Author: admin
ಹಣಕಾಸು ಕ್ಷೇತ್ರದಲ್ಲಿ ಇಡೀ ವಿಶ್ವ ಕುತೂಹಲದಿಂದ ಗಮನಿಸುತ್ತಿರುವ ವ್ಯಕ್ತಿ ಇಸ್ಸಾರ್ ಫೈನಾನ್ಸಿಯಲ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ನ ಆಡಳಿತ ನಿರ್ದೇಶಕ ಡಾ. ಆರ್ ಕೆ ಶೆಟ್ಟಿಯವರು ಜೀವವಿಮಾ ಕ್ಷೇತ್ರದ ಸಲಹೆಗಾರರಾಗಿ ಮುಂಬಯಿ ನಗರ ಮಾತ್ರವಲ್ಲದೇ ವಿಶ್ವದ ನಲವತ್ತೆರಡು ರಾಷ್ಟ್ರಗಳಲ್ಲಿ ಪರಿಚಿತರಿರುವ ಪ್ರಪ್ರಥಮ ಭಾರತೀಯ. ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಪ್ರಶಸ್ತಿಗಳಿಗೆ ಭಾಜನರಾದ ಬಂಟ ಜನಾಂಗದ ಹೆಮ್ಮೆಯ ಪುತ್ರ. ಘನ ಮಹಾರಾಷ್ಟ್ರ ಸರಕಾರದ ಮಾನ್ಯ ರಾಜ್ಯಪಾಲರಾದ ಶ್ರೀ ಭಗತ್ ಸಿಂಗ್ ಕಿಶ್ಯಾರಿ ಅವರು ರಾಜಭವನದಲ್ಲಿ ಆರ್ ಕೆ ಶೆಟ್ಟಿಯವರನ್ನು ಗೌರವಿಸಿದ್ದಾರೆ ಎಂದಾದರೆ ಅವರ ಘನತೆ ಪ್ರಸಿದ್ಧಿಗೆ ಬೇರೆ ಸಾಕ್ಷಿ ಬೇಕೆ?!. ಮಾನ್ಯ ಆರ್ ಕೆ ಶೆಟ್ಟರು ವಿಶ್ವ ಮಟ್ಟದ ಪ್ರತಿಷ್ಠಿತ ಎಂ.ಡಿ.ಆರ್.ಟಿ. ಇದರ ಸದಸ್ಯತನ ಪಡೆದುದನ್ನು ಗಮನಿಸಿದರೆ ಜೀವವಿಮಾ ಕ್ಷೇತ್ರದ ಅವರ ಅಪ್ರತಿಮ ಸಾಧನೆ ಕುರಿತು ಯೋಚಿಸಬಹುದು. ವಿಶ್ವ ಪ್ರಸಿದ್ಧ ಎಂ.ಡಿ.ಆರ್.ಟಿ ಸಂಸ್ಥೆಯ ರೀಜನಲ್ ಛೇರ್ಮನ್ ಹುದ್ದೆಗೇರಿರುವ ಪ್ರಥಮ ಭಾರತೀಯ ಹಾಗೂ ಎಂಬತ್ತೆರಡು ವರ್ಷಗಳ ಇತಿಹಾಸದಲ್ಲೇ ಮೊದಲಿಗ. ಈ ಅಧಿಕಾರ ವಿಶ್ವದ ನಲವತ್ತೆರಡು…
ಮಾನವ ಸಂಘ ಜೀವಿಯಾಗಿದ್ದು, ಒಂದಲ್ಲ ಒಂದು ಬಗೆಯ ಸಂಘಟನೆ ಮೂಲಕ ಸಮಾಜಕ್ಕೆ ಸೇವಾ ಕಾರ್ಯ ಮಾಡುವ ಸಂಕಲ್ಪದೊಂದಿಗೆ ಪ್ರಸಿದ್ದಿಗೆ ಬರುತ್ತಾನೆ. ಸಂಘಟನೆ ಮೂಲಕ ಸಮಾಜಕ್ಕೆ ಮತ್ತು ದೇಶಕ್ಕಾಗಿ ಸೇವಾ ಕಾರ್ಯ ಮಾಡುವ ಅರ್ಪಣಾ ಭಾವನೆ ನಮ್ಮಲ್ಲಿರಬೇಕು. ರಚನಾತ್ಮಕ ಸಂಬಂಧಗಳನ್ನು ಕೂಡಿಕೊಂಡು ಪರಸ್ಪರ ವ್ಯಕ್ತಿಗತ ಪರಿಚಯ ಮತ್ತು ಸಂಬಂಧಗಳನ್ನು ಗಟ್ಟಿಗೊಳಿಸುವಲ್ಲಿ ಸಂಘ ಸಂಸ್ಥೆಗಳ ಮಹತ್ವ ಬಹಳಷ್ಟಿದೆ. ಇದಕ್ಕೆ ಮಾದರಿ ಎಂಬಂತೆ ಪುಣೆ ಬಂಟ್ಸ್ ಅಸೋಸಿಯೇಷನ್ ನ ಸಂಘಟನಾ ಸಾಮರ್ಥ್ಯ ತೋರಿ ಬರುತ್ತದೆ. ಸಮಾಜ ಬಾಂಧವರನ್ನು ಮತ್ತು ಯುವ ಶಕ್ತಿಯನ್ನು ಕೂಡಿಕೊಂಡು ಬಂಟ ಸಮಾಜ ಮಾಡುವ ಯಾವುದೇ ಕಾರ್ಯ ಕ್ಷೇತ್ರದ ಸಾಧನೆ ಮತ್ತು ಉದ್ಯಮ ಕ್ಷೇತ್ರದ ಸಾಧನೆ ಮೆಚ್ಚುವಂತಹದು. ಮಕ್ಕಳಿಗೆ ವಿದ್ಯೆಯ ಜೊತೆಯಲ್ಲಿ ಕ್ರೀಡೆ, ಕಲೆ ಮತ್ತು ಇತರೆ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಮಾಡುವ ಕರ್ತವ್ಯ ಪಾಲಕರದ್ದು. ಇದರಿಂದ ವ್ಯಕ್ತಿತ್ವ ವಿಕಸನಗೊಂಡು, ತಮ್ಮ ಕ್ಷೇತ್ರದಲ್ಲಿ ಸಾಧನೆ ಮಾಡಿ ಸಮಾಜಕ್ಕೆ ಮತ್ತು ದೇಶ ಸೇವೆಯಲ್ಲಿ ಭಾಗಿಗಳಾಗುವಂತೆ ಮಾಡಬೇಕಾಗಿದೆ. ಬಂಟ್ಸ್ ಅಸೋಸಿಯೇಷನ್ ತಮ್ಮ ಸಮಾಜದ ಸೇವಾ ಕಾರ್ಯಗಳಿಗೆ ಮತ್ತು…
ಯಾವುದೇ ಸಮಾಜ ಪರ ಸೇವಾ ಕಾರ್ಯಗಳಿಗೆ ನಾನು ನಿರಂತರ ಸಹಾಯ, ಸಹಕಾರವನ್ನು ನೀಡುತ್ತಾ ಬಂದಿದ್ದೇನೆ. ಮುಂದೆಯೂ ನನ್ನ ಸಹಕಾರ ಸದಾ ಇರುತ್ತದೆ. ಘಾಟ್ಕೋಪರ್ ಕನ್ನಡ ವೆಲ್ಫೇರ್ ಸೊಸೈಟಿಯೊಂದಿಗೆ ನನ್ನ ಆತ್ಮೀಯ ಒಡನಾಟವಿದೆ. ಹಾಗೆಯೇ ಈ ಸಂಸ್ಥೆಯ ಎಲ್ಲಾ ಸದಸ್ಯರು ನನ್ನ ಆತ್ಮೀಯರಾಗಿದ್ದಾರೆ. ಇಂದು ವಿಶೇಷವಾಗಿ ಈ ಸಂಸ್ಥೆಯ ಸದಸ್ಯರು ಸೇರಿದಂತೆ ನನ್ನೆಲ್ಲಾ ಹಿತೈಷಿ ಸಮಾಜ ಬಾಂಧವರ ಆಶೀರ್ವಾದದಿಂದಾಗಿ ನಾನು ಬಂಟರ ಸಂಘ ಮುಂಬಯಿಯ ಉಪಾಧ್ಯಕ್ಷನಾಗಿ ಆಯ್ಕೆಗೊಂಡಿದ್ದೇನೆ ಎನ್ನಲು ಹೆಮ್ಮೆ ಪಡುತ್ತೇನೆ. ಇನ್ನು ಮುಂದೆಯೂ ಬಂಟರ ಸಂಘದಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳಿಗೆ ತಮ್ಮೆಲ್ಲರ ತುಂಬು ಹೃದಯದ ಸಹಕಾರ ಬೇಕಾಗಿದೆ. ಕನ್ನಡ ವೆಲ್ಫೇರ್ ಸೊಸೈಟಿ ಅಧ್ಯಕ್ಷ ನವೀನ್ ಶೆಟ್ಟಿ ಇನ್ನ ಬಾಳಿಕೆ ಅವರಂತಹ ಸಂಘಟಕರು ನಮ್ಮೊಂದಿಗಿದ್ದರೆ ಯಾವುದೇ ಕಾರ್ಯವನ್ನು ಮಾಡಲು ಅಸಾಧ್ಯವಾಗದು ಎನ್ನುವ ಭರವಸೆಯೂ ನನ್ನಲ್ಲಿದೆ ಎಂದು ಮುಂಬಯಿ ಬಂಟರ ಸಂಘದ ನೂತನ ಉಪಾಧ್ಯಕ್ಷರಾಗಿ ನೇಮಕಗೊಂಡ ಮಹೇಶ್ ಎಸ್. ಶೆಟ್ಟಿ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು. ಅವರು ಡಿ.3 ರ ಆದಿತ್ಯವಾರದಂದು ಘಾಟ್ಕೋಪರ್ ಪೂರ್ವದ ಕನ್ನಡ…
ದುಬೈನಲ್ಲಿ ಡಿ.10 ರಂದು ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ (ರಿ) ಯು.ಎ.ಇ. ದುಬೈ ಘಟಕದ ವತಿಯಿಂದ ಅದ್ದೂರಿಯಾಗಿ ನಡೆಯಲಿರುವ “ದುಬೈ ಗಡಿನಾಡ ಉತ್ಸವ-2023” ಕಾರ್ಯಕ್ರಮದ ಆಮಂತ್ರಣ ಪತ್ರ ಬಿಡುಗಡೆಯ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಬಂದು ಕಾರ್ಯಕ್ರಮದ ಘನತೆಯನ್ನು ಹೆಚ್ಚಿಸಿದ ಕೆ.ಎನ್.ಆರ್.ಐ ಫಾರಂನ ಅಧ್ಯಕ್ಷರಾದ ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿಯವರು ಮಾತನಾಡುತ್ತಾ, ಗಡಿನಾಡಿನ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ನೋಡಿ ತುಂಬ ಸಂತೋಷವಾಯಿತು. ಯುಎಇಯಲ್ಲಿ ಇರುವ ಗಡಿನಾಡಿನ ಕನ್ನಡಿಗರ ತಾಕತ್ತು ಏನೆಂಬುದನ್ನು ಕಳೆದ ವರ್ಷದಿಂದ ಯುಎಇಯ ಕನ್ನಡಿಗರಿಗೆ ತೋರಿಸಿಕೊಟ್ಟಿದ್ದೀರಿ. ಯುಎಇಯಲ್ಲಿ ಇರುವ ಕನ್ನಡಿಗರ ಒಂದೇ ಒಂದು ಆಶಯ ದುಬೈನಲ್ಲಿ ಕನ್ನಡ ಭವನ ನಿರ್ಮಾಣ ಮಾಡೋದು ಹಾಗೂ ಗಡಿನಾಡಿನ ಅನಿವಾಸಿ ಕನ್ನಡಿಗರ ಕಷ್ಟ ಕಾರ್ಪಣ್ಯ ಬಗ್ಗೆ ಸರಕಾರ ಎಚ್ಚೆತ್ತುಕೊಳ್ಳುವಂತಹ ಕಾರ್ಯಕ್ರಮ ಮಾಡುತಿದ್ದೀರಿ. ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲಿ ಹಾಗೂ ಈ ವರ್ಷ ಹಾಗೂ ಮುಂದೆಯೂ ನಡೆಯುವ ಗಡಿನಾಡಿನ ಕಾರ್ಯಕ್ರಮಕ್ಕೆ ನನ್ನ ಸಂಪೂರ್ಣ ಸಹಕಾರ ಇದೆ ಮತ್ತು ನನ್ನ ಸಂಸ್ಥೆಯ ಸಭಾಂಗಣದಲ್ಲಿ ಗಡಿನಾಡಿನ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ…
ಮಂಗಳೂರು ವಿಶ್ವವಿದ್ಯಾಲಯ ಮಟ್ಟದ ಅಂತರ ಕಾಲೇಜು ಅಥ್ಲೆಟಿಕ್ಸ್ ಸತತ 21ನೇ ಬಾರಿ ಆಳ್ವಾಸ್ಗೆ ಸಮಗ್ರ ಚಾಂಪಿಯನ್ಶಿಪ್
ವಿದ್ಯಾಗಿರಿ: ಆರು ನೂತನ ಕೂಟ ದಾಖಲೆಗಳು, 440ಕ್ಕೂ ಅಧಿಕ ಅಂಕಗಳ ಅಂತರದ ಜಯದೊಂದಿಗೆ ಮಂಗಳೂರು ವಿಶ್ವವಿದ್ಯಾಲಯ ಮಟ್ಟದ ಅಂತರ ಕಾಲೇಜು ಅಥ್ಲೆಟಿಕ್ಸ್ ಚಾಂಪಿಯನ್ಷಿಪ್ ಸಮಗ್ರ ಪ್ರಶಸ್ತಿಯನ್ನು ಆಳ್ವಾಸ್ ಕಾಲೇಜು ಮುಡಿಗೇರಿಸಿಕೊಂಡಿದ್ದು, ಸತತ 21ನೇ ಬಾರಿಗೆ ಚಾಂಪಿಯನ್ಶಿಪ್ ಪಡೆದ ಕೀರ್ತಿಗೆ ಪಾತ್ರವಾಯಿತು. ಉಡುಪಿಯ ಅಜ್ಜರಕಾಡಿನ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಬುಧವಾರ ಮುಕ್ತಾಯಗೊಂಡ ಚಾಂಪಿಯನ್ಷಿಪ್ನ ಪುರುಷರ ವಿಭಾಗದಲ್ಲಿ 259 ಹಾಗೂ ಮಹಿಳೆಯರ ವಿಭಾಗದಲ್ಲಿ 247 ಅಂಕ ಪಡೆದ ಆಳ್ವಾಸ್ ಒಟ್ಟು 506 ಅಂಕಗಳೊಂದಿಗೆ ಸಮಗ್ರ ಪ್ರಶಸ್ತಿ ಪಡೆಯಿತು. ಪುರುಷರ ವಿಭಾಗದಲ್ಲಿ 50 ಅಂಕ ಪಡೆದ ಉಜಿರೆಯ ಎಸ್ಡಿಎಂ ಕಾಲೇಜು ಹಾಗೂ ಮಹಿಳೆಯರವಿಭಾಗದಲ್ಲಿ 56 ಅಂಕ ಪಡೆದ ಅಜ್ಜರಕಾಡು ಡಾ.ಜಿ.ಶಂಕರ್ ಸರ್ಕಾರಿ ಪ್ರಥಮದರ್ಜೆಕಾಲೇಜು ರನ್ನರ್ಅಫ್ ಪ್ರಶಸ್ತಿಗಳನ್ನು ಪಡೆದವು. ಆಳ್ವಾಸ್ ಕಾಲೇಜು ಪುರುಷರ ವಿಭಾಗದಲ್ಲಿ 22 ಚಿನ್ನ 15 ಬೆಳ್ಳಿ ಹಾಗೂ 3 ಕಂಚಿನ ಪದಕ ಸೇರಿ ಒಟ್ಟು 40 ಹಾಗೂ ಮಹಿಳಾ ವಿಭಾಗದಲ್ಲಿ 22 ಚಿನ್ನ, 13 ಬೆಳ್ಳಿ ಹಾಗೂ 2 ಕಂಚಿನ ಪದಕದೊಂದಿಗೆ 37…
ವಿಶ್ವ ಖ್ಯಾತಿಯ ಬಂಟರ ಸಂಘ ಮುಂಬಯಿ ಇದರ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆಯಾಗಿ ಆಯ್ಕೆಯಾದ ಹೆಸರಾಂತ ಸಂಘಟಕಿ, ಬಹುಮುಖ ಪ್ರತಿಭೆಯ ಸಾಧಕಿ ಶ್ರೀಮತಿ ಚಿತ್ರಾ ರವಿರಾಜ್ ಶೆಟ್ಟಿ ಅವರು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಇತಿಹಾಸ ಪ್ರಸಿದ್ಧ ಪಾಂಗಾಳ ಆದಿ ಆಲಡೆಗೆ ಸಂಬಂಧ ಪಟ್ಟ ಪ್ರತಿಷ್ಠಿತ ಪಾಂಗಾಳ ಮೇಲ್ಮನೆ ಮನೆತನದ ಮುದ್ದಿನ ಮಗಳಾಗಿ ಬಾಲ್ಯದ ದಿನಗಳಿಂದಲೇ ವಿಚಕ್ಷಣ ಪ್ರತಿಭೆಯ ಬಾಲಕಿಯಾಗಿ ಗುರುತಿಸಿಕೊಂಡವರು. ಪಾಂಗಾಳ ಮೇಲ್ಮನೆ ರಾಧಾ ಡಿ ಶೆಟ್ಟಿ ಮತ್ತು ನಂದಳಿಕೆ ಐಸ್ರಬೆಟ್ಟು ದುಗ್ಗಪ್ಪ ಶೆಟ್ಟಿ ದಂಪತಿಗೆ ಮಗಳಾಗಿ ಹುಟ್ಟಿದ ಚಿತ್ರಾ ಅವರು ಪಾಂಗಾಳದಲ್ಲಿ ಪ್ರಾಥಮಿಕ, ಇನ್ನಂಜೆಯಲ್ಲಿ ಹೈಸ್ಕೂಲು, ಕಟಪಾಡಿಯಲ್ಲಿ ಪದವಿಪೂರ್ವ ಹಾಗೂ ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಪದವಿ ಶಿಕ್ಷಣ ಪೂರೈಸಿದರು. ಇವರು ಪ್ರತೀ ತರಗತಿಗಳಲ್ಲಿ ಪ್ರಥಮ ಸ್ಥಾನ ಗಳಿಸುವುದರ ಮೂಲಕ ಸರಕಾರಿ ವಿದ್ಯಾರ್ಥಿವೇತನಕ್ಕೆ ಆಯ್ಕೆಯಾಗಿದ್ದರು. ನೃತ್ಯ, ನಟನೆ, ಭಜನೆ, ಯಕ್ಷಗಾನ, ನಾಟಕ ಇವರ ಆಸಕ್ತಿಯ ವಿಷಯಗಳಾಗಿದ್ದವು. ಶಾಲಾ ಕಾಲೇಜು ದಿನಗಳ ವಾರ್ಷಿಕೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಉತ್ಸಾಹದಿಂದ ಭಾಗವಹಿಸುತ್ತಿದ್ದರು. ಸುಲಕ್ಷಣೆ ಹಾಗೂ ಸ್ಫುರದ್ರೂಪಿಯಾಗಿದ್ದ…
ಮಾತೃ ಸಂಘ ತಾಲೂಕು ಸಮಿತಿ ಹಾಗೂ ತಾಲೂಕು ಬಂಟರ ಸಂಘ ಪುತ್ತೂರು ಇವರ ಮಾರ್ಗದರ್ಶನದೊಂದಿಗೆ ನೆಲ್ಯಾಡಿ ವಲಯ ಬಂಟರ ಸಂಘ ಇದರ ಆಶ್ರಯದಲ್ಲಿ ಕಡಬ ತಾಲೂಕಿನ ಗೋಳಿತೋಟ್ಟು ಗ್ರಾಮದ ಶ್ರೀಮತಿ ಲೀಲಾವತಿ ವಿಠಲ ಶೆಟ್ಟಿ ಇವರ ಪುತ್ರಿ ಕು ಶ್ರುತಿ ಇವರ ವಿವಾಹಕ್ಕೆ ತಾಲೂಕು ಬಂಟರ ಸಂಘದ ಅಧ್ಯಕ್ಷರಾದ ಶ್ರೀ ಶಶಿ ಕುಮಾರ್ ರೈ ಬಾಲ್ಯೊಟ್ಟು ಇವರ ಮುಖಾಂತರ ಆರ್ಥಿಕ ಸಹಾಯ ನೀಡಲಾಯಿತು. ಈ ಸಂಧರ್ಭದಲ್ಲಿ ನೆಲ್ಯಾಡಿ ವಲಯ ಬಂಟರ ಸಂಘದ ಅಧ್ಯಕ್ಷರಾದ ಶ್ರೀ ಪ್ರತಾಪ್ ಚಂದ್ರ ರೈ, ಶ್ರೀ ಸತೀಶ ರೈ ಕೊಣಾಲು ಗುತ್ತು, ಶ್ರೀ ನಿತ್ಯಾನಂದ ಶೆಟ್ಟಿ ಮನವಳಿಕೆ, ತಾಲೂಕು ಮಹಿಳಾ ಬಂಟರ ಸಂಘದ ಕೋಶಾಧಿಕಾರಿ ಶ್ರೀಮತಿ ವಾಣಿ ಎಸ್ ಶೆಟ್ಟಿ, ರತ್ನಾಕರ ಶೆಟ್ಟಿ ಕೊಲ್ಯೊಟ್ಟು ಅಶ್ವಮೇಧ, ಸುಂದರ ಶೆಟ್ಟಿ ಉಪಸ್ಥಿತರಿದ್ದರು.
ಬಂಟರ ಸಂಘ ಬಂಟ್ವಾಳ ತಾಲೂಕಿನ ವತಿಯಿಂದ ದಿನಾಂಕ 07-01-2024ರಂದು ಜರಗಲಿರುವ ಜಿಲ್ಲಾ ಮಟ್ಟದ ಕ್ರೀಡೋತ್ಸವ ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಶ್ರೀ ಐಕಳ ಹರೀಶ್ ಶೆಟ್ಟಿಯವರನ್ನು ಬಂಟರ ಸಂಘ ಬಂಟ್ವಾಳ ತಾಲೂಕು ಇದರ ಅಧ್ಯಕ್ಷ ಹಾಗೂ ಪ್ರಸ್ತುತ ಒಕ್ಕೂಟದ ಜೊತೆ ಕಾರ್ಯದರ್ಶಿಯವರಾದ ಶ್ರೀ ಚಂದ್ರಹಾಸ್ ಡಿ. ಶೆಟ್ಟಿಯವರು ಆಮಂತ್ರಣ ಪತ್ರಿಕೆ ನೀಡಿ ಪ್ರೀತಿಪೂರ್ವಕವಾಗಿ ಆಹ್ವಾನಿಸಿದರು. ಈ ಸಂದರ್ಭದಲ್ಲಿ ಒಕ್ಕೂಟದ ಗೌರವ ಕಾರ್ಯದರ್ಶಿ ಶ್ರೀ ಜಯಕರ್ ಶೆಟ್ಟಿ ಇಂದ್ರಾಳಿ, ಬಂಟರ ಸಂಘ ಬಂಟ್ವಾಳ ತಾಲೂಕಿನ ಪದಾಧಿಕಾರಿಗಳಾದ ಶ್ರೀ ಜಗನ್ನಾಥ್ ಚೌಟ, ಶ್ರೀ ಲೋಕೇಶ್ ಶೆಟ್ಟಿ ಕೆ, ಶ್ರೀ ಪದ್ಮನಾಭ ಶೆಟ್ಟಿ, ಶ್ರೀ ರಂಜನ್ ಶೆಟ್ಟಿ, ಶ್ರೀ ಭಾಸ್ಕರ್ ಶೆಟ್ಟಿ, ಒಕ್ಕೂಟದ ಆಹ್ವಾನಿತ ಸದಸ್ಯರಾದ ಶ್ರೀ ರವಿರಾಜ್ ಶೆಟ್ಟಿ ಜತ್ತಬೆಟ್ಟು, ಆಡಳಿತಾಧಿಕಾರಿ ಶ್ರೀ ಸಚ್ಚಿದಾನಂದ ಹೆಗ್ಡೆ ಕೊಳ್ಕೆಬೈಲ್ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.
ಮೂಡುಬಿದಿರೆ: ಮಂಡ್ಯದ ವಿಶ್ವಮಾನವ ಪದವಿಪೂರ್ವ ಕಾಲೇಜಿನಲ್ಲಿ ಶಾಲಾ ಶಿಕ್ಷಣ ಇಲಾಖೆ ಈಚೆಗೆ ಹಮ್ಮಿಕೊಂಡ ಮೈಸೂರು ವಿಭಾಗೀಯ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ವಿಜೇತರಾದ ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಮೂವರು ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ದ್ವಿತೀಯ ಪಿಯುಸಿಯ ವಿಭಾ ನಾಯಕ ಭಾವಗೀತೆ ಸ್ಪರ್ಧೆ ಹಾಗೂ ಯುವಿಕ ಎಲ್ ಮತ್ತು ತಿರುಪತಿ ವಿಟಿ ರಸಪ್ರಶ್ನೆಯಲ್ಲಿ ದ್ವಿತಿಯ ಸ್ಥಾನ ಪಡೆದು, ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿಜೇತ ವಿದ್ಯಾರ್ಥಿಗಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ. ಮೋಹನ್ ಆಳ್ವ, ಪ್ರಾಚಾರ್ಯರು ಅಭಿನಂದಿಸಿದ್ದಾರೆ.
ಕರ್ನಾಟಕ ಮಿಲ್ಕ್ ಫೆಡರೇಶನ್ (K.M.F) ಬೆಂಗಳೂರು ಕೇಂದ್ರ ಕಛೇರಿಗೆ ನಡೆಸಿದ ನೇಮಕಾತಿಯ ಪರೀಕ್ಷೆಯಲ್ಲಿ ಅತ್ಯುತ್ತಮ ಮೆರಿಟ್ ಅಂಕಗಳೊಂದಿಗೆ ಮೈಸೂರು ಜಿಲ್ಲೆಯ ವಿಜಯನಗರ ನಿವಾಸಿ ಶಿಲ್ಪಾ ಹೆಚ್.ಎಂ ರವರು ಆಯ್ಕೆ ಆಗಿದ್ದಾರೆ. ಈ ಮೂಲಕ ಭಾಗ್ಯೆಶ್ ರೈ ನೇತೃತ್ವದ ವಿದ್ಯಾಮಾತಾ ಅಕಾಡೆಮಿಯ ಸಾಧನೆಯ ಮುಕುಟಕ್ಕೆ ಇನ್ನೊಂದು ಗರಿ ಲಭಿಸಿದಂತಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಯಲ್ಲಿ ಸಹಕಾರ ಸಂಘಗಳ ಬಗ್ಗೆ ವಿದ್ಯಾಮಾತ ಅಕಾಡೆಮಿಯಲ್ಲಿ ವಿಶೇಷ ತರಬೇತಿಯನ್ನು ನೀಡಲಾಗುತ್ತಿದ್ದು ರಾತ್ರಿ 8 ರಿಂದ 9 ಗಂಟೆವರೆಗಿನ ನಿತ್ಯ 1 ಗಂಟೆಗಳ ಆನ್ಲೈನ್ ತರಬೇತಿಯನ್ನು ಶಿಲ್ಪಾರವರಿಗೆ ನೀಡಲಾಗುತ್ತಿತ್ತು. ಅತ್ಯಧಿಕ ಮೆರಿಟ್ ನೊಂದಿಗೆ ಗ್ರೇಡ್ 2 ಹುದ್ದೆಗೆ ಆಗಿರುತ್ತಾರೆ. ಸಹಕಾರ ತತ್ವ, ಸಾಮಾನ್ಯ ಜ್ಞಾನ ಇತ್ಯಾದಿಗಳ ಬಗ್ಗೆ ವಿಶೇಷ ತರಬೇತಿಯನ್ನು ನೀಡುವುದರ ಮೂಲಕ ಸ್ಥಳೀಯ ಸಹಕಾರಿ ಬ್ಯಾಂಕ್, K.M.F ಇತ್ಯಾದಿ ಪರೀಕ್ಷೆಗಳನ್ನು ಪಾಸ್ ಮಾಡಲು ಉತ್ತೇಜಿಸಲಾಗುತ್ತಿದೆ. ಈ ಕಾರಣದಿಂದ ಕಳೆದ K.M.F ನ ಮಂಗಳೂರು ವಿಭಾಗಕ್ಕೂ 3 ಜನ ಅಭ್ಯರ್ಥಿಗಳು ಅತ್ಯಧಿಕ ಅಂಕಗಳೊಂದಿಗೆ ಆಯ್ಕೆಯಾಗಿದ್ದರು. ಇದೀಗ ಬೆಂಗಳೂರು ವಿಭಾಗಕ್ಕೆ ಆಯ್ಕೆ…