
ರಾಷ್ಟ್ರೀಯ ದಂತ ಆಯೋಗ ಅಧಿನಿಯಮ 2023 ರ ಕಲಂ 11 ರ ಅನ್ವಯ ಕೇಂದ್ರ ಸರ್ಕಾರವು ದಂತ ಸಲಹಾ ಮಂಡಳಿ ರಚಿಸಿ ಆದೇಶ ಹೊರಡಿಸಿದ್ದು, ಇದರಲ್ಲಿ ಕರ್ನಾಟಕ ರಾಜ್ಯದ ಪ್ರತಿನಿಧಿಯಾಗಿ ಡಾ. ಶಿವಶರಣ್ ಶೆಟ್ಟಿಯವರನ್ನು ನೇಮಕ ಮಾಡಿದೆ. ರಾಷ್ಟ್ರೀಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ದಂತ ಶಿಕ್ಷಣ ವಿಭಾಗದಿಂದ ಈ ಕುರಿತು ಆದೇಶ ಹೊರಡಿಸಲಾಗಿದೆ. ಈ ಮಂಡಳಿಗೆ ರಾಷ್ಟ್ರೀಯ ದಂತ ಆಯೋಗದ ಅಧ್ಯಕ್ಷರು ಹುದ್ದೆಯನ್ವಯ ಅಧ್ಯಕ್ಷರಾಗಿದ್ದು, ಆಯೋಗದ ಜೊತೆ ರಾಜ್ಯಗಳ ಪ್ರತಿನಿಧಿಗಳನ್ನು ಮಂಡಳಿಯಲ್ಲಿ ಆಯ್ಕೆ ಮಾಡಲಾಗುತ್ತದೆ ಎಂದು ಹೆಚ್ಚುವರಿ ಕಾರ್ಯದರ್ಶಿ ಡಾ. ವಿನೋದ್ ಕೋಟ್ವಾಲ್ ಆದೇಶ ಹೊರಡಿಸಿದ್ದಾರೆ.



























































































































