ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಆಶ್ರಯದಲ್ಲಿ ಡಿಸೆಂಬರ್ 7 ರಂದು ಮುಂಬಯಿಯಲ್ಲಿ ನಡೆಯುವ ವಿಶ್ವಬಂಟರ ಸಮಾಗಮ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಶ್ರೀ ಲಕ್ಷ್ಮೀನಾರಾಯಣ ಅಸ್ರಣ್ಣ ಬಿಡುಗಡೆಗೊಳಿಸಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲಿ ಎಂದು ದುರ್ಗಾಪರಮೇಶ್ವರಿ ದೇವರಲ್ಲಿ ಪ್ರಾರ್ಥಿಸಿದರು.



ಸಮಾರಂಭದಲ್ಲಿ ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ, ಜೊತೆ ಕಾರ್ಯದರ್ಶಿ ಚಂದ್ರಹಾಸ ಶೆಟ್ಟಿ ರಂಗೋಲಿ, ಸಂತೋಷ್ ಕುಮಾರ್ ಹೆಗ್ಡೆ, ಭುವನಾಭಿರಾಮ ಉಡುಪ, ಶರತ್ ಶೆಟ್ಟಿ ಸಂಕಲಕರಿಯ, ಸಂತೋಷ್ ಶೆಟ್ಟಿ ಶೆಡ್ಡೆ, ರತ್ನಾಕರ ಶೆಟ್ಟಿ ಎಕ್ಕಾರ್, ಅಶೋಕ್ ಕುಮಾರ್ ಶೆಟ್ಟಿ ಮುಲ್ಕಿ, ಬಾಲಕೃಷ್ಣ ರೈ ಕೊಲ್ಲಾಡಿ, ಸಾಯಿನಾಥ ಶೆಟ್ಟಿ ಮುಂಡ್ಕೂರು, ತೋನ್ಸೆ ಮನೋಹರ್ ಶೆಟ್ಟಿ, ದೇವಪ್ಪ ಶೇಖ ಸಾಲೆತ್ತೂರು, ಅಮರೇಶ್ ಸಾಲೆತ್ತೂರು, ಅರವಿಂದ ರೈ, ಅಜಿತ್ ಶೆಟ್ಟಿ ಬಜಪೆ, ಹರೀಶ್ ಶೆಟ್ಟಿ ಬಜಪೆ, ಸಂದೀಪ್ ಶೆಟ್ಟಿ ಎಕ್ಕೂರು, ತೇಜಸ್ ಶೆಟ್ಟಿ, ಮೊದಲಾದವರು ಉಪಸ್ಥಿತರಿದ್ದರು.








































































































