Author: admin
ಲೋಕೋಪಯೋಗಿ ಇಲಾಖೆಯ ಕಟಪಾಡಿ-ಶಿರ್ವ ಮುಖ್ಯ ರಸ್ತೆಯ ಶಿರ್ವ ಗ್ರಾ.ಪಂ. ವ್ಯಾಪ್ತಿಯ ಪಂಜಿಮಾರು ಬಸ್ ನಿಲ್ದಾಣದಿಂದ ರಾಬಿನ್ ಬಸ್ ನಿಲ್ದಾಣದವರೆಗಿನ ರಸ್ತೆಯಲ್ಲಿ ಹಲವಾರು ಅಪಘಾತಗಳು ನಡೆದು ಜೀವಬಲಿ ಪಡೆಯುತ್ತಿದ್ದು,ಅಪಘಾತ ವಲಯವಾಗಿ ಪರಿಣಮಿಸಿದೆ. ದಿನವೊಂದಕ್ಕೆ ಸಾವಿರಾರು ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತಿದ್ದು, ವಾಹನ ಸವಾರರಿಗೆ ಸಮಸ್ಯೆಯಾಗಿ ಪರಿಣಮಿಸಿದೆ.ವಾಹನ ದಟ್ಟಣೆಯಿರುವ ರಸ್ತೆಯ ರಾಬಿನ್ ಬಸ್ ನಿಲ್ದಾಣದ ತಿರುವು ಮತ್ತು ಪಂಜಿಮಾರು ಬಸ್ ನಿಲ್ದಾಣದಿಂದ ಮುಂದಕ್ಕೆ ಇರುವ ಕೋಡು-ಪಂಜಿಮಾರು ತಿರುವಿನಲ್ಲಿ ಆಗಾಗ್ಗೆ ರಸ್ತೆ ಅಪಘಾತಗಳು ನಡೆಯುತ್ತಿದ್ದು ವಾಹನ ಸವಾರರ ಜೀವಕ್ಕೆ ಸಂಚಕಾರವಿದೆ. ವೇಗವಾಗಿ ಬರುವ ವಾಹನಗಳು ತಿರುವಿನಲ್ಲಿ ನಿಯಂತ್ರಣ ಕಳೆದುಕೊಂಡು ಅಪಘಾತ ಸಂಭವಿಸುತ್ತಿರುತ್ತಿದೆ. ದ್ವಿಪಥ ರಸ್ತೆ ವಿಸ್ತರಣೆ ಯಾವಾಗ? ಕಟಪಾಡಿ-ಶಿರ್ವ 10.5 ಕಿ.ಮೀ. ರಾಜ್ಯ ಹೆದ್ದಾರಿಯ 8.5 ಕಿ.ಮೀ. ರಸ್ತೆ ಕಾಪು ಶಾಸಕರ ಅನುದಾನದ ಸುಮಾರು 7 ಕೋ.ರೂ. ವೆಚ್ಚದಲ್ಲಿ ಪಂಜಿಮಾರು ಫಲ್ಕೆಯವರೆಗೆ 2018ರಲ್ಲಿ ದ್ವಿಪಥಗೊಂಡು ವಿಸ್ತರಣೆಯಾಗಿತ್ತು. ಮಾಣಿಪ್ಪಾಡಿ ಫಲ್ಕೆಯಿಂದ ಶಿರ್ವ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನದವರೆಗಿನ ಸುಮಾರು 2 ಕಿ.ಮಿ. ರಸ್ತೆಯು ಅಂಕುಡೊಂಕಾಗಿದ್ದು 4 ವರ್ಷ…
ತುಳುನಾಡಿನ ಧಾರ್ಮಿಕ ಆಚರಣೆಗಳ ಹಿನ್ನೆಲೆಯಿರುವ 27ನೇ ವರ್ಷದ ಐತಿಹಾಸಿಕ ಶಿರ್ವ ನಡಿಬೆಟ್ಟು ಸೂರ್ಯ-ಚಂದ್ರ ಸಂಪ್ರದಾಯಬದ್ಧ ಜೋಡುಕರೆ ಕಂಬಳವು ನಡಿಬೆಟ್ಟು ಕಂಬಳ ಗದ್ದೆಯಲ್ಲಿ ನಡೆಯಿತು. ಎಲ್ಲೂರು ಶ್ರೀ ವಿಶ್ವೇಶ್ವರ ದೇವಸ್ಥಾನದ ಮಾಜಿ ಆಡಳಿತ ಮೊಕೇ¤ಸರ ಎಲ್ಲೂರುಗುತ್ತು ಪ್ರಫುಲ್ಲ ಶೆಟ್ಟಿ ದೀಪ ಬೆಳಗಿಸಿ ಜೋಡುಕರೆಗೆ ಕಾಯಿ ಒಡೆಯುವುದರ ಮೂಲಕ ಕಂಬಳವನ್ನು ಉದ್ಘಾಟಿಸಿದರು.ಧಾರ್ಮಿಕ ಹಿನ್ನೆಲೆಯನ್ನು ಹೊಂದಿರುವ ಶಿರ್ವ ನಡಿಬೆಟ್ಟು ಕಂಬಳವು ನಡಿಬೆಟ್ಟು ಚಾವಡಿಯ ದೈವ ಜುಮಾದಿಗೆ ಪೂಜೆ ಪುರಸ್ಕಾರ ನಡೆದ ಬಳಿಕ ಬಂಟ ಕೋಲ ನಡೆದು ಮೆರವಣಿಗೆಯಲ್ಲಿ ಕೊಂಬು, ವಾದ್ಯಘೋಷಗಳೊಂದಿಗೆ ಮನೆಯ ಕೋಣಗಳನ್ನು ಗದ್ದೆಗಿಳಿಸಲಾಯಿತು. ಹಗ್ಗ ಕಿರಿಯ ವಿಭಾಗದಲ್ಲಿ 30 ಜತೆ ಕೋಣಗಳು ಮತ್ತು ಸಬ್ಜೂನಿಯರ್ ವಿಭಾಗದಲ್ಲಿ 48 ಜತೆ ಒಟ್ಟು 78 ಜತೆ ಕೋಣಗಳು ಕಂಬಳದಲ್ಲಿ ಭಾಗವಹಿಸಿದ್ದವು. ಮನೆತನದ ಕೋಣಗಳನ್ನು ಗದ್ದೆಗಿಳಿಸಿ ಓಡಿಸುವುದರೊಂದಿಗೆ ಸಾಂಪ್ರದಾಯಿಕ ಜೋಡುಕರೆ ಕಂಬಳ ಸಂಪನ್ನಗೊಂಡಿತು.ಕಾರ್ಯಕ್ರಮದಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ, ಶಿರ್ವ ಗ್ರಾ.ಪಂ. ಅಧ್ಯಕ್ಷ ರತನ್ ಕುಮಾರ್ ಶೆಟ್ಟಿ,…
ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಗೃಹಲಕ್ಷ್ಮಿ ಯೋಜನೆಯನ್ನು ಬಹಳ ಮಹತ್ವವಾಗಿ ಅನುಷ್ಠಾನಗೊಳಿಸಲು ವಿವಿಧ ಗ್ರಾಮ ಪಂಚಾಯತ್ ಕಾರ್ಯ ನಿರ್ವಹಣೆ ಸಿದ್ಧಪಡಿಸಿದೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಗ್ರಾಮ ಪಂಚಾಯತ್ ಮೊಳಹಳ್ಳಿ ಇವರ ಸಹಯೋಗದೊಂದಿಗೆ ಗೃಹಲಕ್ಷ್ಮಿ ಯೋಜನೆ ಅನುಷ್ಠಾನ ಕಾರ್ಯಕ್ರಮ- 2023 ಜರುಗಿತು. ಅದೇ ರೀತಿ ಸಿಎಂ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ನೇತೃತ್ವದ ಸರಕಾರ ಮೈಸೂರಿನಲ್ಲಿಯೂ ಅಧಿಕೃತವಾಗಿ ಗೃಹಲಕ್ಷ್ಮಿ ಯೋಜನೆಗೆ ಚಾಲನೆಯನ್ನು ನೀಡಿದರು. ಅದೇ ರೀತಿ ಕುಂದಾಪುರ ತಾಲೂಕಿನ ಮೊಳಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಗೃಹಲಕ್ಷ್ಮಿ ಯೋಜನೆಯ ಅನುಷ್ಠಾನ ಕಾರ್ಯಕ್ರಮ ಗ್ರಾಮ ಪಂಚಾಯತ್ ಆವರಣದಲ್ಲಿ ಸಂಭ್ರಮದಿಂದ ಜರುಗಿತು. ಗೃಹಿಣಿಯರು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಗ್ರಾಮ ಪಂಚಾಯತ್ ಆವರಣಕ್ಕೆ ಆಗಮಿಸಿ ರಂಗೋಲಿಯನ್ನು ಹಾಕುವುದರ ಮೂಲಕ, ನಾ – ನಾಯಕಿ ಎನ್ನುವ ಘೋಷಣೆಯೊಂದಿಗೆ ಗೃಹಲಕ್ಷ್ಮಿ ಯೋಜನೆಯನ್ನು ಬರಮಾಡಿಕೊಂಡರು. ಕಾಂಗ್ರೆಸ್ ಸರ್ಕಾರದ ಚುನಾವಣಾ ಪ್ರಣಾಳಿಕೆಯಲ್ಲಿ 5 ಗ್ಯಾರಂಟಿಗಳನ್ನು ಘೋಷಿಸಿದ್ದಾರೆ. ಅದೇ ರೀತಿ “ನುಡಿದಂತೆ ನಡೆದಿದ್ದೇವೆ” ಎನ್ನುವ…
ಈ ಮೀಡಿಯಾ ಕನ್ನಡ ವೆಬ್ ಸೈಟ್ ಇದರ ಅನಾವರಣ ಕಾರ್ಯಕ್ರಮ ಕಾಪುವಿನ ರೋಹಿತ್ ಆಳ್ವ ಹಾಗೂ ಪ್ರಶಾಂತ್ ಶೆಟ್ಟಿ ಮಾಲಕತ್ವದ ಹೋಟೆಲ್ K1 ನಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಭಾಗವಹಿಸಿ ಈ ಮೀಡಿಯಾ ವೆಬ್ ಸೈಟ್ ಅನಾವರಣಗೊಳಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ನಿಕಟಪೂರ್ವ ಶಾಸಕರಾದ ಲಾಲಾಜಿ ಆರ್ ಮೆಂಡನ್, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ರಾಜೇಶ್ ಶೆಟ್ಟಿ, ಕಾಪು ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಹರೀಶ್ ಹೆಜಮಾಡಿ, ಪಡುಬಿದ್ರಿ ಆಸ್ಪೆನ್ ಎಸ್ ಇ ಝೆಡ್ ನ ಮುಖ್ಯಸ್ಥರಾದ ಶ್ರೀ ಅಶೋಕ್ ಶೆಟ್ಟಿ, ಎಸ್.ಕೆ.ಪಿ.ಎ ಅಧ್ಯಕ್ಷರಾದ ವಿನೋದ್ ಕಾಂಚನ್, ಪತ್ರಕರ್ತರ ಸಂಘದ ರಜತ ಮಹೋತ್ಸವ ಸಮಿತಿ ಸಂಚಾಲಕರಾದ ಮಹಮ್ಮದ್ ಶರಿಫ್ ಉಪಸ್ಥಿತರಿದ್ದು ಸಂಸ್ಥೆಗೆ ಶುಭ ಕೋರಿದರು.
ಕರ್ನಾಟಕ ರಾಜ್ಯ ಸರಕಾರಿ ವೈದ್ಯಾಧಿಕಾರಿಗಳ ಸಂಘ ದಕ್ಷಿಣ ಕನ್ನಡ ಜಿಲ್ಲಾ ಶಾಖೆಯ ಅಧ್ಯಕ್ಷರಾಗಿರುವ ಡಾ. ದೀಪಕ್ ರೈ ಅವರು 2000 ನೇ ಇಸವಿಯಲ್ಲಿ ಲಿಬಿಯ ದೇಶಕ್ಕೆ ತೆರಳಿ ಅಲ್ಲಿ ಸರಕಾರಿ ಆಸ್ಪತ್ರೆಯಲ್ಲಿ 2007 ರವರೆಗೆ ವೈದ್ಯರಾಗಿ ಸೇವೆ ಸಲ್ಲಿಸಿದರು. ವಿದೇಶದಲ್ಲಿ ವೈದ್ಯರಿಗೆ ಉತ್ತಮ ಅವಕಾಶಗಳಿದ್ದಾಗಲೂ ಸ್ವದೇಶಕ್ಕೆ ಮರಳಿ ಸರಕಾರಿ ವೈದ್ಯಾಧಿಕಾರಿಯಾಗಿ ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸಬೇಕು. ಆರೋಗ್ಯ ಕ್ಷೇತ್ರದಲ್ಲಿ ವಿಶೇಷ ಬದಲಾವಣೆ ತರಬೇಕು ಎನ್ನುವ ಅಭಿಲಾಷೆಯಿಂದ ಪುತ್ತೂರಿನ ತಾಲೂಕು ಆಸ್ಪತ್ರೆಗೆ ಗುತ್ತಿಗೆ ಆಧಾರದ ಮೇಲೆ ಸೇವೆಗೆ ನಿಯೋಜನೆಗೊಂಡರು. ಕಳೆದ 17 ವರ್ಷಗಳಿಂದ ಸರಕಾರಿ ಸೇವೆಯನ್ನು ಮಾಡುತ್ತಿರುವ ದೀಪಕ್ ರೈಯವರು ಕೋವಿಡ್ ಸಂದರ್ಭದಲ್ಲಿ ಪುತ್ತೂರು ತಾಲೂಕಿಗೆ ನೀಡಿದ ಸೇವೆ ಅತ್ಯಂತ ವಿಶೇಷವಾದದ್ದು. ಪುತ್ತೂರು ಕಡಬ ತಾಲೂಕುಗಳಲ್ಲಿ ಕೋವಿಡ್ ಸಾಂಕ್ರಮಿಕ ರೋಗದ ಹಾವಳಿಯನ್ನು ತಡೆಯುವ ತಂಡದ ಸಾರಥ್ಯವನ್ನು ವಹಿಸಿಕೊಂಡು ಜನಮನ್ನಣೆಗೆ ಪಾತ್ರರಾದರು. ವೈದ್ಯಕೀಯ ಕ್ಷೇತ್ರದಲ್ಲಿ 35 ವರ್ಷಗಳ ಅನುಭವ ಹೊಂದಿರುವ ಡಾಕ್ಟರ್ ದೀಪಕ್ ರೈಯವರು 2021ರ ಜೂನ್ 11ರಂದು ಪುತ್ತೂರು ತಾಲೂಕಿನ ಆರೋಗ್ಯ ಅಧಿಕಾರಿಯಾಗಿ…
ಜನ್ಮ ಭೂಮಿಯನ್ನು ತೊರೆದು ಕರ್ಮ ಭೂಮಿಯಲ್ಲೇ ನಮ್ಮ ಅಸ್ಥಿತ್ವವನ್ನು ಕಂಡುಕೊಂಡ ನಾವು ನಮ್ಮ ನಾಡಿನ ಸಂಸ್ಕೃತಿ, ಸಂಸ್ಕಾರ ಆಚರಣೆಗಳನ್ನು ಮರೆಯದೇ ನಮ್ಮ ಬಂಟರ ಸಂಘದಲ್ಲಿ ಮಾಡುತ್ತಾ ಬಂದಿದ್ದೇವೆ. ಅದೇ ಪ್ರಕಾರ ನಮ್ಮ ಬಂಟ ಕಲಾವಿದರ ಕೂಡುವಿಕೆಯ ಶ್ರೀ ಮಹಾವಿಷ್ಣು ಕೃಪಾಪೋಷಿತ ಬಂಟ ಯಕ್ಷಕಲಾ ವೇದಿಕೆಯ ವಾರ್ಷಿಕೋತ್ಸವ ಹಾಗೂ ಬಂಟ ದಿನಾಚರಣೆಯನ್ನು ಕೂಡ ಇದೇ ಸಂದರ್ಭ ಮಾಡುತ್ತಿರುವುದು ಕೂಡ ಅರ್ಥಪೂರ್ಣವಾಗಿದೆ. ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮಿತಿಯ ಕಾರ್ಯಧ್ಯಕ್ಷ ಮೋಹನ್ ರೈ ಅವರ ಮುಂದಾಳತ್ವದಲ್ಲಿ ಇಲ್ಲಿ ಉತ್ತಮ ಕಾರ್ಯಕ್ರಮ ನಡೆಯುತ್ತಿದೆ ಎನ್ನಲು ಸಂತೋಷವಾಗುತ್ತಿದೆ. ಇಲ್ಲಿ ಹಿರಿಯ ಕಲಾವಿದ ದಾಮೋದರ ಶೆಟ್ಟಿ ಇರುವೈಲು ಅವರಿಗೆ ಕಣಂಜಾರು ಆನಂದ ಶೆಟ್ಟಿ ಸ್ಮಾರಕ ಪ್ರಶಸ್ತಿ ಹಾಗೂ ಕಪೋಲ್ ವಿದ್ಯಾನಿಧಿ ಇಂಟರ್ ನ್ಯಾಷನಲ್ ಸ್ಕೂಲ್ ನ ಡಾ. ರೇಷ್ಮಾ ಅಶೋಕ್ ಹೆಗ್ಡೆ ಅವರಿಗೆ ಪ್ರೇಮ ನಾರಾಯಣ ರೈ ಪ್ರಶಸ್ತಿಯನ್ನು ನೀಡಿರುವುದು ಅರ್ಥಪೂರ್ಣವಾಗಿದೆ. ಇಲ್ಲಿ ಮುಂಡ್ಕೂರು ಕ್ಷೇತ್ರ ಮಹಾತ್ಮೆ ಎಂಬ ಯಕ್ಷಗಾನವನ್ನು ಸಾಂಸ್ಕೃತಿಕ ಸಮಿತಿಯವರು ಆಯೋಜಿಸಿದ್ದಾರೆ. ಕಿಕ್ಕಿರಿದ ಸಭಾಗೃಹವನ್ನು ನೋಡುವಾಗ ನಮ್ಮವರ…
ಬಂಟರ ಸಂಘ ಮುಂಬಯಿ ಇದರ ಅಧ್ಯಕ್ಷ ಚಂದ್ರಹಾಸ ಕೆ. ಶೆಟ್ಟಿಯವರ ಮಾರ್ಗದರ್ಶನದಲ್ಲಿ ಹಾಗೂ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಶಾಂತಾರಾಮ್ ಬಿ. ಶೆಟ್ಟಿಯವರ ನೇತೃತ್ವದಲ್ಲಿ ಪ್ರತೀ ವರ್ಷ ಸಮಾಜ ಕಲ್ಯಾಣ ಸಮಿತಿಯ ಆಶ್ರಯದಲ್ಲಿ ಕೊಡಲ್ಪಡುವ ಧನ ಸಹಾಯವು ಆರ್ಥಿಕವಾಗಿ ಸಂಕಷ್ಟದಲ್ಲಿರುವ ಸಮಾಜದ ಬಂಟ ಬಂಧುಗಳ ವಿಧ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು, ವಾರ್ಷಿಕ ವಿಧವಾ ವೇತನ, ಮತ್ತು ಮಾನಸಿಕ ಅಸ್ವಸ್ಥೆಯಲ್ಲಿರುವ ಯಾ ವಿಕಲಾಂಗ ಚೇತನರಿಗೆ ಆರ್ಥಿಕ ಧನ ಸಹಾಯ ವಿತರಣೆಯು ಜೂನ್ ತಿಂಗಳಲ್ಲಿ ನಡೆಯಲಿದೆ. ಈ ಪ್ರಯುಕ್ತ ಅರ್ಜಿ ವಿತರಣೆಯು ಬಂಟರ ಸಂಘ ಮುಂಬಯಿ ಇದರ ಮೀರಾ ಭಯಂದರ್ ಪ್ರಾದೇಶಿಕ ಸಮಿತಿಯ ಆಶ್ರಯದಲ್ಲಿ ಕಾರ್ಯಾಧ್ಯಕ್ಷ ಶಿವಪ್ರಸಾದ್ ಶೆಟ್ಟಿಯವರ ಸಮಕ್ಷಮದಲ್ಲಿ ಹಾಗೂ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಭಾಸ್ಕರ್ ಶೆಟ್ಟಿಯವರ ಮುಂದಾಳತ್ವದಲ್ಲಿ ಇದೇ ಬರುವ ಮಾ.19ರ ಆದಿತ್ಯವಾರದಂದು ರೈ ಎಜ್ಯುಕೇಶನ್ ಟ್ರಸ್ಟ್ ನ ಸೈಂಟ್ ಅಗ್ನೇಸಿಯಸ್ ಹೈಸ್ಕೂಲ್, ಎಸ್. ಎನ್ ಕಾಲೇಜ್ ಸಮೀಪ ಶಿವಶಕ್ತಿ ನಗರ, ನವಘರ್ ರೋಡ್, ಭಯಂದರ್…
ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಬಸವರಾಜ ಬೊಮ್ಮಾಯಿ ಅವರು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಶ್ರೀ ಐಕಳ ಹರೀಶ್ ಶೆಟ್ಟಿ ಅವರನ್ನು ಬೆಂಗಳೂರಿನ ಮುಖ್ಯಮಂತ್ರಿಗಳ ನಿವಾಸದ ಕಚೇರಿಗೆ ಕರೆಸಿ ಬಂಟ ಸಮುದಾಯದ ಎಲ್ಲಾ ವಿಚಾರಗಳ ಬಗ್ಗೆ ಕೂಲಂಕುಶವಾಗಿ ಮಾತುಕತೆ ಮಾಡಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಮುಲ್ಕಿ ರಾಷ್ಟ್ರೀಯ ಹೆದ್ದಾರಿ ಬಳಿಯ ಕನ್ಯಾನ ಸದಾಶಿವ ಶೆಟ್ಟಿ ಸಂಕೀರ್ಣದಲ್ಲಿ ನಿರ್ಮಾಣಗೊಳ್ಳಲಿರುವ ಸಮುದಾಯ ಭವನ ಮತ್ತು ಇತರ ಯೋಜನೆಗಳಿಗೆ ಸರಕಾರದ ಅನುದಾನವನ್ನು ಬಿಡುಗಡೆಗೊಳಿಸಿದರು. ಬಂಟ ಸಮುದಾಯವನ್ನು 2A ಕೆಟಗರಿಗೆ ಸೇರಿಸುವ ಬಗ್ಗೆ ಆಶ್ವಾಸನೆಯನ್ನು ನೀಡಿ, ಬಂಟರ ಯಾನೆ ನಾಡವರ ಎಲ್ಲಾ ಆಶೋತ್ತರಗಳನ್ನು ಈಡೇರಿಸುವುದಾಗಿ ಒಕ್ಕೂಟದ ಅಧ್ಯಕ್ಷರಿಗೆ ಭರವಸೆಯನ್ನು ನೀಡುವ ಮೂಲಕ ಸಮುದಾಯದ ಹೋರಾಟಕ್ಕೆ ಒಂದು ಹಂತದ ಜಯ ದೊರಕಿದೆ. ದಿನಾಂಕ 07.03.2023 ರಂದು ಮುಖ್ಯಮಂತ್ರಿಗಳ ನಿವಾಸದಲ್ಲಿ ತಡರಾತ್ರಿ 11 ಗಂಟೆಗೆ ಶ್ರೀ ಐಕಳ ಹರೀಶ್ ಶೆಟ್ಟಿಯವರ ಜೊತೆ ವಿಸ್ತೃತವಾದ ಮಾತುಕತೆ ನಡೆಸಿ ಐಕಳ ಅವರು ಬಂಟ ಸಮಾಜದ ಎಲ್ಲಾ ವಿಚಾರಗಳನ್ನು ಮನದಟ್ಟು…
ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಮೇಳದ ಸಂಪೂರ್ಣ ಶ್ರೀ ದೇವಿ ಮಹಾತ್ಮೆ ದಿನಾಂಕ 27-02-2023 ರಂದು ಸಂಜೆ 6 ಗಂಟೆಯಿಂದ ಹಿರಿಯಡ್ಕ ಕೋಟ್ನಕಟ್ಟೆ ಗಾಂಧಿ ಮೈದಾನದಲ್ಲಿ ಶ್ರೀಮತಿ ಪುಷ್ಪಲತಾ ಶೆಟ್ಟಿ ಹಾಗೂ ಗುಂಡಿಬೈಲು ಬಾಲಕೃಷ್ಣ ಶೆಟ್ಟಿಯವರ ಸೇವಾ ಬಯಲಾಟವು ನಡೆಯಲಿದೆ. ಅದೇ ದಿನ ಬೆಳಗ್ಗೆ ಅವರ ಸ್ವಗೃಹ ಸಾಯಿದೀಪದಲ್ಲಿ 10 ಗಂಟೆಗೆ ಗಣಹೋಮ, ಮದ್ಯಾಹ್ನ 12 ಗಂಟೆಯಿಂದ ಓಂಕಾರ ಮ್ಯೂಸಿಕಲ್ ಸ್ಟಾರ್ಸ್ ಕುಂದಾಪುರ ಬಳಗದಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ. ಮದ್ಯಾಹ್ನ ಅನ್ನಸಂತರ್ಪಣೆಯೂ ನಡೆಯಲಿದೆ. ಸಮಾಜ ಬಾಂಧವರು ಈ ಎಲ್ಲಾ ಕಾರ್ಯಕ್ರಮಗಳಿಗೆ ಆಗಮಿಸಿ ಪ್ರಸಾದ ಸ್ವೀಕರಿಸಿ ಶ್ರೀ ದೇವರ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಬಾಲಕೃಷ್ಣ ಶೆಟ್ಟಿ ಕುಟುಂಬಸ್ಥರು ವಿನಂತಿಸಿಕೊಂಡಿದ್ದಾರೆ. ಸೌಮ್ಯ ಸ್ವಭಾವದ ಶ್ರೀ ಗುಂಡಿಬೈಲು ಬಾಲಕೃಷ್ಣ ಶೆಟ್ಟಿಯವರು ಓರ್ವ ಯಶಸ್ವೀ ಉದ್ಯಮಿಯಾಗಿ, ಹಲವಾರು ವರ್ಷಗಳಿಂದ ಸಮಾಜಸೇವೆಯನ್ನು ಮಾಡುತ್ತಾ ಬಂದಿದ್ದಾರೆ. ಕೊರೋನ ಸಂಧರ್ಭದಲ್ಲಿ ಹಲವಾರು ಬಂಟ ಕುಟುಂಬಗಳಿಗೆ ಆಸರೆಯಾಗಿ ನಿಂತ ಶ್ರೀಯುತರು ಧಾರ್ಮಿಕ ರಂಗದಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡು ಬಡ…
ವಿಶ್ವ ವಿದ್ಯಾನಿಲಯ ಕಾಲೇಜು ರವೀಂದ್ರ ಕಲಾಕೇಂದ್ರ ಹಂಪನ ಕಟ್ಟೆ ಮಂಗಳೂರಿನಲ್ಲಿ ಡಾ.ದಯಾನಂದ ಪೈ ,ಸತೀಶ್ ಪೈ. ಯಕ್ಷಗಾನ ಅಧ್ಯಯನ ಕೇಂದ್ರ ಮಂಗಳೂರು ವಿಶ್ವವಿದ್ಯಾನಿಲಯ ಯಕ್ಷಾಂಗಣ ಮಂಗಳೂರು ಕರ್ನಾಟಕ ಯಕ್ಷಭಾರತಿ ಪುತ್ತೂರು ಕನ್ನಡ ರಾಜ್ಯೋತ್ಸವ ಕಲಾ ಸಂಭ್ರಮ ಕಾರ್ಯಕ್ರಮದ ಸುಂದರ ಸಮಾರಂಭದಲ್ಲಿ ದಶಮಾನೋತ್ಸವ ಸಂದರ್ಭದ ಯಕ್ಷಾಂಗಣ ರಾಜ್ಯೋತ್ಸವ ಪ್ರಶಸ್ತಿಯನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಮಾನ್ಯ ಅಧ್ಯಕ್ಷರಾದ ಶ್ರೀ ಐಕಳ ಹರೀಶ್ ಶೆಟ್ಟಿ ಅವರಿಗೆ ಪ್ರದಾನ ಮಾಡಲಾಯಿತು.