ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಆಶ್ರಯದಲ್ಲಿ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರ ಘನ ಅಧ್ಯಕ್ಷತೆಯಲ್ಲಿ ಡಿಸೆಂಬರ್ 7 ರಂದು ಕುರ್ಲಾ ಪೂರ್ವದ ಬಂಟರ ಭವನದಲ್ಲಿ ವಿಶ್ವ ಬಂಟರ ಸಮಾಗಮ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಗುಜರಾತಿನ ಸೂರತ್ ನ ಜೀವನ್ ಭಾರತಿ ಸಭಾಂಗಣ ನಾನ್ಪುರ ಇಲ್ಲಿ ನವೆಂಬರ್ 24ರಂದು ಒಕ್ಕೂಟದ ಮಹಾ ನಿರ್ದೇಶಕ, ಬರೋಡಾದ ಶಶಿಧರ ಶೆಟ್ಟಿ ಮತ್ತು ನಿರ್ದೇಶಕ ಅಂಕಲೇಶ್ವರದ ರವಿನಾಥ್ ಶೆಟ್ಟಿ, ಸ್ವಾಗತ ಸಮಿತಿಯ ಸಂಚಾಲಕ ರತ್ನಾಕರ್ ಶೆಟ್ಟಿ ಮುಂಡ್ಕೂರು ಬಿಡುಗಡೆಗೊಳಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಸೂರತ್ ನ ಶಿವರಾಮ ಶೆಟ್ಟಿ, ಅಂಕಲೇಶ್ವರದ ಅಜಿತ್ ಶೆಟ್ಟಿ, ಕರ್ನಾಟಕ ಸಂಘ ಸೂರತ್ ಅಧ್ಯಕ್ಷ ರಾಧಾಕೃಷ್ಣ ಶೆಟ್ಟಿ ಮತ್ತು ಭಾರತ್ ಬ್ಯಾಂಕ್ ಅಧ್ಯಕ್ಷ ಸೂರ್ಯಕಾಂತ್ ಸುವರ್ಣ, ಗುಜರಾತ್ ಬಂಟರ ಸಂಘದ ಪದಾಧಿಕಾರಿಗಳು, ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು, ಹೋಟೆಲ್ ಉದ್ಯಮಿಗಳು, ಸಮಾಜ ಸೇವಕರು ಮತ್ತಿತರ ಗಣ್ಯರು ಉಪಸ್ಥಿತರಿದ್ದರು.