ನಿಟ್ಟೆ ಇನ್ಸ್ಟಿಟ್ಯೂಟ್ ಆಫ್ ಕಮ್ಯುನಿಕೇಷನ್ ವತಿಯಿಂದ ಮೇ 31 ಸಂಸ್ಥೆಯ ಆವರಣದಲ್ಲಿ ‘ನಿಟ್ಟೆ ಕ್ರಿಯೇಟಿವಿಟಿ ಫೆಸ್ಟಿವಲ್‘‘ ಅನ್ನು ಹಮ್ಮಿಕೊಂಡಿದೆ. ದಿನವಿಡೀ ನಡೆಯುವ ಈ ಕಾರ್ಯಕ್ರಮದಲ್ಲಿ ಉಪನ್ಯಾಸಗಳು ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಇರಲಿವೆ. ಕೊಗ್ಗಾ ಭಾಸ್ಕರ್ ಕಾಮತ್ ಮತ್ತು ತಂಡದಿಂದ ಯಕ್ಷಗಾನ ಬೊಂಬೆ ಪ್ರದರ್ಶನವು ಈ ಕಾರ್ಯಕ್ರಮದ ಆಕರ್ಷಣೆಗಳಲ್ಲಿ ಒಂದಾಗಿರಲಿದೆ. ನಿಟ್ಟೆ ಕ್ರಿಯೇಟಿವಿಟಿ ಫೆಸ್ಟ್ನ ಎರಡನೇ ಆವೃತ್ತಿಯನ್ನು ಎಂ.ಎ (ಎರಡನೇ ವರ್ಷ) ವಿದ್ಯಾರ್ಥಿಗಳು ಈವೆಂಟ್ ಮ್ಯಾನೇಜ್ಮೆಂಟ್ ವಿಷಯದಲ್ಲಿ ತಮ್ಮ ಅಧ್ಯಯನದ ಭಾಗವಾಗಿ ಆಯೋಜಿಸುತ್ತಿದ್ದಾರೆ.
ಕಾರ್ಯಕ್ರಮಕ್ಕೆ ಆಗಮಿಸುವ ಸಂಪನ್ಮೂಲ ವ್ಯಕ್ತಿಗಳ ಮಾಹಿತಿ ಹೀಗಿದೆ:
ಕಾರ್ತಿಕ್ ವೆಂಕಟೇಶ್ – ಸಂಪಾದಕರು, ಪೆಂಗ್ವಿನ್ ಇಂಡಿಯಾ
ಮೊಹಮ್ಮದ್ ಇಸ್ಮಾಯಿಲ್ – ಉಪಾಧ್ಯಕ್ಷರು, ಜಿಯೋ ಸಿನಿಮಾ
ರಿತ್ವಿಕ್ ಕಾಯ್ಕಿಣಿ – ಸಂಗೀತ ಸಂಯೋಜಕರು
ಮಮತಾ ರೈ – ಸಂಸ್ಥಾಪಕ ಅಧ್ಯಕ್ಷರು, ಕೇದಿಕೆ ಟ್ರಸ್ಟ್
ಚಂಡೆ ಮತ್ತು ಪಿಟೀಲು ಜುಗಲ್ಬಂದಿ – ಶ್ರೀ ಗುರು ಚಂಡೆ ಸೆಟ್ ಮತ್ತು ಆದ್ಯಾ ವಿಜಯನ್, ಮಂಗಳೂರು.
ಭಾಸ್ಕರ್ ಕೊಗ್ಗಾ ಕಾಮತ್ ಅವರಿಂದ ಯಕ್ಷಗಾನ ಬೊಂಬೆ ಪ್ರದರ್ಶನ. (ಚೂಡಾಮಣಿ ಲಂಕಾ ದಹನ)
ವಿನ್ಯಾಸ ಹ್ಯಾಂಡ್ಲೂಮ್ಸ್, ಶಿವಮೊಗ್ಗ – ಇವರ ಸಹಯೋಗದೊಂದಿಗೆ ಕಾರ್ಯಕ್ರಮದಲ್ಲಿ ಕೈಮಗ್ಗ ಸೀರೆಗಳು, ವಸ್ತುಗಳು ಮತ್ತು ರೆಡಿಮೇಡ್ ವಸ್ತ್ರಗಳ ಪ್ರದರ್ಶನ ಮತ್ತು ಮಾರಾಟವೂ ಇರಲಿದೆ.