Author: admin
ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ) ಮಂಗಳೂರು ವಿಟ್ಲ ಘಟಕದ 4ನೇ ವಾರ್ಷಿಕೋತ್ಸವವು ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ನಡೆಯಿತು. ಹವ್ಯಾಸಿ ಯಕ್ಷಗಾನ ಕಲಾವಿದೆ ಶ್ರೀಮತಿ ಜಯಲಕ್ಷ್ಮಿ ರೈ ಅಡ್ಯನಡ್ಕ ಮತ್ತು ಝೀ ಕನ್ನಡ ಡ್ರಾಮಾ ಜ್ಯೂನಿಯರ್ ಖ್ಯಾತಿಯ ಬಹುಮುಖ ಪ್ರತಿಭೆ ರಿಷಿತ್ ರಾಜ್ ವಿಟ್ಲ ಇವರನ್ನು ಸಂಮಾನಿಸಲಾಯಿತು. ಸ್ಥಾಪಕಾಧ್ಯಕ್ಷರಾದ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಇವರ ಉಪಸ್ಥಿತಿಯಲ್ಲಿ ಗೌರವಾಧ್ಯಕ್ಷರಾದ ವಿಟ್ಲ ಅರಮನೆಯ ಕೃಷ್ಣಯ್ಯ ಅರಸರು, ಮಾರಪ್ಪ ಶೆಟ್ಟಿ ಬೈಲುಗುತ್ತು, ಮಾಧವ ಮಾವೆ, ಮೋಹನದಾಸ ರೈ ಎರುಂಬು, ಸಂತೋಷ್ ಶೆಟ್ಟಿ ಪೆಲತ್ತಡ್ಕ ಉಪಸ್ಥಿತರಿದ್ದರು. ವಿಟ್ಲ ಘಟಕದ ಅಧ್ಯಕ್ಷರಾದ ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕ ಇವರು ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಪೂವಪ್ಪ ಶೆಟ್ಟಿ ಅಳಕೆ ಇವರು ಪ್ರಸ್ತಾವಿಸಿದರು. ಸುರೇಶ್ ಶೆಟ್ಟಿ ಪಡಿಬಾಗಿಲು ನಿರೂಪಿಸಿ ವಿಜಯಶಂಕರ ಆಳ್ವರವರು ವಂದಿಸಿದರು.
ಸಾಧಾರಣ 1980ರವರೆಗೆ ನಮ್ಮವರು ಉತ್ತರ ಕ್ರಿಯಾದಿಗಳನ್ನು ಜಾತಿ ಪದ್ಧತಿಯಂತೆ ಮನೆಯಲ್ಲೇ ನಡೆಸುತ್ತಿದ್ದರು. ಆನಂತರ ಹೆಚ್ಚಿನ ಸೌಕರ್ಯಕ್ಕಾಗಿ ಪೇಟೆ ಪಟ್ಟಣಗಳ ಮಂದಿರ, ದೇವಾಲಯ, ಛತ್ರಗಳಿಗೆ ವರ್ಗವಾಯಿತು. ಕಾಲಕ್ಕೆ ತಕ್ಕ ಬದಲಾವಣೆ ಅನಿವಾರ್ಯವಾದರೂ ಮೂಲ ಸಂಸ್ಕಾರಕ್ಕೆ ಸಂಪೂರ್ಣ ತೀಲಾಂಜಲಿ ನೀಡುವುದು ಕ್ಷಮ್ಯವೇ? ನಾವು ಶೂದ್ರ ಸಂಪ್ರದಾಯದವರು. ಹಿಂದೆ ಮೃತರ ಶವ ಸಂಸ್ಕಾರವಾದ ದಿವಸ ಉತ್ತರಕ್ರಿಯೆವರೆಗೆ ನಿತ್ಯ ಎರಡು ಹೊತ್ತು ಮನೆಯವರು ನೀರಿಡುತ್ತಿದ್ದರು. 11 ಅಥವಾ 13 ನೇ ದಿನ ಮನೆಯಲ್ಲೇ ಮಡಿವಾಳ ಮತ್ತು ಕ್ಷೌರಿಕ ಪೌರೋಹಿತ್ವದಲ್ಲಿ ಕ್ರಿಯಾ ಭಾಗಗಳನ್ನು ಮಾಡಿ, ಬಂದವರೆಲ್ಲರಿಂದ ದೂಪೆಗೆ ಅನ್ನ ಹಾಕಿಸುವುದು, ಕ್ಷೌರಿಕ ಜಲ ಸಂಪ್ರೋಕ್ಷಣೆಯಿಂದ ಶುದ್ಧವಾಗಿ ಮನೆಗೆ ಬಂದು ಭೋಜನ ಮಾಡಿ ಅದೇ ದಿನ ರಾತ್ರಿ ಮೀನು ಮಾಂಸದ ಅಡುಗೆ ಮಾಡಿ ಒಂದು ಎಲೆ ಹಾಕಿ ಬಡಿಸಿ ಮೃತರ ಆತ್ಮವನ್ನು ಒಳಗೆ ಕರೆಯುವುದು ಕ್ರಮ. 16 ನೇ ದಿನ ಕುಟುಂಬದ ಮನೆಯಲ್ಲಿ ಸರ್ವ ಪಿತೃಗಳಿಗೆ 16 ಎಲೆ ಹಾಕಿ ಬಡಿಸಿ ಪ್ರಾರ್ಥಿಸಿ ಪಿತೃಗಳೊಂದಿಗೆ ಸೇರಿಸುವುದು ಪದ್ಧತಿ. ಆನಂತರ ಒಂದು…
ಆಧುನಿಕ ಕಾಲಘಟ್ಟದಲ್ಲಿ ಎಲ್ಲವೂ ವ್ಯಾಪಾರೀಕರಣಗೊಳ್ಳುತ್ತಿದ್ದು ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರಗಳೂ ಇದರಿಂದ ಹೊರತಾಗಿಲ್ಲ. ಹೀಗಾಗಿ ಇಂದಿನ ದಿನಗಳಲ್ಲಿ ಮೌಲ್ಯಯುತ ಶಿಕ್ಷಣ ಎಲ್ಲಿ ದೂರವಾಗುತ್ತದೋ ಎಂಬ ಆತಂಕ ಎದುರಾಗಿದೆ ಎಂದು ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ ಎಂ ಮೋಹನ್ ಆಳ್ವ ಹೇಳಿದರು. ಮಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಪ್ರೆಸ್ ಕ್ಲಬ್ ಗೌರವ ಅತಿಥಿ ಕಾರ್ಯಕ್ರಮದಲ್ಲಿ ಅವರು ಸನ್ಮಾನ ಸ್ವೀಕರಿಸಿ ಸಂವಾದ ನಡೆಸಿದರು. ಸುಮಾರು ಇಪ್ಪತ್ತು ವರ್ಷಗಳ ಕಾಲ ಹಾಸ್ಟೆಲ್ ನಲ್ಲಿದ್ದುಕೊಂಡು ಕಲಿತ ಬಗ್ಗೆ ಸ್ವ ಅನುಭವ ಹೇಳಿದ ಡಾ ಮೋಹನ್ ಆಳ್ವ, ಹಾಸ್ಟೆಲ್ ನಲ್ಲಿ ವಿದ್ಯೆ ಜೊತೆ ಕ್ರೀಡೆ ಸಾಂಸ್ಕೃತಿಕಕ್ಕೂ ಒತ್ತು ನೀಡಲು ಸಾಧ್ಯವಾಗುತ್ತದೆ ಎಂಬುದು ನನ್ನ ಅನುಭವ. ಅದಕ್ಕಾಗಿ ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ಹಾಸ್ಟೆಲ್ ಸಹಿತ ಶಿಕ್ಷಣಕ್ಕೆ ಒತ್ತು ನೀಡಿದ್ದೇನೆ ಎಂದರು. ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ ಆರ್ ಉಪಸ್ಥಿತರಿದ್ದರು. ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿಬಿ ಹರೀಶ್…
ಬೃಹತ್ತಾಗಿದ್ದ ದಟ್ಟಡವಿಗೆ ಹೊಂದಿಕೊಂಡಿದ್ದ ಒಂದು ಗ್ರಾಮ. ಜನಸಂಖ್ಯೆಯೂ ತೀರಾ ಕಡಿಮೆಯಿತ್ತು. ವ್ಯವಸಾಯವೇ ಪ್ರಮುಖ ಕಸುಬಾಗಿತ್ತಾದರೂ ಕೆಲವರು ಕಾಡಿಗೆ ತೆರಳಿ ಒಣಮರಗಳನ್ನು ಕಡಿದು ಕಟ್ಟಿಗೆಯನ್ನು ಹೊತ್ತೂಯ್ದು ಕಾಡಿನಿಂದಾಚೆ ಇದ್ದ ನಗರದಲ್ಲಿ ಮಾರಿ ಜೀವನ ಸಾಗಿಸುತ್ತಿದ್ದರು. ಅಂತವರಲ್ಲಿ ನಿಜಗುಣನೂ ಒಬ್ಬ. ಸ್ವಲ್ಪ ಧಡೂತಿ ದೇಹದವನಾದರೂ ಕೆಲಸದಲ್ಲೇನೂ ಕಳ್ಳಾಟವಿರಲಿಲ್ಲ. ಅವನ ಮೈಯೊಂದೇ ಸ್ವಲ್ಪ ಭಾರವೆನಿಸಿ ಕೆಲಸದ ನಡುವೆ ಆಗಾಗ್ಗೆ ವಿಶ್ರಾಂತಿ ಪಡೆಯುತ್ತಿದ್ದುದೊಂದೇ ಅವನ ಅವಗುಣ. ಇಂತಹ ನಿಜಗುಣನು ಅಂದೂ ಸಹ ತನ್ನ ನಿತ್ಯದ ಕಾರ್ಯಕ್ಕಾಗಿ ಕಾಡಿಗೆ ತೆರಳಲು ಸಿದ್ಧವಾದನು. ಅವನ ತಾಯಿ ಅವನಿಗೆ ದೊಡ್ಡದೊಂದು ಡಬ್ಬಿಯಲ್ಲಿ ಆಹಾರವನ್ನು ತುಂಬಿಕೊಟ್ಟು ಮನೆಯಿಂದ ಬೀಳ್ಕೊಟ್ಟಳು. ಕಾಡಿನೊಳಗೆ ಸ್ವಲ್ಪದೂರದ ವರೆಗೂ ನಡೆದ ನಿಜಗುಣನಿಗೆ ತಲೆಯ ಮೇಲೆ ಹೊತ್ತಿದ್ದ ಡಬ್ಬಿ ಹಾಗೂ ಬೃಹತ್ ಗಾತ್ರದ ಮೈಯಿಂದಾಗಿ ದೂರ ನಡೆಯುವುದು ಆಯಾಸವಾಗತೊಡಗಿತು. ಸಮೀಪದ ಮರದ ನೆರಳೊಂದರಡಿ ಕುಳಿತ ನಿಜಗುಣನು ಅಮ್ಮ ಕೊಟ್ಟಿದ್ದ ಬುತ್ತಿಯ ಡಬ್ಬಿಯನ್ನು ಬಿಚ್ಚಿ ಅದರಲ್ಲಿದ್ದ ಆಹಾರವನ್ನು ಸೇವಿಸಿದನು. ಕೆಲವು ಸಮಯದ ವಿಶ್ರಾಂತಿಯನ್ನೂ ಪಡೆದ ಅನಂತರ ಅವನಲ್ಲಿ ಹೊಸದೊಂದು ಉತ್ಸಾಹ ಮೂಡಿತು.…
ಬಂಟರ ಸಂಘ ಮುಂಬೈಯ ಸಿಟಿ ಪ್ರಾದೇಶಿಕ ಸಮಿತಿಯ ತಂಡದವರಿಂದ ನೂತನ ಪರಿಕಲ್ಪನೆ ಮನೆಗೆ – ಮನಕ್ಕೆ ಭಜನ ಸತ್ಸಂಗವನ್ನು ಆರಂಭಿಸಿದೆ. ಸನಾತನ ಸoಸ್ಕೃತಿಯನ್ನು ಉಳಿಸುವ ಮುನ್ನಡೆಸುವ ಸಲುವಾಗಿ ಮುಂದಿನ ಪೀಳಿಗೆಗೆ ಅದನ್ನು ಪರಿಚಯಿಸುವ ಸಲುವಾಗಿ ಮನೆ ಮನ ಭಜನೆ ಕಾರ್ಯಕ್ರಮವನ್ನು ಕಾರ್ಯಾಧ್ಯಕ್ಷರಾದ ಶ್ರೀ ಅಶೋಕ ಪಕ್ಕಳ ಅವರ ಮುತುವರ್ಜಿಯಲ್ಲಿ ಹೊಸ ಯೋಜನೆ ಯೋಚನೆಯೊಂದಿಗೆ ಆರಂಭಿಸಿದೆ. ಸುಮಾರು 25 ಮಂದಿಯ ಸಿಟಿ ಪ್ರಾದೇಶಿಕ ಸಮಿತಿಯ ಭಜನಾ ತಂಡ ಈಗಾಗಲೇ ಎರಡು ಮನೆ ಮನ ಭಜನೆ ಕಾರ್ಯಕ್ರಮ ಪೂರ್ತಿಗೊಳಿಸಿದೆ. ಇತ್ತೀಚೆಗೆ ಶ್ರೀ ದಿಲೀಪ್ ಶೆಟ್ಟಿ – ಶ್ರೀಮತಿ ವೃಂದ ಡಿ ಶೆಟ್ಟಿ ದಂಪತಿಗಳ ಸ್ವಗ್ರಹದಲ್ಲಿ ಭಜನ ಸತ್ಸಂಗ ನಡೆಸಲಾಯಿತು. ಸಿಟಿ ಪ್ರಾದೇಶಿಕ ಸಮಿತಿಯ ಮಾಜಿ ಕಾರ್ಯಾಧ್ಯಕ್ಷರಾದ ಕೃಷ್ಣ ಶೆಟ್ಟಿ , ಸಂಚಾಲಕರಾದ ಶ್ರೀ ಶಿವರಾಮ ಶೆಟ್ಟಿ ಕಾರ್ಯನಗುತ್ತು, ಉಪ ಕಾರ್ಯಾಧ್ಯಕ್ಷರಾದ ಶ್ರೀ ಪದ್ಮನಾಭ ಶೆಟ್ಟಿ , ಕಾರ್ಯದರ್ಶಿ ಶ್ರೀ ಸುರೇಂದ್ರ ಕುಮಾರ್ ಶೆಟ್ಟಿ ಮಾರ್ನಾಡ್ , ಮಾಜಿ ಕಾರ್ಯಾಧ್ಯಕ್ಷೆಯರು ಶ್ರೀಮತಿ ಕಲ್ಪನಾ ಕೃಷ್ಣ ಶೆಟ್ಟಿ, …
ಕನ್ನಡ ವಿಭಾಗ, ಮುಂಬಯಿ ವಿಶ್ವಾವಿದ್ಯಾಲಯದಲ್ಲಿ ಎಪ್ರಿಲ್ 13 ರ ಶನಿವಾರದಂದು ಮಧ್ಯಾಹ್ನ 2:00 ರಿಂದ ಮುಂಬಯಿ ವಿಶ್ವವಿದ್ಯಾಲಯ ಜೆ. ಪಿ. ನಾಯಕ್ ಭವನದಲ್ಲಿ ಕನ್ನಡ ವಿಭಾಗದ 46 ರ ಸಂಭ್ರಮ, ನಿರಂಜನ ಶತಮಾನೋತ್ಸವ, ಉಪನ್ಯಾಸ ಹಾಗೂ ಆರು ಕೃತಿಗಳ ಬಿಡುಗಡೆ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಕಾರ್ಯಕ್ರಮದ ಉದ್ಘಾಟನೆಯನ್ನು ಮುಂಬಯಿ ಬಂಟರ ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ ಮಾಡಲಿದ್ದಾರೆ. ಕರ್ನಾಟಕ ಮಲ್ಲ ದೈನಿಕದ ಸಂಪಾದಕ ಚಂದ್ರಶೇಖರ ಪಾಲೆತ್ತಾಡಿ ಉಪನ್ಯಾಸ ನೀಡಲಿದ್ದಾರೆ. ಇದೇ ಸಂದರ್ಭದಲ್ಲಿ ಮುಂಬಯಿ ವಿಶ್ವವಿದ್ಯಾಲಯ, ಕನ್ನಡ ವಿಭಾಗದ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥ ಡಾ. ಜಿ. ಎನ್. ಉಪಾಧ್ಯ ಅವರ ‘ಸಾಹಿತ್ಯ ಸಿದ್ಧಿ ಸಿರಿ ಸೇವೆಯ ಸಾಕಾರ – ಡಾ. ಸುಧಾಮೂರ್ತಿ’ ಹಾಗೂ ‘ರಸ ಋಷಿ ರಾಷ್ಟ್ರಕವಿ ಕುವೆಂಪು’, ಕನ್ನಡ ವಿಭಾಗದ ಸಹ ಪ್ರಾಧ್ಯಾಪಕಿ ಡಾ. ಪೂರ್ಣಿಮಾ ಸುಧಾಕರ ಶೆಟ್ಟಿ ಅವರ ‘ನನ್ನ ಇತ್ತೀಚೆಗಿನ ಓದು’, ಕನ್ನಡ ವಿಭಾಗದ ಸ್ನಾತಕೋತ್ತರ ವಿದ್ಯಾರ್ಥಿ ವಿದ್ಯಾ ರಾಮಕೃಷ್ಣ ಅನುವಾದಿಸಿರುವ ‘ಫ್ರಮ್ ವರ್ಡ್ಸ್ ಟು ನೋಬಲ್ ಡೀಡ್ಸ್…
ಆಹಾರ ಕೇವಲ ದೇಹದ ಅಗತ್ಯ ಮಾತ್ರವಲ್ಲ ಮನಸ್ಸಿನ ಸಂತೋಷಕ್ಕೂ ಹೌದು. ಪ್ರತಿಯೊಂದು ಪ್ರಾಂತ್ಯಕ್ಕೂ ತನ್ನದೇ ಆದ ಆಹಾರ ತಾತ್ವಿಕತೆ ಇದ್ದು ಆಹಾರ ಪದ್ದತಿಯಲ್ಲಿ ಒಂದು ಪರಂಪರೆಯ ಅನುಭವ ಹೊಂದಿದ ಹಿರಿಯರು ಆಹಾರ ವಿಜ್ಞಾನವನ್ನು ಸುವ್ಯವಸ್ಥಿತವಾಗಿ ಅಳವಡಿಸಿಕೊಂಡಿದ್ದರು. ಆದರೆ ನಾಗರಿಕ ಸಮಾಜ ಬೆಳೆದು ಬರುತ್ತಲೇ ತನಗೊಂದು ಬೇರೆ ರೀತಿ ನೀತಿ ನಿಯಮ ನಿಬಂಧನೆ ಆಚಾರ ವಿಚಾರ ಎಂಬ ಧಾರೆಯನ್ನು ರೂಢಿಸಿಕೊಂಡು ಬರುತ್ತಾ ಕೆಲ ಆಹಾರ ಪದ್ದತಿಯನ್ನು ಗಾಳಿಗೆ ತೂರಿ ಬಿಟ್ಟಿದ್ದು ಹೌದಾದರೂ ಸರ್ವಕಾಲದಲ್ಲೂ ವಿಶೇಷವಾದ ಖಾದ್ಯವಾಗಿ ಉಳಿದುಕೊಂಡ ಕೋಳಿರೊಟ್ಟಿ ತನ್ನ ಸ್ಥಾನವನ್ನು ಕಳೆದುಕೊಂಡಿಲ್ಲ. ಆ ನಿಟ್ಟಿನಲ್ಲಿಯಾದರೂ ಈ ರೊಟ್ಟಿಗೆ ಜಿಯಾಗ್ರಾಫಿಕಲ್ ಇಂಡಿಕೇಷನ್ (ಜಿ ಐ ಮಾನ್ಯತೆ) ದೊರಕಬೇಕಿತ್ತು. ಪ್ರಾಂತ್ಯವೊಂದಕ್ಕೆ ಸೇರಿದ ಉತ್ಪನ್ನ ಆಯಾ ಪಾಂತ್ಯದ ನಿರ್ದಿಷ್ಟ ಗುಣಮಟ್ಟ ಅಥವಾ ಆದ್ಯತೆಗೆ ಅವಲಂಭಿಸಿದ ವಿಶಿಷ್ಟ ರುಚಿ ಹೊಂದಿದ್ದರೆ ಅದಕ್ಕೆ ಭೌಗೋಳಿಕ ಸೂಚ್ಯಂಕ ಮಾನ್ಯತೆ ಪಡೆಯಬಹುದು. ವಸ್ತುವೊಂದಕ್ಕೆ ಭೌಗೋಳಿಕ ಮಾನ್ಯತೆ ಪಡೆಯಬೇಕಾದರೆ ಚೆನ್ನೈನ ಜಿಯೋಗ್ರಾಫಿಕಲ್ ಇಂಡಿಕೇಷನ್ ಕಚೇರಿಯಲ್ಲಿ ಅರ್ಜಿ ಸಲ್ಲಿಸಿ ವಸ್ತುವಿನ ಬಗೆಗಿನ ಸರಿಯಾದ ಮಾಹಿತಿ…
ನಾವು ನೀವೆಲ್ಲಾ ಮಾತಿನಲ್ಲಿ ಮಹಾ ಜಾಣರು. ಪುಂಖಾನು ಪುಂಖವಾಗಿ ಮಾತು ಹನಿ ಚೆಲ್ಲುತ್ತಲೇ ಇರುತ್ತೇವೆ. ಆದರೆ ವಾಸ್ತವ? ಮಾತು ಮಾತಿಗೆ ನಾವೇ ಶ್ರೇಷ್ಠ, ಇತರರು ಸಾಮಾನ್ಯರೆಂಬ ಭಾವವೇ ಮಾಧ್ಯಮಗಳಲ್ಲಿ ಅಲ್ಲಿ ಇಲ್ಲಿ ಹೆಚ್ಚು ಕೇಳಿ ಬರುವುದೇ ಒಂದು ವಿಪರ್ಯಾಸ. ನಾವು ಸರ್ವಧರ್ಮ ಸಮನ್ವಯದ ಸಹಬಾಳ್ವೆಯ ವಿಶ್ವ ಗುರುವೆನಿಸಿರುವ ಭಾರತ ಮಾತೆಯ ಮಕ್ಕಳು. ಆದರೆ ಮತ- ಧರ್ಮ- ಪಂಗಡಗಳ ಚೀ- ಮುಳ್ಳಿನೊಳಗೇ ಸಿಕ್ಕಿ, ತಪ್ಪಿಸಿಕೊಳ್ಳಲು ಅವರ-ಇವರ ಬೊಟ್ಟು ಮಾಡಿ ತೋರಿಸುವುದು. ಹೇಳಿಕೆ ಕೊಡುವುದು ಸರಿಯೇ? ನಮ್ಮ ಮುಂದೆ ನಮ್ಮ ಭವಿಷ್ಯದ ಮಕ್ಕಳು ಯುವಕರಿದ್ದಾರೆ. ಅವರ ಮನದಲ್ಲಿ ಸದ್ಭಾವ ಮೂಡಿಸುವ ನುಡಿಗಳು ಕೇಳಿಬರಬೇಕು. ಸಾಮಾಜಿಕ ನೆಮ್ಮದಿ ನೆಲೆಯಾಗಬೇಕು. “ನಾವು ನಡೆಯುವ ದಾರಿ ಮುಂದಿನ ಪೀಳಿಗೆಗೆ ಅನುಕರಣೀಯವಾಗಿಬೇಕು. ಸಂಸ್ಕಾರಯುತ ಭವಿಷ್ಯವನ್ನು ರೂಪಿಸಲು ಹದಿಹರೆಯ ಸೂಕ್ತ ಸಂದರ್ಭವಾಗಿದೆ” ಎಂದು ಹೇಳುವ ನಾವು ಆ ಹರೆಯದಲ್ಲಿದ್ದಾಗ ಏನು ಮಾಡಿರುವೆವು. ಈಗ ಏನು ಮಾಡ್ತಾ ಇದ್ದೇವೆ? ಈ ಪ್ರಶ್ನೆಗಳು ಉತ್ತರ ಸಿಗದ ಪ್ರಶ್ನೆಗಳಾಗಿಯೇ ಉಳಿದು ಹೋಗಿವೆ. “ಈ ರಾಷ್ಟ್ರದ ಏಳ್ಗೆಗೆ…
ಸಮಾಜದಲ್ಲಿ ತೃತೀಯ ಲಿಂಗಿಗಳಾಗಿ ಗೌರವಯುತವಾಗಿ ಜೀವನ ನಡೆಸುತ್ತಿರುವ ಮಂಗಳೂರಿನ ಅಶೋಕನಗರ ದಂಬೇಲಿನ ಮಂಗಳಮುಖಿ ಐಶ್ವರ್ಯ ಪರಿವಾರದ ಸದಸ್ಯರು ಒಟ್ಟು ಸೇರಿ ಕೋಡಿಕಲ್ ಕಟ್ಟೆಯ ಬಳಿ ದ್ವಿತೀಯ ಬಾರಿಗೆ ಪಾವಂಜೆ ಮೇಳದವರಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟವನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಕಲಾವಿದರ ಕಾಮಧೇನು ಪಟ್ಲ ಸತೀಶ್ ಶೆಟ್ಟಿಯವರು ಪಟ್ಲ ಫೌಂಡೇಶನ್ ಟ್ರಸ್ಟ್ ಮೂಲಕ ಕಲಾವಿದರಿಗೆ ಸಲ್ಲಿಸುತ್ತಿರುವ ಸೇವೆಗಾಗಿ ಅವರನ್ನು ಗೌರವಿಸಿ ಸನ್ಮಾನಿಸಿದರು. ಗೌರವವನ್ನು ಸ್ವೀಕರಿಸಿದ ಪಟ್ಲ ಸತೀಶ್ ಶೆಟ್ಟಿಯವರು ಐಶ್ವರ್ಯ ಪರಿವಾರದ ಸದಸ್ಯರು ಯಾರಲ್ಲಿಯೂ ಬಿಕ್ಷೆ ಬೇಡದೆ ತಮ್ಮ ಸಂಪಾದನೆಯ ಒಂದಂಶವನ್ನು ಒಟ್ಟು ಸೇರಿಸಿ ಭಕ್ತಿಪೂರ್ವಕ ಕಾರ್ಯಕ್ರಮವನ್ನು ಅನ್ನಸಂತರ್ಪಣೆಯೊಂದಿಗೆ ಸ್ಥಳೀಯ ಪರಿಸರದವರನ್ನು ಒಟ್ಟು ಸೇರಿಸಿ ಸಮಾಜದಲ್ಲಿ ಎಲ್ಲರೊಂದಿಗೆ ನಾವು ಇದ್ದೇವೆ ಎಂದು ತೋರಿಸಿಕೊಟ್ಟಿರುವುದು ಶ್ಲಾಘನೀಯ ಕಾರ್ಯ ಎಂದರು. ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಪ್ರಥಮವಾಗಿ ಯಕ್ಷಗಾನ ಕಲಾವಿದರ ನೋವುಗಳಿಗೆ ಸ್ಪಂದಿಸುತ್ತಿದ್ದು, ಕಳೆದ ಎರಡು ವರ್ಷಗಳಿಂದ ನಾಟಕ ರಂಗಭೂಮಿ, ದೈವಾರಾದನೆಯ ಪರಿಚಾರಕರಿಗೆ ಮತ್ತು ವಾದ್ಯ ವೃಂದದವರಿಗೆ ಸಹಕರಿಸುತ್ತಿದ್ದು ಮುಂದಿನ ಹಂತದಲ್ಲಿ ಮಂಗಳಮುಖಿ…
ಮುಂಬಯಿ ಮಹಾನಗರದಲ್ಲಾಗಲೀ ಯಾ ಉಪನಗರಗಳಲ್ಲಾಗಲೀ ಸಂಘ ಸಂಸ್ಥೆಗಳ ಯಾವುದೇ ಸಮಾರಂಭವನ್ನು ನಡೆಸುವಾಗ ಅಂತಹ ಸಮಾರಂಭಗಳಲ್ಲಿ ನಾಟಕ ಯಾ ಸಾಂಸ್ಕೃತಿಕ ವೈಭವ ಇದ್ದಲ್ಲಿ ತುಳು ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವುದರಲ್ಲಿ ಸಂದೇಹವಿಲ್ಲ. ಮಾರ್ಚ್ ತಿಂಗಳ 23 ರಂದು ತುಳು ಸಂಘ, ಬೊರಿವಲಿಯ 13ನೇ ವಾರ್ಷಿಕೋತ್ಸವ ಸಮಾರಂಭವು ಗ್ಯಾನ್ ಸಾಗರ್ ಅಂಪಿ ಥೀಯೇಟರ್, ಬೊರಿವಲಿ ಸಂಸ್ಕೃತಿ ಕೇಂದ್ರ, ಬೊರಿವಲಿ (ಪ.) ಮುಂಬಯಿ ಇಲ್ಲಿ ತುಳು ಸಂಘ, ಬೊರಿವಲಿಯ ಗೌರವ ಅಧ್ಯಕ್ಷರೂ ಜನಪ್ರಿಯ ಉದ್ಯಮಿಯು ಆದ ಡಾ. ವಿರಾರ್ ಶಂಕರ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ತುಳು ಸಂಘ ಅಧ್ಯಕ್ಷರಾದ ಕರುಣಾಕರ ಎಂ. ಶೆಟ್ಟಿಯವರ ಉಪಸ್ಥಿತಿಯಲ್ಲಿ ಜರಗಿದ್ದು ದಿ. ಯು ಆರ್ ಚಂದರ್ ರಚಿಸಿದ, ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರು ಇದರ ಮಹಾರಾಷ್ಟ್ರ ಘಟಕದಿಂದ “ಜಾನಪದ ವಿಭೂಷಣ” ಪ್ರಶಸ್ತಿ ಪುರಸ್ಕೃತ ಕರುಣಾಕರ ಕೆ ಕಾಪು ಇವರು ನಿರ್ದೇಶಸಿದ ನಾಟಕ “ಕಲ್ಕುಡ-ಕಲ್ಲುರ್ಟಿ” ಸಮಯದ ಅಭಾವವಿದ್ದರೂ ಯಶಸ್ವಿಯಾಗಿ ಹಾಗೂ ಅರ್ಥಪೂರ್ಣವಾಗಿ ಪ್ರದರ್ಶನಗೊಂಡಿತು. ತೆರೆದ ತುಂಬಿದ ಸಭಾಂಗಣದಲ್ಲಿ ಮೌನವಾಗಿ ನಾಟಕವನ್ನು ವೀಕ್ಷಿಸುತ್ತಿದ್ದ ಕಲಾಭಿಮಾನಿಗಳು…