ಮುಂಬಯಿ, ಜೂ.02: ಬಂಟರೆಲ್ಲರೂ ದಾನಿಗಳಾಗಿದ್ದಾರೆ. ಆದರೆ ಕೆಲವರು ಆರ್ಥಿಕವಾಗಿ ಆಶಕ್ತರಿರಬಹುದು. ಬಂಟರಲ್ಲಿ ಸ್ವಾಭಿಮಾನ ಎಂದಿದೆ. ಯಾರಲ್ಲೂ ಕೈಚಾಚಿ ಸಣ್ಣವರಾಗುವ ಬಂಟರಿಲ್ಲ. ಆದರೂ ಅವಶ್ಯಕತೆಗೆ ಸ್ವಾಭಿಮಾನದಿಂದ ಹೊರಬಂದು ಸದೃಢರಾಗಿ ಸಮಾಜದ ಮುಂದೆ ಸ್ವತಂತ್ರರಾಗಿ ಬಾಳೋಣ. ಮುಂಬಯಿ ಬಂಟರಿಗೆ ಕೊಟ್ಟು ಗೊತ್ತಿದೆ ಹೊರತು ಪಡೆದು ಗೊತ್ತಿಲ್ಲ ಅನ್ನಿಸುತ್ತದೆ. ಅದರಲ್ಲೂ ಶೈಕ್ಷಣಿಕ, ಆರೋಗ್ಯ ಕಾಳಜಿಗಾಗಿ ಸ್ಪಂದಿಸಿ ದೇಣಿಗೆ ನೀಡುವುದು ಖುಷಿಯ ಕೆಲಸವಾಗಿದೆ. ಕಳೆದ ಸುಮಾರು 24 ವರ್ಷಗಳಿಂದ ನಡೆದು ಬರುತ್ತಿರುವ ಈ ಸಾಮಾಜಿಕ ಕ್ಷೇಮಾಭಿವೃದ್ಧಿ ಆರ್ಥಿಕ ಸಹಾಯಾಸ್ತ ಕಾರ್ಯಕ್ರಮ ಸಂತಸ, ನೆಮ್ಮದಿದಾಯಕವಾಗಿದೆ. ಅಗತ್ಯವುಳ್ಳವರಿಗೆ ನೀಡುವುದೇ ಧರ್ಮವಾಗಿದೆ. ಪಡೆದವರು ಮುಂದೆ ಪಡೆಯುವರಿಗೆ ಸಹಾಯಸ್ತ ನೀಡಬೇಕು. ಆವಾಗಲೇ ಸ್ವೀಕೃತ ಋಣ ಸಂದಾಯ ಸಾಧ್ಯ. ಶಿಕ್ಷಣ, ಆರೋಗ್ಯಕ್ಕೆ ನೀಡಿದ ದಾನ ಯಾವೊತ್ತೂ ಪುಣ್ಯಾಧಿಯಾಗಿದ್ದು ಇನ್ನೂ ಇಂತಹ ಪುನೀತ ಸೇವೆಯಲ್ಲಿ ಕೈ ಜೋಡಿಸೋಣ.
ಸಮಾಜದ ಸಮಸ್ತ ಬಾಂಧವರ ಒಗ್ಗೂಡುವಿಕೆಯೇ ಸಮುದಾಯದ ಆಸ್ತಿಯಾಗಿದ್ದು ನಾವೂ ಒಗ್ಗೂಡಿ ಬಂಟಶಕ್ತಿ ಬಲಶಾಲಿಯಾಗಿಸೋಣ ಎಂದು ಎಂ ಆರ್ ಜಿ ಹಾಸ್ಪಿಟಾಲಿಟಿ ಪ್ರೈವೇಟ್ ಲಿಮಿಟೆಡ್ನ ಕಾರ್ಯಾಧ್ಯಕ್ಷ, ಆಡಳಿತ ನಿರ್ದೇಶಕ ಕೊರಂಗ್ರಪಾಡಿ ಪ್ರಕಾಶ್ ಶೆಟ್ಟಿ (ಬಂಜಾರ-ಗೋಲ್ಡ್ ಫಿಂಚ್) ನುಡಿದರು. ಇಂದಿಲ್ಲಿ ಭಾನುವಾರ ಕುರ್ಲಾ ಪೂವದಲ್ಲಿನ ಬಂಟರ ಭವನದ ರಾಧಾಬಾಯಿ ಟಿ.ಭಂಡಾರಿ ಸಭಾಗೃಹದಲ್ಲಿ ಬಂಟರ ಸಂಘ ಮುಂಬಯಿ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿ ಆಯೋಜಿಸಿದ್ದ ಸಂಘದ ವಾರ್ಷಿಕ ಮೆಗಾ ಸಾಮಾಜಿಕ ಕ್ಷೇಮಾಭಿವೃದ್ಧಿ ಆರ್ಥಿಕ ಸಹಾಯ ಮೇಳದ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದು ಪ್ರಕಾಶ್ ಶೆಟ್ಟಿ ಮಾತನಾಡಿದರು. ದಿ| ವಾಸು ಕೆ.ಶೆಟ್ಟಿ ಸ್ಮರಣಾರ್ಥ ಚರಿಷ್ಮಾ ಬಿಲ್ಡರ್ಸ್ ಲಿಮಿಟೆಡ್ನ ಕಾರ್ಯಾಧ್ಯಕ್ಷ ಸುಧೀರ್ ವಿ.ಶೆಟ್ಟಿ ಪ್ರಾಯೋಜಕತ್ವದ, ಬಂಟರ ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮವನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಉದ್ಘಾಟಿಸಿದರು.
ಸಂಘದ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿ ಕಾರ್ಯಾಧ್ಯಕ್ಷ ಡಾ| ಇಂದ್ರಾಳಿ ದಿವಾಕರ ಶೆಟ್ಟಿ ನೇತೃತ್ವದಲ್ಲಿ ಜರಗಿದ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಹೇರಂಬ ಇಂಡಸ್ಟ್ರೀಸ್ ಲಿಮಿಟೆಡ್ನ ಆಡಳಿತ ನಿರ್ದೇಶಕ ರಘುರಾಮ.ಕೆ ಶೆಟ್ಟಿ ಕನ್ಯಾನ, ಗೌರವ ಅತಿಥಿಯಾಗಿ ತುಂಗಾ ಹೋಟೇಲು ಸಮೂಹದ ಕಾರ್ಯಾಧ್ಯಕ್ಷ ಸುಧಾಕರ ಎಸ್.ಹೆಗ್ಡೆ, ಉಪಸ್ಥಿತರಿದ್ದು ಬಂಟರ ಸಂಘದ 2024ನೇ ಸಾಲಿನ ಮೆಗಾ ಆರ್ಥಿಕ ಸಹಾಯವಾಗಿರಿಸಿದ್ದ ಸುಮಾರು 1 ಕೋಟಿ 80 ಲಕ್ಷ ರೂಪಾಯಿಗೂ ಅಧಿಕ ಮೊತ್ತದ ಧನ ಸಹಾಯಯವನ್ನು ಫಲಾನುಭವಿಗಳಿಗೆ ವಿತರಿಸಲಾಯಿತು. ಸಂಘದ ಸನಿಹದ ಪ್ರಾದೇಶಿಕ ಸಮಿತಿಗಳಾದ ಅಂಧೇರಿ-ಬಾಂದ್ರಾ, ಸಿಟಿ ಪ್ರಾದೇಶಿಕ, ಕುರ್ಲಾ-ಭಾಂಡೂಪ್, ಥಾಣೆ-ಮುಲುಂಡ್ ಹಾಗೂ ನವಿಮುಂಬಯಿ ಪರಿಸರದ ಬಂಟ ಸಮಾಜದ ಮಕ್ಕಳಿಗೆ ವಿದ್ಯಾಥಿರ್ ವೇತನ, ವಿಧವೆಯರಿಗೆ ಮತ್ತು ವಿಕಲ ಚೇತನರಿಗೆ ಆರ್ಥಿಕ ಸಹಾಯ ವಿತರಿಸಿ ಆರ್ಥಿಕ ಅಸಾಯಕ ಕುಟುಂಬದ ಬಂಧುಗಳ ಮತ್ತು ಪ್ರತಿಭಾನ್ವಿತ ಸಾಧಕರ ದತ್ತು ಸ್ವೀಕಾರಗೈದು ಅವಶ್ಯಕರಿಗೆ ಇಂದಿಲ್ಲಿ ಗಣ್ಯರು ಮತ್ತು ಸಂಘದ ಪದಾಧಿಕಾರಿಗಳು ಆರ್ಥಿಕ ಸಹಾಯ ಹಸ್ತಾಂತರಿಸಿಬಂಟರ ಸಂಘದ ಸೇವೆ ಮತ್ತು ಕೊಡುಗೈ ದಾನಿಗಳ ಸಹೃದಯತೆಯನ್ನು ಶ್ಲಾಘಿಸಿದರು.
ಐಕಳ ಹರೀಶ್ ಶೆಟ್ಟಿ ಮಾತನಾಡಿ ಡಾ| ಸುನೀತಾ ಎಂ.ಶೆಟ್ಟಿ ಕಾರ್ಯಾಧ್ಯಕ್ಷರಾಗಿದ್ದಾಗ ಸುಮಾರು ರೂಪಾಯಿ 25 ಲಕ್ಷ ಮೊತ್ತದಿಂದ ಆರಂಭಗೊಂಡ ಯೋಜನೆ ಇಂದು ಬೃಹದಾಗಿ ಬೆಳೆದಿದೆ. ಇದು ಪ್ರತಿಯೊಬ್ಬರ ಸಹಯೋಗದ ಫಲವಾಗಿದೆ. ವೇತನ ಯೋಜನಾ ಶಾಶ್ವತ ನಿಧಿ ಸ್ಥಾಪನೆಯ ಶ್ರೀಮತಿ ರಂಜನಿ ಸುಧಾಕರ ಹೆಗ್ಡೆ ಸಾಮಾಜಿಕ ಕ್ಷೇಮಾಭಿವೃದ್ಧಿ ಎನೆಕ್ಸ್ ಕಟ್ಟಡದ ಭಾಗವಾಗಿ ಈ ಯೋಜನೆ ಸಲೀಸಾಗಿ ಸಾಗುತ್ತಿದೆ. ಈ ಯೋಜನೆ ಬೆಳೆದಂತೆ ಸಂಘವು ಪುಣ್ಯದಾಯಕ ಸೇವೆಯೊಂದಿಗೆ ಸಾರ್ಥಕತೆ ಹೊಂದುತ್ತಿದೆ. ಫಲಾನುಭವಿಗಳು ಈ ಮೂಲಕ ವಿದ್ಯಾವಂತರಾಗಿ ಸ್ವಂತಿಕೆಯಿಂದ ಇಡೀ ಪರಿವಾರ, ಮನೆಯನ್ನು ಸ್ವತಃವಾಗಿ ಮುನ್ನಡೆಸುವಂತಾಗಲಿ ಎಂದರು. ಸಮಯಪ್ರಜ್ಞೆಯ ಅರಿವು ಕೂಡಾ ನಮ್ಮ ಸಾಧನೆಗೆ ನಿಶ್ಚಿತವಾಗಿದೆ. ದೇಶ ನಡೆಯಲು ಹೇಗೆ ಮೂಲಭೂತ ಸೌಕರ್ಯಬೇಕೋ ಆದರಂತೆ ಸಮಾಜ ಮುನ್ನಡೆಯಲೂ ಶಿಕ್ಷಣದ ಅವಶ್ಯವಿದೆ. ಆದ್ದರಿಂದ ಎಲ್ಲರೂ ವಿದ್ಯಾಭಾಸಕ್ಕೆ ಅತೀ ಹೆಚ್ಚಿನ ಮಹತ್ವ ನೀಡಿರಿ. ಸಾಮಾಜಿಕ, ವೈಯುಕ್ತಿಕ ಮತ್ತು ಕುಟುಂಬ ನಿರ್ವಾಹಣಾ ಉದ್ಧಾರಕ್ಕೆ, ಆರ್ಥಿಕ ಏಳಿಗೆಗಾಗಿ ಶಿಕ್ಷಣವೇ ಅಡಿಪಾಯವಾಗಿದೆ. ಮಾನವ ಬಾಳಿಗೆ ಶಿಕ್ಷಣವು ಮೂಲ ಅವಶ್ಯಕತೆಯಾಗಿದ್ದು ಸುಶಿಕ್ಷಿತರಾದರೆ ಎಲ್ಲಾ ಜಾಗತಿಕ ಸಮಸ್ಯೆಗಳನ್ನೂ ಸ್ವಂತಿಕೆಯಿಂದ ಪರಿಹಾರಿಸಿಕೊಳ್ಳಬಹುದು ಎಂದರು ಆರ್.ಕೆ ಶೆಟ್ಟಿ ತಿಳಿಸಿದರು. ಮಕ್ಕಳ ಭವಿಷ್ಯ ರೂಪಿಸುವ ಈ ಕಾರ್ಯಕ್ರಮ ಪುಣ್ಯದ ಕಾಯಕವಾಗಿದೆ.
ಇಂತಹ ಯೋಜನೆಯಿಂದ ಇಂದು ಎಷ್ಟೋ ಸಾವಿರಾರು ಮಕ್ಕಳು ಕಲಿತು ಬಾಳು ಬೆಳಗಿಸುತ್ತಿರುವುದು ಅಭಿನಂದನೀಯ. ಐಕಳ ಹರೀಶ್ ಶೆಟ್ಟಿ ಅವರ ದೂರದೃಷ್ಠಿತ್ವ, ಜವಾಬ್ದಾರಿಯಿಂದ ಆರಂಭಿತ ಈ ಯೋಜನೆ ಫಲಪ್ರದವಾಗಿದೆ. ಈ ಯೋಜನೆಯಿಂದ ಫಲಾನುಭವಿಗಳಾಗಿ ಸಾಧಕರಾದವರು ಮತ್ತೆ ಈ ಯೋಜನೆಗೆ ದೇಣಿಗೆಯನ್ನಿತ್ತು ಸಹಕರಿಸಿದರೆ ಮುಂದಿನ ಮಕ್ಕಳ ಭವಿಷ್ಯಕ್ಕೆ ಪ್ರೇರಣೆ ಆಗಬಲ್ಲದು ಎಂದರು ಸುಧಾಕರ ಹೆಗ್ಡೆ ಅಭಿಪ್ರಾಯ ಪಟ್ಟರು. ಮುಂಬಯಿಯ ಪ್ರಸಿದ್ಧ ಮನಶಾಸ್ತ್ರಜ್ಞ ಡಾ| ಹರೀಶ್ ಶೆಟ್ಟಿ ಅವರು ಮಾನಸಿಕ ಆರೋಗ್ಯ ಕಾಪಾಡುವ ಬಗ್ಗೆ ಉಪಯುಕ್ತ ಮಾಹಿತಿಗಳನ್ನೀಡಿ ಬಂಟರು ಅಧಿಕ ಶಕ್ತಿವುಳ್ಳವರು. ಒಂದು ಕಾಲಕ್ಕೆ ಅಜ್ಜ ಅಜ್ಜಿಯರು 10ಕ್ಕೂ ಹೆಚ್ಚು ಹೆರುತ್ತಿದ್ದರು. ಆದರೆ ಈಗ ಇದು ಗಣನೀಯವಾಗಿ ಕಡಿಮೆಯಾಗಿದ್ದು ಹಿಂದೂಗಳ ಸಂಖ್ಯೆ 7.8% ಕ್ಷಿಣಿಸಿದೆ. ಸದ್ಯ ಜಗತ್ತು ದೇಶ, ಬದಲಾಗುತ್ತಿದೆ. ಆದ್ದರಿಂದ ನಮ್ಮ ಮಕ್ಕಳಿಗೆ ಹೊಡೆಯಬಾರದು. ಏನೋ ಕಾರಣಕ್ಕೆ ಬಾರಿಸಿದರೆ ಮಕ್ಕಳಲ್ಲಿ ಆತ್ಮವಿಶ್ವಾಸ ಕ್ಷಿಣಿಸುತ್ತದೆ. ಬದಲಾಗಿ ಮಾತಾಪಿತರು ಮೊಬಾಯ್ಲ್ ಕೆಳಗಿರಿಸಿ ಮಕ್ಕಳನ್ನು ಅಪ್ಪುಗೆಯಿಂದ ವಾತ್ಸಲ್ಯ ತುಂಬಿ ಪ್ರೇರೆಪಿಸಬೇಕು. ಬದಲಾದ ಕಾಲಘಟ್ಟದಲ್ಲಿ ಮಕ್ಕಳ ವಿಕಾಸನವಾಗುತ್ತಿದ್ದು ಸಕಾಲಿಕ ವಾತಾವರಣದಂತೆಯೇ ಬೆಳೆಸಬೇಕು. ಮಕ್ಕಳಲ್ಲಿ ಸ್ಥೈರ್ಯ ತುಂಬಿ ದೃಢ ನಿಲುವು ಗಟ್ಟಿಮಾಡಬೇಕು. ಪಾಲಕರು ಮತ್ತು ಮಕ್ಕಳುಳಲ್ಲಿ ಧನಾತ್ಮಕ ಚಿಂತನೆಗಳು ಮೂಡಿದಾಗಲೇ ಮಕ್ಕಳ ಮನೋಬಲ ಬಲಿಷ್ಠಗೊಳ್ಳುವುದು. ಪ್ರಸಕ್ತ ಪೀಳಿಗೆಯು ತುಂಬಾ ಜಾಣರಾಗಿದ್ದು, ಬದಲಾದ ಜಗತ್ತಿನಲ್ಲಿ ಮಕ್ಕಳ ಕಾಳಜಿಗೆ ಪ್ರೋತ್ಸಾಹಿಸಿ ಬದುಕು ಸಾರ್ಥಕಗೊಳಿಸಿ ಎಂದರು.ಯೋಜನೆಯ ಆರಂಭದಿಂದ ಈ ವರೇಗಿನ ಎಲ್ಲಾ ಕಾರ್ಯಾಧ್ಯಕ್ಷರು, ಸದಸ್ಯರುಗಳ ಪರಿಶ್ರಮದ ಫಲ ಇದಾಗಿದೆ. ಬಂಟ್ಸ್ ಸಂಘದ ಹೃದಯವೇ ಸಮಾಜ ಕಲ್ಯಾಣ ಸಮಿತಿ. ಒಂಬತ್ತು ಪ್ರಾದೇಶಿಕ ಸಮಿತಿ, ಮಹಿಳಾ ವಿಭಾಗ ಮತ್ತು ಯುವ ವಿಭಾಗಗಳೇ ಸಂಘದ ಮೆದುಳುವಾಗಿದೆ. ಎಲ್ಲರ ಸಹಯೋಗದಿಂದ ಬಂಟರ ಸಂಘದ ಕೊಡೆಯಡಿ ಈ ಯೋಜನೆಸಾಗುತ್ತಿದೆ. 24 ವರ್ಷಗಳಿಂದ ಈ ಯೋಜನೆ ನಡೆಯುತ್ತಿದ್ದು, ಈ ವರೇಗೆ ಸುಮಾರು 40 ಕೋಟಿ ಮೊತ್ತವು ಹಂಚಿಕೆಯಾಗಿದೆ. ಬೇರೆ ಯಾವ ಸಮಾಜದಲ್ಲೂ ಇಂತಹ ಯೋಜನೆ ಇರದು. ಇದು ಜಗತ್ತಿಗೆ ಮಾದರಿ. ಇದರ ಕೀರ್ತಿ ಐಕಳ ಹರೀಶ್ ಶೆಟ್ಟಿ ಅವರದ್ದಾಗಿದೆ. ಎಲ್ಲರ ಹಗಲಿರುಳು ದುಡಿಯುವಿಕೆಯಿಂದ ಈ ಯೋಜನೆ ಸಮರ್ಥವಾಗಿ ಸಾಗುತ್ತಿರುವುದು ಅಭಿವಂದನೀಯ ಎಂದು ಅಧ್ಯಕ್ಷೀಯ ಭಾಷಣವನ್ನು ಉದ್ದೇಶಿಸಿ ಪ್ರವೀಣ್ ಶೆಟ್ಟಿ ನುಡಿದರು. ಸಂಘದ ಉಪಾಧ್ಯಕ್ಷ ಮಹೇಶ್ ಎಸ್.ಶೆಟ್ಟಿ, ಗೌ| ಪ್ರ| ಕಾರ್ಯದರ್ಶಿ ಡಾ| ಆರ್.ಕೆ ಶೆಟ್ಟಿ (ದಿಶಾ ಯೋಜನಾ ರೂವಾರಿ), ಗೌರವ ಕೋಶಾಧಿಕಾರಿ ಸಿಎ| ರಮೇಶ್ ಬಿ.ಶೆಟ್ಟಿ, ಜೊತೆ ಕಾರ್ಯದರ್ಶಿ ಗಿರೀಶ್ ಆರ್.ಶೆಟ್ಟಿ ತೆಳ್ಳಾರು, ಜೊತೆ ಕೋಶಾಧಿಕಾರಿ ಶಶಿಧರ್ ಕೆ.ಶೆಟ್ಟಿ ಇನ್ನಂಜೆ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಚಿತ್ರಾ ಆರ್.ಶೆಟ್ಟಿ, ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿ ಉಪ ಕಾರ್ಯಾಧ್ಯಕ್ಷ ಸುಬ್ಬಯ್ಯ ಎ.ಶೆಟ್ಟಿ, ಕಾರ್ಯದರ್ಶಿ ಸಿಎಸ್| ಉತ್ತಮ್ ಶೆಟ್ಟಿ, ಕೋಶಾಧಿಕಾರಿ ಜಯಪ್ರಕಾಶ್ ಆರ್.ಶೆಟ್ಟಿ ವೇದಿಕೆಯನ್ನಲಂಕರಿಸಿದ್ದರು. ಪ್ರಾದೇಶಿಕ ಸಮಿತಿ ವತಿಯಿಂದ ಆರ್ಥಿಕ ಸಹಾಯ ಮೇಳಕ್ಕೆ ರೂಪಾಯಿ ಐದು ಲಕ್ಷಕ್ಕೂ ಮಿಕ್ಕಿ ದೇಣಿಗೆ ನೀಡಿದ ವಿೂರಾ ಭಯಂದರ್ಪ್ರಾ ದೇಶಿಕ ಸಮಿತಿ ಸ್ವರ್ಣ ಪದಕಕ್ಕೆ ಭಾಜನವಾಗಿದ್ದು ಸಮಿತಿ ಕಾರ್ಯಾಧ್ಯಕ್ಷ ರವೀಂದ್ರ ಡಿ.ಶೆಟ್ಟಿ ಕೊಟ್ರಪಾಡಿ ಮತ್ತು ಸಮಿತಿ ಸದಸ್ಯರಿಗೆ ಸ್ವರ್ಣ ಪದಕವನ್ನಿತ್ತು ಹಾಗೂ ನಾಟಕ ಪ್ರದರ್ಶಿಸಿದ ಎಲ್ಲಾ ಪ್ರದರ್ಶಿಸಿದ ಕಲಾವಿದರನ್ನು ಅಧ್ಯಕ್ಷರು ವಿಶೇಷವಾಗಿ ಗೌರವಿಸಿದರು.ಡಾ| ಇಂದ್ರಾಳಿ ದಿವಾಕರ ಶೆಟ್ಟಿ ಸ್ವಾಗತಿಸಿ ಪ್ರಸ್ತಾವಿಕ ನುಡಿಗಳನ್ನಾಡಿ 60 ಲಕ್ಷ ರೂಪಾಯಿಯಿಂದ ಆರಂಭಗೊಂಡ ಈ ಯೋಜನೆ ಇದೀಗ ವಾರ್ಷಿಕವಾಗಿ 1 ಕೋಟಿ 88 ಲಕ್ಷಕ್ಕೆ ನೀಡಲ್ಪಡುತ್ತಿದೆ. ಬಂಟರ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಅನ್ನೋದೆ ಯೋಜನೆಯ ಉದ್ದೇಶವಾಗಿದೆ. ಮಕ್ಕಳು ಕಲಿತರೆ ಸಮಾಜದ ಉನ್ನತೀಕರಣ ಸಾಧ್ಯ. ಸ್ವಸಮಾಜೋಭಿವೃದ್ಧಿಯ ಏಳಿಗೆ ನಮ್ಮೆಲ್ಲರ ಬಲಿಷ್ಠ ಜವಾಬ್ದಾರಿಯಾಗಿದೆ ಎಂದರು. ಸಿಎಸ್| ಉತ್ತಮ್ ಶೆಟ್ಟಿ ಸಂಘದ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಸ್ಥೂಲವಾದ ಮಾಹಿತಿಯನ್ನಿತ್ತು ಈ ಬಾರಿ ಸುಮಾರು 3,004 ಅರ್ಜಿಗಳು ಸ್ವೀಕೃತವಾಗಿದ್ದು ಆ ಪೈಕಿ 2,097 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, 677 ವಿಧವೆಯರಿಗೆ ವಿಧವಾ ವೇತನ ಮತ್ತು 95 ವಿಕಲ ಚೇತನರಿಗೆ ಸಹಾಯ, 40 ವಿದ್ಯಾರ್ಥಿಗಳ ದತ್ತು ಸ್ವೀಕಾರ, ಆರ್ಥಿಕವಾಗಿ ತೊಂದರೆಯಲ್ಲಿರುವ ಪ್ರತಿ ಪ್ರಾದೇಶಿಕ ಸಮಿತಿಗಳ 83 ಕುಟುಂಬಗಳಿಗೆ ಹಾಗೂ ಪ್ರತಿಭಾನ್ವಿತ ಸಾಧಕರಿಗೆ ಆರ್ಥಿಕ ಸಹಾಯ ವಿತರಿಸಲಾಗುವುದು ಎಂದರು. ಕಾರ್ಯಕ್ರಮದಲ್ಲಿ ಸಂಘದ ಇಎಎಸ್ ಡಬ್ಲ್ಯೂಸಿ ಮಾಜಿ ಕಾರ್ಯಾಧ್ಯಕ್ಷ ಶಾಂತಾರಾಮ ಬಿ.ಶೆಟ್ಟಿ, ಪೊವಾಯಿ ಶಿಕ್ಷಣ ಸಮಿತಿ ಕಾರ್ಯಾಧ್ಯಕ್ಷ ರತ್ನಾಕರ ಶೆಟ್ಟಿ ಮುಂಡ್ಕೂರು, ನಿಧಿ ಸಂಗ್ರಹ ಸಮಿತಿ ಕಾರ್ಯಾಧ್ಯಕ್ಷ ಮುಂಡಪ್ಪ ಎಸ್.ಪಯ್ಯಡೆ, ಪ್ರಾದೇಶಿಕ ಸಮಿತಿಗಳ ಸಂಯೋಜಕರಾದ ರವೀಂದ್ರ ಎಂ.ಭಂಡಾರಿ (ಮಧ್ಯ ಮುಂಬಯಿ), ಖಾಂದೇಶ್ ಭಾಸ್ಕರ್ ಶೆಟ್ಟಿ (ಪಶ್ಚಿಮ ಮುಂಬಯಿ), ಸುಕುಮಾರ್ ಎನ್.ಶೆಟ್ಟಿ (ಪೂರ್ವ ಮುಂಬಯಿ), ಮಾಜಿ ಮಹಿಳಾಧ್ಯಕ್ಷೆ ರಂಜನಿ ಸುಧಾಕರ ಹೆಗ್ಡೆ, ಪ್ರಾದೇಶಿಕ ಸಮಿತಿಗಳ, ಮಹಿಳಾ ಮತ್ತು ಯುವ ವಿಭಾಗ, ಇನ್ನಿತರ ಉಪ ಸಮಿತಿಗಳ ಕಾರ್ಯಾಧ್ಯಕ್ಷರು, ಪದಾಧಿಕಾರಿಗಳು ಮತ್ತು ಸದಸ್ಯರುಗಳು ಹಾಜರಿದ್ದರು. ಅಧ್ಯಕ್ಷರು ಉಪಸ್ಥಿತ ಗಣ್ಯರನ್ನೆಲ್ಲರನ್ನೂ ಪುಷ್ಪಗುಚ್ಫವನ್ನುತ್ತು ಗೌರವಿಸಿದರು. ಮೆಗಾ ಮೇಳದ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮವನ್ನಾಗಿಸಿ ಅಶೋಕ್ ಪಕ್ಕಳ ರಚಿಸಿ ನಿರ್ದೇಶಿತ `ಮಹಾ ಪುರುಷೆರ್’ ತುಳು ಕಿರು ನಾಟಕವನ್ನು ಸಂಘದ ಸದಸ್ಯರು ಪ್ರದರ್ಶಿಸಿದರು.ಬಂಟಗೀತೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಸರೋಜಾ ಬಿ.ಶೆಟ್ಟಿ ಪ್ರಾರ್ಥನೆಯನ್ನಾಡಿದರು. ಪ್ರವೀಣ್ ಭೋಜ ಶೆಟ್ಟಿ ಅತಿಥಿಗಳಿಗೆ ಪುಷ್ಫಗುಪ್ಚ, ಸ್ಮರಣಿಕೆಗಳನ್ನೀಡಿ ಗೌರವಿಸಿದರು. ಉನ್ನತ ಶಿಕ್ಷಣ ಸಮಿತಿ ಕಾರ್ಯಾಧ್ಯಕ್ಷ ಆದರ್ಶ್ ಬಿ.ಶೆಟ್ಟಿ ಸಂಘದ ಶಿಕ್ಷಣ ಸಂಸ್ಥೆಗಳ ಮಾಹಿತಿಯನ್ನಿತ್ತರು. ಸುಬ್ಬಯ್ಯ ಎ.ಶೆಟ್ಟಿ ಕೊಡುಗೈ ದಾನಿಗಳ ಯಾದಿ ವಾಚಿಸಿದರು. ಅಶೋಕ ಪಕ್ಕಳ ಕಾರ್ಯಕ್ರಮ ನಿರೂಪಿಸಿದರು. ಜಯಪ್ರಕಾಶ್ ಆರ್.ಶೆಟ್ಟಿ ವಂದಿಸಿದರು.
ಚಿತ್ರ ವರದಿ : ರೋನ್ಸ್ ಬಂಟ್ವಾಳ್