ಜೀವನದಲ್ಲಿ ಎಲ್ಲ ಮಜಲುಗಳಿಗೂ ನಾವು ಮತ್ತೆ -ಮತ್ತೆ ಕರ್ಮವನ್ನೇ ಹೋಲಿಸಿ ತಳುಕು ಹಾಕುತ್ತೇವೆ. ನಮ್ಮ ಪುರಾಣ ಕಥೆಗಳು, ಪುರಾಣ ಪಾತ್ರಗಳು ಮತ್ತು ದೇವರುಗಳು ಆವತರಿಸಿದ ಮರ್ಮ ಕರ್ಮವೇ ಆಗಿರುವುದರಿಂದ ಕರ್ಮವನ್ನು ಹೊರತುಪಡಿಸಿ ನಾವು ಜೀವನವನ್ನು ಪೃಥಕ್ಕರಿಸುವುದು ಕಷ್ಟ ಸಾಧ್ಯ. ದೇವತೆಗಳಿಗೂ ಹಾಗೆಯೇ ಕರ್ಮವನ್ನು ಹೊರತುಪಡಿಸಿ ಧರ್ಮವನ್ನು ರಕ್ಷಿಸಿಕೊಂಡು ಹೋಗಲು ಸಾಧ್ಯವಿಲ್ಲ. ಯಾಕೆಂದರೆ ಅವೆರಡೂ ಒಂದೇ ನಾಣ್ಯದ ಎರಡು ಮುಖಗಳು. ಇದಕ್ಕೆ ಪೂರಕವಾಗಿ ಯಮಧರ್ಮ ಮತ್ತು ಅಣಿಮಾಂಡವ್ಯರ ಕಥೆಯನ್ನು ನೋಡೋಣ.
ಯಾವುದೇ ವಿಷಯ, ವಸ್ತು, ರಾಕ್ಷಸ, ಮಾನವ ಮತ್ತು ದೇವತೆಗಳಲ್ಲಾದರೂ ಸರಿಯೆ, ಅವರವರ ತಪ್ಪು ಕರ್ಮಗಳನ್ನು ನಿರ್ಧರಿಸಿ ನ್ಯಾಯವನ್ನೇ ಹೇಳುವ ಧರ್ಮದ ಅಧಿಕಾರಿ ಯಮ, ಯೂರ್ಯ ಹೇಗೆ ಲೋಕವನ್ನು ತನ್ನ ಬೆಳಕಿನಲ್ಲಿ ನಡೆಸುತ್ತಾನೆಯೋ ಹಾಗೆ ತಮ್ಮ, ತನ್ನ ಧರ್ಮದ ತಕ್ಕಡಿಯಲ್ಲಿ ಲೋಕವನ್ನು ಸಮತೋಲನ ಮಾಡುತ್ತಾನೆ. ಯಮನಿಗೆ ಧರ್ಮವನ್ನು ಹೊರತುಪಡಿಸಿ ಮಾತನಾಡುವ ಯಾವುದೇ ದಾರಿಗಳೂ ತಿಳಿದಿಲ್ಲ. ಇಂತಹ ಒಂದು ಧರ್ಮದ ಪರಿಸ್ಥಿತಿಯಿಂದಾಗಿ ಯಮನು ಶಾಪಗ್ರಸ್ಥನಾಗುತ್ತಾನೆ.
ದ್ವಾಪರಯುಗದ ಆರಂಭದಲ್ಲಿ ಅಣಿಮಾಂಡ್ಯ ಎಂಬ ಋಷಿಯೊಬ್ಬರು ಕಾಶೀ ದೇಶದ ಒಂದು ಆಶ್ರಮದಲ್ಲಿ ತನ್ನ ಶಿಷ್ಯರೊಟ್ಟಿಗೆ ವಾಸಿಸುತ್ತಿರುತ್ತಾರೆ. ಯಜ್ಞ ಯಾಗಾದಿಗಳು, ವ್ರತ ನಿಯಮಗಳೇ ಮೊದಲಾಗಿ ಅನೇಕ ದೈವಿಕ ಕಾರ್ಯಗಳನ್ನು ಮಾಡುತ್ತಾ ಅಧರ್ಮಾದಿ ಕಾರ್ಯಗಳಿಂದ ದೂರವಾಗಿ ಬದುಕುತ್ತಿದ್ದರು. ಹೀಗಿರುವಾಗ ಒಮ್ಮೆ ಅಣಿಮಾಂಡ್ಯರು ಮೌನ ವ್ರತವನ್ನು ಆಚರಿಸುವ ಸಂದರ್ಭದಲ್ಲಿ ಕಾಶೀ ರಾಜನ ರಾಜಭಟರು ತಲೆದಂಡಕ್ಕೆ ಗುರಿಯಾಗಿದ್ದ ಈ ದೇಶದ ರಾಜದ್ರೋಹಿಗಳಿಗಾಗಿ ಹುಡುಕಾಟ ನಡೆಸುತ್ತಾ ಅಣಿಮಾಂಡ್ಯರ ಆಶ್ರಮದ ಕಡೆ ಬರುತ್ತಾರೆ.
ವಿಪರ್ಯಾಸವೆಂದರೆ ಆ ರಾಜ ದ್ರೋಹಿಗಳು ಅಶ್ರಮವನ್ನು ಹೊಕ್ಕು ಅಲ್ಲಿಯೇ ಅಡಗಿರುತ್ತಾರೆ. ಆಶ್ರಮಕ್ಕೆ ಬಂದ ರಾಜಭಟರು ಅಣಿಮಾಂಡ್ಯರನ್ನು ಅವರನ್ನು ಕುರಿತು ಪ್ರಶ್ನಿಸಿದಾಗ, ಜ್ಞಾನಿಗಳಾದ ಅಣಿಮಾಂಡ್ಯರು ಎಲ್ಲಾ ತಿಳಿದಿದ್ದರೂ ವ್ರತ ನಿಯಮದ ಕಾರಣದಿಂದ ಮಾತನಾಡದೇ ಹೋಗುತ್ತಾರೆ. ಕೋಪಗೊಂಡ ಭಟರು ಆಶ್ರಮದಲ್ಲಿ ಹುಡುಕಿದಾಗ ಸಿಕ್ಕ ರಾಜದ್ರೋಹಿಗಳ ಜತೆ ಅಣಿಮಾಂಡ್ಯರನ್ನು ಎಳೆದುಕೊಂಡು ಹೋಗಿ ಶೂಲಕ್ಕೇರಿಸಲು ಬೇಕಾದ ತಯಾರಿಗಳನ್ನು ಮಾಡಿರುತ್ತಾರೆ. ನಿಯಮದ ಪ್ರಕಾರ ರಾಜನು ಕೊನೆಯ ಬಾರಿಗೆ ಶೂಲಕ್ಕೇರಲು ಸಿದ್ಧವಾದ ದ್ರೋಹಿಗಳನ್ನು ಭೇಟಿಯಾಗಲು ಬಂದಾಗ ರಾಜದ್ರೋಹಿಗಳ ಸಾಲಿನಲ್ಲಿದ್ದ ಗುರುವನ್ನು ಗುರುತಿಸಿ ನೊಂದು ಹೋಗುತ್ತಾನೆ. ಯಾವುದೇ ಪಾಪಕರ್ಮವನ್ನೂ ಮಾಡದ ಮಹಾನುಭಾವರು ನೀವು. ಕ್ಷಮಿಸಿ ಎಂದು ಕ್ಷಮಾದಾನವನ್ನು ಬೇಡಿ ರಾಜಮರ್ಯಾದೆಯಿಂದ ಅವರನ್ನು ಬೀಳ್ಕೊಡುತ್ತಾನೆ.
ಹೀಗೆ ಧರ್ಮರೂಪನಾದ ಯಮರು ವಿದುರರಾಗಿ ಭೂಲೋಕದಲ್ಲಿ ಹುಟ್ಟಿ ತಮ್ಮ ಕರ್ಮವನ್ನು ತೀರಿಸಿ ಶಾಪಮುಕ್ತರಾಗುತ್ತಾರೆ. ಅಂದರೆ ದೇವತೆಗಳಾಗಲೀ ಮಾನವರಾಗಲೀ ಯಾರೂ ಕರ್ಮವನ್ನು ಮೀರಿ ನಡೆಯಲಾರವು. ಧರ್ಮ – ಕರ್ಮವೆಂಬುದು ಎಲ್ಲರಿಗೂ ಸಮವಾದ ಅಂಶವೇ ಆಗಿದೆ. ಮೀರಿ ನಡೆದವರು ಯಾರೇ ಆದರೂ ಶಾಪಯೋಗ್ಯರು. ಅದಲ್ಲದೇ ಬಾಲ್ಯದಲ್ಲಿ ಮಕ್ಕಳು ಮಾಡುವ ತಪ್ಪಿಗೆ ತಂದೆ-ತಾಯಿಗಳು ಹೊಣೆಯಾಗುತ್ತಾರೆ.
ಈ ಸೂಕ್ಷ್ಮವನ್ನು ನಾವು ಅರಿತು ಮಕ್ಕಳನ್ನು ಯೋಗ್ಯರನ್ನಾಗಿಸಿ ಶಾಪ ಮುಕ್ತರಾಗುವ ಹೊಣೆಯೂ ನಮ್ಮ ಮೇಲಿದೆ ಎಂಬ ಸಣ್ಣ ಅರಿವು ನಮ್ಮನ್ನು ಜಾಗೃತರನ್ನಾಗಿರಿಸಿದರೆ ಭವಿಷ್ಯದ ಸಮಾಜ ಸ್ವತ್ಛವಾಗಿ, ನಿರ್ಮಲವಾಗಿರುತ್ತದೆ. ನಮ್ಮೆಲ್ಲ ಪುರಾಣ ಕಥೆಗಳೂ ಇಂತಹ ಸೂಕ್ಷ್ಮಗಳನ್ನೇ ನಮಗೆ, ಮುಂದಿನ ಪೀಳಿಗೆಗೆ ಮಾರ್ಗದರ್ಶನವನ್ನಾಗಿ ನೀಡಿವೆ. ಅವುಗಳನ್ನು ಪಾಲಿಸಿದರೆ, ಅರ್ಥೈಸಿಕೊಂಡರೆ ಅವೆಷ್ಟು ಶುದ್ಧರಾಗುತ್ತೇವೆ ಮತ್ತು ನಿಶ್ಕಲ್ಮಶರಾಗುತ್ತೇವೆ ಅಲ್ಲವೇ ? ಇದೇ ನಮ್ಮ ಪುರಾಣಗಳ ಆಶಯವೂ ಹೌದು.