Author: admin
ವಿದ್ಯಾಗಿರಿ (ಮೂಡುಬಿದಿರೆ): ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ಸೆಪ್ಟೆಂಬರ್ 26ರಂದು ನಡೆದ ದಕ್ಷಿಣ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಮೂಡುಬಿದಿರೆ ತಾಲ್ಲೂಕನ್ನು ಪ್ರತಿನಿಧಿಸಿದ ಆಳ್ವಾಸ್ ಕಾಲೇಜು ತಂಡವು ಸಮಗ್ರ ಪ್ರಶಸ್ತಿಗೆ ಭಾಜನವಾಗಿದೆ. ಪುರುಷ ಮತ್ತು ಮಹಿಳಾ ಸೇರಿದಂತೆ ಎರಡೂ ವಿಭಾಗಗಳ ಅಥ್ಲೆಟಿಕ್ಸ್‍ನಲ್ಲಿ ಒಟ್ಟು 23 ಚಿನ್ನ, 10 ಬೆಳ್ಳಿ, 02 ಕಂಚಿನ ಪದಕಗಳೊಂದಿಗೆ ಒಟ್ಟು 35 ಪದಕ, ಕುಸ್ತಿಯಲ್ಲಿ 16 ಚಿನ್ನ, 08 ಬೆಳ್ಳಿ, 08 ಕಂಚಿನ ಪದಕಗಳೊಂದಿಗೆ ಒಟ್ಟು 32 ಪದಕ, ಯೋಗದಲ್ಲಿ 05 ಚಿನ್ನ, 04 ಬೆಳ್ಳಿ, 02 ಕಂಚಿನ ಪದಕಗಳೊಂದಿಗೆ ಒಟ್ಟು 11 ಪದಕ ಹಾಗೂ ಕಬಡ್ಡಿ, ಬಾಲ್ ಬ್ಯಾಡ್ಮಿಂಟನ್ ಮತ್ತು ಖೋ-ಖೋ ಪಂದ್ಯಾಟಗಳ ಪುರುಷ ಮತ್ತು ಮಹಿಳಾ ವಿಭಾಗಗಳಲ್ಲಿ ಪ್ರಥಮ ಸ್ಥಾನ ಹಾಗೂ ವಾಲಿವಾಲ್ ಪುರುಷರ ವಿಭಾಗದಲ್ಲಿ ದ್ವಿತೀಯ, ತ್ರೋಬಾಲ್ ಮಹಿಳೆಯರ ವಿಭಾಗದಲ್ಲಿ ದ್ವಿತೀಯ ಸ್ಥಾನವನ್ನು ಆಳ್ವಾಸ್ ಪಡೆದುಕೊಂಡಿದೆ. ಮಂಗಳೂರು, ಉಡುಪಿ, ಚಾಮರಾಜನಗರ, ಕೊಡಗು ಜಿಲ್ಲೆಗಳಲ್ಲಿ ನಡೆಯುವ ಮೈಸೂರು ವಿಭಾಗ ಮಟ್ಟದ ದಸರಾ ಕ್ರೀಡಾಕೂಟಕ್ಕೆ ಆಳ್ವಾಸ್ ಕಾಲೇಜಿನ…
ಪುತ್ತೂರು ಬಂಟರ ಭವನದಲ್ಲಿ ತಾಲೂಕು ಮಹಿಳಾ ಬಂಟರ ಸಂಘದ ಮಾಸಿಕ ಸಭೆಯು ಸೆಪ್ಟೆಂಬರ್ 10 ರಂದು ಜರಗಿತು. ಕುತ್ತಾಡಿ ಸತೀಶ್ ರೈ ತನ್ನ ಸಹೋದರಿ ಸ್ವರ್ಣಲತಾ ಜೆ ರೈ ರವರ ಮೂಲಕ ಮಹಿಳಾ ಬಂಟರ ವಿಭಾಗದ ನೇತೃತ್ವದಲ್ಲಿ 5 ಜನ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದ ಸಂಪೂರ್ಣ ವೆಚ್ಚವನ್ನು ಕಳೆದ 6 ವರ್ಷಗಳಿಂದ ನೀಡುತ್ತಿದ್ದು, ಈ ವರ್ಷವೂ ಕೂಡ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ವೆಚ್ಚವನ್ನು ಮಹಿಳಾ ಬಂಟರ ಮಾಸಿಕ ಸಭೆಯಲ್ಲಿ ವಿತರಿಸಲಾಯಿತು. ಪುತ್ತೂರು ಬಂಟರ ಸಂಘದ ಅಧ್ಯಕ್ಷ ಹೇಮನಾಥ ಶೆಟ್ಟಿ ಕಾವು, ಕೋಶಾಧಿಕಾರಿ ಸಂತೋಷ್ ಶೆಟ್ಟಿ, ಮಹಿಳಾ ವಿಭಾಗದ ಅಧ್ಯಕ್ಷೆ ಗೀತಾ ಮೋಹನ ರೈ, ಬಂಟರ ಯಾನೆ ನಾಡವರ ಮಾತೃ ಸಂಘದ ನಿರ್ದೇಶಕಿ ವಾಣಿ ಎಸ್ ಶೆಟ್ಟಿ, ನಿಕಟಪೂರ್ವ ಕಾರ್ಯದರ್ಶಿ ಹರಿಣಾಕ್ಷಿ ಜೆ ಶೆಟ್ಟಿ, ಸಂಘದ ಪದಾಧಿಕಾರಿ ಜಯಂತಿ ಎಂ ರೈ, ಉಪಸ್ಥಿತರಿದ್ದರು. ಭವ್ಯ ಅಮ್ಮಣ್ಣ ರೈ ಪ್ರಾರ್ಥಿಸಿದರು. ಪ್ರಧಾನ ಕಾರ್ಯದರ್ಶಿ ಕುಸುಮಾ ಪಿ ಶೆಟ್ಟಿ ವರದಿ ವಾಚಿಸಿದರು. ಕೋಶಾಧಿಕಾರಿ ಅರುಣಾ ಡಿ. ರೈ ಆಟಿದ…
ದೈಹಿಕ ಶಕ್ತಿ ಆರೋಗ್ಯಪೂರ್ಣ ಜೀವನಕ್ಕೆ ಕ್ರೀಡೆ ಒಂದು ರೀತಿಯಲ್ಲಿ ಉತ್ತಮ ವ್ಯಾಯಾಮ ಇದ್ದ ಹಾಗೆ. ಜಾತಿ ಧರ್ಮ ಎನ್ನದೇ ಬೇಧ ಭಾವ ಇಲ್ಲದೆ ನಡೆಯುವ ಇಂತಹ ಕ್ರೀಡಾ ಅಯೋಜನೆಗಳು ದ್ವೇಷ ಭಾವವನ್ನು ಕೂಡಾ ದೂರ ಮಾಡುವ ವೇದಿಕೆ ಇದು. ಕ್ರೀಡೆಯ ಮೇಲಿನ ಪ್ರೀತಿ, ಆಸಕ್ತಿ ತೋರುವ ಮಕ್ಕಳು ಕಠಿನ ಪರಿಶ್ರಮದಿಂದ ಸಾಧನೆ ಮಾಡಬೇಕು. ಹೆಚ್ಚೆಚ್ಚು ಕ್ರೀಡಾ ಸ್ಪರ್ಧೆಗಳಲ್ಲಿ ಭಾಗಿಗಲಾಗಬೇಕು. ತುಳುಕೂಟದ ರಜತ ಮಹೋತ್ಸವದ ಅಂಗವಾಗಿ ತುಳುಕೂಟದ ಎಲ್ಲಾ ಸದಸ್ಯರ ಸಹಕಾರದಿಂದ ತುಳುವರನ್ನು ಒಟ್ಟು ಸೇರಿಸಿಕೊಂಡು ಹೊಸ ರೂಪದಲ್ಲಿ ಪಂದ್ಯಾಟಗಳನ್ನು ಆಯೋಜಿಸಿದ್ದಾರೆ. ತುಳುವರಿಗಾಗಿ ಸಮಾಜಕ್ಕಾಗಿ ಆಯೋಜನೆ ಮಾಡುವ ಕೂಟಗಳಲ್ಲಿ ಎಲ್ಲಾ ತುಳು ಬಾಂಧವರು ಭಾಗಿಗಳಾಗಬೇಕು. ಇಲ್ಲಿ ಸೇರಿರುವ ಎಲ್ಲರಲ್ಲಿಯೂ ಪ್ರೀತಿಯ ಸಾಮರಸ್ಯ ಬೆಳೆಯಲಿ ಎಂದು ಪುಣೆ ಬಂಟ್ಸ್ ಅಸೋಸಿಯೇಷನ್ ನ ನಿಕಟ ಪೂರ್ವ ಅಧ್ಯಕ್ಷರಾದ ಗಣೇಶ್ ಹೆಗ್ಡೆ ಪುಣ್ಚೂರ್ ನುಡಿದರು. ಪುಣೆ ತುಳುಕೂಟದ ರಜತ ಮಹೋತ್ಸವಕ್ಕೆ ಪೂರಕವಾಗಿ 25 ವಿವಿಧ ಕಾರ್ಯಕ್ರಮಗಳು ನಡೆಯಯುತ್ತಿದ್ದು ಅದರ ಭಾಗವಾಗಿ ಸೆಪ್ಟೆಂಬರ್ 21 ಮತ್ತು 22 ರಂದು…
ಉಡುಪಿ ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಎಕ್ಸಲೆಂಟ್ ಕುಂದಾಪುರದ ವಿದ್ಯಾರ್ಥಿನಿ ನವಮಿ ಎಸ್ ಶೆಟ್ಟಿ ರಾಜ್ಯ ಮಟ್ಟಕ್ಕೆ ಆಯ್ಕೆ:
ಪದವಿ ಪೂರ್ವ ಶಿಕ್ಷಣ ಇಲಾಖೆ, ಕರ್ನಾಟಕ ಸರ್ಕಾರ ಮತ್ತು ಎಸ್.ಎನ್.ವಿ ಪದವಿ ಪೂರ್ವ ಕಾಲೇಜು ಕಾರ್ಕಳ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ ಕಾಲೇಜು ವಿಭಾಗದ ಬಾಲಕ-ಬಾಲಕಿಯರ ಕರಾಟೆ ಸ್ಪರ್ಧೆಯಲ್ಲಿ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜು, ಕುಂದಾಪುರದ ವಿದ್ಯಾರ್ಥಿನಿ ನವಮಿ ಎಸ್ ಶೆಟ್ಟಿ ವಿಜಯಶಾಲಿಯಾಗುವುದರ ಮೂಲಕ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾಳೆ ಮತ್ತು ಆಶಿತ್ ಶೆಟ್ಟಿ ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದುಕೊಂಡಿರುತ್ತಾನೆ. ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜು ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ- ಬೋಧಕೇತರ ವೃಂದದವರು, ವಿದ್ಯಾರ್ಥಿಗಳು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಯುವ ಉದ್ಯಮಿ, ಸಮಾಜಸೇವಕ, ಪುತ್ತೂರು ಕಂಬಳ ಸಮಿತಿಯ ಉಪಾಧ್ಯಕ್ಷ ರೋಶನ್ ರೈ ಬನ್ನೂರು ಅವರನ್ನು ಪುತ್ತೂರು ನಗರಸಭೆ ಸದಸ್ಯರನ್ನಾಗಿ ಸರಕಾರವು ನಾಮ ನಿರ್ದೇಶನ ಮಾಡಿ ಆದೇಶಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಗರ ಸಭೆಗೆ ಈಗಾಗಲೇ 4 ಅಭ್ಯರ್ಥಿಗಳನ್ನು ನಾಮ ನಿರ್ದೇಶನ ಮಾಡಲಾಗಿದ್ದು, ಉಳಿದ 1 ಸ್ಥಾನಕ್ಕೆ ಬನ್ನೂರು ನಿವಾಸಿ ರೋಶನ್ ರೈರವರನ್ನು ನೇಮಕ ಮಾಡಿ ಆದೇಶಿಸಲಾಗಿದೆ.
ಪೋಷಕಾಂಶಗಳಿಂದ ಸಮೃದ್ಧವಾಗಿರುವ ತೆಂಗಿನ ಕಾಯಿಯನ್ನು ಪ್ರತಿನಿತ್ಯ ಸೇವಿಸುವುದರಿಂದ ನಮ್ಮ ದೇಹದ ರೋಗನಿರೋಧಕ ಶಕ್ತಿ ಹೆಚ್ಚುವುದಲ್ಲದೆ, ಜ್ಞಾಪಕ ಶಕ್ತಿಯೂ ಹೆಚ್ಚುತ್ತದೆ. ಹಸಿ ತೆಂಗಿನಕಾಯಿಯಲ್ಲಿ ತಾಮ್ರ, ಸೆಲೆನಿಯಂ, ಪೊಟ್ಯಾಸಿಯಂ, ಮೆಗ್ನೀಸಿಯಂ, ಸತು, ಫೋಲೇಟ್, ವಿಟಮಿನ್ ಸಿ, ಥಯಾಮಿನ್ ಮುಂತಾದ ಪೋಷಕಾಂಶಗಳು ಸಮೃದ್ಧವಾಗಿವೆ. ಇದು ಬ್ಯಾಕ್ಟೀರಿಯಾ ವಿರೋಧಿ ಮತ್ತು ಆಂಟಿ ಫಂಗಲ್ ಗುಣಗಳನ್ನು ಸಹ ಹೊಂದಿದೆ. ಹಾಗಾದರೆ ಬೆಳಿಗ್ಗೆ ಎದ್ದು ಒಂಚೂರು ಹಸಿ ಕೊಬ್ಬರಿ ತಿನ್ನುವುದರಿಂದ ಆಗುವ ಪ್ರಯೋಜನಗಳೇನು ಅಂತ ತಿಳಿಯೋಣ. ತೆಂಗಿನಕಾಯಿಯಲ್ಲಿ ಹೆಚ್ಚಿನ ಫೈಬರ್ ಅಂಶವಿದ್ದು ಮಲ ಬದ್ಧತೆಯನ್ನು ತಡೆಯಲು ಸಹಾಯ ಮಾಡುತ್ತದೆ ಮತ್ತು ಕರುಳಿನ ಚಲನೆಯನ್ನು ಉತ್ತೇಜಿಸುತ್ತದೆ. ಅನಾರೋಗ್ಯವನ್ನು ತಡೆಯಲು ಸಹಾಯ ಮಾಡುತ್ತದೆ. ಪದೇ ಪದೇ ವಾಂತಿ ಸಮಸ್ಯೆ ಕಾಡುತ್ತಿದ್ದರೆ ಕೊಬ್ಬರಿಯನ್ನು ಬಾಯಿಯಲ್ಲಿ ಇಟ್ಟುಕೊಂಡು ಸ್ವಲ್ಪ ಹೊತ್ತು ಜಗಿಯಿರಿ. ಇದರಿಂದ ಪ್ರಯೋಜನವಾಗಲಿದೆ. ತೆಂಗಿನಕಾಯಿಯಲ್ಲಿ ಕಂಡು ಬರುವ ಪ್ರೋಟೀನ್ ಮತ್ತು ಕಬ್ಬಿಣ, ಕೂದಲಿನ ಬೆಳವಣಿಗೆಯನ್ನು ಬೆಂಬಲಿಸಿ ಕೂದಲಿಗೆ ಹೊಳಪು ನೀಡುತ್ತದೆ. ಇದರಿಂದ ಕೂದಲು ತೆಳುವಾಗುವುದನ್ನು ಮತ್ತು ಕೂದಲು ಉದುರುವುದನ್ನು ತಡೆಯಬಹುದು. ಹಸಿ ತೆಂಗಿನಕಾಯಿಯ ಲಾರಿಕ್…
ವಿದ್ಯಾಗಿರಿ: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಮಂಗಳೂರು ವಲಯ ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಮೂಡುಬಿದಿರೆಯ ಆಳ್ವಾಸ್ ಕಾಲೇಜ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್ ಚಾಂಪಿಯನ್ ಆಗಿದೆ. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಆಶ್ರಯದಲ್ಲಿ ಮಂಗಳೂರಿನ ಕಣಚೂರ್ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಪಂದ್ಯಾಟ ನಡೆದಿದ್ದು, ಫೈನಲ್ ನಲ್ಲಿ ಮಂಗಳೂರಿನ ಕರಾವಳಿ ಫಾರ್ಮಸಿ ಕಾಲೇಜಿನ ವಿರುದ್ಧ ಮೂಡುಬಿದಿರೆಯ ಆಳ್ವಾಸ್ ಕಾಲೇಜಿನ ಅಲೈಡ್ ಹೆಲ್ತ್ ಸೈನ್ಸಸ್ 2-0 ಅಂತರದಿಂದ ಗೆಲುವು ಸಾಧಿಸಿದೆ. ಅತ್ಯುತ್ತಮ ಹೊಡೆತಗಾರ ಪ್ರಶಸ್ತಿಗೆ ಆಳ್ವಾಸ್ ಕಾಲೇಜ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್ ನ ವಿದ್ಯಾರ್ಥಿ ರಕ್ಷಿತ್ ಎಸ್. ಕೆ ಭಾಜನರಾಗಿದ್ದಾರೆ . ಶಿವಮೊಗ್ಗ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ನಡೆಯಲಿರುವ ಅಂತರ ವಲಯ ಟೂರ್ನಿಗೆ ಆಳ್ವಾಸ್ ಕಾಲೇಜ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್ ಅರ್ಹತೆಯನ್ನು ಪಡೆದಿದೆ.
ಅಮೇರಿಕ ಪ್ರವಾಸ ಕೈಗೊಂಡಿದ್ದ ಯಕ್ಷಧ್ರುವ ಪಟ್ಲ ಫೌಂಡೇಶನ್ ಸ್ಥಾಪಕ ಪಟ್ಲಗುತ್ತು ಸತೀಶ್ ಶೆಟ್ಟಿ ಅವರು ತಮ್ಮ ತಂಡದ ಜೊತೆ ಮಂಗಳವಾರ ರಾತ್ರಿ ತಾಯ್ನಾಡಿಗೆ ಮರಳಿದ್ದು ಬಜ್ಪೆ ವಿಮಾನ ನಿಲ್ದಾಣದಲ್ಲಿ ಟ್ರಸ್ಟ್ ನ ಪದಾಧಿಕಾರಿಗಳು ಸ್ವಾಗತ ಕೋರಿದರು. ಪಟ್ಲ ಸತೀಶ್ ಶೆಟ್ಟಿ ಅವರ ನೇತೃತ್ವದಲ್ಲಿ 9 ಮಂದಿಯ ತಂಡ ಅಮೇರಿಕ ದೇಶದ ಬೇರೆ ಬೇರೆ ತಾಣಗಳಲ್ಲಿ ಯಕ್ಷಗಾನ ಪ್ರದರ್ಶಿಸಿ 75 ದಿನಗಳ ಬಳಿಕ ತಾಯ್ನಾಡಿಗೆ ಮರಳಿದ್ದಾರೆ. ಈ ವೇಳೆ ತಮ್ಮ ಅಮೇರಿಕ ಪ್ರವಾಸದ ಕಥನವನ್ನು ಮಾಧ್ಯಮ ಪ್ರತಿನಿಧಿಗಳೊಂದಿಗೆ ಹಂಚಿಕೊಂಡ ಅವರು, “ವಿದೇಶಗಳಲ್ಲಿ ತುಳುನಾಡಿನ ಗಂಡುಮೆಟ್ಟಿನ ಕಲೆಯಾಗಿರುವ ಯಕ್ಷಗಾನ ಪ್ರದರ್ಶನ ಮತ್ತು ಕಾರ್ಯಾಗಾರವನ್ನು ಹಮ್ಮಿಕೊಂಡಿದ್ದು ಹೆಮ್ಮೆ ಅನಿಸುತ್ತಿದೆ. ಅಲ್ಲಿನ ಜನರು ಕೂಡ ಯಕ್ಷಗಾನ ನಾಟ್ಯ ಮತ್ತು ಭಾಗವತಿಕೆಗೆ ಮನಸೋತು ಕಲಿಯಲು ಆಸಕ್ತಿ ತೋರಿಸಿರುವುದು ಖುಷಿಯ ವಿಚಾರ” ಎಂದರು. “ಅಮೇರಿಕಾದ ಎರಡು ನಗರಗಳಲ್ಲಿ ಪಟ್ಲ ಫೌಂಡೇಶನ್ ದಿನವನ್ನಾಗಿ ಅಲ್ಲಿನ ಮೇಯರ್ ಘೋಷಣೆ ಮಾಡಿದ್ದಾರೆ. ಇದು ಅವಿಸ್ಮರಣೀಯ ಅನುಭವ. ನಮ್ಮ ಕಲೆಗೆ ಇಂದು ವಿಶ್ವವ್ಯಾಪಿ ಮನ್ನಣೆ ಸಿಗುತ್ತಿದೆ.…
ಜೆಸಿಐ ಉಪ್ಪುಂದದ 2023 ರ ಅಧ್ಯಕ್ಷ, ತನ್ನ 100 ನೇ ಕಾರ್ಯಕ್ರಮಕ್ಕೆ ಪದ್ಮಶ್ರೀ ಪುರಸ್ಕೃತರಾದ ಹರೆಕಳ ಹಾಜಬ್ಬನವರನ್ನು ಹಾಗೂ ವೃಕ್ಷ ಮಾತೆ ತುಳಸಿ ಗೌಡ ಅವರನ್ನು ಕರೆಸಿ ಗೌರವಿಸುವ ಮೂಲಕ ಕಳೆದ ವರ್ಷದ ಜೇಸಿ ವಲಯದ ಔಟ್ ಸ್ಟ್ಯಾಂಡಿಂಗ್ ಪ್ರೆಸಿಡೆಂಟ್ ಪ್ರಶಸ್ತಿ ಪುರಸ್ಕೃತ, ಪ್ರದೀಪ್ ಶೆಟ್ಟಿ ಕಾರಿಕಟ್ಟೆ ಅವರಿಗೆ ಜೆಸಿ ಸಂಸ್ಥೆಗೆ ಹಾಗೂ ಇತರ ಸಂಘ ಸಂಸ್ಥೆಗಳಿಗೆ ಸಲ್ಲಿಸಿದ ಅಪಾರ ಸೇವೆಯನ್ನು ಗುರುತಿಸಿ, ಪ್ರತಿಷ್ಠಿತ ಕಮಲ ಪತ್ರ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದೇ ಸಂದರ್ಭ ಅವರ ಗುಣಗಾನ ಮಾಡುತ್ತಾ, ಪ್ರದೀಪ್ ಶೆಟ್ಟಿ ಕಾರಿಕಟ್ಟೆ ಇವರ ಸಾಧನೆ ಖಂಡಿತವಾಗಿಯೂ ಜೇಸಿ ಬುಕ್ ಆಫ್ ರೆಕಾರ್ಡ್. ಸಂಘ ಸಂಸ್ಥೆಗಳ ಮೂಲಕ ಸಂಘಟನಾ ಕಾರಣಕ್ಕಾಗಿ ಬೆಳೆದು ಅನೇಕ ಸಂಸ್ಥೆಗಳಿಗೆ ತನ್ನದೇ ಆದ ವಿಶೇಷವಾದ ಕೊಡುಗೆಯನ್ನು ನೀಡುತ್ತಾ, ಅದರ ಏಳಿಗೆಗೆ ಶ್ರಮಿಸಿದವರು. ಅವರಿಗೆ ಕಮಲ ಪತ್ರ ಪ್ರಶಸ್ತಿ ನೀಡುತ್ತಿರುವುದು ಪ್ರಸ್ತುತವಾಗಿದೆ ಎಂದರು. ಜೇಸಿ ಅಧ್ಯಕ್ಷ ಮಂಜುನಾಥ್ ದೇವಾಡಿಗ ಸಭಾಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಗೋವಿಂದ ಬಾಬು ಪೂಜಾರಿ ಕೊಲ್ಲೂರು…
“ಮೇರು ಸಾಹಿತಿ, ಕಾದಂಬರಿಕಾರರಾದ ಡಾ. ಶಿವರಾಮ ಕಾರಂತ, ಎಸ್ ಎಲ್ ಭೈರಪ್ಪ ಮತ್ತು ನಾಟಕಕಾರರಾದ ಗಿರೀಶ್ ಕಾರ್ನಾಡ್ ಮೊದಲಾದವರ ಸಾಹಿತ್ಯ ತನ್ನನ್ನು ಬರವಣಿಗೆಯತ್ತ ಸೆಳೆಯಿತು. ಶಾಲಾ ದಿನಗಳಲ್ಲಿ ಸಣ್ಣ ಕತೆಗಳನ್ನು ಬರೆಯಲು ಆರಂಭಿಸಿ ನನ್ನದೇ ಆದ ಶೈಲಿಯನ್ನು ರೂಢಿಸಿಕೊಂಡಿರುವುದರಿಂದ ಓದುಗರನ್ನು ಸೆಳೆಯಲು ಸಾಧ್ಯವಾಯಿತು” ಎಂದು ಹಿರಿಯ ಕತೆಗಾರ ರಾಜೇಂದ್ರ ಬಿ ಶೆಟ್ಟಿ ಅವರು ನುಡಿದರು. ಅವರು ಸೆಪ್ಟೆಂಬರ್ 21ರ ಶನಿವಾರದಂದು ಕಲೀನಾ ಕ್ಯಾಂಪಸ್ ನ ಕನ್ನಡ ವಿಭಾಗಕ್ಕೆ ಭೇಟಿ ನೀಡಿ ಸಾಹಿತ್ಯ ಸಂವಾದದಲ್ಲಿ ಪಾಲ್ಗೊಂಡು ಪ್ರಶ್ನೆಗಳಿಗೆ ಉತ್ತರಿಸುತ್ತಾ ತಮ್ಮ ಸಾಹಿತ್ಯ ಪಯಣದ ಹೆಜ್ಜೆ ಗುರುತುಗಳ ಕುರಿತಾಗಿ ಹಲವಾರು ವಿಷಯಗಳನ್ನು ಹಂಚಿಕೊಂಡರು. “ಅಧ್ಯಾಪಕರ ಪ್ರೋತ್ಸಾಹ ಕಥನ ಸಾಹಿತ್ಯದಲ್ಲಿ ಮುಂದುವರೆಯಲು ಕಾರಣೀಭೂತವಾಯಿತು. ಇಂಜಿನಿಯರ್ ವೃತ್ತಿಯೊಂದಿಗೆ ತನ್ನ ಮೆಚ್ಚಿನ ಪ್ರವೃತ್ತಿಯಲ್ಲಿ ತೊಡಗಿಸಿಕೊಂಡು ಸಾಹಿತ್ಯದ ಸೇವೆ ಮಾಡಲು ಸಂತೋಷವೆನಿಸುತ್ತಿದೆ” ಎಂದು ಅವರು ನುಡಿದರು. ಸಾಹಿತ್ಯದ ಜೊತೆಗೆ ಸಾಂಸ್ಕೃತಿಕ ಪರಿಚಾರಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಕಥನ ಸಾಹಿತ್ಯದಲ್ಲಿ ತಮ್ಮ ವಿಭಿನ್ನ ಶೈಲಿಗೆ ಹೆಸರಾಗಿರುವ ರಾಜೇಂದ್ರ ಶೆಟ್ಟಿ ಅವರಿಗೆ ವಿಭಾಗದ ಮುಖ್ಯಸ್ಥ…