ವಿದ್ಯಾಗಿರಿ: ಸಂಶೋಧನೆಯ ಆರಂಭದಲ್ಲಿ ಬರಹಗಾರನ ಪಾತ್ರವನ್ನು ಮುಗಿಸಿ, ಓದುಗನ ಪಾತ್ರವನ್ನು ಮುಂದುವರಿಸಬೇಕು ಎಂದು ಸುರತ್ಕಲ್ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ- ಕರ್ನಾಟಕ (ಎನ್ಐಟಿಕೆ ) ರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೋ. ಅರುಣ್ ಎಂ ಇಸ್ಲೂರ್ ಹೇಳಿದರು. ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ರಸಾಯನಶಾಸ್ತ್ರ ವಿಭಾಗದ ವತಿಯಿಂದ ಕುವೆಂಪು ಸಭಾಂಗಣದಲ್ಲಿ ಮಂಗಳವಾರ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ನಡೆದ ಪೋಸ್ಟರ್ ತಯಾರಿಕೆ ಮತ್ತು ಪ್ರಸ್ತುತಿ ಹಾಗೂ ಸಂಶೋಧನಾ ವಿಧಾನ ಮತ್ತು ವೈಜ್ಞಾನಿಕ ಬರವಣಿಗೆ ಕೌಶಲ್ಯ ಎಂಬ ವಿಷಯ ಕುರಿತ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಸಂಶೋಧನೆಯು ಪ್ರಾಧ್ಯಾಪಕರಿಗೆ ಮಾತ್ರ ಸೀಮಿತವಲ್ಲ ವಿದ್ಯಾರ್ಥಿಗಳಿಗೂ ಅವಶ್ಯಕ. ಒಂದು ಸಂಶೋಧನಾ ಗುಂಪಿನ ಕಾರ್ಯವನ್ನು ನೋಡಿ ನಾವು ಕಲಿಯಬೇಕು ಎಂದರು. ಓದುಗರಾಗಿ ದಿನಕ್ಕೆ ಹದಿನೈದು ಲೇಖನಗಳನ್ನು ಓದುವಷ್ಟು ತಾಳ್ಮೆ ಇಂದು ನಮ್ಮಲ್ಲಿಲ್ಲ, ಬರಹದೊಂದಿಗೆ , ಓದುವವರಾಗಿರುವುದು ಕೂಡ ಮುಖ್ಯ. ಓದುವುದನ್ನು ರೂಡಿಸಿಕೊಳ್ಳಬೇಕು ಎಂದರು. ಸಂಶೋಧನೆ, ನಾವೀನ್ಯತೆ ಮತ್ತು ಪ್ರಾರಂಭದ ಪ್ರಾಮುಖ್ಯತೆ ಕುರಿತು ಮಾತನಾಡಿದ ಮತ್ತು ತಂತ್ರಜ್ಞಾನ ಕಾಲೇಜಿನ ಸಂಶೋಧನಾ ಪ್ರಾಧ್ಯಾಪಕ ಪ್ರೋ. ರಿಚರ್ಡ್ ಪಿಂಟೊ, ಸಂಶೋಧನೆ ಎಂದರೆ ಜ್ಞಾನದ ಹುಡುಕುವಿಕೆಯಾಗಿದೆ.
ಈ ನಡುವೆ ನಮ್ಮಲ್ಲಿ ಕುತೂಹಲ ಇರಬೇಕು. ಇತ್ತೀಚಿನ ದಿನಗಳಲ್ಲಿ ಸಂಶೋಧನಾ ಬರವಣಿಗೆಯಲ್ಲಿ ಹಲವಾರು ಸವಾಲುಗಳನ್ನು ಎದುರಿಸಬೇಕು. ನಮ್ಮಲ್ಲಿ ಆಸಕ್ತಿ ಇದ್ದಾಗ ಯೋಜನೆ ಮತ್ತು ರಚನೆಯನ್ನು ಅಭಿವೃದ್ಧಿಪಡಿಸಲು ಸಾಧ್ಯ. ಸಂಶೋಧನೆ ಮಾಡುವುದು ಮಾತ್ರವಲ್ಲ ಅದರ ಫಲಿತಾಂಶವನ್ನು ಪ್ರಸ್ತುತಗೊಳಿಸುವುದು ಅಷ್ಟೇ ಮುಖ್ಯ ಎಂದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ಪರಿಶ್ರಮ ಇದ್ದಾಗ ಮಾತ್ರ ಹೆಚ್ಚಿನ ಕಲಿಕೆ ಸಾಧ್ಯ. ನೂರಾರು ವೃತ್ತಿ ಕ್ಷೇತ್ರವನ್ನು ಗುರಿಯಾಗಿಸುವುದಕ್ಕಿಂತ ಒಂದೇ ಗುರಿಯನ್ನು ಗುರುತಿಸಿಕೊಳ್ಳಿ. ಸಂಶೋಧನೆಯು ತಪ್ಪು ಮೂಲಗಳ ಮೇಲೆ ಎಂದಿಗೂ ಅವಲಂಬಿತವಾಗಬಾರದು ಎಂದರೆ ಪರಿಶ್ರಮ ಮುಖ್ಯ, ಯಾವುದೇ ವೃತ್ತಿ ಕ್ಷೇತ್ರಕ್ಕೆ ಸಾಗಿದರು ನಮ್ಮಲ್ಲಿ ಬದ್ಧತೆ ಇರಲೇಬೇಕು ಎಂದರು.
ಪೆÇೀಸ್ಟರ್ ತಯಾರಿಕೆ ಮತ್ತು ಪ್ರಸ್ತುತಿಯಲ್ಲಿ ವಿಜೇತರಾದ ಅನಿಶ್ ತಸ್ನೀಮ್, ಸಾತ್ವಿಕ್ ಕೆ. ಜೆ , ಪೂಜಾ ರೈ ಅವರನ್ನು ಅಭಿನಂದಿಸಲಾಯಿತು. ಪ್ರಿಯಾ ಕಾರ್ಯಕ್ರಮ ನಿರೂಪಿಸಿ, ಅನುಶ್ರೀ ಸ್ವಾಗತಿಸಿ, ಹರ್ಷಾ ಹಾಗೂ ಚರಣ್ ಪ್ರಾರ್ಥಿಸಿ,
ನಿರೀಕ್ಷಾ ವಂದಿಸಿದರು. ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್, ಆಳ್ವಾಸ್ ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ, ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೋ. ರಾಜಕುಮಾರ ಭಟ್, ಪ್ರಾಧ್ಯಾಪಕ ಡಾ ಯುವರಾಜ್, ಡಾ ಜಯರಾಮ್ ಇದ್ದರು.