ಸವಣೂರು ಗ್ರಾ. ಪಂ. ಮಾಜಿ ಉಪಾಧ್ಯಕ್ಷ, ಸವಣೂರು ಸಿ.ಎ.ಬ್ಯಾಂಕ್ ಮಾಜಿ ಅಧ್ಯಕ್ಷ ಪುಣ್ಚಪ್ಪಾಡಿ ದೇವಸ್ಯ ಪಿ.ಡಿ. ಗಂಗಾಧರ್ ರೈ ಮತ್ತು ಸುವಾಸಿನಿ ಜಿ.ರೈ ಕಳ್ಳಿಗೆ ಬೀಡುರವರ ವೈವಾಹಿಕ ಜೀವನದ ಸುವರ್ಣ ಮಹೋತ್ಸವ ಸಮಾರಂಭವು ಅದ್ದೂರಿಯಾಗಿ ಮೇ 22 ರಂದು ಪುತ್ತೂರು ದರ್ಬೆ ಪ್ರಶಾಂತ್ ಮಹಲ್ ನ ಸಭಾಭವನದಲ್ಲಿ ಜರಗಿತು. ಪುಣ್ಚಪ್ಪಾಡಿ ದೇವಸ್ಯ ತರವಾಡು ಮನೆಯ ಯಜಮಾನ ವಿಶ್ವನಾಥ ರೈ ದಂಪತಿ ದೀಪ ಬೆಳಗಿಸಿ, ಕಾರ್ಯಕ್ರಮಕ್ಕೆ ಚಾಲನೆಗೈದರು. ಗಂಗಾಧರ ರೈ ಮತ್ತು ಸುವಾಸಿನಿ ಜಿ. ರೈಯವರುಗಳು ಪರಸ್ಪರ ಹಾರಾರ್ಪಣೆಗೈದರು, ಬಳಿಕ ಕೇಕ್ ಕತ್ತರಿಸಿದರು.
ಸರ್ವ ಕ್ಷೇತ್ರದಲ್ಲೂ ಸೈ ಎನಿಸಿದ ಗಂಗಣ್ಣ – ರಾಕೇಶ್ ರೈ : ಕಾರ್ಯಕ್ರಮದ ನಿರೂಪಕರಾದ, ದ. ಕ. ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ರಾಕೇಶ್ ರೈ ಕೆಡಿಂಜಿರವರು ಮಾತನಾಡಿ ಪಿ.ಡಿ. ಗಂಗಾಧರ ರೈ ಮತ್ತು ಸುವಾಸಿನಿ ಜಿ. ರೈಯವರ ದಾಂಪತ್ಯ ಜೀವನದ ಸುವರ್ಣ ಮಹೋತ್ಸವ ಆಚರಣೆಯನ್ನು ನೋಡುವ ಸೌಭಾಗ್ಯ ನಮಗೆ ದೊರೆತಿರುವುದು ತುಂಬಾ ಸಂತೋಷದ ವಿಚಾರವಾಗಿದೆ. ಪಿ.ಡಿ. ಗಂಗಾಧರ ರೈಯವರು ಕುಟುಂಬವನ್ನು ಪ್ರೀತಿಯಿಂದ ನೋಡಿಕೊಂಡು, ಕೃಷಿ, ಸಾಮಾಜಿಕ, ಶೈಕ್ಷಣಿಕ, ರಾಜಕೀಯ, ಸಾಮಾಜಿಕ ಮತ್ತು ಸಹಕಾರ ಕ್ಷೇತ್ರದಲ್ಲೂ ಸೈ ಎನಿಸಿಕೊಂಡಿದ್ದಾರೆ. ಗಂಗಾಧರ ರೈಯವರ ಪತ್ನಿ ಸುವಾಸಿನಿ ರೈಯವರು ಉತ್ತಮ ಗೃಹಿಣಿಯಾಗಿ ಪತಿಯ ಎಲ್ಲಾ ಕೆಲಸಗಳಿಗೆ ಬೆಂಬಲವನ್ನು ನೀಡಿದ್ದಾರೆ ಇವರ ಆದರ್ಶ ದಾಂಪತ್ಯ ಜೀವನ ಸಮಾಜಕ್ಕೆ ಮಾದರಿಯಾಗಿದೆ ಎಂದು ಹೇಳಿದರು.
ಶಿಕ್ಷಣಕ್ಕೆ ಆದ್ಯತೆ – ಗಿರಿಶಂಕರ್ ಸುಲಾಯ ದೇವಸ್ಯ : ಸವಣೂರು ಗ್ರಾ. ಪಂ. ಸದಸ್ಯ ಗಿರಿಶಂಕರ್ ಸುಲಾಯ ದೇವಸ್ಯರವರು ಮಾತನಾಡಿ ನಮ್ಮ ಮಾವನವರಾದ ಗಂಗಾಧರ ರೈಯವರು ನಮಗೆ ಉತ್ತಮ ಶಿಕ್ಷಣವನ್ನು ಪಡೆಯಲು ತುಂಬಾ ಪ್ರೋತ್ಸಾಹವನ್ನು ನೀಡಿದ್ದಾರೆ. ಗಂಗಾಧರ ರೈಯವರು ಉತ್ತಮ ಕ್ರೀಡಾಪಟುವಾಗಿದ್ದರು. ಶಿಸ್ತುಬದ್ಧವಾದ ಜೀವನ ಕ್ರಮವನ್ನು ಅವರು ರೂಢಿಸಿಕೊಂಡಿದ್ದರು. ಸಮಾಜದಲ್ಲಿ ನ್ಯಾಯ ಪಂಚಾತಿಗೆಯನ್ನು ಮಾಡುವ ಮೂಲಕ ಉತ್ತಮ ಹೆಸರನ್ನು ಪಡೆದಿದ್ದಾರೆ ಎಂದು ಹೇಳಿದರು.
ಗೌರವಯುತವಾದ ಬದುಕು – ಕೃಷ್ಣ ರೈ : ಸಾಮಾಜಿಕ ಮುಂದಾಳು ಕೃಷ್ಣ ರೈ ಪುಣ್ಚಪ್ಪಾಡಿ ತಳಮನೆರವರು ಮಾತನಾಡಿ ಸಮಾಜ ಮತ್ತು ಕುಟುಂಬದಲ್ಲಿ ಗೌರವಯುತವಾದ ಬದುಕು ನಡೆಸಿಕೊಂಡು ಬರುತ್ತಿರುವ ಗಂಗಾಧರ ರೈ ಸುವಾಸಿನಿ ರೈಯವರ ದಾಂಪತ್ಯ ಜೀವನದ ಸುವರ್ಣ ಮಹೋತ್ಸವ ಸಂಭ್ರಮವನ್ನು ಕಂಡು ತುಂಬಾ ಸಂತೋಷ ಆಗಿದೆ ಎಂದರು.
ವೇದಿಕೆಯಲ್ಲಿ ಪಿ.ಡಿ. ಕೃಷ್ಣಕುಮಾರ್ ರೈ ಪುಣ್ಚಪ್ಪಾಡಿ ದೇವಸ್ಯ, ಬಾಲಕೃಷ್ಣ ರೈ ಅಭ್ಯುದಯ ದೇವಸ್ಯ, ಈಶ್ವರಿ ಟಿ. ಸುಲಾಯ ಪುಣ್ಚಪ್ಪಾಡಿ ದೇವಸ್ಯ, ಪ್ರೇಮಲತಾ ಬಿ. ರೈ, ಸುನಂದಾ ದಯಾನಂದ ಶೆಟ್ಟಿ ಪರಾರಿ, ಸರಿತಾ ದಿನಕರ್ ರೈ, ಗಂಗಾಧರ್ ರೈ ಮತ್ತು ಸುವಾಸಿನಿ ರೈರವರ ಪುತ್ರರಾದ ಶರತ್ ಕುಮಾರ್ ರೈ, ಸನತ್ ಕುಮಾರ್ ರೈ, ಸೊಸೆಯಂದಿರಾದ ವಂದನಾ ಶರತ್, ಶಾಲಿನಿ ಸನತ್, ಮೊಮ್ಮಕ್ಕಳಾದ ಶ್ರದ್ಧನ್ ರೈ, ಧರಣ್ ರೈ, ಸನಿಹ ರೈ ಹಾಗೂ ಸನ್ನಿಧಿ ರೈರವರುಗಳು ಉಪಸ್ಥಿತರಿದ್ದರು. ಮಾನ್ವಿ ಜಿ. ಎಸ್ ದೇವಸ್ಯರವರು ಪ್ರಾರ್ಥನೆಗೈದರು. ಶರತ್ ಕುಮಾರ್ ರೈ ವಂದಿಸಿದರು. ಸಮಾರಂಭದಲ್ಲಿ ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ, ರಾಜಕೀಯ, ಸಹಕಾರ ಕ್ಷೇತ್ರದ ಮುಖಂಡರುಗಳು, ಉದ್ಯಮಿಗಳು, ಬಂಧುಗಳು ಹಾಗೂ ಹಿತೈಷಿಗಳು ಸೇರಿದಂತೆ ಸೇರಿದಂತೆ ಐನ್ನೂರಕ್ಕೂ ಹೆಚ್ಚು ಮಂದಿ ಭಾಗವಹಿಸಿದರು.