ರಾಜ್ಯೋತ್ಸವ ಪ್ರಶಸ್ತಿ ವಿಜೇತ, ಸಮಾಜ ಸೇವಕ ಸೀತಾನದಿ ವಿಠ್ಠಲ ಶೆಟ್ಟಿಯವರು ಹೆಬ್ರಿ ತಾಲೂಕು ಮೇಲ್ ಜಡ್ಡು ಮನೆ ಸೀತಾನದಿಯಲ್ಲಿ ಹುಟ್ಟಿದರು. ಕೆಂಜೂರು ಬಡಾ ಮನೆ ದಿ.ಮಂಜಯ್ಯ ಶೆಟ್ಟಿ ಮತ್ತು ಶಿರಿಯಾರ ಮೇಲ್ಮನೆ ದಿ. ಗಿರಿಜ ಶೆಟ್ಟಿ ದಂಪತಿಗಳ ಪುತ್ರನಾಗಿ ಜನಿಸಿದ ಇವರು ಸೀತಾನದಿ ಮತ್ತು ಹೆಬ್ರಿಯಲ್ಲಿ ತಮ್ಮ ಪ್ರಾಥಮಿಕ, ಪ್ರೌಢ, ಪದವಿಪೂರ್ವ ಶಿಕ್ಷಣವನ್ನು ಪೂರೈಸಿದರು. ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಪದವಿ ಶಿಕ್ಷಣವನ್ನು ಮುಗಿಸಿ ಬೆಂಗಳೂರಿನ ವೈ. ಎಂ ಸಿ. ಎ ಕಾಲೇಜಿನಲ್ಲಿ ಸಿ. ಪಿ.ಎಡ್ ಪದವಿಯನ್ನು ಬೆಂಗಳೂರಿನ ವಿಶ್ವವಿದ್ಯಾನಿಲಯದಲ್ಲಿ ಬಿ. ಪಿ.ಎಡ್ ಮತ್ತು ಯಂ.ಪಿ.ಎಡ್ ಪದವಿಯನ್ನು ಪಡೆದರು. ನಂತರ 20 ವರ್ಷಗಳ ಕಾಲ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಶಿಕ್ಷಣ ಸಂಸ್ಥೆಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ಕಾರ್ಯ ನಿರ್ವಹಿಸಿ ನೂರಾರು ಕ್ರೀಡಾಪಟುಗಳನ್ನು ರಾಜ್ಯ ಮತ್ತು ರಾಷ್ಟ್ರಮಟ್ಟದ ಕ್ರೀಡಾಕೂಟಗಳಲ್ಲಿ ಪ್ರಶಸ್ತಿಗಳನ್ನು ಪಡೆಯುವಲ್ಲಿ ತರಬೇತಿ ನೀಡಿದರು. ತನ್ನ ವೃತ್ತಿಯಲ್ಲಿ ಹಂತ ಹಂತವಾಗಿ ಭಡ್ತಿ ಹೊಂದಿ 17 ವರ್ಷ ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ತಾಲೂಕು ದೈಹಿಕ ಶಿಕ್ಷಣಾಧಿಕಾರಿಯಾಗಿ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿಯಾಗಿ ಯುವ ಜನ ಸೇವಾ ಮತ್ತು ಕ್ರೀಡಾ ಇಲಾಖೆಯಲ್ಲಿ ಸಹಾಯಕ ನಿರ್ದೇಶಕರಾಗಿ, ನೂರಾರು ತಾಲೂಕು ಜಿಲ್ಲಾ ರಾಜ್ಯ ಮಟ್ಟ ಮತ್ತು ರಾಷ್ಟ್ರ ಮಟ್ಟಗಳ ಸಂಘಟಿಸುವ ಮೂಲಕ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಒಂದಷ್ಟು ಪ್ರತಿಭಾವಂತ ಕ್ರೀಡಾಪಟುಗಳು ಕ್ರೀಡಾ ಕ್ಷೇತ್ರದಲ್ಲಿ ಎತ್ತರಕ್ಕೆ ಬೆಳೆಯುವುದಕ್ಕೆ ಮಾರ್ಗದರ್ಶನ ನೀಡಿದರು. ಇವರ ಮಾರ್ಗದರ್ಶನದಲ್ಲಿ ನುರಿತ ದೈಹಿಕ ಶಿಕ್ಷಕರು ತಮ್ಮ ವಿದ್ಯಾರ್ಥಿಗಳ ಪ್ರತಿಭೆಗಳನ್ನು ಗುರುತಿಸುವ ಕೆಲಸವನ್ನು ನಿರಂತರ ಮಾಡುತ್ತಾ ಬಂದರು.
ಕಳೆದ 40 ವರ್ಷಗಳಿಂದ ಬಂಟರ ಸಂಘದಲ್ಲಿ ಸಕ್ರಿಯ ಸದಸ್ಯರಾಗಿ ವಿವಿಧ ಹುದ್ದೆಗಳನ್ನು ನಿರ್ವಹಿಸುತ್ತಾ ಬಂದ ಇವರನ್ನು ಇದೀಗ ಹೆಬ್ರಿ ಬಂಟರ ಯಾನೆ ನಾಡವರ ಸಂಘ ಹೆಬ್ರಿ ನೂತನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದೆ. ಸೀತಾನದಿ ಸೌಖ್ಯ ಯೋಗ ಟ್ರಸ್ಟ್ ನ ಸಂಸ್ಥಾಪಕ ಅಧ್ಯಕ್ಷರಾಗಿರುವ ಇವರು ಸಮಾಜ ಸೇವೆಯನ್ನು ನುರಿತವರು. ಅಧ್ಯಾಪಕಿಯಾಗಿದ್ದ ಅಂಬಲಪಾಡಿ ಹೊಸಮನೆ ಶ್ಯಾಮಲಾ ಶೆಟ್ಟಿಯವರನ್ನು ವಿವಾಹವಾದ ಇವರಿಗೆ ರಾಷ್ಟೀಯ ಕ್ರೀಡಾ ಪಟುವಾಗಿದ್ದು, ಹಿಂಡರ್ ವೇರ್ ಪ್ರೈವೇಟ್ ಲಿಮಿಟೆಡ್ ನಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಆಗಿರುವ ಶೋಧನ್ ಶೆಟ್ಟಿ ಸೀತಾನದಿ ಮತ್ತು ವೈದ್ಯಾಧಿಕಾರಿ ಡಾ. ಶೋಭಿತ್ ಶೆಟ್ಟಿ ಸೀತಾನದಿ ಇವರು ಇವರ ಇಬ್ಬರು ಮಕ್ಕಳು. ಕಾರ್ಕಳದ ಟೀಚರ್ಸ್ ಬ್ಯಾಂಕ್ ನಲ್ಲಿ ಉದ್ಯೋಗದಲ್ಲಿರುವ ಸುಚಿತ್ರ ಎಸ್.ಶೆಟ್ಟಿ ಮತ್ತು ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ ಕಣ್ಣಿನ ವೈದ್ಯೆಯಾಗಿರುವ ಡಾ. ಅನ್ವತಾ ಎಸ್. ಶೆಟ್ಟಿ ಇವರ ಸೊಸೆಯಂದಿರು. ಸ್ವಯಂ ಎಸ್. ಶೆಟ್ಟಿ ಮತ್ತು ಸ್ವಸ್ತಿ ಎಸ್.ಶೆಟ್ಟಿ ಇಬ್ಬರು ಮೊಮ್ಮಕ್ಕಳ ಜೊತೆ ಸಂತೃಪ್ತಿಯ ಜೀವನ ನಡೆಸುತ್ತಿರುವ ಶ್ರೀಯುತ ವಿಠ್ಠಲ ಶೆಟ್ಟರು ತಮ್ಮ ಸಮುದಾಯಮುಖಿ ಸೇವೆಗಾಗಿ ಹಲವಾರು ಪ್ರಶಸ್ತಿಗಳನ್ನು ಪಡೆದಿರುವರು. ಜೊತೆಗೆ ಜವಾಬ್ದಾರಿಯುತ ಹುದ್ದೆಗಳನ್ನು ನಿರ್ವಹಿಸಿರುತ್ತಾರೆ. ಹೆಬ್ಬೆರಿ ಬೈಸಿಕಲ್ ರೈಡರ್ಸ್ ಆರ್ಗನೈಜೇಷನ್ ಆಫ್ ಇಂಡಿಯಾ, ಹೆಬ್ರಿ ತಾಲೂಕು ಕ್ರೀಡಾ ಭಾರತಿ ಸಂಸ್ಥೆಗಳ ಮೂಲಕ ನೂರಕ್ಕೂ ಹೆಚ್ಚು ಮಾನವೀಯ ಸಂಬಂಧಗಳ ತರಬೇತಿ, ಸ್ವಚ್ಛತಾ ಅಭಿಯಾನ, ವೈದ್ಯಕೀಯ ಶಿಬಿರ, ರಕ್ತದಾನ ಶಿಬಿರ, ಉಚಿತ ಕಣ್ಣಿನ ಚಿಕಿತ್ಸೆ, ಕ್ರೀಡಾಕೂಟಗಳ ಸಂಘಟನೆ, ಶಾಲಾ ಕಾಲೇಜುಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಹಲವಾರು ಕಾರ್ಯಕ್ರಮ, ನಿತ್ಯ ಯೋಗ ಟ್ರಸ್ಟ್ ಮೂಲಕ ಬೇರೆ ಬೇರೆ ಊರುಗಳಲ್ಲಿ ನೂರಾರು ಯೋಗ ಶಿಬಿರಗಳ ಸಂಘಟನೆ. ಹೀಗೆ ಶ್ರೀಯುತ ಸೀತಾನದಿ ವಿಠಲ ಶೆಟ್ಟಿ ಯವರ ಬಹುಮುಖ ವ್ಯಕ್ತಿತ್ವದ ಪರಿಣಾಮ ಇವರ ಸಾಮರ್ಥ್ಯದಿಂದ ಸೇವೆಯ ಅವಕಾಶ ಗಳು ಅವರಿಗೆ ಒಲಿದು ಬಂದ ಭಾಗ್ಯಗಳು ಹಲವು. ಇವರ ನಿಸ್ವಾರ್ಥ ಸೇವೆಯಿಂದಾಗಿ ಇವರನ್ನು ಪ್ರಶಸ್ತಿಗಳು ಅರಸಿಕೊಂಡು ಬಂದವು. ಅವುಗಳಲ್ಲಿ ಕೆಲವು ಹೀಗಿದೆ,
* ಸಮಾಜ ಸೇವೆ ಮತ್ತು ನಿರಂತರ ಯೋಗ ಶಿಕ್ಷಣಕ್ಕೆ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ 2017
* ಧರ್ಮಸ್ಥಳ ಶಾಂತಿವನ ಟ್ರಸ್ಟ್ ಮತ್ತು ಶಿಕ್ಷಣ ಇಲಾಖೆಯ ಆಶ್ರಯದಲ್ಲಿ ನಡೆದ ವಿದ್ಯಾರ್ಥಿಗಳ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಯೋಗಾಸನ ಪ್ರದರ್ಶನ ಕಾರ್ಯಕ್ರಮ ಸಂಘಟನೆಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗಡೆಯವರ ಅಭಿನಂದನೆ-2013
ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್ ಕ್ರೀಡಾ ಪ್ರಶಸ್ತಿ -2015
* ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾ ಉತ್ತಮ ದೈಹಿಕ ಶಿಕ್ಷಕ ಪ್ರಶಸ್ತಿ 2015
ದಿ. ಸೀತಾನದಿ ಬೋಜ ಶೆಟ್ಟಿ ಪ್ರಶಸ್ತಿ 2015
* ಪೆರ್ಡೂರು ರೋಟರಿ ಕ್ಲಬ್ ಪ್ರಶಸ್ತಿ- 2015
ಸೀತಾನದಿ ವಿಠ್ಠಲಶೆಟ್ಟಿ ಅವರ ಸಮಾಜಮುಖಿ ಚಿಂತನೆಯಿಂದಾಗಿ ಅವರು ಹಲವಾರು ಜವಾಬ್ದಾರಿಯುತ ಹುದ್ದೆಗಳನ್ನು ನಿರ್ವಹಿಸುತ್ತಿರುವುದು ಗಮನಿಸಬೇಕಾದ ಸಂಗತಿ.
* ಅಧ್ಯಕ್ಷರು : ಬಂಟರ ಯಾನೆ ನಾಡವರ ಸಂಘ ಹೆಬ್ರಿ
* ಅಧ್ಯಕ್ಷರು : ಸೀತಾ ನದಿ ಸೌಖ್ಯ ಯೋಗ ಟ್ರಸ್ಟ್ ಹೆಬ್ರಿ
* ಅಧ್ಯಕ್ಷರು : ಕ್ರೀಡಾ ಭಾರತಿ ಹೆಬ್ರಿ ತಾಲೂಕು
* ಸಂಸ್ಥಾಪಕರು : ಹೆಬ್ಬೇರಿ ಬೈಸಿಕಲ್ ರೈಡರ್ಸ್ ಆರ್ಗನೈಸೇಷನ್ ಆಫ್ ಇಂಡಿಯಾ
* ಗೌರವಾಧ್ಯಕ್ಷಕರು : ರಾಜ್ಯ ದೈಹಿಕ ಶಿಕ್ಷಣಾಧಿಕಾರಿಗಳ ಸಂಘ ಬೆಂಗಳೂರು
* ಗೌರವಾಧ್ಯಕ್ಷರು : ರಾಜ್ಯ ದೈಹಿಕ ಶಿಕ್ಷಣಾಧಿಕಾರಿಗಳ ಸಂಘ
* ಸಂಚಾಲಕರು : ಹೆಬ್ರಿ ಶ್ರೀ ಅನಂತ ಪದ್ಮನಾಭ ದೇವಸ್ಥಾನದ ಜೀರ್ಣೋದ್ದಾರ ಸಮಿತಿ
* ಸಂಚಾಲಕರು : ಸೀತಾ ನದಿ ಗಣಪಯ್ಯ ಶೆಟ್ಟಿ ಪ್ರತಿಷ್ಠಾನ ಹಿರಿಯಡ್ಕ
* ಉಪಾಧ್ಯಕ್ಷರು : ಜಿಲ್ಲಾ ಮಾಸ್ಟರ್ ಅಥ್ಲೆಟಿಕ್ಸ್ ಅಸೋಸಿಯೇಷನ್ ಉಡುಪಿ ಜಿಲ್ಲೆ.