ಬಂಟರ ಸಂಘ ಮುಂಬೈಯ ಸಿಟಿ ಪ್ರಾದೇಶಿಕ ಸಮಿತಿಯ ತಂಡದವರಿಂದ ನೂತನ ಪರಿಕಲ್ಪನೆ ಮನೆಗೆ – ಮನಕ್ಕೆ ಭಜನ ಸತ್ಸಂಗವನ್ನು ಆರಂಭಿಸಿದೆ. ಸನಾತನ ಸoಸ್ಕೃತಿಯನ್ನು ಉಳಿಸುವ ಮುನ್ನಡೆಸುವ ಸಲುವಾಗಿ ಮುಂದಿನ ಪೀಳಿಗೆಗೆ ಅದನ್ನು ಪರಿಚಯಿಸುವ ಸಲುವಾಗಿ ಮನೆ ಮನ ಭಜನೆ ಕಾರ್ಯಕ್ರಮವನ್ನು ಕಾರ್ಯಾಧ್ಯಕ್ಷರಾದ ಶ್ರೀ ಅಶೋಕ ಪಕ್ಕಳ ಅವರ ಮುತುವರ್ಜಿಯಲ್ಲಿ ಹೊಸ ಯೋಜನೆ ಯೋಚನೆಯೊಂದಿಗೆ ಆರಂಭಿಸಿದೆ. ಸುಮಾರು 25 ಮಂದಿಯ ಸಿಟಿ ಪ್ರಾದೇಶಿಕ ಸಮಿತಿಯ ಭಜನಾ ತಂಡ ಈಗಾಗಲೇ ಎರಡು ಮನೆ ಮನ ಭಜನೆ ಕಾರ್ಯಕ್ರಮ ಪೂರ್ತಿಗೊಳಿಸಿದೆ. ಇತ್ತೀಚೆಗೆ ಶ್ರೀ ದಿಲೀಪ್ ಶೆಟ್ಟಿ – ಶ್ರೀಮತಿ ವೃಂದ ಡಿ ಶೆಟ್ಟಿ ದಂಪತಿಗಳ ಸ್ವಗ್ರಹದಲ್ಲಿ ಭಜನ ಸತ್ಸಂಗ ನಡೆಸಲಾಯಿತು.
ಸಿಟಿ ಪ್ರಾದೇಶಿಕ ಸಮಿತಿಯ ಮಾಜಿ ಕಾರ್ಯಾಧ್ಯಕ್ಷರಾದ ಕೃಷ್ಣ ಶೆಟ್ಟಿ , ಸಂಚಾಲಕರಾದ ಶ್ರೀ ಶಿವರಾಮ ಶೆಟ್ಟಿ ಕಾರ್ಯನಗುತ್ತು, ಉಪ ಕಾರ್ಯಾಧ್ಯಕ್ಷರಾದ ಶ್ರೀ ಪದ್ಮನಾಭ ಶೆಟ್ಟಿ , ಕಾರ್ಯದರ್ಶಿ ಶ್ರೀ ಸುರೇಂದ್ರ ಕುಮಾರ್ ಶೆಟ್ಟಿ ಮಾರ್ನಾಡ್ , ಮಾಜಿ ಕಾರ್ಯಾಧ್ಯಕ್ಷೆಯರು ಶ್ರೀಮತಿ ಕಲ್ಪನಾ ಕೃಷ್ಣ ಶೆಟ್ಟಿ, ಶ್ರೀಮತಿ ಅನಿತಾ ಅಶೋಕ್ ಶೆಟ್ಟಿ ಮತ್ತು ಭಜನಾ ಸಮಿತಿಯ ಕಾರ್ಯಾಧ್ಯಕ್ಷೆ ಶೋಭಾ ಶೆಟ್ಟಿ ಮತ್ತು ಪೂರ್ತಿ ಬಳಗದವರಿಂದ ಒಂದೂವರೆ ಗಂಟೆಯಷ್ಟು ಕಾಲ ಭಜನೆಯನ್ನು ನಡೆಸಿಕೊಡಲಾಯಿತು . ಶ್ರೀ ದಿಲೀಪ್ ಶೆಟ್ಟಿ ದಂಪತಿ ಮತ್ತು ಪರಿವಾರದವರನ್ನು ಸಿಟಿ ಪ್ರಾದೇಶಿಕ ಸಮಿತಿಯ ಪರವಾಗಿ ಭಜನೆಯ ನಂತರ ಶಾಲು ಹೊದಿಸಿ ನಡೆಸಿಕೊಡಲಾಯಿತು. ಈಗಾಗಲೇ 16 ಭಜನೆಗಳು ಬುಕಿಂಗ್ ಆಗಿದೆ.