ತುಳುನಾಡಿನ ಶ್ರೇಷ್ಠ ಕಲೆಯೆಂದು ಪ್ರಖ್ಯಾತವಾದ ಯಕ್ಷಗಾನ ಎಲ್ಲಾ ಜನರು ಜಾತಿ, ಮತ, ಭೇದವೆನಿಸದೆ ನಂಬಿದ ದೈವಿಕ ಕಲೆಯಾಗಿದೆ. ಯಕ್ಷ ಕಲಾಮಾತೆಯ ಸೇವೆಗೈದ ಅದೆಷ್ಟೋ ಶ್ರೇಷ್ಠ ಕಲಾವಿದರಿಗೆ ಜನ್ಮಕೊಟ್ಟ ಪುಣ್ಯಭೂಮಿ ನೆಲ್ಲಿಕುಂಜದ ನಡುಮನೆ ಎಂಬಲ್ಲಿ ಜನಿಸಿದ ಶೀನಪ್ಪ ಭಂಡಾರಿಯವರು ಮಾವನವರಾದ ಜತ್ತಪ್ಪ ರೈಗಳ ಬಳಿ ಯಕ್ಷಗಾನ ನಾಟ್ಯಾಭ್ಯಾಸ ಮಾಡಿ ಯಕ್ಷರಂಗದ ಸವ್ಯಸಾಚಿ ವೇಷಧಾರಿಯಾಗಿ ಮಿಂಚಿದರು. 25 ವರ್ಷಗಳು ಅದೆಷ್ಟೋ ಮೇಳಗಳಲ್ಲಿ ತಿರುಗಾಟ ಮಾಡಿ, ತಮ್ಮದೇ ಆದ ಬೆಳ್ಳಂಬೆಟ್ಟು ಹಾಗೂ ಆದಿಸುಬ್ರಹ್ಮಣ್ಯ ಎಂಬ ಡೇರೆ ಮೇಳವನ್ನು 50 ವರ್ಷಗಳ ಕಾಲ ನಿರ್ವಹಿಸಿ, ಶ್ರೇಷ್ಠ ಗುರುಸ್ಥಾನದಲ್ಲಿ ನಿಂತು, ಯಕ್ಷಗಾನವನ್ನು ಅದೆಷ್ಟೋ ಶಿಷ್ಯರಿಗೆ ಬೋಧಿಸಿ, ಸಾಮಾಜಿಕ, ಧಾರ್ಮಿಕ ಮತ್ತು ಜಾನಪದ ಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡವರು 2013ನೇ ಜೂನ್ 6 ರಂದು ದೈವಾಧೀನರಾದರು.
ಶೀನಪ್ಪ ಭಂಡಾರಿಯವರ 95 ವರ್ಷಗಳ ಯಕ್ಷ ಪ್ರಯಾಣದ ಘಟ್ಟವನ್ನು ನೆನಪಿನಲ್ಲಿ ಇಟ್ಟುಕೊಂಡು ಅವರ ಸ್ಮರಣಾರ್ಥ ಮಕ್ಕಳು, ಮೊಮ್ಮಕ್ಕಳು, ಶಿಷ್ಯವೃಂದ ಮತ್ತು ಕುಟುಂಬ ವರ್ಗದ ನೇತೃತ್ವದಲ್ಲಿ ಡಿಸೆಂಬರ್ 01ನೇ ತಾರೀಕು ರವಿವಾರದಂದು ಪುತ್ತೂರು ಬನ್ನೂರಿನ ಶನೀಶ್ವರ ಮಂದಿರದಲ್ಲಿ ಸಂಜೆ ಗಂಟೆ 06:00ರಿಂದ ಶೀನಪ್ಪ ಭಂಡಾರಿ ವೇದಿಕೆ-2024 ಎನ್ನುವ ಕಾರ್ಯಕ್ರಮ ಅಯೋಜಿಸಲಾಗಿದೆ.
ಉದ್ಯಮಿ ಚಂದ್ರಹಾಸ ರೈ ಮುಂಬಯಿ ಅಧ್ಯಕ್ಷತೆಯ ಸಭಾ ಕಾರ್ಯಕ್ರಮದಲ್ಲಿ ಪುತ್ತೂರು ಲಕ್ಷ್ಮಿ ದೇವಿ ಬೆಟ್ಟದ ಧರ್ಮದರ್ಶಿಗಳಾದ ಐತಪ್ಪ ಸಫಲ್ಯರು ಆಶೀರ್ವಚನ ನೀಡಲಿದ್ದು, ನ್ಯಾಯವಾದಿಗಳಾದ ಗಿರೀಶ್ ಮಲಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕೃಷಿಕ ಗಣೇಶ್ ರೈ, ಶಶಿಕುಮಾರ್ ರೈ ಬಾಲ್ಯೊಟ್ಟು, ಚಂದ್ರಹಾಸ ರೈ ಮಾರ್ನಡ್ಕ ಗೌರವ ಉಪಸ್ಥಿತಿಯಲ್ಲಿರುತ್ತಾರೆ. ಮುಖ್ಯ ಅತಿಥಿಗಳಾಗಿ ಪುತ್ತೂರಿನ ಶಾಸಕರು ಅಶೋಕ್ ಕುಮಾರ್ ರೈ, ಈಶ್ವರ ಭಟ್ ಪಂಜಿಗುಡ್ಡೆ, ಸಾಜ ರಾಧಾಕೃಷ್ಣ ಆಳ್ವ, ಸುದೇಶ್ ಪೂಂಜ ಬನ್ನೂರು ಬಾಳಿಕೆ, ಯಕ್ಷಗಾನ ಕಲಾವಿದ ಕೆ ಎಚ್ ದಾಸಪ್ಪ ರೈ, ಚಂದ್ರಶೇಖರ್ ಭಂಡಾರಿ, ಉಷಾ ಶ್ರೀಧರ ಭಂಡಾರಿ, ಗುಡ್ಡ ಶೆಟ್ಟಿ ಯಾನ್ ರತ್ನಾಕರ ಭಂಡಾರಿ ಅರೆಬೆಟ್ಟು ಗುತ್ತು, ಬಾಬು ರೈ ಕೈಕಾರ, ಸಂಜೀವ ಶೆಟ್ಟಿ ಪೆರಾಡಿ, ರಾಮಕೃಷ್ಣ ರೈ ಪೇರಾಲ್ ಅಜ್ಜಾವರ, ದಿನೇಶ್ ಸಾಲಿಯನ್, ರವೀಶ ರೈ ಮಾರ್ನಡ್ಕ, ಸುರೇಶ್ ಭಟ್ ಬೆಳಾಲು ಪಾಲ್ಗೊಳ್ಳಲಿದ್ದಾರೆ.
ಯಕ್ಷಗಾನ ಕಲಾವಿದರು ಹಾಗೂ ಉದ್ಯಮಿ ಸೀತಾರಾಮ ರೈ ಬನ್ನೂರು, ಯಕ್ಷಗಾನ ಕಲಾವಿದ ಮೋಹನ್ ಆಚಾರ್ಯ ಪಂಜ, ಮಾಜಿ ಸೈನಿಕರಾದ ವಸಂತ ಗೌಡ ದೇವಸ್ಯ, ಅಶೋಕ್ ಬಿ ಬನ್ನೂರು, ಬನ್ನೂರು ನೆಕ್ಕಿಲದ ಮಹಾಲಿಂಗ ನಾಯ್ಕ ಹಾಗೂ ಅಂಬು ಶೆಟ್ಟಿಯಾರ್ ಮುಳ್ಳೇರಿಯಾರಿಗೆ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ. ತದನಂತರ ಶ್ರೀ ಅನ್ನಪೂರ್ಣೇಶ್ವರಿ ಪ್ರಸಾದಿತ ಯಕ್ಷಗಾನ ಮಂಡಳಿ ಇವರಿಂದ ಕೋಟಿ ಚೆನ್ನಯ ತುಳು ಯಕ್ಷಗಾನ ನಡೆಯಲಿದೆ.