Author: admin
ಮಾತೃಭೂಮಿ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿಯಿಂದ ಮುಂಬಯಿ ಬಂಟರ ಸಂಘದ ನೂತನ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ ಅವರಿಗೆ ಅಭಿನಂದನೆ
ಬಂಟರ ಸಂಘ ಮುಂಬಯಿ ಸಂಚಾಲಿತ ಮಾತೃಭೂಮಿ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿ ಲಿಮಿಟೆಡ್ ನ ಗೌರವ ಕಾರ್ಯದರ್ಶಿಯಗಿ ಕಾರ್ಯನಿರ್ವಹಿಸಿಕೊಂಡಿರುವ ಪ್ರವೀಣ್ ಭೋಜ ಶೆಟ್ಟಿ ಅವರು ಮುಂಬಯಿ ಬಂಟರ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದು ಅವರನ್ನು ನವಂಬರ್ 27ರಂದು ಕುರ್ಲಾ ಪೂರ್ವದ ಬಂಟರ ಭವನದ ಅನೆಕ್ಸ್ ಸಂಕೀರ್ಣದಲ್ಲಿರುವ ಮಾತೃಭೂಮಿಯ ಕಚೇರಿಯಲ್ಲಿ ನಡೆದ ಆಡಳಿತ ಸಭೆಯಲ್ಲಿ ಸೊಸೈಟಿಯ ಕಾರ್ಯಾಧ್ಯಕ್ಷರಾದ ಉಳ್ತೂರು ಮೋಹನದಾಸ್ ಶೆಟ್ಟಿಯವರು ಮತ್ತು ಆಡಳಿತ ಪದಾಧಿಕಾರಿಗಳು ಗೌರವಿಸಿದರು. ಗೌರವವನ್ನು ಸ್ವೀಕರಿಸಿದ ಪ್ರವೀಣ್ ಭೋಜ ಶೆಟ್ಟಿ ಕೃತಜ್ಞತೆ ಸಲ್ಲಿಸುತ್ತಾ ಅಧ್ಯಕ್ಷನಾಗಿ ಪ್ರಥಮ ಗೌರವ ಇದಾಗಿದೆ. ಈ ಗೌರವ ಮಾತೃಭೂಮಿ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿಗೆ ಸಲ್ಲುತ್ತದೆ. ನನ್ನ ಮುಂದಿನ ಸೇವಾ ಕಾರ್ಯಗಳಿಗೆ ತಾವೆಲ್ಲರೂ ಸಹಕರಿಸಬೇಕು ಎಂದು ನುಡಿದರು. ಸೊಸೈಟಿಯ ಕಾರ್ಯಾಧ್ಯಕ್ಷರಾದ ಉಳ್ತೂರು ಮೋಹನದಾಸ್ ಶೆಟ್ಟಿಯವರು ಪ್ರವೀಣ್ ಭೋಜ ಶೆಟ್ಟಿ ಅವರು ಮಾತೃಭೂಮಿಗೆ ನೀಡಿದ ಸೇವಾ ಕಾರ್ಯಗಳನ್ನು ನೆನಪಿಸಿಕೊಂಡು ಬಂಟರ ಸಂಘದ ಮೂಲಕ ಸಮಾಜದ ಉತ್ತಮ ಸೇವಾ ಕಾರ್ಯಗಳು ನಡೆಯಲಿ ಎಂದು ಶುಭ ಹಾರೈಸಿದರು. ಈ…
ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ 40 ನೇ ನೂತನ ಉಡುಪಿ ಘಟಕದ ಅಧ್ಯಕ್ಷರಾಗಿ ಜಯಕರ ಶೆಟ್ಟಿ ಇಂದ್ರಾಳಿ ಆಯ್ಕೆಯಾಗಿದ್ದಾರೆ. ಉಡುಪಿಯ ಶ್ರೀ ಭಗವಾನ್ ನಿತ್ಯಾನಂದ ಸ್ವಾಮಿ ಮಂದಿರ ಮಠದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಉಡುಪಿಯ ಪುರುಷೋತ್ತಮ ಶೆಟ್ಟಿ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಮಾಜಿ ಅಧ್ಯಕ್ಷ ಪ್ರೊ. ಎಂ.ಎಲ್. ಸಾಮಗ, ಟಿ.ಶಂಭು ಶೆಟ್ಟಿ, ಸುಧಾಕರ ಆಚಾರ್ಯರ ನೇತೃತ್ವದಲ್ಲಿ ನಡೆದ ಸಮಾಲೋಚನ ಸಭೆಯಲ್ಲಿ ಈ ಆಯ್ಕೆ ನಡೆಯಿತು. ಗೌರವಾಧ್ಯಕ್ಷರಾಗಿ ಉಜ್ವಲ್ ಡೆವಲಪರ್ಸ್ ನ ಪುರುಷೋತ್ತಮ ಶೆಟ್ಟಿ, ಶ್ರೀ ಶಿರ್ಡಿ ಸಾಯಿಬಾಬಾ ಮಂದಿರದ ಧರ್ಮದರ್ಶಿ ಕೆ.ದಿವಾಕರ್ ಶೆಟ್ಟಿ ತೋಟದ ಮನೆ ಅವರನ್ನು ಆರಿಸಲಾಯಿತು.
ಬ್ರಹ್ಮಾವರ: ನ, 26:- ಭಾರತ ದೇಶ ಕಂಡ ಅತ್ಯಂತ ಉತ್ಕೃಷ್ಟವಾದ ದಿನ. ಯಾಕೆಂದರೆ ಅಂದು ದೇಶದ ಸಂವಿಧಾನ ರಚನಾ ಸಮಿತಿಯು ದೇಶಕ್ಕೆ ಅತಿದೊಡ್ಡ ಸಂವಿಧಾನವನ್ನು ನೀಡಲ್ಪಟ್ಟ ದಿನ. ಆದರೆ ದೇಶಕ್ಕೆ ಅರ್ಪಣೆಯಾದದ್ದು ಜನವರಿ 26, 1950 ರಂದು ರಚನಾ ದಿನವನ್ನು ಜಿ ಎಮ್ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್ನಲ್ಲಿ ಸಾಂಪ್ರದಾಯಿಕವಾಗಿ ಆಚರಿಸಲಾಯಿತು. ಶಾಲಾ ಪ್ರಾಂಶುಪಾಲರಾದ ಜಾರ್ಜ್ ಕುರಿಯನ್ ಪ್ರಾಸ್ತಾವಿಕ ಮಾತುಗಳೊಂದಿಗೆ, ಸಂವಿಧಾನದ ಪೀಠಿಕೆಯನ್ನು ವಾಚಿಸಿದರು. ಸಮಾಜ ವಿಜ್ಞಾನ ಶಿಕ್ಷಕರಾದ ಶ್ರೀ ಪ್ರಸನ್ನ ಶೆಟ್ಟಿಯವರು ಸಂವಿಧಾನದ ಪ್ರಾಮುಖ್ಯತೆಯನ್ನು ಅತ್ಯಂತ ಗೌರವದಿಂದ ವಿದ್ಯಾರ್ಥಿಗಳಿಗೆ ತಿಳಿಸಿದರು. ವಿಭಾಗೀಯ ಮುಖ್ಯಸ್ಥರಾದ ಸೆಬಾಸ್ಟಿಯನ್ ಪಿ ಎಮ್ರವರು ವಂದನಾರ್ಪಣೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಶಾಲೆಯ ಎಲ್ಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಮೂಡುಬಿದಿರೆ: ‘ವೈಯಕ್ತಿಕ ಮಾಹಿತಿಯ ರಕ್ಷಣೆಯೇ ಇಂದಿನ ಸವಾಲು’ ಎಂದು ರಾಜ್ಯ ಸರ್ಕಾರದ ಸೈಬರ್ಸೆಕ್ ಕೇಂದ್ರದ ಮುಖ್ಯಸ್ಥ ಕಾರ್ತಿಕ್ ಬಪ್ಪನಾಡ್ ಹೇಳಿದರು. ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನಲ್ಲಿ ಸೋಮವಾರ 2023-24 ಶೈಕ್ಷಣಿಕ ವರ್ಷದ ‘ಸೈಬರ್ ಸೆಕ್ಯುರಿಟಿ ಕ್ಲಬ್’ನ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿದರು. ‘ಇತ್ತೀಚಿನ ದಿನಗಳಲ್ಲಿ ವೈಯುಕ್ತಿಕ ಮಾಹಿತಿಯ ದುರ್ಬಳಕೆ ಹೆಚ್ಚಾಗುತ್ತಿದ್ದು, ಈ ಮಾಹಿತಿಯ ಭದ್ರತೆ ಹಾಗೂ ಸುರಕ್ಷತೆಯು ನಿಮ್ಮ ಆದ್ಯತೆಯಾಗಬೇಕು’ ಎಂದರು. ‘ತಂತ್ರಜ್ಞಾನಗಳ ಈ ಕಾಲದಲ್ಲಿ ನಮ್ಮ ವ್ಯವಹಾರ ಮತ್ತು ವೈಯಕ್ತಿಕ ವಿವರಗಳ (ಪ್ರೊಫೈಲ್)ಆಧಾರದ ಮೇಲೆ ಸೈಬರ್ಕ್ರೈಂ ಗಳು ನಡೆಯುತ್ತವೆ. ನಮ್ಮ ಭವಿಷ್ಯದ ಒಳಿತಿಗಾಗಿ ಬಹುವಿಧದ ಭದ್ರತೆ ನೀಡಲು, ನಮಗೆ ತಂತ್ರಜ್ಞಾನದ ಹಿಡಿತ ಇರಬೇಕು’ ಎಂದರು. ಲಭ್ಯತೆ, ಸಮಗ್ರತೆ, ಗೌಪ್ಯತೆ ಎಂಬ ಮೂರು ಅಂಶಗಳನ್ನು ನಮ್ಮಲ್ಲಿ ನಾವು ಅಳವಡಿಸಿಕೊಂಡಾಗ ನಮ್ಮ ಮಾಹಿತಿ ಮತ್ತು ಡೇಟಾಗಳನ್ನ ಭದ್ರಪಡಿಸಿಕೊಳ್ಳಲು ಸಾಧ್ಯ ಎಂದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ‘ ವಿದ್ಯಾರ್ಥಿಗಳು ರೂಪಿಸುವ ಪ್ರಾಜೆಕ್ಟ್ಗಳು ಕೇವಲ ಚಿತ್ರ ಹಾಗೂ ಅಂಕಿ…
ವಿದ್ಯಾಗಿರಿ: ನಿಟ್ಟೆ ಮಹಾಲಿಂಗ ತಾಂತ್ರಿಕ ಮಹಾವಿದ್ಯಾಲಯ (ಪರಿಗಣಿತ) ಆಶ್ರಯದಲ್ಲಿ ನಡೆದ ಆಹ್ವಾನಿತ ತಂಡಗಳ ಅಂತರ ಕಾಲೇಜು ತೆಂಕುತಿಟ್ಟು ಯಕ್ಷಗಾನ ಸ್ಪರ್ಧೆ ‘ಯಕ್ಷಗವಿಷ್ಟ-23’ರಲ್ಲಿ ಆಳ್ವಾಸ್ ಧೀಂಕಿಟ ಯಕ್ಷಗಾನ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳು ಪ್ರದರ್ಶಿಸಿದ ‘ಭೀಷ್ಮ ಪ್ರತಿಜ್ಞೆ’ ಪ್ರಸಂಗವು ಸಮಗ್ರ ತಂಡ ಪ್ರಥಮ ಬಹುಮಾನ ಪಡೆಯಿತು. ವೈಯಕ್ತಿಕ ವಿಭಾಗದ ದೇವದ್ರತ ಪಾತ್ರಧಾರಿ ಆಳ್ವಾಸ್ ಕಾಲೇಜಿನ ಶಬರೀಷ ಆಚಾರ್ಯ ಮುನಿಯಾಲು, ಶಂತನು ಪಾತ್ರಧಾರಿ ಶ್ರೀವತ್ಸ ಗಂಗಾಧರ ಹೆಗ್ಡೆ, ದಾಶರಾಜ ಪಾತ್ರಧಾರಿ ಪ್ರಹ್ಲಾದ್ ಭಟ್ ಕಡಂದಲೆ ಪ್ರಥಮ ಸ್ಥಾನಗಳನ್ನು ಪಡೆದಿದ್ದಾರೆ. ಮಂತ್ರಿ ಸುನೀತ ಪಾತ್ರಧಾರಿ ಸಂಶ್ರಿತ್ ಜೈನ್, ರಕ್ಕಸ ಬಲ ಪಾತ್ರಧಾರಿ ಕೃತಿಕ್ ಶೆಟ್ಟಿ ದ್ವಿತೀಯ ಸ್ಥಾನಗಳನ್ನು ಪಡೆದಿರುತ್ತಾರೆ. ಪ್ರಥಮ ಸ್ಥಾನ ಪಡೆದತಂಡ ಹಾಗೂ ಪ್ರಶಸ್ತಿ ವಿಜೇತ ವಿದ್ಯಾರ್ಥಿಗಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಅಭಿನಂದಿಸಿದ್ದಾರೆ.
ಶ್ರೀ ಕ್ಷೇತ್ರ ಮುದ್ದುಮನೆಯಲ್ಲಿ ಡಿಸೆಂಬರ್ 2 ರಂದು ಶನಿವಾರ ಬೈಲುಮನೆ ಕುಟುಂಬಿಕರು ಅನಾದಿ ಕಾಲದಿಂದಲೂ ಪ್ರತಿ ವರ್ಷ ನಡೆಸಿಕೊಂಡು ಬರುವ ಸಾಂಪ್ರದಾಯಿಕ, ಧಾರ್ಮಿಕ ಕಂಬಳ ಮಹೋತ್ಸವ ನಡೆಯಲಿದೆ. ಕಂಬಳಕ್ಕೆ ಡಿಸೆಂಬರ್ 30 ರಂದು ಉಕ್ಕಿ ಹೂಡುವ ಕ್ರಮದೊಂದಿಗೆ ಗದ್ದೆಯನ್ನು ಹದಗೊಳಿಸಿ ಕಂಬಳಕ್ಕೆ ನಾಂದಿ ಹಾಡಲಿದ್ದಾರೆ. ಭಕ್ತಿ ಹಾಗೂ ಸಮೃದ್ಧಿಯ ಪ್ರತೀಕವಾದ ಕಂಬಳಗದ್ದೆಯ ಅಂಚು ಸೇಡಿ, ಜಾಜಿ ಹಾಕಿ ಶೃಂಗರಿಸಿ ಕಂಬಳಕ್ಕೆ ಗದ್ದೆ ಅಣಿಗೊಳಿಸಲಾಗಿದೆ. ಮುದ್ದುಸ್ವಾಮಿ ಕಂಬಳ ನಡೆಸುವ ಬೈಲುಮನೆಯವರು ಭಯ, ಭಕ್ತಿಯಿಂದ ಈ ಆಚರಣೆಯಲ್ಲಿ ತೊಡಗಿಕೊಂಡಿದ್ದು ಈ ವರ್ಷ ಡಿಸೆಂಬರ್ 2 ರಂದು ನಡೆಯುವ ಕಂಬಳ ಅಕ್ಕಯ್ಯ ಆನಂದ ಶೆಟ್ಟಿಯವರ ಪಾಲಿನ ಸೇವೆಯಾಗಿದ್ದು ಆನಂದ ಶೆಟ್ಟಿ, ಭಾಗ್ಯಪ್ರಸಾದ್ ಶೆಟ್ಟಿ, ಲತಾ ಸಂತೋಷ್ ಶೆಟ್ಟಿ, ಮಂಜುಳ ರೈ ಅವರು ವ್ಯವಸ್ಥಾಪಕರಾಗಿ ಕುಟುಂಬಿಕರ ಮಾರ್ಗದರ್ಶನದಲ್ಲಿ ಗ್ರಾಮಸ್ಥರ ಸಹಕಾರದಿಂದ ಕಂಬಳ ನೆರವೇರಿಸಲಿದ್ದಾರೆ. ಡಿಸೆಂಬರ್ 2 ರಂದು ಕಂಬಳದ ದಿನ ಮುರ್ಹೂತದ ಕೋಣಗಳನ್ನು ಬೆಳಿಗ್ಗೆ 10.30 ರಿಂದ 12 ಗಂಟೆಯ ಒಳಗೆ ಕಂಬಳ ಗದ್ದೆಗೆ ಕೊಂಡೊಯ್ಯುವ ಕ್ರಮ…
ಬಂಟ್ಸ್ ಸಂಘ ಮುಂಬಯಿ ಇದರ ಅಧ್ಯಕ್ಷ ಸ್ಥಾನವನ್ನು ನಿಷ್ಠೆಯಿಂದ ನಿರ್ವಹಿಸಿದ ಅಭಿಮಾನ ನನಗಿದೆ. ಸಂಘದ ಪದಾಧಿಕಾರಿಗಳ ಅಚಲ ಬೆಂಬಲ, ಸಮರ್ಪಣೆ ಮತ್ತು ಬದ್ಧತೆ ನಮ್ಮ ಯಶಸ್ಸಿನ ಹಿಂದಿನ ಪ್ರೇರಕ ಶಕ್ತಿಯಾಗಿದೆ. ನಾವೆಲ್ಲರೂ ಒಟ್ಟಾಗಿ ಈ ಸಂಘವನ್ನು ಮತ್ತಷ್ಟು ಎತ್ತರಕ್ಕೆ ಏರಿಸಲು ಅವಿರತವಾಗಿ ಶ್ರಮಿಸಿದ್ದೇವೆ. ನನ್ನವಧಿಯ ಮೂರು ವರ್ಷಗಳು ವೇಗವಾಗಿ ಕಳೆದವು ಮತ್ತು ನಾನು ಈ ಪ್ರತಿಷ್ಠಿತ ಸ್ಥಾನದ ಗಮನಾರ್ಹ ಪ್ರಯಾಣವನ್ನು ಪ್ರತಿಬಿಂಬಿಸುವಾಗ, ನಾವು ಒಟ್ಟಾಗಿ ಸಾಧಿಸಿದ ಎಲ್ಲವುಗಳ ಬಗ್ಗೆ ನಮ್ಮ ತಂಡದ ಸಾಧನೆ ಹೆಮ್ಮೆಯ ಭಾವದಿಂದ ತುಂಬಿದೆ ಎಂದು ಬಂಟ್ಸ್ ಸಂಘ ಮುಂಬಯಿ ಅಧ್ಯಕ್ಷ ಚಂದ್ರಹಾಸ ಕೆ.ಶೆಟ್ಟಿ ತಿಳಿಸಿದರು. ಕುರ್ಲಾ ಪೂರ್ವದ ಚುನ್ನಾಭಟ್ಟಿ ಇಲ್ಲಿನ ಬಂಟರ ಭವನದ ಶ್ರೀಮತಿ ರಾಧಾಬಾಯಿ ತಿಮ್ಮಪ್ಪ ಭಂಡಾರಿ ಸಭಾಗೃಹದಲ್ಲಿ ನಡೆಸಲ್ಪಟ್ಟ ಬಂಟರ ಸಂಘದ 95ನೇ ವಾರ್ಷಿಕ ಮಹಾಸಭೆಗೆ ದೀಪ ಪ್ರಜ್ವಲಿಸಿ ಚಾಲನೆಯನ್ನಿತ್ತು ಸಭಾಧ್ಯಕ್ಷತೆ ವಹಿಸಿ ಚಂದ್ರಹಾಸ ಕೆ.ಶೆಟ್ಟಿ ಮಾತನಾಡಿದರು. ಬಂಟ್ಸ್ ಸಂಘ ಮುಂಬಯಿ ಉಪಾಧ್ಯಕ್ಷ ರತ್ನಾಕರ ಶೆಟ್ಟಿ ಮುಂಡ್ಕೂರು, ಗೌ| ಪ್ರ| ಕಾರ್ಯದರ್ಶಿ ಡಾ| ಆರ್.ಕೆ…
ಯುವ ಬ್ರಿಗೇಡ್ ಮೀರಾ ಭಯಂದರ್ ವತಿಯಿಂದ ಜರಗಿದ ತ್ರಿರಂಗ ಸಂಗಮ ಸಂಯೋಜನೆಯ ಪಟ್ಲ ಸತೀಶ್ ಶೆಟ್ಟಿ ಯವರ ಸಾರಥ್ಯದ ಪಾವಂಜೆ ಜ್ಞಾನ ಶಕ್ತಿ ಸುಬ್ರಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಕಲಾವಿದರಿಂದ ಜರಗಿದ ಅದ್ಧೂರಿ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ಕಾರ್ಯಕ್ರಮದ ಯಶಸ್ಸಿಗೆ ಸೇವೆಗೈದ ಎಲ್ಲಾ ಸೇವಕರಿಗೆ ಧನ್ಯವಾದಗೈಯುವ ಧನ್ಯೋಸ್ಮಿ ಕಾರ್ಯಕ್ರಮವು ಮೀರಾ ಭಯಂದರ್ ನ ಹೋಟೆಲ್ ಕ್ರೌನ್ ಸಭಾಂಗಣದಲ್ಲಿ ಜರಗಿತು. ಈ ಸಮಾರಂಭದಲ್ಲಿ ಯುವ ಬ್ರಿಗೇಡ್ ನ ಅಧ್ಯಕ್ಷ ಅರುಣ್ ಶೆಟ್ಟಿ ಪಣಿಯೂರು, ಉದ್ಯಮಿ, ಸಮಾಜಸೇವಕ ಸಚ್ಚಿದಾನಂದ ಶೆಟ್ಟಿ ಮುನ್ನಲಾಯಿ ಗುತ್ತು, ಉದ್ಯಮಿ ಭಾಸ್ಕರ್ ಶೆಟ್ಟಿ, ಉದ್ಯಮಿ ಉದಯ್ ಶೆಟ್ಟಿ ಪೆಲತ್ತೂರು, ಉದ್ಯಮಿ ಅರುಣೋದಯ ರೈ, ಸಮಾಜಸೇವಕ ರಮೇಶ್ ಶೆಟ್ಟಿ ಸಿದ್ದಕಟ್ಟೆ, ಉದ್ಯಮಿ ಶಿವರಾಮ್ ಶೆಟ್ಟಿ ಡೆಲ್ಟ, ಉದ್ಯಮಿ ದಿನೇಶ್ ಶೆಟ್ಟಿ, ಉದ್ಯಮಿ ಸುರೇಶ್ ಶೆಟ್ಟಿ ಗಂಧರ್ವ ಉಪಸ್ಥಿತರಿದ್ದರು.
ವೈಯಕ್ತಿಕ ಕಲಿಕೆಯಲ್ಲೂ ವಿಸ್ತøತ ಚಿಂತನೆ ಇರಲಿ ವಿದ್ಯಾಗಿರಿ: ‘ವೈಯಕ್ತಿಕ ಕಲಿಕೆಯಲ್ಲೂ ವಿಸ್ತøತ ಚಿಂತನೆ ಇರಬೇಕು. ಒಳಿತು ಬದುಕಿನ ಧ್ಯೇಯವಾಗಬೇಕು’ ಎಂದು ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್ ಹೇಳಿದರು. ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಮತ್ತು ವಿಜ್ಞಾನ ಪದವಿಯ ಅನಿಮೇಶನ್ ವಿಭಾಗದ ಸಹಯೋಗದಲ್ಲಿ ಉಜಿರೆಯ ಎಸ್ಡಿಎಂ ಕಾಲೇಜಿನ ಬಿವೊಕ್ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ’10 ದಿನಗಳ ಅನಿಮೇಶನ್ ಮತ್ತು ಆಫ್ಟರ್ ಎಫೆಕ್ಟ್ ಪ್ರಶಿಕ್ಷಣಾರ್ಥಿ ಶಿಬಿರ’ದಲ್ಲಿ ಅವರು ಮಾತನಾಡಿದರು. ‘ಬದುಕಿನಲ್ಲಿ ಗುಣಾತ್ಮಕ ಹಾಗೂ ಧನಾತ್ಮಕ ಚಿಂತನೆ ಇದ್ದಾಗ, ತಂತ್ರಜ್ಞಾನದಲ್ಲೂ ಒಳಿತನ್ನೇ ಮಾಡಬಹುದು. ಅತಿ ಬಳಕೆಯಿಂದ ಉಪಯುಕ್ತ ವಸ್ತುವೂ ಅಪಾಯಕಾರಿ ಆಗಬಹುದು. ಈ ಕುರಿತ ಎಚ್ಚರಗಳು ನಮ್ಮೊಳಗೆ ಸದಾ ಇರಬೇಕು’ ಎಂದರು. ‘ಮೊಬೈಲ್ನ ಗುಣಾವಗುಣಗಳು ಅದರ ಬಳಕೆಯ ಮೇಲೆ ನಿಂತಿದೆ. ಅಂತೆಯೇ ಬದುಕು ಕೂಡಾ’ ಎಂದು ವಿವರಿಸಿದರು. ‘ಹಾಸ್ಟೆಲ್ ಎಂದರೆ ಕೇವಲ ಊಟ-ವಾಸ್ತವ್ಯದ ಗೂಡಲ್ಲ. ಹಾಸ್ಟೆಲ್ ಜೀವನ ಕಲಿಕೆಯ ಕೇಂದ್ರ. ಬದುಕಿನ ಪ್ರಗತಿಯ ತಾಣ’ ಎಂದು ಬಣ್ಣಿಸಿದರು. ‘ಒಳ್ಳೆಯ ವಿದ್ಯಾರ್ಥಿಗಳನ್ನು ಸೃಜಿಸುವುದೇ ಶಿಕ್ಷಣ…
ಜನಪ್ರಿಯ ಸಂಘಟಕ, ಸಜ್ಜನ ಸಹೃದಯಿ ಬಂಧು, ಉದ್ಯಮಿ ಶ್ರೀ ಉದಯ್ ಎಮ್ ಶೆಟ್ಟಿ ಮಲಾರ ಬೀಡು ಅವರು ಬಂಟ್ಸ್ ಫೋರಂ ಮೀರಾ ಭಾಯಂದರ್ ಇದರ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಾಮಾಜಿಕ, ಧಾರ್ಮಿಕ ಕ್ಷೇತ್ರ, ಹೀಗೆ ಹತ್ತು ಹಲವಾರು ಸಂಘ ಸಂಸ್ಥೆಗಳಲ್ಲಿ ಉದಯ್ ಶೆಟ್ಟಿಯವರು ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ.