ಮೇಕೋಡು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ದ.ಕ. ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ನಿರ್ದೇಶಕ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಅವರು ರಾಜ್ಯ ಸಹಕಾರ ಹಾಲು ಉತ್ಪಾದಕರ ಮಹಾಮಂಡಳಿ ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಪ್ರಕಾಶ್ಚಂದ್ರ ಶೆಟ್ಟಿ ಅವರು 2023- 24 ನೇ ಸಾಲಿನಲ್ಲಿ 1.06 ಲಕ್ಷ ಲೀಟರ್ ಹಾಲು ಪೂರೈಸಿದ್ದಾರೆ. ಮೇಕೋಡು ಸಂಘದ ಅಧ್ಯಕ್ಷರಾಗಿ 2022 ರಲ್ಲಿ ನೂತನ ಕಟ್ಟಡ, ಶೀತಲೀಕರಣ ಘಟಕ ಸ್ಥಾಪಿಸಿದ್ದರು. ಖಂಬದ ಕೋಣೆ ರೈತರ ಸೇ.ಸ ಸಂಘದ ಅಧ್ಯಕ್ಷರಾಗಿದ್ದು, ಇತ್ತೀಚೆಗಷ್ಟೇ ರಾಜ್ಯಮಟ್ಟದ ಸಹಕಾರಿ ರತ್ನ ಪ್ರಶಸ್ತಿಗೆ ಭಾಜನರಾಗಿದ್ದರು.