ಹೊಸದಿಲ್ಲಿಯ ಮೆರಿಟ್ ಅವಾರ್ಡ್ಸ್ ಆಂಡ್ ಮಾರ್ಕೆಟ್ ರಿಸರ್ಜ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ಹುಬ್ಬಳ್ಳಿ ಧಾರವಾಡದ ಪಂಜುರ್ಲಿ ಹೋಟೆಲಿಗೆ ಬೆಸ್ಟ್ ಸೀ ಫುಡ್ ಹೋಟೆಲ್ ಹಾಗೂ ಭಾರತದ ಮೋಸ್ಟ್ ಪ್ರಾಮಿನೆಂಟ್ ಫುಡ್ ಅಂಡ್ ಹಾಸ್ಪಿಟ್ಯಾಲಿಟಿ
ಅವಾರ್ಡ್ ನೀಡಿ ಗೌರವಿಸಿದೆ.
ಪಂಜುರ್ಲಿ ಗ್ರೂಪ್ ಆಫ್ ಹೋಟೆಲ್ಸ್ ಪಾಲುದಾರ ಇನ್ನ ಬಡಕರ ಗುತ್ತು ರವಿಕಾಂತ ಶೆಟ್ಟಿಯವರು ಪ್ರಶಸ್ತಿ ಸ್ವೀಕರಿಸಿದರು. ರಾಜೇಂದ್ರ ವಿ ಶೆಟ್ಟಿಯವರು ಪಂಜುರ್ಲಿ ಗ್ರೂಪ್ ಆಫ್ ಹೋಟೆಲ್ಸ್ ನ ಆಡಳಿತ ನಿರ್ದೇಶಕರಾಗಿದ್ದಾರೆ. ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಪುಣೆ, ದಾವಣಗೆರೆಗಳಲ್ಲಿ ಪಂಜುರ್ಲಿ ಶಾಖೆಗಳನ್ನು ಹೊಂದಿದೆ. 2024ರ ಈ ಪ್ರಶಸ್ತಿ ಪಡೆದ ಧಾರವಾಡದ ಏಕೈಕ ಹೋಟೆಲ್ ಇದಾಗಿದೆ ಎಂದು ಪ್ರಕಟಣೆ ತಿಳಿಸಿದೆ.