ವಸಾಯಿ ತಾಲೂಕಿನ ಹೋಟೆಲ್ ಉದ್ಯಮಿ, ತುಳುಕೂಟ ಫೌಂಡೇಶನ್ ನಾಲಾಸೋಪಾರ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರು, ಶ್ರೀ ದೇವಿ ಯಕ್ಷಕಲಾ ನಿಲಯ ನಾಲಾಸೋಪಾರ ವಿರಾರ್ ನ ಅಧ್ಯಕ್ಷ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ನಿರ್ದೇಶಕ, ಮುಂಬಯಿ ಬಂಟರ ಸಂಘದ ಜೊತೆ ಕೋಶಾಧಿಕಾರಿ, ಬಂಟ್ಸ್ ನೌ ಮಾಧ್ಯಮ ಸಂಸ್ಥೆಯ ಮಹಾಪೋಷಕ ಶಶಿಧರ ಕೆ ಶೆಟ್ಟಿ ಇನ್ನಂಜೆಯವರಿಗೆ ಅವರ ಸಾಮಾಜಿಕ ಸೇವೆಗಳು ಮತ್ತು ಸಮಾಜದಲ್ಲಿ ಅಪರಾಧ ಕಾರ್ಯಗಳು ನಡೆಯದಂತೆ ಜನಜಾಗೃತಿಯ ಸೇವಾ ಕಾರ್ಯಗಳನ್ನು ಮಾಡುತ್ತಾ ಬಂದಿರುವುದನ್ನು ಗಮನಿಸಿ ನಾಲಾಸೋಪಾರ ಅಚೋಲೆ ಪೊಲೀಸ್ ಠಾಣೆಯ ವರಿಷ್ಠ ಪೊಲೀಸ್ ಅಧಿಕಾರಿಯವರು ಗೌರವ ಪ್ರಶಸ್ತಿ ಪತ್ರ ನೀಡಿ ಗೌರವಿಸಿದ್ದಾರೆ.


ಶಶಿಧರ್ ಕೆ ಶೆಟ್ಟಿಯವರು ಪಾಲ್ಗರ್ ಜಿಲ್ಲೆಯಲ್ಲಿ ವಿವಿಧ ಭಾಷೆಯ ಸಂಘಟನೆಗಳ ಸೇವಾ ಕಾರ್ಯಗಳಿಗೆ ಪ್ರೋತ್ಸಾಹವನ್ನು ನೀಡುತ್ತಾ ಬಂದವರು. ಅಲ್ಲದೇ ವಸಾಯಿ ತಾಲೂಕಿನ ತುಳು – ಕನ್ನಡಿಗರ ಸಂಘ ಸಂಸ್ಥೆಗಳಿಗೆ ಧಾರ್ಮಿಕ ಕಾರ್ಯಗಳಿಗೆ ಮತ್ತಿತರ ಸಮಾಜ ಪರ ಸೇವಾ ಕಾರ್ಯಗಳಿಗೆ ಆರ್ಥಿಕ ಸಹಾಯ ಹಾಗೂ ಪ್ರೋತ್ಸಾಹವನ್ನು ನೀಡುತ್ತಾ ಪರಿಸರದ ಜನರಲ್ಲಿ ಒಗ್ಗಟ್ಟು, ಸಾಮರಸ್ಯ, ಬೆಳೆಯುವಲ್ಲಿ ವಿಶೇಷವಾಗಿ ಶ್ರಮಿಸುತ್ತಾ ಬಂದವರು. ಇವರ ಸೇವಾ ಕಾರ್ಯಗಳನ್ನು ಗುರುತಿಸಿ ಹಲವಾರು ಸಂಘಟನೆಗಳು ಸನ್ಮಾನಿಸಿ ಗೌರವಿಸಿದೆ. ಇದೀಗ ಪೊಲೀಸ್ ಇಲಾಖೆ ಕೂಡ ಇವರ ಸೇವೆಯನ್ನು ಗುರುತಿಸಿ ಪ್ರಶಸ್ತಿ ನೀಡಿ ಸನ್ಮಾನಿಸಿದೆ.

ಪೊಲೀಸ್ ಇಲಾಖೆಯ ಅತ್ಯುನ್ನತ ಗೌರವವನ್ನು ಸ್ವೀಕರಿಸಿದ ಶಶಿಧರ್ ಶೆಟ್ಟಿ ಅವರನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಮತ್ತು ಪದಾಧಿಕಾರಿಗಳು, ಬಂಟರ ಸಂಘದ ಅಧ್ಯಕ್ಷರಾದ ಪ್ರವೀಣ್ ಭೋಜ ಶೆಟ್ಟಿ ಮತ್ತು ಪದಾಧಿಕಾರಿಗಳು, ಮಾತೃಭೂಮಿ ಕೋ – ಆಪರೇಟಿವ್ ಕ್ರೆಡಿಟ್ ಸೊಸೈಟಿಯ ಕಾರ್ಯಾಧ್ಯಕ್ಷ ಉಳ್ತೂರು ಮೋಹನ್ ದಾಸ್ ಶೆಟ್ಟಿ ಮತ್ತು ನಿರ್ದೇಶಕರು, ಮೀರಾ – ಭಾಯಂದರ್ ನ ಸಂಘಟಕ, ಬಂಟರ ಸಂಘದ ಜೊತೆ ಕಾರ್ಯದರ್ಶಿ ಗಿರೀಶ್ ಶೆಟ್ಟಿ ತೆಳ್ಳಾರ್, ಬಂಟರ ಸಂಘದ ವಸಾಯಿ -ದಹಾಣು ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಮಂಜುನಾಥ್ ಶೆಟ್ಟಿ ಕೊಡ್ಲಾಡಿ ಮತ್ತು ಪದಾಧಿಕಾರಿಗಳು ಮತ್ತು ವಸಾಯಿ ತಾಲೂಕಿನ ತುಳು ಕನ್ನಡಿಗರು ಅಭಿನಂದಿಸಿದ್ದಾರೆ.





































































































