Author: admin
ಎರಡು ದಿನಗಳ ಕಾಲ ಅರಮನೆ ಮೈದಾನದಲ್ಲಿ ನಡೆದ “ಬೆಂಗಳೂರು ಕಂಬಳ ನಮ್ಮ-ಕಂಬಳ”ಕ್ಕೆ ರವಿವಾರ ರಾತ್ರಿ ತೆರೆ ಬಿತ್ತು. ರಿಷಬ್ ಶೆಟ್ಟಿ ಅಭಿನಯದ “ಕಾಂತಾರ’ ಚಿತ್ರದಲ್ಲಿ ಓಡಿದ್ದ ಕೋಣ ಚಿನ್ನದ ಪದಕ ಪಡೆದುಕೊಂಡಿತು. ಬೊಳಂಬಳ್ಳಿ ಪರಮೇಶ್ವರ್ ಭಟ್ಟ ಅವರ ಅಪ್ಪು ಕುಟ್ಟಿ 6.5 ಕೋಲು ನೀರು ಚಿಮ್ಮಿಸಿ ಕೆನೆಹಲಗೆ ವಿಭಾಗದಲ್ಲಿ ಮೊದಲ ಚಿನ್ನದ ಪದಕ ಪಡೆದಿದೆ. ಇನ್ಮುಂದೆ ಮುಂಬಯಿಯಲ್ಲೂ ಆಯೋಜಿಸುವ ಚಿಂತನೆ ವ್ಯಕ್ತವಾಗಿದೆ. ಜತೆಗೆ ಪ್ರೀಮಿಯರ್ ಲೀಗ್ನಂತೆ ಕಂಬಳದ ಲೀಗ್ ನಡೆಸುವ ಮುನ್ಸೂಚನೆ ಮೇಲ್ಮೋಟಕ್ಕೆ ಕಂಡ ಬರುತ್ತಿದೆ. ಕಂಬಳ ಆಯೋಜನೆ ಬಗ್ಗೆ ಮಾಹಿತಿಯನ್ನು ಸಂಬಂಧಪಟ್ಟವರು ಪಡೆದುಕೊಂಡಿದ್ದಾರೆ. ಕಂಬಳವನ್ನು ರಜಾದಿನಗಳಲ್ಲಿ ಹಮ್ಮಿಕೊಂಡ ಕಾರಣ 8 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿ ಸಂಭ್ರಮಿಸಿದರು. ಕೊನೆಯ ದಿನದ ಕಂಬಳದಲ್ಲಿ ಎಲ್ಲಿ ನೋಡಿದರೂ ಜನರ ದಂಡು, ನೂಕು ನುಗ್ಗಲು, ಜಾತ್ರೆಯ ವಾತಾವರಣ ವಿಶೇಷವಾಗಿತ್ತು. ವೀಕ್ಷಕರ ವಿವರಣೆಗೆ 30 ಮಂದಿ! ಕಂಬಳದಲ್ಲಿ ಕೋಣಗಳು ಓಡುವುದು ಎಷ್ಟು ಮುಖ್ಯವೋ ವೀಕ್ಷಕ ವಿವರಣೆ ಕೂಡ ಅಷ್ಟೇ ಮುಖ್ಯ. ಈ ಬಾರಿ ಬೆಂಗಳೂರು ಕಂಬಳಕ್ಕೆ…
ಕಾರ್ಕಳದ ಯುವ ಉದ್ಯಮಿ ಮತ್ತು ಅಮ್ಮ ಚಾರಿಟೇಬಲ್ ಟ್ರಸ್ಟ್ (ರಿ) ಇದರ ಸ್ಥಾಪಕ ಅವಿನಾಶ್ ಜಿ ಶೆಟ್ಟಿ ಮತ್ತು ಅವರ ಧರ್ಮಪತ್ನಿ ಐಶ್ವರ್ಯ ಶೆಟ್ಟಿ ಕಳೆದ ಹಲವು ವರ್ಷಗಳಿಂದ ವಿಭಿನ್ನವಾದ ರೀತಿಯಲ್ಲಿ ಶೈಕ್ಷಣಿಕ ಸಪೋರ್ಟ್ ಸಿಸ್ಟಮನ್ನು ರೂಪಿಸುತ್ತಾ ಬಂದಿದ್ದಾರೆ. ಈ ಬಾರಿ ಕೂಡ ಅವರು ಕಾರ್ಕಳದ ಗಾಂಧಿ ಮೈದಾನದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ‘ಅಂಬಾ ಭವಾನಿ ಕ್ರಾಕರ್ಸ್’ ಎಂಬ ಹೆಸರಿನ ಒಂದು ಪಟಾಕಿ ಅಂಗಡಿಯನ್ನು ತೆರೆದರು. ಅಲ್ಲಿ ಅವರ ಅನೇಕ ಬಂಧುಗಳು ಮತ್ತು ಸ್ನೇಹಿತರು ಹಗಲು ರಾತ್ರಿ ದುಡಿದರು. ಅದರಲ್ಲಿ ಬಂದ ಲಾಭಕ್ಕೆ ತಮ್ಮ ಒಂದಿಷ್ಟು ಪಾಲನ್ನು ಸೇರಿಸಿ ನಾಲ್ವತ್ತು ವಿದ್ಯಾರ್ಥಿಗಳಿಗೆ ತಲಾ ಐದು ಸಾವಿರದಂತೆ ಒಟ್ಟು ಎರಡು ಲಕ್ಷ ರೂ ಮೊತ್ತದ ವಿದ್ಯಾರ್ಥಿ ವೇತನವನ್ನು ಈ ವರ್ಷ ಅವರು ನೀಡಿದರು. ಕಳೆದ ಹತ್ತು ವರ್ಷಗಳಿಂದ ಅವರು ಈ ರೀತಿಯ ಶೈಕ್ಷಣಿಕ ಸಪೋರ್ಟ್ ಸಿಸ್ಟಮನ್ನು ರೂಪಿಸಿರುವುದು ನಿಜಕ್ಕೂ ಶ್ಲಾಘನೀಯ ಆಗಿದೆ. ಕಾರ್ಕಳದ ಗಾಂಧಿ ಮೈದಾನದಲ್ಲಿ ನವೆಂಬರ್ 26ರಂದು ನಡೆದ ಈ ವಿದ್ಯಾರ್ಥಿವೇತನಗಳ…
ಆವಿಷ್ಕಾರದ ಫಲಸಮುದಾಯಕ್ಕೆ ತಲುಪಲಿ: ಎಮಿಲಿ ಮೂಡುಬಿದಿರೆ:‘ಆವಿಷ್ಕಾರದ ಫಲ ಸಮುದಾಯಕ್ಕೆ ತಲುಪಿದಾಗ ಸಾರ್ಥಕ’ಎಂದು ಅಮೆರಿಕ ಫ್ಲಾರಿಡಾದ ಹೂಡಿಕೆ ಬ್ಯಾಂಕರ್ ಎಮಿಲಿ ಆಳ್ವ ಹೇಳಿದರು. ಭಾರತೀಯ ವಿಜ್ಞಾನ ಸಮಾಜ (ಇಂಡಿಯನ್ ಸೈನ್ಸ್ ಸೊಸೈಟಿ) ಸಹಯೋಗದಲ್ಲಿ ಆಳ್ವಾಸ್ ಕೇಂದ್ರೀಯ ಶಾಲೆ (ಸಿಬಿಎಸ್ಸಿ)ಯಲ್ಲಿ ಶನಿವಾರ ನಡೆದ ‘ಭಾರತೀಯ ವಿಜ್ಞಾನ ಮತ್ತು ಎಂಜಿನಿಯರಿಂಗ್ ಮೇಳ (ಇನ್ಸೆಫ್)’ದ ಪ್ರಾದೇಶಿಕ ಮೇಳ ಮತ್ತು ವಿಜ್ಞಾನ ವಿಸ್ತರಣಾ ಕಾರ್ಯಕ್ರಮ’ದಲ್ಲಿ ಪ್ರಶಸ್ತಿಗಳನ್ನು ವಿತರಿಸಿ ಅವರು ಮಾತನಾಡಿದರು. ‘ಕುತೂಹಲ ಹಾಗೂ ಸೃಜನಶೀಲತೆಯು ವಿಜ್ಞಾನದ ಮಡಕೆಯಲ್ಲಿ ಇರುತ್ತವೆ. ಸಮುದಾಯದಲ್ಲಿ ಅವಶ್ಯಕತೆ ಇರುವ ಜನರಿಗೆ ಅದನ್ನು ಉಣಬಡಿಸಿದಾಗ ಸಾರ್ಥಕವಾಗುತ್ತದೆ’ ಎಂದರು. ‘ಸಂಶೋಧನೆಗಳು ಸಮುದಾಯದ ಸಮಸ್ಯೆಗಳಿಗೆ ಸ್ಪಂದಿಸಬೇಕು. ವಿಜ್ಞಾನವು ಬದುಕಿನಲ್ಲಿ ಬದಲಾವಣೆತರಬೇಕು. ಪರಿವರ್ತನೆಗೆ ಕಾರಣವಾಗಬೇಕು. ನಿಮ್ಮೆಲ್ಲರಲ್ಲಿ ಅಂತಹ ಆತ್ಮವಿಶ್ವಾಸ ಇದೆ. ಅದು ಫಲಪ್ರದಗೊಳ್ಳಲಿ’ ಎಂದು ಹಾರೈಸಿದರು. ಆಳ್ವಾಸ್ ಶಿಕ್ಷಣ ಪ್ರತಿμÁ್ಠನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ‘ಸ್ಪರ್ಧೆಯಲ್ಲಿ ಎಲ್ಲರೂ ಗೆದ್ದವರು. ಪ್ರಶಸ್ತಿ ಬಾರದೇ ಇದ್ದರೂ, ನಿಮ್ಮ ಸದುದ್ದೇಶ, ಪ್ರಯತ್ನ ಒಳಿತು ಮಾಡುತ್ತದೆ. ಸೋಲು ಜೀವನ ಕಲಿಸುತ್ತದೆ. ಬದುಕಿಗೆ ಬಲ…
‘ಹೆಣ್ಣು-ಗಂಡು ಜೈವಿಕ ಸತ್ಯ: ಮೇಲು-ಕೀಳಲ್ಲ’ ವಿದ್ಯಾಗಿರಿ: ‘ಹೆಣ್ಣು ಮತ್ತು ಗಂಡು ಎಂಬುದು ಜೈವಿಕ ಸತ್ಯವೇ ಹೊರತು ಮೇಲು-ಕೀಳಲ್ಲ. ಗಂಡಿನೊಳಗೊಂದು ಹೆಣ್ಣು ಹಾಗೂ ಹೆಣ್ಣಿನೊಳಗೊಂದು ಗಂಡು ಮನಸ್ಸು ಇದ್ದಾಗ ಮಾತ್ರ ಸಮಗ್ರ ವ್ಯಕ್ತಿತ್ವ ರೂಪುಗೊಳ್ಳಲು ಸಾಧ್ಯ’ಎಂದು ಶಿವಮೊಗ್ಗದ ಸಹ್ಯಾದ್ರಿ ಪದವಿ ಪೂರ್ವಕಾಲೇಜು ಪ್ರಾಧ್ಯಾಪಕಿ ಡಾ. ಶುಭಾ ಮರವಂತೆ ಹೇಳಿದರು. ಆಳ್ವಾಸ್ ಪದವಿ ಪೂರ್ವಕಾಲೇಜಿನ ಆಂತರಿಕ ಸಮಿತಿ ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಮಹಿಳಾ ದೌರ್ಜನ್ಯ ತಡೆ ಅರಿವು ಕಾರ್ಯಕ್ರಮ’ದಲ್ಲಿ ಅವರು ಮಾತನಾಡಿದರು. ನಾವೆಲ್ಲ ಪರಸ್ಪರ ಅರಿತಾಗ ಸಮಸ್ಯೆ ಇತ್ಯರ್ಥವಾಗುತ್ತದೆ. ಗಂಡು ಹೆಣ್ಣನ್ನು ಹಾಗೂ ಹೆಣ್ಣು ಗಂಡನ್ನು ಅರಿತಿರಬೇಕು. ವಿದ್ಯಾರ್ಥಿಗಳು ಪ್ರಶ್ನಿಸುವ ಗುಣ ಬೆಳೆಸಿಕೊಳ್ಳಬೇಕು. ಅಕ್ರಮ, ದೌರ್ಜನ್ಯವನ್ನು ನಿರ್ದಾಕ್ಷಿಣ್ಯವಾಗಿ ಖಂಡಿಸಬೇಕು ಎಂದರು. ‘ಹಣ್ಣು ಹಣ್ಣು ಮುದುಕಿ ಬಾಲ್ಯದಲ್ಲೇ ಸತ್ತು ಹೋದಳು’ ಎನ್ನುವ ಕತೆಯಂತೆ ಹೆಣ್ಣಿನ ಬದುಕಾಗಿದೆ. ಆಕೆಯ ಬಾಲ್ಯ, ಯೌವ್ವನವನ್ನು ಸಮಾಜ ಕಿತ್ತುಕೊಳ್ಳುತ್ತಿದೆ. ಅದನ್ನು ಮೀರಿ ಮುನ್ನಡೆಯಬೇಕು. ಸಾಧನೆ ಮಾಡಬೇಕು. ಮಡಿವಂತಿಕೆ ಬೇಡ’ ಎಂದು ಹೆಣ್ಣು ಮಕ್ಕಳನ್ನು ಅವರು ಹುರಿದುಂಬಿಸಿದರು. ‘ಗಂಡು ಆಕಾಶ ತತ್ವ…
ಕರ್ನಾಟಕ ಸಂಘ ಶಾರ್ಜಾ ದ ಪ್ರತಿಷ್ಠಿತ ಮಯೂರ ವಿಶ್ವ ಮಾನ್ಯ ಕನ್ನಡಿಗ ಪ್ರಶಸ್ತಿ ಶ್ರೀ ಮೋಹನ್ ನರಸಿಂಹ ಮೂರ್ತಿ ಮಡಿಲಿಗೆ
ಕರ್ನಾಟಕ ಸಂಘ ಶಾರ್ಜಾದ ಆಶ್ರಯದಲ್ಲಿ 2023 ನವೆಂಬರ್ 18 ರಂದು ಶಾರ್ಜಾ ಈವಾನ್ ಹೋಟೆಲ್ ನಲ್ಲಿ ಆಯೋಜಿಸಲಾಗಿದ್ದ ಕರ್ನಾಟಕ ರಾಜ್ಯೋತ್ಸವ, 21ನೇ ವಾರ್ಷಿಕೋತ್ಸವ ಮತ್ತು ಮಯೂರ ವಿಶ್ವಮಾನ್ಯ ಕನ್ನಡಿಗ ಪ್ರಶಸ್ತಿ ಪ್ರದಾನ ಸಮಾರಂಭ ಅದ್ಧೂರಿಯಾಗಿ ನಡೆಯಿತು. ಕಾರಯಕಾರಿ ಸಮಿತಿಯ ಸರ್ವ ಸದಸ್ಯರು ಕನ್ನಡ ಧ್ವಜಾರೋಹಣ, ಜ್ಯೋತಿ ಬೆಳಗಿಸಿ, ಸ್ವಾಗತದೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.ಯು.ಎ.ಇ.ಯ ವಿವಿಧ ತಂಡಗಳಾದ ಸಿಂಫೋನಿ ಮ್ಯೂಸಿಕ್ ಸ್ಕೂಲ್, ಬಿಲ್ಲವಾಸ್ ಫ್ಯಾಮಿಲಿ, ರಸ್ ಅಲ್ ಕೈಮಾ ಕರ್ನಾಟಕ ಸಂಘ, ನೃತ್ಯ ಕಣ್ಮಣಿಗಳು, ರಮಣ ಲಾಸ್ಯ, ಪದ್ಮಶಾಲಿ ಸಮುದಾಯ, ಸ್ಮೈಲ್ ಕ್ರಿಯೇಶನ್ಸ್, ಗೋಲ್ಡಲ್ ಸ್ಟಾರ್ ಮ್ಯೂಸಿಕ್ ಶಾರ್ಜಾ, ಇವರುಗಳಿಂದ ಆಕರ್ಷಕ ಜಾನಪದ ನೃತ್ಯ, ಮಂಗಳೂರಿನಿಂದ ಆಗಮಿಸಿದ ಗಾಯಕ ಶ್ರೀ ಮಹ್ಮದ್ ಇಕ್ಬಾಲ್ ಮತ್ತು ಶ್ರೀ ಹರೀಶ್ ಶೇರಿಗಾರ್ ಮತ್ತು ಸನ್ನಿಧಿ ವಿಶ್ವನಾಥ್ ರ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಿತು. ಶಾರ್ಜಾ ಕರ್ನಾಟಕ ಸಂಘದ ದ್ವೀದಶಮಾನೋತವದ ಸವಿ ನೆನೆಪಿಗಾಗಿ ಗಣೇಶ್ ರೈ ಪ್ರಧಾನ ಸಂಪಾದಕತ್ವದಲ್ಲಿ, ಸ್ಮರ ಸಂಚಿಕೆ ಸಮಿತಿಯ ಆಶ್ರಯದಲ್ಲಿ ಮುದ್ರಣವಾಗಿದ್ದ…
ಭಾರತವು ಒಂದು ವೈವಿಧ್ಯಮಯ ರಾಷ್ಟ್ರ. ವೈವಿಧ್ಯತೆಯಲ್ಲಿ ಏಕತೆಯು ಇಲ್ಲಿನ ವೈಶಿಷ್ಟ್ಯವಾಗಿದೆ. ಜಗತ್ತಿನ ಯಾವ ರಾಷ್ಟ್ರದಲ್ಲಿಯೂ ಕಂಡರಿಯದಷ್ಟು ಜಾತಿ, ಧರ್ಮ, ಭಾಷೆ, ಮತ್ತು ಜೀವನ ವೈವಿಧ್ಯಗಳು ಈ ದೇಶದಲ್ಲಿದೆ. ಆದರೂ ಕೂಡ ಇಂದು ನಾವು ಭಾರತವನ್ನು ಒಂದು ರಾಷ್ಟ್ರವೆಂದೇ ಗುರುತಿಸುತ್ತೇವೆ. ಈ ರೀತಿಯ ರಾಷ್ಟ್ರದಲ್ಲಿ ಜನರನ್ನು ಸಂಘಟಿಸಿ ಆಡಳಿತ ನಡೆಸುವುದು ಅಷ್ಟೊಂದು ಸುಲಭದ ಕಾರ್ಯವಲ್ಲ. ಭಾರತವು ಜಾತ್ಯಾತೀತ ರಾಷ್ಟ್ರವೆಂದು ಕರೆಯಲ್ಪಟ್ಟರೂ ಜಾತೀಯತೆಯು ಇಂದು ಎಲ್ಲಾ ಕಡೆ ಗೋಚರಿಸುತ್ತಿದೆ. ವೈಜ್ಞಾನಿಕ ಪ್ರಗತಿಯಲ್ಲಿ ಮುನ್ನಡೆಯುತ್ತಿರುವ ಈ ರಾಷ್ಟ್ರದಲ್ಲಿಂದು ಸ್ವಾರ್ಥ ಮತ್ತು ಸಂಕುಚಿತ ಮನೋಭಾವನೆ ಮನೆ ಮಾಡಿಕೊಂಡಿದೆ. ದೇಶದ ಹಿತ ಚಿಂತನೆಯ ಜನರ ಕೊರತೆ ಎದ್ದು ಕಾಣುತ್ತಿದೆ. ಆದುದರಿಂದ ರಾಷ್ಟ್ರವನ್ನು ಒಗ್ಗೂಡಿಸುವಂತಹ ಏಕತಾ ಸೂತ್ರವೊಂದನ್ನು ನಾವಿಂದು ಗುರುತಿಸಬೇಕಾಗಿದೆ. ಇಲ್ಲದೆ ಇದ್ದರೆ ದೇಶಕೆ ಮುಂದೆ ಅಪಾಯ ತಪ್ಪಿದ್ದಲ್ಲ. ಆ ಬಗ್ಗೆ ನಮ್ಮ ಚಿಂತನೆ ಅಗತ್ಯವಲ್ಲವೇ? ನಮ್ಮ ದೇಶದಲ್ಲಿ ಏಕತಾ ಮನೋಭಾವನೆಯನ್ನು ಪ್ರಚೋದಿಸಬೇಕಾದ ಧರ್ಮದ ವಿಚಾರಗಳು ಇಂದು ವ್ಯಕ್ತಿ ವ್ಯಕ್ತಿಗಳ ಮಧ್ಯೆ ದ್ವೇಷ ಭಾವನೆಯನ್ನು ಉಂಟು ಮಾಡುವ ಅನುಚಿತ ಸಾಧನವಾಗಿದೆ.…
ಜಗತ್ತು ಎಷ್ಟೇ ಆಧುನೀಕತೆಯಲ್ಲಿ ತುಂಬಿ ತುಳುಕಿದರೂ ಜನರು ತಮ್ಮ ಆಚರಣೆ, ಸಂಸ್ಕೃತಿ, ಸಂಪ್ರದಾಯಗಳನ್ನು ಮರೆಯುವುದಿಲ್ಲ ಎಂಬುದಕ್ಕೆ ಈಗಲೂ ಬ್ರಹ್ಮ ಹಾಗೂ ಕೋಟಿ ಋಷಿಗಳಿಗೆ ಶಿವನು ದರ್ಶನ ಕೊಟ್ಟ ಶುಭ ದಿನದಂದು ಪರಶುರಾಮ ಸೃಷ್ಠಿಯ ಸಪ್ತ ಮೋಕ್ಷದಾಯಕ ಕ್ಷೇತ್ರಗಳಲ್ಲಿ ಒಂದಾಗಿರುವ ಧ್ವಜಪುರ ಖ್ಯಾತಿಯ ಕೋಟೇಶ್ವರ ಮಹತೋಬಾರ ಶ್ರೀಕೋಟಿಲಿಂಗೇಶ್ವರ ದೇವಸ್ಥಾನದಲ್ಲಿ ಶ್ರದ್ದಾ ಭಕ್ತಿಯೊಂದಿಗೆ ವಿಜೃಂಭಣೆಯಿಂದ ಏಳು ದಿನಗಳ ಕಾಲ ನಡೆಯುವ ಕೊಡಿಹಬ್ಬ ಅಥವಾ ಭುವನೋತ್ಸವ ಹರ್ಷೋಲ್ಲಾಸದ ಸಂಕೇತಕ್ಕೆ ಸಾಕ್ಷಿಯಾಗಿ ಊರ ಪರಊರ ಜನರೆಲ್ಲಾ ಜಾತಿ ಭೇದವಿಲ್ಲದೆ ಒಗ್ಗೂಡಿ ದರ್ಶನ ಪಡೆಯುತ್ತಾರೆ. ಕೋಟಿ ಸಂಖ್ಯೆಯ ಪಾಪಗಳನ್ನು ತೊಳೆಯತಕ್ಕಂತಹ ದಿವ್ಯ ಕ್ಷೇತ್ರ ಎಂಬ ಹಿರಿಮೆಯಿಂದಾಗಿ ಕೋಟೇಶ್ವರ “ದಕ್ಷಿಣ ಕಾಶಿ”ಎಂದು ಕೋಟಿಲಿಂಗೇಶ್ವರನೆಂದು ಜನ ಜನಿತವಾಗಿದೆ. ಕುಂದಾಪುರದಿಂದ ದಕ್ಷಿಣಕ್ಕೆ ರಾಷ್ಟ್ರೀಯ ಹೆದ್ದಾರಿಯಲ್ಲಿ 5 ಕಿಮೀ ದೂರದವರೆಗೆ ಸಾಗುವಾಗ ಸಿಗುವ ಪುಣ್ಯ ಕ್ಷೇತ್ರವಿದು. ಭಾವೈಕ್ಯತಯ ಸಂಗಮ ಕೊಡಿಹಬ್ಬ : ಇಲ್ಲಿನ ಬೃಹ್ಮರಥವನ್ನು ನಿರ್ಮಿಸುವಲ್ಲಿ ಸ್ಥಳೀಯ ಮುಸ್ಲಿಮರು ಅತ್ಯಂತ ಭಯ ಭಕ್ತಿಯಿಂದ ತಮ್ಮ ಜವಾಬ್ದಾರಿ ನೆರವೇರಿಸುತ್ತಾರೆ. ಟಿಪ್ಪು ಸುಲ್ತಾನ್ ಕಾಲದಿಂದ ನಡೆದು ಬಂದ…
ಕವರ್ ಪನ್ನಗ ಸುರುಕು ನಮನ ತರೆಕ್ ಬರ್ಪಿನಿ ಮದಿಮೆಗ್ ಮುಯ್ಯಿ ದೀಪಿನ ಕವರ್. ಐಡ್ದ್ ಬೊಕ್ಕ ಪೋಸ್ಟ್ ಕವರ್, ತಲೆಂಬುದ ಕವರ್, ಇಂಚಪ ಮೊಬೈಲ್ ದ ಕವರ್. ಉಂದು ಪೂರಾ ಪೊದಿಕೆ (ಕನ್ನಡ ಹೊದಿಕೆ)ಲು, ಇಂಗ್ಲೀಷ್ ದ ಕವರುಲು (Cover), ಯಾನ್ ಪನರೆ ಪಿದಾಡ್ದ್ ದಿನಿ ತುಲುತ ಬೊಕ್ಕೊಂಜಿ ಕವರ್ ದ ಬಗೆಟ್. ದುಂಬು “ಕಂಚಿ” ಲೆತ್ತೊಂದು ಇತ್ತೆರ್ಗೆ. ಮದಿಮಾಯೆ/ಲ್ ಎದುರುಡು ಅರಿವಾನೊಡು ಅರಿ ದೀವೊಂದು ಇತ್ತೆರ್. ತರೆಕ್ ರಡ್ಡ್ ಅರಿ ಪಾಡುನು ಪಂಡ ಸೇಸೆ (ಕನ್ನಡದ ಅಕ್ಷತೆ ಕಾಳು) ಪಾಡುನು. ಪಂಡ ಪೆರಿಯಾಕ್ಲು ಆಶೀರ್ವಾದ ಮಲ್ಪುನು. “ಮುತ್ತುಡು ಸೇಸೆ ಪಾಡಿಯೆರ್ ಪಕಲೊಡು ಆರತಿ ಮಲ್ತೆರ್” ಪಂದ್ ಪಾಡ್ದನೊಡು ಪನ್ಪುಂಡು. (ಕನ್ನಡೊಡು ಮುತ್ತಿನಾರತಿ). ಅಂಚೆನೆ ಆ ಅರಿತ ತಬುಕು (ಅರಿವಾನ)ದ ಬರಿಟ್ ಕಾಲಿ ಅರಿವಾನ ದೀವೊಂದು ಇತ್ತೆರ್ ಗೆ, ಐಕ್ ಕಂಚಿ ಪನ್ಪಿನಿ. ಆ ಅರಿವಾನೊಗು ಉಡುಗಿರೆ (ಎಚ್ಚಾದ್ ದೊಡ್ಡು) ಪಾಡುವೆರ್, ಮದಿಮೆಗ್ ಬತ್ತಿನಗುಲು. ಅವ್ವೆನ್ ಸಬೆಟ್ ಲೆತ್ತ್ ಪನ್ಪೆರ್, ಏರ್…
ಪುಣೆ ;ಶ್ರೀ ಗುರು ದೇವ ಸೇವಾ ಬಳಗ ಮತ್ತು ಶ್ರೀ ವಜ್ರಮಾತ ಮಹಿಳಾ ವಿಕಾಸ ಕೇಂದ್ರ ಪುಣೆ ಇದರ 20 ನೇ ವಾರ್ಷಿಕೋತ್ಸವವು ನವೆಂಬರ್ 26 ರವಿವಾರದಂದು ಅಪರಾನ್ಹ ಘಂಟೆ 2.00 ರಿಂದ ಬಾಣೆರ್ ನಲ್ಲಿರುವ ಬಂಟರ ಭವನದ ಓಣಿ ಮಜಲು ಜಗನ್ನಾಥ್ ಶೆಟ್ಟಿ ಸಾಂಸ್ಕ್ರತಿಕ ಸಭಾಂಗಣದಲ್ಲಿ ವಿವಿದ ಧಾರ್ಮಿಕ ,ಸಾಂಸ್ಕ್ರತಿಕ ,ಹಾಗೂ ಯಕ್ಷಗಾನ ಕಾರ್ಯಕ್ರಮಗಳೊಂದಿಗೆ ಜರಗಲಿದೆ ..ಶ್ರೀಗುರುದೇವ ದತ್ತ ಸಂಸ್ಥಾನಮ್,,ಶ್ರೀ ದತ್ತಗುರು ವೀರಾಂಜನೇಯ ಸ್ವಾಮಿ ಕ್ಷೇತ್ರ ಓಡಿಯೂರಿನ ಪರಮ ಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಹಾಗೂ ಸಾದ್ವಿಶ್ರೀ ಶ್ರೀ ಮಾತಾನಂದಮಯೀಯವರು ದಿವ್ಯ ಉಪಸ್ಥಿತಿಯಿರುವರು . ದಾರ್ಮಿಕ ಕಾರ್ಯಕ್ರಮದ ಅಂಗವಾಗಿ ಪಾದುಕಾಪೂಜೆ , ಗುರುವಂದನೆ ,ಹಾಗೂ ದಾರ್ಮಿಕ ಸಭಾ ಕಾರ್ಯಕ್ರಮ, ಈ ದಾರ್ಮಿಕ ಸಭೆಯಲ್ಲಿ ಓಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿಗಳು ,ಮತ್ತು ಸಾದ್ವಿ ಶ್ರೀ ಮಾತಾನಂದಮಯಿಯವರು ದಿವ್ಯ ಉಪಸ್ಥಿತಿತರಿದ್ದು ಜನ ಮಾನಸಕ್ಕೆ ಅಶಿರ್ವಚನದ ಮೂಲಕ ಜ್ಞಾನ ಸಂದೇಶ ನೀಡಲಿದ್ದಾರೆ. ಮುಖ್ಯ ಅಥಿತಿ ಗಳಾಗಿ ಬಂಟ್ವಾಳದ ಶಾಸಕರಾದ ರಾಜೇಶ್ ನಾಯ್ಕ್ ಉಳೆಪ್ಪಾಡಿ…
ಇದುವರೆಗೆ ಹಲವು ರೀತಿಯ ಕಾರ್ಯಕ್ರಮಗಳಿಗೆ ಸಾಕ್ಷಿಯಾಗಿದ್ದ ಬೆಂಗಳೂರಿನ ಅರಮನೆ ಮೈದಾನದಲ್ಲಿ ಹೊಸ ಲೋಕವೇ ತೆರೆದಂತಿದೆ. ವಿಶಾಲ ಮೈದಾನದಲ್ಲಿ ಒಂದೆಡೆ ಕೋಣಗಳ ಓಟಕ್ಕೆ ಸಜ್ಜಾಗಿರುವ ಸುಂದರ ಕಂಬಳ ಕೆರೆಯಾದರೆ ಮತ್ತೊಂದೆಡೆ ಯಾವಾಗ ಸ್ಪರ್ಧೆ ಆರಂಭವಾಗುತ್ತದೆಯೋ ಎಂದು ಕಾದು ಕುಳಿತಿರುವ ಕೋಣಗಳು, ಯಜಮಾನರು. ಮೈದಾನದ ಮತ್ತೊಂದೆಡೆ ಸಾಂಸ್ಕೃತಿಕ ವೈಭವಕ್ಕೆ ಸಜ್ಜಾಗಿರುವ ವಿಶಾಲ ವೇದಿಕೆ, ಮತ್ತೊಂದೆಡೆ ಆಹಾರ ಮೇಳದ ಟೆಂಟ್ ಗಳಿಂದ ಘಮ್ಮನೆ ಬರುತ್ತಿರುವ ಸುವಾಸನೆ… ಇದಕ್ಕೆಲ್ಲ ಕಾರಣವಾಗಿರುವುದು ಐತಿಹಾಸಿಕ ದಾಖಲೆ ಬರೆಯಲು ಮುಂದಾದ ಬೆಂಗಳೂರು ರಾಜ ಮಹಾರಾಜಾ ಜೋಡುಕೆರೆ ಕಂಬಳ. ಬೆಂಗಳೂರಿನ ಅರಮನೆ ಮೈದಾನದಲ್ಲಿ ವಿಶಾಲ ಪ್ರದೇಶದಲ್ಲಿ ಇದೆ ಮೊದಲ ಬಾರಿಗೆ ಕಂಬಳ ಆಯೋಜಿಸಲು ಬೆಂಗಳೂರು ಕಂಬಳ ಸಮಿತಿ ಮುಂದಾಗಿದೆ. ಕರಾವಳಿಯಿಂದ ಹೊರಗೆ ಇದೆ ಮೊದಲ ಬಾರಿಗೆ ಕಂಬಳ ನಡೆಯುತ್ತಿದೆ. ಹೀಗಾಗಿ ಕೇವಲ ಕಂಬಳ ಮಾತ್ರವಲ್ಲದೆ ಕರಾವಳಿ ಮಣ್ಣಿನ ಸೊಗಡಿನ ಕಂಪನ್ನು ರಾಜಧಾನಿ ಬೆಂಗಳೂರಿಗೆ ಪಸರಿಸಲು ಸಿದ್ಧತೆ ನಡೆಸಲಾಗಿದೆ. ಕಂಬಳ ಕರೆಯ ಪಕ್ಕದಲ್ಲಿರುವ ವಿಶಾಲ ಜಗದಲ್ಲಿ ಆಹಾರ ಮೇಳಕ್ಕೆ ಅವಕಾಶ ಕಲ್ಪಿಸಲಾಗಿದೆ. ಕರಾವಳಿಯ ಆಹಾರ…