಸೆಳೆದ ಶ್ರದ್ಧಾಕೇಂದ್ರ.ಇಲ್ಲಿ ನಡೆಯುವ ರೋಚಕ ವಿಧಿಗಳ ವಿಲಕ್ಷಣ ಆರಾಧನಾ ವಿಧಾನವನ್ನು ಸ್ಥೂಲವಾಗಿ ಗಮನಿಸಿದರೆ ಏನೂ ತಿಳಿಯದು. ಆದರೆ ಸೂಕ್ಷ್ಮ ಅವಲೋಕನದಿಂದ ಎಲ್ಲವೂ ಒಗಟಾಗುತ್ತಾ ವಿವರಗಳು ನಿಗೂಢವಾಗುತ್ತವೆ. ಆದುದರಿಂದಲೇ ಆ ಆರಾಧನಾ ಸನ್ನಿಧಾನವು ವಿಭಿನ್ನ ಸ್ತರಗಳ ಜನರ ಆಸಕ್ತಿಯನ್ನು ಕೆರಳಿಸುತ್ತದೆ. ಇಲ್ಲಿ ನೆರವೇರುವ ಕೇವಲ ಒಂದು ಢಕ್ಕೆ ಬಲಿ, ಹಗಲು ತಂಬಿಲ, ರಾತ್ರಿ ತಂಬಿಲಗಳನ್ನು ಗಮನಿಸುವುದರಿಂದ ಆಸಕ್ತನ ಪ್ರಶ್ನೆಗಳಿಗೆ ಉತ್ತರ ದೊರಕಲಾಗದು. ಆದರೆ ಆಚರಣೆಯ ಕ್ರಮ, ಕಟ್ಟುಕಟ್ಟಳೆ, ವಿಧಿಗಳನ್ನು ನಿರ್ವಹಿಸುವ ವೇಳೆ ಬಳಸಲಾಗುವ ಶಬ್ದಗಳು, ಹಿಂದಿನಿಂದ ನಡೆದುಕೊಂಡು ಬಂದ ಸಂಪ್ರದಾಯಗಳು ವಿಧಿಸಲ್ಪಟ್ಟಿರುವ ನಿಯಮ ನಿಬಂಧನೆಗಳನ್ನು ಜಿಲ್ಲೆಯಲ್ಲಿ ಹರಡಿರುವ ಪ್ರಾಕ್ತನ ಉಪಾಸನಾ ಸ್ಥಾನಗಳಲ್ಲಿ ನಡೆಯುವ ಆಚರಣೆಗಳೊಂದಿಗೆ ಹೋಲಿಸಿ ತೌಲನಿಕವಾಗಿ ಅಧ್ಯಯನ ನಡೆಸಿದರೆ ಮೇಲ್ನೋಟಕ್ಕೆ ಒಂದು ಸ್ಥೂಲ ಚಿತ್ರಣ…
ಎಲ್ಲೂರು ಗ್ರಾಮದ ಉಳ್ಳೂರಿನಲ್ಲಿ ಗೋಶಾಲೆಗೆ ಮೀಸಲಿಟ್ಟಿರುವ 3.96 ಎಕ್ರೆ ಸರಕಾರಿ ಜಮೀನಿನಲ್ಲಿ ಶುಕ್ರವಾರ ಅದಮಾರು ಮಠಾಧೀಶರಾದ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಅವರು ಗೋಪೂಜೆ ನೆರವೇರಿಸಿ, ಗೋಶಾಲೆ ಮತ್ತು ಗೋರುದ್ರ ಭೂಮಿ ನಿರ್ಮಾಣ ಯೋಜನೆಗೆ ಮುಹೂರ್ತ ನೆರವೇರಿಸಿದರು. ಗೋಪೂಜೆ ನೆರವೇರಿಸಿದ ಅದಮಾರು ಶ್ರೀ ಆಶೀರ್ವಚನ ನೀಡಿ, ಭಾರತೀಯ ಪರಂಪರೆಯಲ್ಲಿ ಗೋವುಗಳಿಗೆ ವಿಶೇಷ ಮಹತ್ವವಿದೆ. ಗೋಪಾಲನೆ, ಸಂರಕ್ಷಣೆಗೆ ಒತ್ತು ನೀಡುವ ಮೂಲಕ ಸನಾತನ ಧರ್ಮದ ಪರಿಪಾಲನೆ ಸಾಧ್ಯವಿದೆ. ಗೋವುಗಳು ನಮಗೆ ಉತ್ತಮ ಜ್ಞಾನವನ್ನು ನೀಡುತ್ತವೆ. ಗೋಶಾಲೆಗಳು ವೃದ್ಧಾಶ್ರಮದಂತೆ ಆಗಿರದೇ ಗೋವುಗಳ ಬಗ್ಗೆ ಸಂಶೋಧನಾತ್ಮಕ ಮಾಹಿತಿಗಳನ್ನು ನೀಡುವ ಮಾದರಿ ಕೇಂದ್ರವಾಗಿ ಬೆಳೆಯಬೇಕಿವೆ ಎಂದರು. ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ನನ್ನ ಹಲವು ವರ್ಷಗಳ ಸಂಕಲ್ಪವಾಗಿರುವ ಗೋ ರುದ್ರ ಭೂಮಿ ಸ್ಥಾಪನೆಯ ಬಗ್ಗೆ ಚುನಾವಣಾ ಪೂರ್ವದಲ್ಲಿ ಭರವಸೆ ನೀಡಿದ್ದೆವು. ಅದರಂತೆ ಕಾಪು ತಾಲೂಕಿನಲ್ಲಿ ಪ್ರಪ್ರಥಮ ಸರಕಾರಿ ಗೋಶಾಲೆ ನಿರ್ಮಿಸಿ, ಅದರಲ್ಲೇ ಗೋ ರುದ್ರ ಭೂಮಿ ಸ್ಥಾಪಿಸಲಾಗುವುದು. ಸರಕಾರ, ಶಾಸಕರ ನಿಧಿಯ ಜತೆಗೆ ಸ್ನೇಹಿತರ…
“ನಂಬಿಕೆ ವಿಶ್ವಾಸ ಬಲ ನಮ್ಮಲ್ಲಿದ್ದರೆ ಬದುಕು ಚೆನ್ನಾಗಿ ಸಾಗುತ್ತದೆ. ನಂಬಿಕೆ ಬೇಕು ಆದರೆ ಮೂಢನಂಬಿಕೆ ಬೇಡ. ತುಳುನಾಡಿನ ಮಣ್ಣಿನಲ್ಲಿ ನಾಗದೇವರ ಇರುವಿಕೆ ಬಗ್ಗೆ ನಂಬಿಕೆ ಮಣ್ಣಲ್ಲಿ ಬೆರೆತುಹೋಗಿದ್ದು ಬಾಳ ತೊತ್ತಾಡಿಯಂತಹ ಧಾರ್ಮಿಕ ಕೇಂದ್ರಗಳು ಪುನರುಜ್ಜೀವನಗೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆ” ಎಂದು ಒಡಿಯೂರು ಶ್ರೀ ದೇವದತ್ತ ಸಂಸ್ಥಾನದ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಅವರು ಬಾಳ ತೊತ್ತಾಡಿ ನಾಗಬ್ರಹ್ಮ ಸ್ಥಾನದಲ್ಲಿ ಜರುಗಿದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡುತ್ತಿದ್ದರು. “ಕಡಲಿಗೆ ಕಸ ತ್ಯಾಜ್ಯ ಎಸೆದರೆ ವಾಪಾಸ್ ಬರುತ್ತದೆ, ಅದೇ ಚಿನ್ನ ಎಸೆದರೆ ಬರುವುದಿಲ್ಲ ಯಾಕೆಂದರೆ ಒಳ್ಳೆಯದನ್ನು ಕಡಲು ಸ್ವೀಕರಿಸುತ್ತದೆ. ನಮ್ಮ ಜೀವನ ಕೂಡ ಹಾಗೆ ನಮಗೆ ಬೇಕಾದ್ದನ್ನು ಮಾತ್ರ ಸ್ವೀಕರಿಸಿ ಬೇಡವಾದ್ದನ್ನು ತಿರಸ್ಕರಿಸಬೇಕು” ಎಂದರು. ವೇದಿಕೆಯಲ್ಲಿ ಮುಂಬೈ ಸಮಿತಿ ಅಧ್ಯಕ್ಷರು ಕುಶಾಲ್ ಭಂಡಾರಿ ಐಕಳ ಬಾವ, ಬ್ರಹ್ಮಶ್ರೀ ಪಾಂಗಾಳ ಅನಂತ ಪದ್ಮನಾಭ ತಂತ್ರಿಗಳು, ಉದ್ಯಮಿ ಜೆ.ಡಿ ವೀರಪ್ಪ, ಡಾ| ರೋಹಿತ್, ರವೀಂದ್ರನಾಥ ಜಿ. ಶೆಟ್ಟಿ, ಕಳತ್ತೂರು, ಮುಂಬೈ ಸಮಿತಿ ಗೌರವಾಧ್ಯಕ್ಷ ಸುಬ್ರಹ್ಮಣ್ಯ ರಾವ್…
ಇಂದಿನ ಯಾಂತ್ರೀಕೃತ ಜೀವನ ಶೈಲಿಯಲ್ಲಿ ಆರೋಗ್ಯವಂತರಾಗಿ ಉತ್ಸಾಹದಿಂದಿರಲು ದೇಹಕ್ಕೆ ವ್ಯಾಯಾಮ ಅತೀ ಅಗತ್ಯವಾಗಿದೆ. ಕ್ರೀಡೆ ಜೀವನದ ಅವಿಭಾಜ್ಯ ಅಂಗವಾಗಿದ್ದು ದಿನನಿತ್ಯ ನಾವು ಸ್ವಲ್ಪ ಸಮಯವನ್ನು ವ್ಯಾಯಾಮಕ್ಕೆ ನೀಡಬೇಕು . ಹಿಂದೆ ಒಂದು ಕಾಲವಿತ್ತು ಕೇವಲ ಅಂಕ ಗಳಿಕೆಯೇ ನೌಕರಿಯ ಮಾನದಂಡವಾಗಿತ್ತು. ಆದರೆ ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಉತ್ತಮ ಕ್ರೀಡಾಪಟುಗಳಾದರೆ ಬ್ಯಾಂಕಿಂಗ್, ರೈಲ್ವೇ, ಪೊಲೀಸ್ ಇಲಾಖೆಗಳು ನೌಕರಿ ನೀಡಲು ಕೈಬೀಸಿ ಕರೆಯುತ್ತವೆ. ಆದುದರಿಂದ ಮಕ್ಕಳು ಕಲಿಕೆಯೊಂದಿಗೆ ಕ್ರೀಡೆಗೂ ಆದ್ಯತೆ ನೀಡಿ ಆಸಕ್ತಿಯನ್ನು ಬೆಳೆಸಿಕೊಂಡು ಶ್ರಮ ಪಟ್ಟರೆ ವಿಪುಲ ಅವಕಾಶಗಳನ್ನು ಬಳಸಿಕೊಂಡು ಜೀವನವನ್ನು ಸಮೃದ್ಧಗೊಳಿಸಬಹುದಾಗಿದೆ ಎಂದು ಪಿಂಪ್ರಿ- ಚಿಂಚ್ವಾಡ್ ಬಂಟರ ಸಂಘದ ಅಧ್ಯಕ್ಷರಾದ ರಾಕೇಶ್ ಶೆಟ್ಟಿ ಬೆಳ್ಳಾರೆ ಅಭಿಪ್ರಾಯಪಟ್ಟರು. ಅವರು ನಗರದ ಮೋರ್ಯಾ ಗೋಸಾವಿ ಮೈದಾನದಲ್ಲಿ ನಡೆದ ಬಂಟರ ಸಂಘ ಪಿಂಪ್ರಿ – ಚಿಂಚ್ವಾಡ್ ಇದರ ವಾರ್ಷಿಕ ಕ್ರೀಡಾಕೂಟ ಹಾಗೂ ರಾಷ್ಟ್ರಮಟ್ಟದ ಕಬಡ್ಡಿ ಮತ್ತು ತ್ರೋ ಬಾಲ್ ಪಂದ್ಯಾಟ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಕಬಡ್ಡಿಯಂತಹ ಗ್ರಾಮೀಣ ಕ್ರೀಡೆ ಇಂದು ದೇಶ ,ಅಂತಾರಾಷ್ಟ್ರೀಯ…
ವಿದ್ಯಾಗಿರಿ ಯಲ್ಲಿ ಅಭೂತಪೂರ್ವ ಯಶಸ್ಸಿನೊಂದಿಗೆ ಮುಗಿದ 25ನೇ ಅಂತಾರಾಷ್ಟ್ರೀಯ ಸ್ಕೌಟ್ಸ್ ಗೈಡ್ಸ್ ಸಾಂಸ್ಕೃತಿಕ ಜಾಂಬೂರಿ ತ್ಯಾಜ್ಯ ವಿಲೇವಾರಿಯಲ್ಲೂ ಯಶಸ್ಸು ಕಂಡಿದೆ.ನೂರು ಎಕ್ರೆ ಜಾಗದಲ್ಲಿ ವಿವಿಧ ಮೇಳಗಳು, ವೇದಿಕೆಗಳು, ಸ್ಟಾಲುಗಳು, ಪ್ರದರ್ಶನಾಂಗಣಗಳು, ಕಾರ್ಯಾಗಾರದ ತಾಣಗಳು, ಅರಣ್ಯಲೋಕ ಎಂದು ಮುಂತಾದ ಹಲವು ಆಕರ್ಷಣೆಗಳನ್ನು ಹೊಂದಿ ಒಂದೂವರೆ ಲಕ್ಷ ಮಂದಿಯ ಓಡಾಟ, ಊಟೋಪಚಾರ ಜನಮನ ಸೆಳೆದಿದೆ. ಸಂಘಟಕರಿಗೆ ಸುಸ್ತಾದರೂ ಸಂತಸವಿದೆ, ಸಂತೃಪ್ತಿ ಇದೆ. ಈ ಎಲ್ಲ ಸಾರ್ಥಕತೆಯ ಒಳಗೊಳಗೇ ಎಂಟು ದಿನಗಳಲ್ಲಿ ಸಹಜವಾಗಿ ತಲೆಶೂಲೆಯಾಗಲಿದ್ದ ತ್ಯಾಜ್ಯ ವಿಲೇವಾರಿ ಅತ್ಯಂತ ಸಮರ್ಪಕವಾಗಿ ನಡೆದಿರುವುದನ್ನು ಗಮನಿಸಬೇಕಾಗಿದೆ. ಸುಮಾರು 60,000 ಪ್ರಶಿಕ್ಷಣಾರ್ಥಿಗಳು, ಶಿಕ್ಷಕರಿದ್ದ 21 ಹಾಸ್ಟೆಲ್‌ಗಳ ಎಂದಿನ ಸಿಬಂದಿಗಳ ಸಹಿತ ಒಟ್ಟು 900 ಮಂದಿ ಸ್ವಚ್ಛತ ಕಾರ್ಮಿಕರು ಕೆಲಸ ಮಾಡಿದ್ದಾರೆ. 6 ಟ್ರಾಕ್ಟರ್‌ಗಳು ನಿರಂತರವಾಗಿ ಓಡಾಟ ನಡೆಸಿವೆ. ಹಸಿಕಸ, ಒಣಕಸ, ನಿರುಪಯುಕ್ತ ಕಸ ಎಂದು ಅಲ್ಲಲ್ಲಿಯೇ ತ್ಯಾಜ್ಯ ವಿಂಗಡಿಸುವ ಒಟ್ಟು 60 ಘಟಕಗಳನ್ನು, 50 ಡ್ರಮ್‌ಗಳನ್ನು ಸ್ಥಾಪಿಸಲಾಗಿತ್ತು. ಹಸಿಕಸದ ಚೀಲಕ್ಕೆ ಹಸುರು, ಒಣಕಸಕ್ಕೆ ನೀಲಿ ಮತ್ತು ನಿರುಪಯುಕ್ತ ತ್ಯಾಜ್ಯವಸ್ತುಗಳಿಗೆ ಕೆಂಪು…
ಪುಣೆಯ ಖ್ಯಾತ ಮಕ್ಕಳ ತಜ್ಞ ಡಾ. ಸುಧಾಕರ್ ಶೆಟ್ಟಿಯವರಿಗೆ ಪ್ರತಿಷ್ಠಿತ ಗೌರವ ಪುರಸ್ಕಾರ ಅವಾರ್ಡ್ ಪುಣೆಯ ಖ್ಯಾತ ಮಕ್ಕಳ ತಜ್ಞ ಡಾ. ಸುಧಾಕರ್ ಶೆಟ್ಟಿಯವರಿಗೆ ಖಾನ್ ಎಜ್ಯುಕೇಶನ್ ಫೌಂಡೇಶನ್ ವತಿಯಿಂದ ಪ್ರತಿಷ್ಠಿತ ಗೌರವ ಪುರಸ್ಕಾರ ಪ್ರಶಸ್ತಿ 2021-22 ಲಭಿಸಿದೆ. ಖಾನ್ ಎಜ್ಯುಕೇಶನ್ ಫೌಂಡೇಶನ್‌ನ ವಾರ್ಷಿಕ ಪ್ರಶಸ್ತಿಗಳಲ್ಲಿ 2021-22ಸಾಲಿನ ಪ್ರತಿಷ್ಠಿತ ಗೌರವ ಪುರಸ್ಕಾರ ಅವಾರ್ಡನ್ನು ಖ್ಯಾತ ಸಮಾಜಸೇವಕ, ಕೋವಿಡ್ ವಾರಿಯರ್ ಡಾ. ಸುಧಾಕರ್ ಶೆಟ್ಟಿಯವರಿಗೆ ಮೌಲನಾ ಅಬ್ದುಲ್ ಕಲಾಂ ಅಜಾದ್ ಮೆಮೋರಿಯಲ್ ಹಾಲ್, ಪುಣೆ ಮುನ್ಸಿಪಾಲ್ ಕಾರ್ಪೊರೇಷನ್‌ನಲ್ಲಿ ಗಣ್ಯರ ಸಮ್ಮುಖದಲ್ಲಿ ಪ್ರದಾನ ಮಾಡಲಾಯಿತು. ಪುಣೆಯ ಬೇಬಿ ಫ್ರೆಂಡ್ಸ್ ಮಕ್ಕಳ ಆಸ್ಪತ್ರೆಯ ಮಾಲಕರಾಗಿರುವ ಡಾ. ಸುಧಾಕರ ಶೆಟ್ಟಿಯವರು ಕಟೀಲ್‌ನಲ್ಲಿ ಸಂಚಾರಿ ಮಕ್ಕಳ ಕ್ಲಿನಿಕ್ ಅನ್ನು ಆರಂಭಿಸುವ ಯೋಜನೆ ಹೊಂದಿದ್ದು, ಪುಣೆಯಲ್ಲಿ ಪೊಲೀಸ್ ಆಸ್ಪತ್ರೆ, ಎಸ್‌ಆರ್‌ಪಿಎಫ್ ಹಾಸ್ಪಿಟಲ್, ಆರ್ಮಿಯಿಂದ ನಡೆಸಲ್ಪಡುವ ಕಂಟೋನ್ಮೆಂಟ್ ಆಸ್ಪತ್ರೆಗಳಲ್ಲಿ ಕೂಡಾ ಗೌರವ ತಜ್ಞರಾಗಿ ಕರ್ತವ್ಯ ನಿರತರಾಗಿದ್ದಾರೆ. ಸತತ 3 ವರ್ಷಗಳ ಕಾಲ 10 ಸಾವಿರಕ್ಕೂ ಮಿಕ್ಕಿ ಕೋವಿಡ್ ರೋಗಿಗಗಳಿಗೆ ಡಾ. ಸುಧಾಕರ…
ಬೆಂಗಳೂರು ಬಂಟರ ಸಂಘವು ನಮ್ಮ ಸಮಾಜದ ಬಡ ಕುಟುಂಬಗಳ ವಧು-ವರರಿಗೆ ಉಚಿತ ಕಂಕಣ ಭಾಗ್ಯ (ಸಾಮೂಹಿಕ ವಿವಾಹ) ಯೋಜನೆಯನ್ನು ಬೆಂಗಳೂರು ಬಂಟರ ಸಂಘದಲ್ಲಿ ಹಮ್ಮಿಕೊಂಡಿದ್ದಾರೆ. ಈ ಸೌಕರ್ಯದ ಸದುಪಯೋಗ ಪಡೆಯಲು ಇಚ್ಚಿಸುವವರು ತಮ್ಮ ಹೆಸರುಗಳನ್ನು ಕೂಡಲೇ ಬೆಂಗಳೂರು ಬಂಟರ ಸಂಘದಲ್ಲಿ ನೋಂದಾಯಿಸಬೇಕಾಗಿ ವಿನಂತಿಸಿಕೊಂಡಿದ್ದಾರೆ. ಈ ಮದುವೆಗೆ ಬೆಂಗಳೂರು ಬಂಟರ ಸಂಘದ ಕಡೆಯಿಂದ ಒಂದು ವಧು-ವರರ ಜೋಡಿಗೆ 8+8 (16) ಜನರಿಗೆ ಬೆಂಗಳೂರಿಗೆ ಬಂದು ಹೋಗಲು ಉಚಿತ ಸಾರಿಗೆ ವ್ಯವಸ್ಥೆಯನ್ನು ಕೂಡ ಒದಗಿಸಿಕೊಡಲಿದ್ದಾರೆ. ವಧುವಿಗೆ ಕರಿಮಣಿ, ಸೀರೆ, ವಧುವಿನ ಅಲಂಕಾರ ಮತ್ತು ವರನಿಗೆ ಮದುವೆಯ ಉಡುಗೆಯನ್ನು ಕೂಡಾ ಕೊಡಲಿದ್ದಾರೆ. ವಧು-ವರರಿಗೆ ಮತ್ತು ಅವರ ಸಂಬಂಧಿಕರಿಗೆ ಊಟ, ಉಳಿದುಕೊಳ್ಳಲು ವ್ಯವಸ್ಥೆಯನ್ನೂ ಮಾಡಿ, ಪೂಜೆ, ಮಂಟಪ, ಛತ್ರ , ಹೂವಿನ ಅಲಂಕಾರ, ವಾದ್ಯ ಮತ್ತು ಮದುವೆಗೆ ಬೇಕಾಗುವ ಎಲ್ಲಾ ಸಾಮಗ್ರಿಗಳನ್ನು ಉಚಿತವಾಗಿ ಒದಗಿಸಿ ಬಂಟರ ಪದ್ಧತಿಯಂತೆ ಅದ್ದೂರಿಯಾಗಿ ಬೆಂಗಳೂರು ಬಂಟರ ಸಂಘದಲ್ಲಿ ವಿವಾಹ ವೇದಿಕೆಯ ವತಿಯಿಂದ ಮದುವೆ ಮಾಡಿಕೊಡಲಾಗುವುದು ಎಂದು ಬೆಂಗಳೂರು ಬಂಟರ ಸಂಘದ ಅಧ್ಯಕ್ಷ…
ಶ್ರೀ ಕ್ಷೇತ್ರ ಒಡಿಯೂರಿನ ಶ್ರೀ ಗುರುದೇವದತ್ತ ಸಂಸ್ಥಾನಂ ಶ್ರೀ ದತ್ತಾಂಜನೆಯ ಕ್ಷೇತ್ರ ದಕ್ಷಿಣ ಗಾಣಗಾಪುರದ ಪರಮಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿಯವರ ಸಂಕಲ್ಪದಂತೆ ತಾಯ್ನಾಡಿನ ಭಾಷೆ ಕಲೆ, ಸಂಸ್ಕೃತಿ, ಆಚಾರ, ವಿಚಾರಗಳಿಗೆ ಮಹತ್ವ ನೀಡುತ್ತಿರುವುದಲ್ಲದೆ ಸಮಾಜಮುಖಿ ಸೇವಾ ಚಿಂತನೆಯೊಂದಿಗೆ ಸೇವೆ ಮಾಡುತ್ತಿದೆ ಎಂದು ಪುಣೆ ಶ್ರೀ ಗುರುದೇವಾ ಸೇವಾ ಬಳಗದ ಅಧ್ಯಕ್ಷ ಪ್ರಭಾಕರ ಶೆಟ್ಟಿ ಹೇಳಿದರು. ಸ್ವರ್ಗೇಟ್‍ನ ಚಂದನ್ ಹೊಟೇಲ್‍ನ ಸಭಾಗೃಹದಲ್ಲಿ ನಡೆದ ಪುಣೆ ಶ್ರೀ ಗುರುದೇವಾ ಸೇವಾ ಬಳಗ ಮತ್ತು ಶ್ರೀ ವಜ್ರಮಾತ ಮಹಿಳಾ ವಿಕಾಸ ಕೇಂದ್ರದ 19ನೇ ವಾರ್ಷಿಕೋತ್ಸವದ ಪೂರ್ವ ತಯಾರಿ ಸಭೆ ಮತ್ತು ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಆಧ್ಯಾತ್ಮಿಕ ಚಿಂತನೆಯೊಂದಿಗೆ ತಮ್ಮನ್ನು ತೊಡಗಿಸಿಕೊಂಡಿರುವ ಸ್ವಾಮೀಜಿಯವರಿಂದ ಸ್ಥಾಪನೆಗೊಂಡ ಸಂಸ್ಥೆ ಗುರುದೇವಾ ಸೇವಾ ಬಳಗ ಮತ್ತು ಶ್ರೀ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರ ಸುಮಾರು 22 ವರ್ಷಗಳಿಂದ ಮಹತ್ತರವಾದ ಕೆಲಸಗಳನ್ನು ಮಾಡುತ್ತಿದ್ದು ಶ್ರೀ ಗುರುದೇವ ಸೇವಾ ಬಳಗ ಮತ್ತು ಶ್ರೀ ವಜ್ರಮಾತ ಮಹಿಳಾ ವಿಕಾಸ…
ಸಹಕಾರ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆಗಾಗಿ ರಾಜ್ಯ ಸಹಕಾರ ಮಂಡಳ ನೀಡುವ ಸಹಕಾರ ರತ್ನ ಪ್ರಶಸ್ತಿಗೆ ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸೀತಾರಾಮ ರೈ ಹಾಗೂ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತದ ಅಧ್ಯಕ್ಷ ರವಿರಾಜ ಹೆಗ್ಡೆಯವರು ಆಯ್ಕೆಯಾಗಿದ್ದಾರೆ. ಸೀತಾರಾಮ ರೈ ಅವರು ಸ್ಥಾಪಿಸಿದ ಆದರ್ಶ ವಿವಿದೋದ್ಧೇಶ ಸಹಕಾರಿ ಸಂಘವನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 12 ಶಾಖೆಗಳನ್ನು ಹೊಂದಿ ಮುನ್ನಡೆಯುತ್ತಿದೆ. ಇವರು ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗೆ ಪಾತ್ರರಾಗಿದ್ದಾರೆ.














