Author: admin
ವಿದ್ಯಾಗಿರಿ: ‘ನಮಗೆ ಸಮಯವಿಲ್ಲ ಎಂಬ ನೆಪ ಹೇಳದೆ ಓದಬೇಕು. ಓದುವ ಜೊತೆ ಇತರರು ಓದುವಂತೆ ಮಾಡಬೇಕು. ಪುಸ್ತಕಗಳು ಕೇವಲ ಅಲಂಕಾರಕ್ಕೆ ಇಡಲು ಅಲ್ಲ, ಅದು ಅಧ್ಯಯನಕ್ಕೆ’ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಹೇಳಿದರು. ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಮಂಗಳವಾರ ಕನ್ನಡ ವಿಭಾಗ ಹಾಗೂ ಗ್ರಂಥಾಲಯದ ಸಹಯೋಗದಲ್ಲಿ ನಡೆದ ಪ್ರೊ. ನಾಗರಾಜ ಜವಳಿ ಅವರ ಗ್ರಂಥಗಳ ಸ್ವೀಕಾರ ಸಮಾರಂಭ’ದಲ್ಲಿ ಅವರು ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಪುಸ್ತಕ ಓದುಗರ ಸಂಖ್ಯೆ ಇಳಿಮುಖವಾಗಿದ್ದು, ವಿದ್ಯಾರ್ಥಿಗಳಿಗೆ ಓದಿಸುವ ನಿಟ್ಟಿನಲ್ಲಿ ಗಮನ ಸೆಳೆಯುವ ಚಟುವಟಿಕೆಯನ್ನು ಮಾಡಬೇಕು. ನಾಗರಾಜ ಜವಳಿ ಅವರು ಸಂಗ್ರಹ ಮಾಡಿದ ಪುಸ್ತಕಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಯಾವುದೇ ವಿಚಾರದ ಪುಸ್ತಕವಾದರೂ, ಕಾಪಾಡುವುದು ಮುಖ್ಯ ಎಂದರು. ತುಳುನಾಡಿನಲ್ಲಿ 11 ವರ್ಷಗಳ ಸಾಹಿತ್ಯ ಮತ್ತು ಸಾಂಸ್ಕøತಿಕ ಕ್ಷೇತ್ರವನ್ನು ಅರ್ಥಪೂರ್ಣ ಗೊಳಿಸಿದ್ದರಲ್ಲಿ ಜವಳಿ ಹಾಗೂ ಅವರ ಸ್ನೇಹಿತರ ‘ದಾಸಜನ’ ಕೂಟ ಮುಖ್ಯ ಪಾತ್ರ ವಹಿಸಿದೆ ಎಂದರು. ನನ್ನ ಮತ್ತು ಜವಳಿಯವರ ಅಭಿರುಚಿಯಲ್ಲಿ…
ಸಾಧನೆ ಎನ್ನುವುದು ಹುಟ್ಟಿನಿಂದಲೇ ಬರುವುದಿಲ್ಲ. ಅದು ನಿರಂತರ ಪ್ರಯತ್ನ, ಪರಿಶ್ರಮದ ಫಲಶ್ರುತಿಯಾಗಿರುತ್ತದೆ. ಹುಟ್ಟಿದ ಮಗುವಿಗೆ ಮುಂದೆ ತಾನೇನಾಗುತ್ತೇನೆ ಎಂಬ ಕಲ್ಪನೆಯೂ ಇರುವುದಿಲ್ಲ. ಆದರೆ ಆ ಮಗು ಬೆಳೆಯುತ್ತಾ ಹೋದಂತೆ ಸನ್ಮಾರ್ಗದಲ್ಲಿ ನಡೆದಾಗ, ನಿರ್ದಿಷ್ಟ ಗುರಿಯನ್ನು ಮುಟ್ಟುವ ಛಲವಿದ್ದಾಗ ಏನಾದರೂ ಸಾಧನೆ ಮಾಡುವುದು ಸಾಧ್ಯವಾಗುತ್ತದೆ. ಇದಕ್ಕೆ ಕಷ್ಟಪಡಬೇಕು. ನಾವು ಕನಸು ಕಾಣಬೇಕು. ಅದನ್ನು ನನಸಾಗಿಸುವ ಹಂಬಲವಿರಬೇಕು. ನಮ್ಮಲ್ಲಿ ಆಕಾಂಕ್ಷೆಗಳಿರಬೇಕು. ವಿದ್ಯಾಕಾಂಕ್ಷಿ, ಉದ್ಯೋಗಾಕಾಂಕ್ಷಿ, ಉದ್ಯಮಕಾಂಕ್ಷಿ ರವಿ ಶೆಟ್ಟಿಯವರಲ್ಲಿ ಈ ಎಲ್ಲಾ ಮಹತ್ವಾಕಾಂಕ್ಷೆಗಳು ಇದ್ದುದರಿಂದಲೇ ಅವರು ಇಷ್ಟು ಎತ್ತರಕ್ಕೆ ಏರುವುದು ಸಾಧ್ಯವಾಯಿತೆನ್ನಬಹುದು. ಸಾಧನೆಯ ಹಾದಿಯಲ್ಲಿ ಕಷ್ಟ ಸುಖವೆಂಬ ಕಲ್ಲುಮುಳ್ಳುಗಳನ್ನು ತುಳಿದು ತನ್ನ ಜೀವನದ ಹಾದಿಯನ್ನು ಹೂವಿನ ಹಾಸಿಗೆಯನ್ನಾಗಿ ಮಾಡಿಕೊಂಡವರು ಪರಿಶ್ರಮಿ ಶ್ರೀಯುತ ಡಾ ರವಿ ಶೆಟ್ಟಿ ಕತಾರ್ ಅವರು. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮೂಡಂಬೈಲ್ ತಿಮ್ಮಪ್ಪ ಶೆಟ್ಟಿ ಹಾಗೂ ದೋಣಿಂಜೆ ಗುತ್ತು ಸರೋಜಿನಿ ಶೆಟ್ಟಿಯವರ 5 ಮಕ್ಕಳಲ್ಲಿ ಹಿರಿಯ ಪುತ್ರನಾಗಿ 1963 ರಲ್ಲಿ ಜನಿಸಿದರು. ಮನೆಯಲ್ಲಿ ಹಿರಿ ಮಗನಾದ್ದರಿಂದ ಜವಾಬ್ದಾರಿ ಎಂದರೇನು ಎನ್ನುವುದನ್ನು…
ಬದುಕಿನ ಅವಧಿ ಸೀಮಿತವಾದುದು. ಈ ಅವಧಿಯನ್ನು ಸಮರ್ಥವಾಗಿ ಬಳಸಿಕೊಂಡಾಗ ಬದುಕು ಸಾರ್ಥಕವಾಗುತ್ತದೆ. ಬದುಕಿನಲ್ಲಿ ನಾನಾ ಅವಕಾಶಗಳು ಸಿಗುತ್ತಲೇ ಇರುತ್ತದೆ. ಆದರೆ ಬಹಳಷ್ಟು ಮಂದಿ ಈ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳುವ ಜಾಣತನ ಪ್ರದರ್ಶಿಸುವುದಿಲ್ಲ. ಮುಂದೊಂದು ದಿನ ಇಂತಹ ಅವಕಾಶ ಬಳಸಿಕೊಂಡರಾಯಿತು ಎಂಬ ಉದಾಸೀನ ಮನೋಭಾವದಿಂದಲೋ, ಇಂತಹ ಅವಕಾಶ ತಮ್ಮಂತಹವರಿಗಿಲ್ಲ ಎಂಬ ಕೀಳರಿಮೆಯಿಂದಲೋ, ಆಗಾಗ ಇಂತಹ ಅವಕಾಶಗಳು ಬರುತ್ತಲೇ ಇರುತ್ತವೆ ಎಂಬ ಅಪನಂಬಿಕೆ ಅಥವಾ ಅತಿ ವಿಶ್ವಾಸದಿಂದಲೋ ನಿರಾಯಾಸವಾಗಿ ದೊರೆತ ಚಿನ್ನದಂತಹ ಅವಕಾಶಗಳನ್ನು ಕಡೆಗಣಿಸುವುದು ಮೂರ್ಖತನದ ಪರಮಾವಧಿಯಲ್ಲದೆ ಮತ್ತಿನ್ನೇನು? ಅವಕಾಶಗಳು ಯಾರಿಗಾಗಿಯೂ ಕಾಯುವುದಿಲ್ಲ. ಅವು ಬಂದಾಗ ಬಳಸಿಕೊಳ್ಳಬೇಕು. ಬದುಕಿನಲ್ಲಿ ಯಶಸ್ಸು ಗಳಿಸಿದವರೆಲ್ಲ ಈ ರೀತಿ ಅವಕಾಶಗಳನ್ನು ಬಳಸಿಕೊಂಡೇ ಮುಂದೆ ಬಂದಿರುತ್ತಾರೆ. ರಜಾ ದಿನಗಳಲ್ಲಿ ಬಂಧುಗಳ ಮನೆಗೆ ತೆರಳಿದಾಗ ಅಲ್ಲಿ ಒಂದು ವಿಶಿಷ್ಟ ಕಾರ್ಯಕ್ರಮ ನಡೆಯುತ್ತದೆ ಅನ್ನಿ ನೀವೂ ಅದರಲ್ಲಿ ಆಸಕ್ತಿಯಿಂದ ಭಾಗವಹಿಸಿ ನಿಮಗೊಂದು ಅಪೂರ್ವ ಅನುಭವವನ್ನು ಆ ಭಾಗವಹಿಸುವಿಕೆ ಕೊಡುತ್ತದೆ. ನಿಮ್ಮ ಮನೆಯ ಸಮೀಪ ಸಂಗೀತ, ನೃತ್ಯ, ಕರಕುಶಲ ವಸ್ತುಗಳ ತಯಾರಿ, ಯೋಗಾಭ್ಯಾಸ, ವ್ಯಕ್ತಿತ್ವ…
ಮೂಡುಬಿದಿರೆ: ನಾಳೆ ಎಂಬುದಿಲ್ಲ, ಇಂದಿಗಾಗಿ ಬದುಕಿ. ಯಾವುದೇ ಕಾರ್ಯ ಮಾಡುವುದಾದರೂ ಇಂದೇ ಮಾಡಿ, ಇವತ್ತು ಎನ್ನುವುದು ಮಾತ್ರ ನಿಮ್ಮದು ಎಂದು ಸಿಂಗಾಪುರದ ವ್ಯಾನ್ಸ್ ಗ್ರೂಪ್ ಆಫ್ ಕಂಪನಿಯ ಸ್ಥಾಪಕ ಮತ್ತು ಸಿಇಓ ವೆಂಕಟೇಶ್ ಮೂರ್ತಿ ನುಡಿದರು. ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಆಳ್ವಾಸ್ ಕಾಲೇಜಿನ ಎನ್ಎಸ್ ಎಸ್ ಹಾಗೂ ಆಳ್ವಾಸ್ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದ ಅಭಿವ್ಯಕ್ತಿ ವೇದಿಕೆಯ ಜಂಟಿ ಆಶ್ರಯದಲ್ಲಿ ನಡೆದ ‘ಈ- ವೇಸ್ಟ್ ಮ್ಯಾನೇಜ್ ಮೆಂಟ್’ ವಿಷಯದ ಕುರಿತಾದ ಅತಿಥಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸರಿಯಾದ ಗುರಿಯನ್ನು ಇಟ್ಟುಕೊಳ್ಳಿ, ಸಾಧನೆಯ ಮಾರ್ಗದಲ್ಲಿ ನೀವು ಚಲಿಸಿದಾಗ ಗುರಿ ಸಾಧಿಸಲು ಸಾಧ್ಯ. ಇಲ್ಲದೇ ಹೋದಲ್ಲಿ ಗುರಿ ಎನ್ನುವುದು ಕಲ್ಪನೆಯಲ್ಲಿಯೇ ಉಳಿದುಬಿಡುತ್ತದೆ. ನಾವು ಕಾರ್ಯ ಪ್ರವೃತ್ತಿಯೊಂದಿಗೆ ಸರಿಯಾದ ಗುರಿ ಹೊಂದಿಲ್ಲದಿದ್ದರೆ ಗೊಂದಲಕ್ಕೊಳಗಾಗುತ್ತೇವೆ. ನಾವು ಎಲ್ಲಿದ್ದೇವೆ ಎನ್ನುವುದು ಮುಖ್ಯವಲ್ಲ. ಸಾಧನೆಯ ಹಾದಿಯಲ್ಲಿ ನಾವೆಷ್ಟು ಶ್ರಮ ಪಡುತ್ತಿದ್ದೇವೆ ಎನ್ನುವುದು ಮುಖ್ಯ.ಒಂದು ಕಾಲದಲ್ಲಿ ಪ್ರಕೃತಿ ಮಾನವನನ್ನೇ ಬೆದರಿಸುತ್ತಿತ್ತು. ಆದರೆ ಇಂದು ಮಾನವನೇ ಪ್ರಕೃತಿಯನ್ನೇ ಬೆದರಿಸುವಂತಾಗಿದೆ. ಆದರೆ ಸಮಸ್ಯೆ ಪ್ರಾರಂಭವಾದದ್ದು ನಮ್ಮಿಂದ.…
ಯಾರು ಆಳಿದರೇನು ನಾವು ರಾಗಿ ಬೀಸುವುದು ತಪ್ಪುವುದೇ? ಎಂಬ ಮಾತಿಗೆ ಸರಿಯಾಗಿ ಯಾರು ಊಳಿದರೇನು ಹಸಿವು ನೀಗುವಷ್ಟು ಸಮೃದ್ಧವಾಗಿದೆಯೇ? ದೇಶದ ಪರಿಸ್ಥಿತಿ. ಆಗಿಲ್ಲವೆಂದಾದ ಮೇಲೆ ನಮಗೆ ನಾವೇ ಶಿಲ್ಪಿಗಳು ಯಾಕಾಗಬಾರದು? ಹೌದು, ಪ್ರತಿಯೊಬ್ಬ ಮಾನವನ ಉನ್ನತಿ ಮತ್ತು ಅವನತಿ ಅವರವರ ಕೈಯಲ್ಲಿಯೇ ಇರುವುದರಿಂದ ನಮ್ಮ ನಮ್ಮ ಪ್ರಗತಿಗೆ ಅಡಿಗಲ್ಲು ನಾವೇ ಹಾಕಿಕೊಳ್ಳಬೇಕು. ಯಾರಿಂದಲೂ ಯಾವುದೇ ತರದ ನಿರೀಕ್ಷೆಗಳನ್ನು ಇಟ್ಟುಕೊಳ್ಳುವುದು ಸರಿಯಲ್ಲ. ಇಂದು ನಮ್ಮ ದೇಶದಲ್ಲಿ ಸರಿಪಡಿಸಲಾರದ ಅನೇಕ ಅನಾಹುತ, ಅನಾಚಾರಗಳಿಗೆ ಕಾರಣರು ಯಾರು? ಅದರಲ್ಲಿ ಮುಖ್ಯವಾಗಿ ನಮ್ಮ ನೆಲದ ಭಾಷೆ, ಸಂಸ್ಕೃತಿ, ಆಚಾರ, ವಿಚಾರ, ಉಡುಗೆ, ತೊಡುಗೆ, ಆಹಾರ, ಹಬ್ಬ ಹರಿದಿನಗಳಲ್ಲಿ ತಂದುಕೊಂಡ ಬದಲಾವಣೆಯ ಅಗತ್ಯ ನಮಗಿತ್ತೇ? ಆ ನಿಟ್ಟಿನಲ್ಲಿ ಬುದ್ದಿ ಜೀವಿಗಳಾದವರು ಯೋಚಿಸಬೇಕು. ಇಂದು ಪ್ರಜಾಪ್ರಭುತ್ವದಲ್ಲಿ ನಾವಿದ್ದೇವೆ. ನಮಗೆ ನಾವೇ ದೊರೆಗಳು. ಪ್ರಜೆಗಳು ಪ್ರಜೆಗಳಿಗಾಗಿ ಪ್ರಜೆಗಳಿಂದಲೇ ದೇಶ ಆಳಲಾಗುತ್ತಿದೆ. ವಿದ್ಯಾವಂತ ಬುದ್ದಿವಂತರ ನಾಡಿನಲ್ಲಿ ಅತ್ಯಾಚಾರಕ್ಕೆ ಕೊನೆಯಿಲ್ಲ ಎಂಬಂತೆ ಕಂಡು ಕೇಳಿ ಬರುತ್ತಿದೆ. ವಿದ್ಯಾವಂತ ನಾಗರಿಕ ಸಮಾಜ ತಲೆ ತಗ್ಗಿಸುವ ರೀತಿಯಲ್ಲಿ…
ಮಂಗಳೂರು: ನಿಟ್ಟೆ ಇನ್ಸ್ಟಿಟ್ಯೂಟ್ ಆಫ್ ಕಮ್ಯುನಿಕೇಶನ್ ನ ‘ವಿಕೆಟ್ಸ್ ಫಾರ್ ವೆಲ್ಫೇರ್’ (Wickets for Welfare) ಅಂತರ ಕಾಲೇಜು ಕ್ರಿಕೆಟ್ ಪಂದ್ಯಾವಳಿಯನ್ನು ಏಪ್ರಿಲ್ 20 ಹಾಗೂ 21ರಂದು ಮಂಗಳೂರಿನ ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ವೈದ್ಯಕೀಯ ಕಾಲೇಜಿನ ಕ್ಷೇಮ ಗ್ರೌಂಡ್ಸ್ ನಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಪಂದ್ಯಾವಳಿಯನ್ನು ನಿಟ್ಟೆ ಇನ್ಸ್ಟಿಟ್ಯೂಟ್ ಆಫ್ ಕಮ್ಯುನಿಕೇಶನ್ ವಿದ್ಯಾರ್ಥಿಗಳೇ ಏರ್ಪಡಿಸಿದ್ದು, ಈ ಕಾರ್ಯಕ್ರಮವನ್ನು ಎಚ್ಐವಿ ಸೋಂಕಿತ ಮಕ್ಕಳಿಗೆ ನೆರವು ಒದಗಿಸುತ್ತಿರುವ ಸ್ನೇಹಸದನ ಸೇಂಟ್ ಕ್ಯಾಮಿಲ್ಲಾಸ್ ಕೇರ್ ಹೋಮ್, ಗುರುಪುರ (Snehasadan St. Camillus Care Home) ಎಂಬ ಸಂಸ್ಥೆ ನೆರವಿಗಾಗಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮವನ್ನು ಏಪ್ರಿಲ್ 20, 2024 ರಂದು ನಿಟ್ಟೆ ವಿಶ್ವವಿದ್ಯಾನಿಲಯದ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ (ಐಎಸ್ಆರ್) ಹಾಗೂ ಕೇಂದ್ರೀಯ ಸಂಶೋಧನಾ ಪ್ರಯೋಗಾಲಯ (ಸಿಆರ್ಎಲ್) ಉಪಾಧ್ಯಕ್ಷ ಪ್ರೊ.ಡಾ. ಸತೀಶ ಕುಮಾರ ಭಂಡಾರಿ ಮುಖ್ಯ ಅತಿಥಿಯಾಗಿ ಮತ್ತು ನಗರದ ಸ್ನೇಹಸದನ ಸಂಸ್ಥೆಯ ನಿರ್ದೇಶಕ ಸಿಬಿ ಕೈತರನ್ ಗೌರವ ಅತಿಥಿಯಾಗಿ ಭಾಗವಹಿಸಿ ಉದ್ಘಾಟಿಸಿದರು. ಏಪ್ರಿಲ್ 21ರಂದು ಅಂತಿಮ ಘಟ್ಟದ ಪಂದ್ಯಗಳು ನಡೆದಿದ್ದು…
ತುಳುನಾಡಿನಲ್ಲಿ ಅದೆಷ್ಟೋ ಜಾತಿ, ಧರ್ಮ, ಭಾಷೆ ಆಚಾರ ವಿಚಾರ ಬಹು ಸಂಸ್ಕಾರಗಳಿದ್ದರೂ ಅನೇಕತೆಯಲ್ಲಿ ಏಕತೆಯ ನೆಲ. ದೈವ ದೇವರ ಸಂಗಮ ಭೂಮಿ. ಇಲ್ಲಿನ ಎಲ್ಲಾ ದೇವಸ್ಥಾನಗಳ ವಿಶೇಷ ಎಂದರೆ ಮಾಂಸಾಹಾರಿ ದೈವಗಳಿಗೆ ಗರ್ಭಗುಡಿಯ ಬಲ ಭಾಗದಲ್ಲೇ ನೆಲೆ ನೀಡಿರುವುದು. ಆದ್ದರಿಂದಲೇ ಆ ತನಕ ಯಾವುದೇ ಮಾರಕ ಪ್ರಾಕೃತಿಕ ವಿಕೋಪಗಳು ಇಲ್ಲಿಗೆ ಬಾಧಿಸಿದ ಚರಿತ್ರೆಯಿಲ್ಲ. ಇಲ್ಲಿನ ಯಾವುದೇ ಅತೀ ಪುರಾತನ ದೇವಾಲಯದ ಇತಿಹಾಸ ಸಂಶೋಧಿಸಿದಾಗ ಹೆಚ್ಚೆಂದರೆ 800 ವರ್ಷಗಳ ಹಿಂದೆ ನಿರ್ಮಾಣವಾಗಿರಬಹುದೆಂದು ತಿಳಿಯುತ್ತದೆ. ಆದರೆ ಅದಕ್ಕಿಂತ ಎಷ್ಟೋ ಸಾವಿರ ವರ್ಷಗಳ ಹಿಂದೆಯೇ ಇಲ್ಲಿ ಆದಿ ದ್ರಾವಿಡರು ನೆಲೆಯಾಗಿದ್ದರೆಂದೂ, ಕಾಡಾಡಿಗಳಾದ ಆ ಜನಾಂಗ ಸ್ವಂತ ಬೆಳೆ ಬೆಳೆದು (ಕೃಷಿ) ಬದುಕಲು ಬಯಲು ಪ್ರದೇಶಕ್ಕೆ ಬರುವಾಗ ತಮ್ಮ ವನ ಸಂಸ್ಕಾರದ ನಾಗ ದೈವಗಳನ್ನು ನಾಡಿನಲ್ಲಿಯೂ ಆರಾಧಿಸುತ್ತಿದ್ದರೆಂದೂ, ಆ ಕಾಲವನ್ನು ಇದಮಿತ್ಥ ಎನ್ನಲು ಅಸಾಧ್ಯ. ಆದರೆ ಇಷ್ಟು ಮಾತ್ರ ಸತ್ಯ. ನೇಗಿಲ ಸಂಸ್ಕಾರವೇ ನಾಗರಿಕತೆಯ ಮೂಲ ಆಗಿರಬೇಕಲ್ಲವೇ? ಸರಿ ಸುಮಾರು 1400 ವರ್ಷಗಳಷ್ಟು ಸುಧೀರ್ಘ ಕಾಲ ತೌಳವ…
ಮೂಡುಬಿದಿರೆ: ಕೇರಳದವರು ತಾವೂ ಎಲ್ಲೇ ನೆಲೆಸಿದ್ದರೂ ತಮ್ಮ ಆಚರಣೆ, ಸಂಸ್ಕøತಿಯನ್ನು ಸದಾ ಪೋಷಿಸುತ್ತಾ ಸಾಗುತ್ತಾರೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ನುಡಿದರು. ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಕೇರಳ ಸಮಾಜಂ ಸಂಘದ ವತಿಯಿಂದ ನಡೆದ “ಕಲೋತ್ಸವಂ- 2024″ನ್ನು ಉದ್ಘಾಟಿಸಿ ಮಾತನಾಡಿದರು. ಕರಾವಳಿ ಹಾಗೂ ಕೇರಳದ ಆಚರಣೆಗಳಲ್ಲಿ, ಜನರ ನಡವಳಿಕೆಯಲ್ಲಿ ಅನೇಕ ಹೋಲಿಕೆಗಳು ಕಂಡು ಬರುತ್ತವೆ. ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿವಿಧ ಕಾಲೇಜುಗಳಲ್ಲಿ ಹೆಚ್ಚಿನ ಸಂಖ್ಯೆಯ ಮಲಯಾಳಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಇಲ್ಲಿನ ವಿದ್ಯಾರ್ಥಿಗಳೊಂದಿಗೆ ಅನ್ಯೋನ್ಯತೆಯಿಂದ ಸಹಜೀವನ ನಡೆಸುತ್ತಿದ್ದಾರೆ. ನಮ್ಮ ಪ್ರತಿಷ್ಠಾನವು ಕೇರಳದ ಹಲವು ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಇಲ್ಲಿ ಪರಿಚಯಿಸಿ ಪ್ರಚುರ ಪಡಿಸಿದೆ. ವಿದ್ಯಾರ್ಥಿಗಳು ಕಲಿಕೆಯ ಜೊತೆಗೆ ತಮ್ಮ ಜವಾಬ್ದಾರಿಯನ್ನು ನಿಭಾಯಿಸಬೇಕು. ದೇವರ ಸ್ವಂತ ನಾಡು ಎಂದೆ ಕರೆಸಿಕೊಳ್ಳುವ ಕೇರಳ, ಎಲ್ಲಾ ಸಾಂಸ್ಕೃತಿಕ ಆಚರಣೆಗಳಿಗೆ ಸರಿಯಾದ ಅವಕಾಶವನ್ನು ಕಲ್ಪಿಸಿದೆ. ನಮ್ಮ ದೇಶದ ಸಂವಿಧಾನ ಎಲ್ಲಾ ಧರ್ಮದ ಜನರ ಆಚರಣೆಗಳಿಗೆ ಸಮಾನ ವೇದಿಕೆ ನೀಡಿದೆ. ದ್ವೇಷದಿಂದ…
ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಕಾಲೇಜುಗಳ ‘ಆಳ್ವಾಸ್ ಕ್ರೀಡಾಕೂಟ’ ಶನಿವಾರ ಸ್ವರಾಜ್ ಮೈದಾನದಲ್ಲಿ ನಡೆಯಿತು. ಮಂಗಳೂರು ವಿಶ್ವವಿದ್ಯಾಲಯ, ರಾಜೀವ್ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ವ್ಯಾಪ್ತಿಗೆ ಒಳಪಟ್ಟ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಮೂಹ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ವೈಯಕ್ತಿಕ, ಗುಂಪು, ಫೀಲ್ಡ್, ಟ್ರ್ಯಾಕ್ ಸೇರಿದಂತೆ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಆರಂಭದಲ್ಲಿ ವಿದ್ಯಾರ್ಥಿಗಳ ಪಥಸಂಚಲನವು ಗಮನ ಸೆಳೆಯಿತು. ಬ್ಯಾಂಡ್ ತಂಡ ಹಾಗೂ ಧ್ವಜಧಾರಿಗಳು ಸಾಥ್ ನೀಡಿದರು. ಅತಿಥಿಗಳಿಗೆ ಗೌರವ ವಂದನೆ ನೀಡಲಾಯಿತು. ಆಳ್ವಾಸ್ ಕ್ರೀಡಾಕೂಟವನ್ನು ಉದ್ಘಾಟಿಸಿದ ಮಂಗಳೂರು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥ ಡಾ. ಕಿಶೋರ್ ಕುಮಾರ್ ಸಿ. ಕೆ. ಮಾತನಾಡಿ, ಆಳ್ವಾಸ್ ಪ್ರಾಯೋಜಿಸುವ ಕ್ರೀಡಾಕೂಟಗಳು ಕ್ರೀಡಾ ಹಬ್ಬಗಳಾಗಿದ್ದು, ವಿದ್ಯಾರ್ಥಿಗಳಿಗೆ ಉತ್ತಮ ವೇದಿಕೆಯಾಗಿದೆ. ಮಂಗಳೂರು ವಿವಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ತೋರಲು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿದ್ಯಾರ್ಥಿಗಳ ಕೊಡುಗೆ ಅಪಾರ ಎಂದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಅವರು…
ಬೃಹತ್ತಾಗಿದ್ದ ದಟ್ಟಡವಿಗೆ ಹೊಂದಿಕೊಂಡಿದ್ದ ಒಂದು ಗ್ರಾಮ. ಜನಸಂಖ್ಯೆಯೂ ತೀರಾ ಕಡಿಮೆಯಿತ್ತು. ವ್ಯವಸಾಯವೇ ಪ್ರಮುಖ ಕಸುಬಾಗಿತ್ತಾದರೂ ಕೆಲವರು ಕಾಡಿಗೆ ತೆರಳಿ ಒಣ ಮರಗಳನ್ನು ಕಡಿದು ಕಟ್ಟಿಗೆಯನ್ನು ಹೊತ್ತೊಯ್ದು ಕಾಡಿನಿಂದಾಚೆ ಇದ್ದ ನಗರದಲ್ಲಿ ಮಾರಿ ಜೀವನ ಸಾಗಿಸುತ್ತಿದ್ದರು. ಅಂತವರಲ್ಲಿ ನಿಜಗುಣನೂ ಒಬ್ಬ. ಸ್ವಲ್ಪ ಧಡೂತಿ ದೇಹದವನಾದರೂ ಕೆಲಸದಲ್ಲೇನೂ ಕಳ್ಳಾಟವಿರಲಿಲ್ಲ. ಅವನ ಮೈಯೊಂದೇ ಸ್ವಲ್ಪ ಭಾರವೆನಿಸಿ ಕೆಲಸದ ನಡುವೆ ಆಗಾಗ್ಗೆ ವಿಶ್ರಾಂತಿ ಪಡೆಯುತ್ತಿದ್ದುದೊಂದೇ ಅವನ ಅವಗುಣ. ಇಂತಹ ನಿಜಗುಣನು ಅಂದೂ ಸಹ ತನ್ನ ನಿತ್ಯದ ಕಾರ್ಯಕ್ಕಾಗಿ ಕಾಡಿಗೆ ತೆರಳಲು ಸಿದ್ಧವಾದನು. ಅವನ ತಾಯಿ ಅವನಿಗೆ ದೊಡ್ಡದೊಂದು ಡಬ್ಬಿಯಲ್ಲಿ ಆಹಾರವನ್ನು ತುಂಬಿಕೊಟ್ಟು ಮನೆಯಿಂದ ಬೀಳ್ಕೊಟ್ಟಳು. ಕಾಡಿನೊಳಗೆ ಸ್ವಲ್ಪ ದೂರದವರೆಗೂ ನಡೆದ ನಿಜಗುಣನಿಗೆ ತಲೆಯ ಮೇಲೆ ಹೊತ್ತಿದ್ದ ಡಬ್ಬಿ ಹಾಗೂ ಬೃಹತ್ ಗಾತ್ರದ ಮೈಯಿಂದಾಗಿ ದೂರ ನಡೆಯುವುದು ಆಯಾಸವಾಗತೊಡಗಿತು. ಸಮೀಪದ ಮರದ ನೆರಳೊಂದರಡಿ ಕುಳಿತ ನಿಜಗುಣನು ಅಮ್ಮ ಕೊಟ್ಟಿದ್ದ ಬುತ್ತಿಯ ಡಬ್ಬಿಯನ್ನು ಬಿಚ್ಚಿ ಅದರಲ್ಲಿದ್ದ ಆಹಾರವನ್ನು ಸೇವಿಸಿದನು. ಕೆಲವು ಸಮಯದ ವಿಶ್ರಾಂತಿಯನ್ನೂ ಪಡೆದ ಅನಂತರ ಅವನಲ್ಲಿ ಹೊಸದೊಂದು ಉತ್ಸಾಹ…