ಕಡಬ ತಾಲೂಕು ಬಂಟರ ಸಂಘ ರಚನೆ ಪ್ರಯುಕ್ತ ಸವಣೂರು ವಲಯ ಬಂಟ ಬಂಧುಗಳ ಸಮಾಲೋಚನಾ ಸಭೆ ಕಡಬ ತಾಲೂಕು ಬಂಟರ ಸಂಘದ ಸಂಚಾಲನಾ ಸಮಿತಿ ಅಧ್ಯಕ್ಷರಾದ ಎನ್ ಚಂದ್ರಹಾಸ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಡಿಸೆಂಬರ್ 1 ರಂದು ಆದಿತ್ಯವಾರ ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆ ಸಭಾಂಗಣದಲ್ಲಿ ಜರುಗಿತು. ಪ್ರಮುಖರಾದ ಕೃಷ್ಣ ಶೆಟ್ಟಿ ಕಡಬರವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂಧರ್ಭದಲ್ಲಿ ಅತ್ಯಡ್ಕ ನಾರಾಯಣ ಶೆಟ್ಟಿ, ಎಬಿ ಮನೋಹರ ರೈ, ಶಶಿಕಿರಣ್ ರೈ ಕುಂಜತ್ತೋಡಿ, ಪಿಡಿ ಕೃಷ್ಣ ಕುಮಾರ್ ರೈ ದೇವಸ್ಯ, ಜಯಸೂರ್ಯ ರೈ ಮಾದೋಡಿ, ಉದಯ ರೈ ಮಾದೋಡಿ, ಹರೀಶ್ಚಂದ್ರ ರೈ ಕಾಸ್ಪಾಡಿಗುತ್ತು, ಜತ್ತಪ್ಪ ರೈ ಮಡಪ್ಪಾಡಿ, ಅಮರನಾಥ ರೈ, ನಾಗೇಶ್ ರೈ ಮಾಳ, ಧರ್ಮಪಾಲ ರೈ ಪಿಜಕ್ಕಳ, ವಸಂತ ರೈ ಕಾರ್ಕಳ, ಸುನಿಲ್ ರೈ ಬಲ್ಕಾಡಿ, ಸುರೇಶ್ ರೈ ಸೂಡಿಮುಳ್ಳು, ರಾಕೇಶ್ ರೈ ಕೆಡೆಂಜಿ, ಪ್ರಕಾಶ್ ರೈ ಸಾರಕರೆ, ಮತ್ತಿತರ ಸಮಾಜ ಬಂಧುಗಳು ಭಾಗವಹಿಸಿ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು. ಸಮಾಜ ಬಂಧುಗಳ ಮನೆ ಸಂಪರ್ಕ ಮಾಡಿ ಮಾಹಿತಿ ಸಂಗ್ರಹಿಸುವ ಯೋಜನೆ ಸೇರಿದಂತೆ ಮುಂದಿನ ಚಟುವಟಿಕೆಗಳ ಬಗ್ಗೆ ನಿರ್ಣಯಗಳನ್ನು ಕೈಗೊಳ್ಳಲಾಯಿತು.