ಆಂಧ್ರ ಪ್ರದೇಶದ ಆಚಾರ್ಯ ನಾಗಾರ್ಜುನ ಯೂನಿವರ್ಸಿಟಿಯಲ್ಲಿ ನಡೆದ ದಕ್ಷಿಣ ವಲಯ ಅಂತರ್ ವಿಶ್ವವಿದ್ಯಾಲಯ ವೇಯ್ಟ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಉಜಿರೆಯ ವಿದ್ಯಾರ್ಥಿ ಮಂಗಳೂರು ಯೂನಿವರ್ಸಿಟಿ ತಂಡವನ್ನು ಪ್ರತಿನಿಧಿಸಿ 81 ಕೆಜಿ ವಿಭಾಗದಲ್ಲಿ ಒಟ್ಟು 301 ಕೆಜಿ ಭಾರ ಎತ್ತುವ ಮೂಲಕ ಚಿನ್ನದ ಪದಕ ಪಡೆದಿದ್ದಾರೆ ಹಾಗೂ ಜನವರಿಯಲ್ಲಿ ಪಂಜಾಬ್ ನಲ್ಲಿ ನಡೆಯುವ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ವೇಯ್ಟ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ಮಂಗಳೂರು ಯೂನಿವರ್ಸಿಟಿ ತಂಡವನ್ನು ಪ್ರತಿನಿಧಿಸಲಿದ್ದಾರೆ.
ಇವರು ಇರ್ದೆಯ ರತ್ನಾಕರ ರೈ ಮತ್ತು ಶಶಿಕಲಾ ದಂಪತಿಗಳ ಪುತ್ರ. ಇವರಿಗೆ ರಮೇಶ್ ಕ್ರೀಡಾ ನಿರ್ದೇಶಕರು ಮತ್ತು ಸಂತೋಷ್ ರವರು ತರಬೇತಿ ನೀಡುತ್ತಿದ್ದಾರೆ.