Author: admin
ಸುಮಾರು ಅರ್ಧ ಶತಮಾನದ ಹಿಂದಿನವರೆಗೆ ತುಳುನಾಡಿನಲ್ಲಿ ಬಂಟರ ತರವಾಡು ಮನೆ ಎಂದರೆ ಕುಟುಂಬಸ್ಥರಿಂದ ತುಂಬಿ ತುಳುಕುತ್ತಿತ್ತು. 1970 ರಲ್ಲಿ ಬಂದ ಭೂ ಮಸೂದೆ, ಕೈಗಾರಿಕೋದ್ಯಮ, ನಗರೀಕರಣ ಇತ್ಯಾದಿ ಕಾರಣಗಳಿಂದ ಹಳ್ಳಿಯ ಯುವಕರು ಉದ್ಯೋಗ ಅರಸಿಕೊಂಡು ದೂರದ ನಗರ ಸೇರಿದರು. ಪರಿಶ್ರಮ ಜೀವಿಗಳಾದ ತುಳುವರು ಅಲ್ಲಿಯೂ ತಮ್ಮ ಪ್ರಭಾವದಿಂದ ಸಂಪಾದಿಸಿ ನೆಲೆ ಕಟ್ಟಿಕೊಂಡರು. ಆದರೆ ತಾಯ್ನೆಲ, ಹುಟ್ಟಿದ ತರವಾಡು, ಕುಟುಂಬದ ದೈವ, ನಾಗಗಳ ಸ್ಮರಣೆ ಮೈಗೂಡಿಸಿಕೊಂಡಿದ್ದರು. ಸಂಪಾದನೆಯ ಒಂದಂಶವನ್ನು ಕೂಡಿಟ್ಟರು. ಪರವೂರಲ್ಲಿದ್ದ ಕುಟುಂಬಸ್ಥರು ಒಟ್ಟಾಗಿ ತವರಿಗೆ ಬಂದು ಊರಲ್ಲಿದ್ದವರನ್ನು ಸೇರಿಸಿಕೊಂಡು ಪಾಳು ಬಿದ್ದ ಮನೆ, ದೈವಸ್ಥಾನ ಹಾಗೂ ನಾಗಬನಗಳನ್ನು ಪುನರುದ್ಧಾರಗೊಳಿಸಿದರು. ಮೂಲ ತರವಾಡು ಮನೆಯನ್ನು ಮುರಿದು ಭವ್ಯ ಬಂಗಲೆ, ದೈವಗಳಿಗೆ ದೈವಸ್ಥಾನ, ಭಂಡಾರಾದಿಗಳನ್ನು ನಿರ್ಮಿಸಲಾಯಿತು. ಒಂದು ವಾರದ ವೈಭವದ ಬ್ರಹ್ಮಕಲಶ, ವಿವಿಧ ಹೋಮಗಳು, ನಾಗಪ್ರತಿಷ್ಠೆ, ದೈವಗಳಿಗೆ ಕೋಲ ನೇಮಗಳನ್ನು ಗ್ರಾಮ ದೇವಸ್ಥಾನದ ಬ್ರಹ್ಮಕಲಶವನ್ನು ಮೀರಿಸುವಂತಿತ್ತು. ದೇಶ ವಿದೇಶಗಳಲ್ಲಿ ದುಡಿಯುತ್ತಿದ್ದ ಉದ್ಯಮಿ, ಉದ್ಯೋಗಸ್ಥರು ಹಣದ ಹೊಳೆಯನ್ನೇ ಹರಿಸಿದರು ಎಂದರೂ ತಪ್ಪಿಲ್ಲ. ಇರಲಿ, ಎಲ್ಲವೂ ತವರಿಗಾಗಿ…
ರೋಟರಿ ಅಂತರರಾಷ್ಟ್ರೀಯ ಜಿಲ್ಲೆ 181 ವಲಯ 5 ರ 2024-2025 ನೇ ಸಾಲಿನ ರೋಟರಿ ಅಸಿಸ್ಟೆಂಟ್ ಗವರ್ನರ್ ಗಳಾಗಿ ರೋಟರಿ ಕ್ಲಬ್ ಪುತ್ತೂರು ಪೂರ್ವದ ಸೂರ್ಯನಾಥ ಆಳ್ವ, ರೋಟರಿ ಕ್ಲಬ್ ಪುತ್ತೂರು ಯುವದ ಹರ್ಷಕುಮಾರ್ ರೈ ಮಾಡಾವು ಮತ್ತು ರೋಟರಿ ಕ್ಲಬ್ ಬೆಳ್ಳಾರೆ ಟೌನ್ ನ ಕೆ. ವಿನಯ ಕುಮಾರ್ ನಿಯೋಜಿತರಾಗಿದ್ದಾರೆ. ಪುತ್ತೂರು, ಸುಳ್ಯ ಮತ್ತು ಕಡಬ ತಾಲೂಕಿಗೆ ಒಳಪಟ್ಟ 12 ರೋಟರಿ ಕ್ಲಬ್ ಗಳ ಜವಾಬ್ದಾರಿಯನ್ನು ರೋಟರಿ ಜಿಲ್ಲಾ ಗವರ್ನರ್ ವಿಕ್ರಮ್ ದತ್ತ ಅವರ ನಿರ್ದೇಶನದಂತೆ ಇವರುಗಳಿಗೆ ವಹಿಸಿಕೊಡಲಾಗಿದೆ. ಸೂರ್ಯನಾಥ ಆಳ್ವ : ರೋಟರಿ ಕ್ಲಬ್ ಪುತ್ತೂರು ಪೂರ್ವದ ಸದಸ್ಯರಾಗಿ 1995 ರಲ್ಲಿ ರೋಟರಿ ಸಂಸ್ಥೆಗೆ ಸೇರಿ ರೋಟರಿ ಪೂರ್ವದ ವಿವಿಧ ಹುದ್ದೆಗಳನ್ನು ಅಲಂಕರಿಸಿ 2007-2008 ರಲ್ಲಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿರುತ್ತಾರೆ. ನಂತರ ರೋಟರಿವಲಯ ಮತ್ತು ಜಿಲ್ಲೆಯ ವಿವಿಧ ಜವಾಬ್ದಾರಿಯನ್ನು ನಿರ್ವಹಿಸಿ ಇದೀಗ 2004-2005 ಸಾಲಿಗೆ ಅಸಿಸ್ಟೆಂಟ್ ಗವರ್ನರ್ ಆಗಿ ನೇಮಕಗೊಂಡಿರುತ್ತಾರೆ. 1964ರಲ್ಲಿ ಬಂಟ್ವಾಳ ತಾಲೂಕಿನ ಅಳಕೆ ಗ್ರಾಮದ ಮಿತ್ತಳಿಕೆಯಲ್ಲಿ…
ಮಲಾಡ್ ಪಶ್ಚಿಮದ ಸಮಾಜ ಸೇವಕ, ಅಯ್ಯಪ್ಪ ಸ್ವಾಮಿಯ ಪರಮ ಭಕ್ತ ದಿವಾಕರ್ ಶೆಟ್ಟಿಗಾರ್ ಗುರುಸ್ವಾಮಿ ಅವರು 49 ವರ್ಷಗಳ ಹಿಂದೆ ಸ್ಥಾಪಿಸಿರುವ ಕನ್ನಡ ನವತಾರಾ ಕಲಾ ಮಂಡಳಿ ಮಲಾಡ್ ಸಂಸ್ಥೆಯನ್ನು ಸ್ಥಾಪಿಸಿ ಧಾರ್ಮಿಕ, ಸಾಮಾಜಿಕ ಸೇವಾ ಕಾರ್ಯಗಳನ್ನು ನಡೆಸುತ್ತಾ ಬಂದಿದ್ದಾರೆ. ಪ್ರತಿ ವರ್ಷದಂತೆ ಮಲಾಡ್ ಪಶ್ಚಿಮದ ಸೋಮವಾರ ಬಜಾರ್ ಶ್ರೀ ಪಾಟ್ಲಾದೇವಿ ಮಂದಿರದ (ರಾಮ ಮಂದಿರ) ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಅನ್ನದಾನ ಹಾಗೂ ರಾತ್ರಿ ಸಭಾ ಕಾರ್ಯಕ್ರಮ, ರಾತ್ರಿ ಯಕ್ಷಗಾನ ಪ್ರದರ್ಶನವನ್ನು ನಡೆಸುತ್ತಾ ಬಂದಿದ್ದಾರೆ. ಈ ವರ್ಷ 49 ನೇ ವಾರ್ಷಿಕ ಮಹಾಪೂಜೆ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಎಪ್ರಿಲ್ 20 ರಂದು ಶನಿವಾರ ಶ್ರೀ ಪಾಟ್ಲಾದೇವಿ ಮಂದಿರ (ರಾಮ ಮಂದಿರ ), ಸೋಮವಾರ ಬಜಾರ್, ಮಾಲಾಡ್ (ಪ) ಇಲ್ಲಿ ಜರಗಲಿರುವುದು. ಪೂಜಾ ಕಾರ್ಯಕ್ರಮಗಳು ಮಧ್ಯಾಹ್ನ ಗಂಟೆ 2.00 ರಿಂದ ಭಜನಾ ಕಾರ್ಯಕ್ರಮ, ಮಧ್ಯಾಹ್ನ ಗಂಟೆ 3.00 ರಿಂದ ಮಹಾ ಅಭಿಷೇಕ, ಸಾಯಂಕಾಲ ಗಂಟೆ 4.00 ಮಹಾ ಮಂಗಳಾರತಿ ಮತ್ತು ತೀರ್ಥ ಪ್ರಸಾದ,…
ಆಳ್ವಾಸ್ನಲ್ಲಿ ಪದ್ಮಶ್ರೀ ಪುರಸ್ಕೃತೆ ಸೀತವ್ವ ದುಂಡಪ್ಪ ಜೋಡಟ್ಟಿ : ಸ್ವಾರ್ಥವೇ ಸಾಮಾಜಿಕ ಪಿಡುಗಿನ ಮೂಲ ಕಾರಣ
ಮೂಡುಬಿದಿರೆ: ‘ಸಾಮಾಜಿಕ ಪಿಡುಗುಗಳಿಗೆ ಮೂಲ ಕಾರಣ ಮನುಷ್ಯನ ಸ್ವಾರ್ಥ’ ಎಂದು ಸಾಮಾಜಿಕ ಕಾರ್ಯಕರ್ತೆ, ಪದ್ಮಶ್ರೀ ಪುರಸ್ಕೃತೆ ಸೀತವ್ವ ದುಂಡಪ್ಪ ಜೋಡಟ್ಟಿ ವಿಶ್ಲೇಷಿಸಿದರು. ಆಳ್ವಾಸ್ ಎಂಜಿನಿಯರಿಂಗ್ ಹಾಗೂ ತಂತ್ರಜ್ಞಾನ ಕಾಲೇಜಿನ ಸಭಾಂಗಣದಲ್ಲಿ ಗುರುವಾರ ರೋಸ್ಟ್ರಮ್- ಸ್ಪೀಕರ್ಸ್ ಕ್ಲಬ್ ಹಮ್ಮಿಕೊಂಡ ‘ಮಹಿಳೆಯರು, ಮಕ್ಕಳು ಹಾಗೂ ಸಾಮಾಜಿಕ ಸಮಸ್ಯೆ’ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಾಮಾಜಿಕ ಪಿಡುಗುಗಳು ನಗರ ಪ್ರದೇಶಕ್ಕೆ ಹೋಲಿಸಿದರೆ, ಹಳ್ಳಿಗಳಲ್ಲಿ ಹೆಚ್ಚಾಗಿ ಕಾಣಬಹುದು. ಬಾಲ್ಯ ವಿವಾಹವೂ ಒಬ್ಬ ಮಹಿಳೆಗೆ ಮಾತ್ರವಲ್ಲದೆ ಸಮಾಜಕ್ಕೂ ಶಾಪವಾಗಿದೆ ಎಂದರು. ಬಾಲ ಕಾರ್ಮಿಕ ಪದ್ಧತಿಯು ಮಕ್ಕಳ ಸ್ವಾತಂತ್ರ್ಯ ಕಿತ್ತುಕೊಂಡು ಅವರನ್ನು ಗುಲಾಮರಾಗುವಂತೆ ಮಾಡುತ್ತದೆ. ಇದಕ್ಕೆ ಮೂಲ ಗುರಿಯಾಗುವುದು ಮಹಿಳೆಯರು ಹಾಗೂ ಮಕ್ಕಳು ಎಂದರು. ಮಕ್ಕಳು ಸಮಾಜ ಆಸ್ತಿ ಆಗಬೇಕು. ಅದಕ್ಕಾಗಿ ಅವರಿಗೆ ಅಂಗನವಾಡಿಯಿಂದಲೇ ಉತ್ತಮ ಶಿಕ್ಷಣ ಸಿಗುವಂತೆ ಮಾಡಬೇಕು. ಇಂದಿನ ಮಕ್ಕಳು ನಾಳೆಯ ಪ್ರಜೆಗಳು ಎನ್ನುವುದಕ್ಕಿಂತ ಇಂದಿನ ಮಕ್ಕಳು ಇಂದಿನ ಪ್ರಜೆಗಳೇ ಎಂದು ಭಾವಿಸುವುದು ಸೂಕ್ತ. ಇದಕ್ಕಾಗಿ ಅವರ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವುದು ಅಗತ್ಯ ಎಂದು ಹೇಳಿದರು.…
ಆಕೆ ಆರೋಗ್ಯವಾಗಿದ್ದು, ಇನ್ನೊಬ್ಬರ ಆರೋಗ್ಯ ವಿಚಾರಿಸುವ ವೈದ್ಯೆಯಾಗಿದ್ದವರು. ದಂತ ವೈದ್ಯಕೀಯ ಪದವಿ ಮುಗಿಸಿ ಇನ್ನೇನು ಕೆಲಸಕ್ಕೆ ಸೇರಬೇಕು ಅಂತ ಒಂದು ಕ್ಲಿನಿಕ್ಗೆ ಜಾಯಿನ್ ಆಗಿದ್ದಾರೆ. ಆದ್ರೆ ದುರಾದೃಷ್ಟ ಅಂದ್ರೆ ಕೆಲಸಕ್ಕೆ ಜಾಯಿನ್ ಆಗುವ ದಿನವೇ ಆಕೆ ಇಹಲೋಕ ತ್ಯಜಿಸಿದ್ದಾರೆ. ಉಳ್ಳಾಲ ತಾಲೂಕಿನ ನರಿಂಗಾನ ಗ್ರಾಮದ ಆಳ್ವರಬೆಟ್ಟು ನಿವಾಸಿ 24 ವರ್ಷದ ಸ್ವಾತಿ ಶೆಟ್ಟಿ ಇಹಲೋಕ ತ್ಯಜಿಸಿದ ವೈದ್ಯೆಯಾಗಿದ್ದಾರೆ. ಉಳ್ಳಾಲ ತಾಲೂಕಿನ ನರಿಂಗಾನ ಗ್ರಾಮದ ಆಳ್ವರಬೆಟ್ಟು ನಿವಾಸಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಮುಖಂಡ, ಶಾಂತಿಪಲ್ಕೆ ಶ್ರೀ ಮಹಾಮ್ಮಾಯ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಾಮಣ್ಣ ಶೆಟ್ಟಿ ಆಳ್ವರಬೆಟ್ಟು ಹಾಗೂ ಜ್ಯೋತಿ ಶೆಟ್ಟಿ ದಂಪತಿ ಪುತ್ರಿ ಇವರು. ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ ದಂತ ವೈದ್ಯಕೀಯ ಪದವಿ ಮುಗಿಸಿ ಮಂಗಳವಾರದಿಂದ (16-04-2024) ಪಾಂಡೇಶ್ವರದ ಕ್ಲಿನಿಕ್ ಒಂದರಲ್ಲಿ ಕೆಲಸಕ್ಕೆ ಜಾಯಿನ್ ಆಗುವವರಿದ್ದರು. ಹೀಗಾಗಿ ಸೋಮವಾರ (15-04-2024) ಸಂಜೆ ಪಾಂಡೇಶ್ವರದ ಪಿಜಿ ಬಂದು ಜಾಯಿನ್ ಆಗಿದ್ದರು. ಮರುದಿನ ಹೊಸ ಕೆಲಸಕ್ಕೆ ಹೋಗುವ ಕಾರಣ ಸಾಕಷ್ಟು ಎಕ್ಸೈಟ್…
ಆಳ್ವಾಸ್ ಕಾಲೇಜಿನಲ್ಲಿ ಸುಸ್ಥಿರ ಭವಿಷ್ಯಕ್ಕಾಗಿ ಜೈವಿಕ ಆವಿಷ್ಕಾರ ವಿಚಾರಸಂಕಿರಣ ಸಂಶೋಧನೆ: ಜ್ಞಾನ, ದೃಷ್ಟಿಕೋನ ಅವಶ್ಯ: ಬೋರ್ಕರ್
ವಿದ್ಯಾಗಿರಿ: ಸಂಶೋಧನೆಯಲ್ಲಿ ವ್ಯಕ್ತಿಗತ ನೆಲೆಗಳು ಮುಖ್ಯವಲ್ಲ. ಬದಲಾಗಿ ಜ್ಞಾನ ಮತ್ತು ದೃಷ್ಟಿಕೋನದ ಬಿತ್ತರ ಅವಶ್ಯ. ಆವಿಷ್ಕಾರ ಮತ್ತು ಮುಕ್ತತೆ ಜ್ಞಾನವನ್ನು ಹೆಚ್ಚಿಸುತ್ತದೆ ಎಂದು ಮಣಿಪಾಲದ ಮಾಹೆಯ ಕಸ್ತೂರ ಬಾ ವೈದ್ಯಕೀಯ ಕಾಲೇಜಿನ ವಿಜ್ಞಾನಿ ಡಾ.ಯಶವಂತಿ ಬೋರ್ಕರ್ ಹೇಳಿದರು. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸಹಯೋಗದಲ್ಲಿ ಆಳ್ವಾಸ್ ಕಾಲೇಜಿನ ಜೈವಿಕ ತಂತ್ರಜ್ಞಾನ ವಿಭಾಗವು ಹಳೇ ವಿದ್ಯಾರ್ಥಿಗಳ ಸಹಕಾರದಲ್ಲಿ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಹಮ್ಮಿಕೊಂಡ ‘ಸುಸ್ಥಿರ ಭವಿಷ್ಯಕ್ಕಾಗಿ ಜೈವಿಕ ಆವಿಷ್ಕಾರ’ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಅವರು ಶುಕ್ರವಾರ ಮಾತನಾಡಿದರು. ನಿರ್ದಿಷ್ಟವಾಗಿ ನಿರ್ಮಿತವಾಗಿರುವ ತಡೆಗಳನ್ನು ಮೀರಿ, ಅನುಭವದ ಜ್ಞಾನವನ್ನು ಪಡೆಯಬೇಕು. ಸಂಶೋಧನೆಯಲ್ಲಿ ತಾಳ್ಮೆ, ಒಪ್ಪಿಕೊಳ್ಳುವಿಕೆ, ಧ್ಯೇಯವನ್ನು ಹೊಂದುವುದು ಬಹುಮುಖ್ಯವಾಗುತ್ತದೆ ಎಂದರು. ಕರ್ನಾಟಕ ರಾಜ್ಯ ಮಾಲಿನ್ಯ ತಡೆ ಮಂಡಳಿಯ ಮಂಗಳೂರಿನ ಪರಿಸರ ನಿರೀಕ್ಷಕರಾದ ಡಾ. ಮಹೇಶ್ವರಿ ಸಿಂಗ್ ಮಾತನಾಡಿ, ಪ್ರಾಕೃತಿಕ ಸುಸ್ಥಿರತೆಯಲ್ಲಿ ಜೀವ ವೈವಿಧ್ಯತೆಯನ್ನು ಕಾಪಾಡಲು ಹಲವಾರು ವಿಧಾನ ಮತ್ತು ಸಲಕರಣೆಯನ್ನು ಬಳಸಬೇಕು. ಇತ್ತೀಚಿನ ದಿನಗಳಲ್ಲಿ ಜಾಗತಿಕ ತಾಪಮಾನ ಏರಿಕೆಯು ಜೀವ ವೈವಿಧ್ಯತೆ ಅಸಮತೋಲನೆಗೆ ಮುಖ್ಯ…
ನಮ್ಮ ದೇಶದಲ್ಲಿ ನ್ಯಾಯಾಲಯಗಳ ಸ್ಥಾಪನೆಯ ಪೂರ್ವದಲ್ಲೇ ತೌಳವ ನಾಡಿನಲ್ಲಿ ನೊಂದವರಿಗೆ ನ್ಯಾಯ ಕೊಡಲು ದೈವಗಳ ಧರ್ಮ ಪೀಠಗಳನ್ನು ಸ್ಥಾಪಿಸಲಾಯಿತು. ಅದು ರಾಜಾಡಳಿತದ ಕಾಲವಾಗಿತ್ತು. ರಾಜನ ಆಸ್ಥಾನದಲ್ಲೂ ವಾದಿ ಪ್ರತಿವಾದಿಗೆ ಸಮ್ಮತದ ತೀರ್ಮಾನ ಲಭಿಸದೆ ಇದ್ದಾಗ ಸ್ವತಃ ರಾಜನೇ ದೈವಗಳ ಧರ್ಮ ಸನ್ನಿಧಿಯಲ್ಲೇ ಪ್ರಮಾಣ ಮಾಡಲು ಆಜ್ಞಾಪಿಸುತ್ತಿದ್ದರು. ತೌಳವ ನೆಲದ ಆಧಾರ ಸ್ಥಂಭಗಳಂತೆ ನಾಲ್ಕು ದಿಕ್ಕುಗಳಲ್ಲಿ ನೆಲೆಯಾಗಿತ್ತು. ಆ ಧರ್ಮ ದೈವಗಳ ಮೂಲ ನೆಲೆ ದೈವ ಭಾಷೆಯಲ್ಲಿ ಹೇಳುವುದಾದರೆ “ಬಡಕಾಯಿ ಬಾರಕೂರು, ತೆನ್ಕಾಯಿ ಕಾನತ್ತೂರು, ಮುಡಾಯಿ ಕುಡುಮ, ಪಡ್ಡಾಯಿ ಕೊಂಡಾಣ ಅಂಚತ್ತ ಸತ್ಯ ಪ್ರಮಾಣ” ಎಂಬ ನುಡಿ ಇತ್ತು. ಕಳೆದ 50 ವರ್ಷಗಳವರೆಗೆ ನಮ್ಮ ಹಿರಿಯರು ಈ ನಾಲ್ಕು ಸ್ಥಳಗಳ ಹೆಸರು ಅಥವಾ ಅಲ್ಲಿ ನೆಲೆಯಾಗಿದ್ದ ದೈವಗಳ ಹೆಸರನ್ನು ಹೇಳಲು ಧೈರ್ಯ ಮಾಡುತ್ತಿರಲಿಲ್ಲ. ಅಪ್ಪಿ ತಪ್ಪಿ ಹೆಸರು ಹೇಳಿದರೆ ಕೈ ಬೆರಳನ್ನು ಕಚ್ಚಿ ಕ್ಷಮೆ ಯಾಚಿಸುವಷ್ಟು ಭಯ ಭಕ್ತಿ ಇತ್ತು. ಸ್ಥಳಗಳ ಬದಲಾಗಿ ತೆನ್ಕಾಯಿ ಎಂದರೆ ಕಾನತ್ತೂರು ಮತ್ತು ಪಡ್ಡಾಯಿ ಎಂದರೆ ಕೊಂಡಾಣ…
ಮುಂಬಯಿ:- ಮುಂಬಯಿ ವಿಶ್ವವಿದ್ಯಾಲಯ ಸ್ಥಾಪನೆಯಾಗಿ 165 ವರ್ಷವಾಗಿದೆ. ದೇಶದ ಹಳೆಯ ವಿಶ್ವವಿದ್ಯಾಲಯಗಳಲ್ಲಿ ನಮ್ಮ ಮುಂಬಯಿ ವಿಶ್ವವಿದ್ಯಾಲಯವೂ ಒಂದು. ಕನ್ನಡ ವಿಭಾಗ ಆರಂಭವಾಗಿ 45 ವರ್ಷಗಳು ಕಳೆದು ನಲ್ವತ್ತಾರರ ಹರೆಯಕ್ಕೆ ಪಾದಾರ್ಪಣೆ ಮಾಡುತ್ತಿದೆ. ಇಂತಹ ಒಂದು ಶುಭ ಸಂದರ್ಭದಲ್ಲಿ ನಮ್ಮ ವಿಭಾಗದಲ್ಲಿ ಆರು ಕೃತಿಗಳು ಲೋಕಾರ್ಪಣೆಗೊಳ್ಳುತ್ತಿರುವುದು ಸಂತೋಷದ ಸಂಗತಿ. ಕನ್ನಡವು ಕನ್ನಡವ ಕನ್ನಡಿಸುತ್ತಿರಬೇಕು ಎಂಬ ಬೇಂದ್ರೆಯವರ ಮಾತಿನಂತೆ ಕನ್ನಡ ವಿಭಾಗ ಅಹರ್ನಿಶಿ ಕೆಲಸ ಮಾಡುತ್ತಿದೆ. ನಮ್ಮಲ್ಲಿ ವಿಜ್ಞಾನ, ತಂತ್ರಜ್ಞಾನದ ಹಿನ್ನೆಲೆಯಿಂದ ಬಂದ ವಿದ್ಯಾರ್ಥಿಗಳು ಕನ್ನಡದಲ್ಲಿ ಹೆಚ್ಚಿನ ಅಧ್ಯಯನದಲ್ಲಿ ನಿರತರಾಗಿರುವುದು ದಾಖಲೆಯೇ ಸರಿ. ಕರ್ನಾಟಕದ ಯಾವ ವಿಶ್ವವಿದ್ಯಾಲಯದಲ್ಲಿಯೂ ಇಂತಹ ಅವಕಾಶಗಳು ದೊರೆಯುತ್ತಿಲ್ಲ. ಸಾಹಿತ್ಯವಲಯವಾಗಿ ಮುಂಬಯಿ ಬೆಳೆಯುತ್ತಿದೆ. ಕನ್ನಡ ವಿಭಾಗದ ಕೃತಿಗಳ ಸಂಖ್ಯೆ ಶತಕವನ್ನು ದಾಟುವ ಹಂತದಲ್ಲಿದೆ. ತಿಳುವಳಿಕೆಗೆ ಬೇಕಾದ ಪರಿಪ್ರೇಕ್ಷೆಯನ್ನು ಕಟ್ಟಿಕೊಡುವುದು ಕನ್ನಡ ವಿಭಾಗದ ಮುಖ್ಯ ಕೆಲಸ ಎಂದು ನಾವು ಭಾವಿಸಿದ್ದೇವೆ. ನಮ್ಮ ವಿದ್ಯಾರ್ಥಿಗಳು ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ. ಸವಿತಾ ಅರುಣ್ ಶೆಟ್ಟಿ ಅವರು ಪ್ರತಿಭಾವಂತ ವಿದ್ಯಾರ್ಥಿಯಾಗಿ ವಿಶ್ವವಿದ್ಯಾಲಯದ ಬಂಗಾರದ ಪದಕದೊಂದಿಗೆ…
ವಿದ್ಯಾಗಿರಿ: ಬದುಕಿದ ಮೇಲೆ ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು. ಹುಟ್ಟಿದರೂ- ಸತ್ತರೂ ಗೊತ್ತಾಗದ ಸೆಗಣಿಯ ಹುಳುವಿನಿಂತೆ ನಮ್ಮ ಬದುಕು ಆಗಬಾರದು ಬೆಂಗಳೂರಿನ ಸಾಧನಾ ಕೋಚಿಂಗ್ ಸೆಂಟರ್- ಐಎಎಸ್ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ನಿರ್ದೇಶಕಿ ಡಾ. ಜ್ಯೋತಿ ಹೇಳಿದರು. ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಬೆಂಗಳೂರಿನ ಸಾಧನಾ ಕೋಚಿಂಗ್ ಸೆಂಟರ್ ವತಿಯಿಂದ ಗುರುವಾರ ನಡೆದ ಯುಪಿ ಎಸ್ಸಿ/ ಕೆಪಿಎಸ್ಸಿ ನಾಗರಿಕ ಸೇವೆಗಳ ಪರೀಕ್ಷೆಗಳಿಗೆ ತರಬೇತಿಯ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ‘ನಾವು ಐತಿಹಾಸಿಕ ಹೆಜ್ಜೆ ಇಡಲು ಬಯಸಿದ್ದೇವೆ. ಕೊಟ್ಟ ನಂಬಿಕೆ, ಇಟ್ಟ ಜವಾಬ್ದಾರಿಯನ್ನು ಸಾಧನಾ ಸಂಸ್ಥೆ ಉಳಿಸಿಕೊಂಡು ಬಂದಿದೆ’ ಎಂದರು. ‘ಪ್ರತಿಯೊಂದು ಪರೀಕ್ಷೆಗಳಿಗೂ ಕಷ್ಟ ಪಡಲೇಬೇಕು. ಐಎಎಸ್ -ಐಪಿಎಸ್ ಸುಲಭದ ಮಾತಲ್ಲ. ಪ್ರತಿಯೊಂದು ವಿಷಯ, ಹಲವಾರು ಹೊಸ ಮಾಹಿತಿಗಳನ್ನು ಅಧ್ಯಯನ ಮಾಡಬೇಕು. ವಿದ್ಯಾರ್ಥಿಗಳು ಬುದ್ಧಿವಂತರಾಗಿರುವಾಗ, ಶಿಕ್ಷಕರು ಅದಕ್ಕಿಂತ ಹೆಚ್ಚಿನ ಬುದ್ಧಿವಂತಿಕೆಯನ್ನು ಹೊಂದಿರಬೇಕು. ಸಾಧನೆ ಮಾಡುವ ಉದ್ದೇಶ ಇದ್ದಾಗ, ತರಬೇತಿ ಸಾರ್ಥಕತೆ ಪಡೆಯುತ್ತದೆ ಎಂದರು. ಪರೀಕ್ಷೆ ತೇರ್ಗಡೆ ಹೊಂದಿದರೆ ಉನ್ನತ ಅಧಿಕಾರಿಗಳ ಸಾಲಿನಲ್ಲಿ…
ವಿದ್ಯಾಗಿರಿ: ಸ್ವಯಂ ಜಾಗೃತಿ ಹಾಗೂ ಸ್ವಯಂ ವಿಶ್ಲೇಷಣೆಯಿಂದ ತನ್ನನ್ನು ತಾನು ಅರಿತುಕೊಳ್ಳಲು ಸಾಧ್ಯ. ನಮ್ಮ ಶಾಂತ ಮನಸ್ಸನ್ನೇ ನಿಗ್ರಹಿಸಿಕೊಂಡರೆ, ಮಾನಸಿಕ ಸಮಸ್ಯೆ ಉಲ್ಬಣಿಸಲು ಅವಕಾಶವಿಲ್ಲ ಎಂದು ಬೆಂಗಳೂರಿನ ಮನೋಶಾಸ್ತ್ರಜ್ಞ ನವೀಣ್ ಎಲ್ಲಂಗಳ ಹೇಳಿದರು. ಮೂಡುಬಿದಿರೆ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಪ್ರೆಸ್ ಕ್ಲಬ್ ಮೂಡುಬಿದರೆ ಸಹಯೋಗದಲ್ಲಿ ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದಲ್ಲಿ ಗುರುವಾರ ಹಮ್ಮಿಕೊಂಡ ‘ದೈನಂದಿನ ಜೀವನದಲ್ಲಿ ಮನೋವಿಜ್ಞಾನ’’ ವಿಶೇಷ ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಮ್ಮ ಮನಸ್ಸಿನ ಬಗ್ಗೆ ನಾವು ತಿಳಿದುಕೊಳ್ಳಲು ಯತ್ನಿಸಬೇಕು. ಮನಸ್ಸನ್ನು ಬುದ್ಧಿ ನಿಯಂತ್ರಿಸಬೇಕು. ಚಿಂತೆ ಬೇಡ, ಚಿಂತನೆ ಇರಲಿ ಎಂದರು. ನಮ್ಮ ಆಲೋಚನೆಗೆ ಭಾವನೆ ಸೇರಿದಾಗ ನಂಬಿಕೆಯು ಸೃಜಿಸುತ್ತದೆ. ಜಾಗೃತ ಮನಸ್ಸು ನಮ್ಮನ್ನು ಯಶಸ್ಸಿನೆಡೆಗೆ ಕರೆದೊಯ್ಯುತ್ತದೆ. ಸ್ವಯಂ ಉನ್ನತೀಕರಣ ಬಹುಮುಖ್ಯ ಎಂದರು. ಯಾವಾಗಲೂ ಧನಾತ್ಮಕ ಮತ್ತು ವರ್ತಮಾನದ ಬಗ್ಗೆ ಯೋಚಿಸಿ. ಭೂತಕ್ಕೆ ಚಿಂತಿಸುವ, ಭವಿಷ್ಯಕ್ಕೆ ಭಯ ಪಡುವ ಅಗತ್ಯವಿಲ್ಲ. ನಿಮ್ಮ ಆತ್ಮಬಲಸದೃಢವಾಗಿರಲಿ ಎಂದರು. ಪ್ರಾರ್ಥನೆ ಚರ್ವಿತ ಚರ್ವಣ ಆಗಬಾರದರು. ಪ್ರಾರ್ಥನೆ…