Author: admin
ಮಂಗಳೂರು ತಾಲೂಕಿನ ಎಕ್ಕಾರು ಎಕ್ಕಾರು ಬಂಟರ ಸಂಘದ ಎಕ್ಕಾರು ಸುಜಾತ ಶೆಟ್ಟಿ ಹಾಗೂ ಕನ್ಯಾನ ಸದಾಶಿವ ಶೆಟ್ಟಿ ಬಯಲು ರಂಗ ಮೈದಾನ ಉದ್ಘಾಟನೆ, ಗೌರವಾರ್ಪಣೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ನವೆಂಬರ್ 26 ಆದಿತ್ಯವಾರದಂದು ಎಕ್ಕಾರು ಬಂಟರ ಭವನದ ನಡ್ಯೋಡಿ ಗುತ್ತು ಶಾರದಾ ಭಾಸ್ಕರ್ ಶೆಟ್ಟಿ ಸಭಾಂಗಣದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಪೂರ್ವಾಹ್ನ ಗಂಟೆ 9 ರಿಂದ ಸ್ಥಳೀಯ ಬಂಟ ಕಲಾ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ “ಭಾರತ ದರ್ಶನ” ನಡೆಯಲಿದೆ. ಪೂರ್ವಾಹ್ನ ಗಂಟೆ 9.30 ರಿಂದ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಸಮಾರಂಭದ ಅಧ್ಯಕ್ಷತೆಯನ್ನು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ವಹಿಸಲಿದ್ದಾರೆ. ಕಾರ್ಯಕ್ರಮವನ್ನು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶೀಯ ಮೊಕ್ತೇಸರ ಕೊಡೆತ್ತೂರು ಗುತ್ತು ಸನತ್ ಕುಮಾರ್ ಶೆಟ್ಟಿ ಉದ್ಘಾಟಿಸಲಿದ್ದಾರೆ. ಬಯಲು ರಂಗ ಮೈದಾನವನ್ನು ಹೇರಂಭ ಇಂಡಸ್ಟ್ರೀಸ್ ಲಿಮಿಟೆಡ್ ಇದರ ಆಡಳಿತ ನಿರ್ದೇಶಕ ಕನ್ಯಾನ ಸದಾಶಿವ ಶೆಟ್ಟಿ ಲೋಕಾರ್ಪಣೆ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಮಹಾನ್ ಸಾಧಕ,…
ಪ್ರಗತಿ ಗ್ರಾಫಿಕ್ಸ್ ಮತ್ತು ಶ್ರೀನಿವಾಸ ಪುಸ್ತಕ ಪ್ರಕಾಶನ ಅರ್ಪಿಸುವ ಪರಂಪರಾ ಕಲ್ಚರಲ್ ಫೌಂಡೇಷನ್ ಅವರ ಸಹಯೋಗದಲ್ಲಿ ಸಾಹಿತಿ ರಾಜೇಂದ್ರ ಬಿ. ಶೆಟ್ಟಿಯವರ ಅಮ್ಮ ಹಚ್ಚಿದ ದೀಪ, ಕಥೆಯೊಂದಿಗೆ ಗಣಿತ, ದೆವ್ವಗಳ ನಾಡಿನಲ್ಲಿ ಎಂಬ ಮೂರು ಪುಸ್ತಕಗಳು ಲೋಕಾರ್ಪಣೆಗೊಂಡಿತು. ಪ್ರಾಸ್ತಾವಿಕ ಮಾತುಗಳನ್ನಾಡಿದ ಡಾ. ಎಂ. ಭೈರೇಗೌಡ ಅವರು, ಸೂಜಿಗಲ್ಲಿನ ವ್ಯಕ್ತಿತ್ವ ಇರುವವರು ರಾಜೇಂದ್ರ ಬಿ. ಶೆಟ್ಟಿ. ಅಧ್ಯಯನ ಮತ್ತು ಆಸಕ್ತಿಗಳಿಗೆ ಸಂಬಂಧ ಇಲ್ಲ ಎನ್ನುವುದನ್ನು ಸಾಬೀತುಪಡಿಸುವ ಕೆಲಸ ಇವರು ಮಾಡಿದ್ದಾರೆ ಎಂದರು. ಹಾಗೆಯೇ ಸದ್ಯದ ಪತ್ರಿಕೋದ್ಯಮದ ಸ್ಥಿತಿಗತಿ ಬಗೆಗೂ ಸಂತಾಪ ವ್ಯಕ್ತಪಡಿಸಿದರು. ಅಮ್ಮ ಹಚ್ಚಿದ ದೀಪ ಪುಸ್ತಕ ಪರಿಚಯವನ್ನು ಮಾಡುತ್ತಾ ಡಾ. ನಾ. ದಾಮೋದರ ಶೆಟ್ಟಿ, ಕಥೆಗಾರರು ಸಾಮಾನ್ಯವಾಗಿ ತಮ್ಮ ಕಥೆಗಳಿಗೆ ಒಂದೊಳ್ಳೆ ಆದಿ, ಮಧ್ಯ, ಹಾಗೂ ಒಂದೊಳ್ಳೆ ಮುಕ್ತಾಯ ಇರುವಂತಹ ಕಥಗಳನ್ನು ಬರೆಯುತ್ತಾರೆ ಆದರೆ ಇವೆಲ್ಲಕ್ಕಿಂತ ಭಿನ್ನವಾಗಿ ಬರೆಯುವವರು ರಾಜೇಂದ್ರ ಅವರು, ಹಾಗೆ ಈ ಕೃತಿಯಲ್ಲೂ ಇವರು ಯಾವುದೇ ಅತಿಶಯೋಕ್ತಿ ಇಲ್ಲದೆ ಅತ್ಯಂತ ಸೂಕ್ಷ್ಮವಾಗಿ ಚಿತ್ರಿಸಿದ್ದಾರೆ. ಈ ಸಂಕಲನದಲ್ಲಿ ಬರುವಂತಹ ಒಂದು…
ವಿದ್ಯಾಗಿರಿ: ಸಂದರ್ಶನದ ಸಂದರ್ಭದಲ್ಲಿ ಸಂವಹನ ಮಾತ್ರವಲ್ಲ, ಜ್ಞಾನದ ಜೊತೆ ಹಾವಭಾವ, ನಡವಳಿಕೆ, ಕೌಶಲಗಳೂ ನಮ್ಮನ್ನು ನಿರೂಪಿಸುತ್ತವೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಹೇಳಿದರು. ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಬುಧವಾರ ರಾಜ್ಯ ಕೌಶಲ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಉದ್ಯಮಶೀಲತಾ ಅಭಿವೃದ್ಧಿ ಘಟಕ ಹಾಗೂ ರೂಬಿಕಾನ್ ಸ್ಕಿಲ್ ಡೆವೆಲಪ್‍ಮೆಂಟ್ ಪ್ರೈ.ಲಿ. ಸಹಯೋಗದಲ್ಲಿ ಆಳ್ವಾಸ್ ಕಾಲೇಜು ಉದ್ಯಮಶೀಲತಾ ಅಭಿವೃದ್ಧಿ ಘಟಕ, ದ್ವಿತೀಯ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ನಾಲ್ಕು ದಿನಗಳ ‘ಜೀವನ ಕೌಶಲ ತರಬೇತಿ ಕಾರ್ಯಕ್ರಮ’ದಲ್ಲಿ ಅವರು ಮಾತನಾಡಿದರು. ನಿಮ್ಮ ಅರ್ಹತೆಯ ಜೊತೆಗೆ ನೀವು ಉದ್ಯೋಗ ನಿರ್ವಹಿಸಲು ಇಚ್ಛಿಸುವ ಉದ್ದೇಶ, ಉತ್ಸಾಹವೂ ಬಹುಮುಖ್ಯ. ನಿಮ್ಮ ಬಯೋಡೆಟಾ (ರೆಸ್ಯೂಮ್) ಕೇವಲ ಪದವಿಗಳನ್ನು ಮಾತ್ರ ಹೊಂದಿರಬಾರದು. ಅದರೊಂದಿಗೆ ನಿಮ್ಮ ಸಾಮಥ್ರ್ಯ, ಸಂವಹನ, ಕೌಶಲಗಳು ಇರಬೇಕು. ಆಗ ನಿಮ್ಮ ಮೌಲ್ಯ ಹೆಚ್ಚುತ್ತದೆ ಎಂದರು. ನಮ್ಮೊಳಗಿನ ಶಕ್ತಿಯನ್ನು ನಾವು ಮೊದಲು ಅರಿಯಬೇಕು. ಸ್ವಯಂ ಸಾಮಥ್ರ್ಯ ಆಧಾರದಲ್ಲಿ ಮುನ್ನಡೆಯಬೇಕು. ಆಗ ಯಶಸ್ಸು ಸಾಧ್ಯ…
ವಿದ್ಯಾಗಿರಿ (ಮೂಡುಬಿದಿರೆ): ಮೂಲವ್ಯಾಧಿ ರೋಗದ ಬಗ್ಗೆ ಅರಿವು ಅತ್ಯಗತ್ಯ. ಈ ಬಗ್ಗೆ ಎಚ್ಚರ ವಹಿಸಿದರೆ, ಆರಂಭಿಕ ಹಂತದಲ್ಲೇ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು ಎಂದು ಆಳ್ವಾಸ್ ಆರ್ಯವೇದ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ. ಸಜಿತ್ ಎಂ. ಹೇಳಿದರು. ವಿಶ್ವ ಮೂಲವ್ಯಾಧಿಯ ದಿನದ ಅಂಗವಾಗಿ ಆಳ್ವಾಸ್ ಆಯುರ್ವೇದ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಶಲ್ಯತಂತ್ರ ವಿಭಾಗ ಹಾಗೂ ಹಿಮಾಲಯ ವೆಲ್‍ನೆಸ್ ಕಂಪನಿ ಸಹಯೋಗದಲ್ಲಿ ನಡೆದ ಉಚಿತ ಮೂಲವ್ಯಾಧಿ ಚಿಕಿತ್ಸಾ ಶಿಬಿರದಲ್ಲಿ ಅವರು ಮಾತನಾಡಿದರು. ಮೂಲವ್ಯಾಧಿ ರೋಗದ ಉಗಮಕ್ಕೆ ಕಾರಣಗಳನ್ನು ತಿಳಿಸಿದ ಅವರು, ಲಕ್ಷಣಗಳನ್ನು ವಿವರಿಸಿದರು. ಹಿಮಾಲಯ ವೆಲ್‍ನೆಸ್ ಕಂಪೆನಿಯ ವ್ಯವಸ್ಥಾಪಕ ಅಲೋಕ್ ಕುಮಾರ್ ಹಾಗೂ ಕಾಲೇಜಿನ ವೈದ್ಯಕೀಯ ಅಧೀಕ್ಷಕ ಡಾ.ಮಂಜುನಾಥ ಭಟ್ ಉದ್ಘಾಟಿಸಿದರು. ಡಾ ಶಂಕರ್ ಪ್ರಸಾದ್ ವಂದಿಸಿದರು.
ದೇಶದಲ್ಲಿ ಉಳಿತಾಯಕ್ಕೆ ಬದಲಾಗಿ ವೈಯಕ್ತಿಕ ಸಾಲ ಪಡೆಯುತ್ತಿರುವ ಪ್ರಮಾಣ ಗಣನೀಯವಾಗಿ ಏರುತ್ತಿದೆ. ಇದು ಸುಸ್ಥಿರ ಆರ್ಥಿಕ ಬೆಳವಣಿಗೆಯ ನಿಟ್ಟಿನಲ್ಲಿ ಉತ್ತಮ ಬೆಳವಣಿಗೆಯಲ್ಲ. ಇದಕ್ಕೆ ನಿಯಂತ್ರಣ ಹೇರಬೇಕು ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಮತ್ತು ಕೆಲವು ಆರ್ಥಿಕ ತಜ್ಞರು ಹೇಳಿದರೂ ಅದನ್ನು ಯಾರೂ ಗಂಭೀರವಾಗಿ ಪರಿಗಣಿಸಿರಲಿಲ್ಲ. ಇದೀಗ ಆರ್‌ಬಿಐಯೇ ಅಂಗಳಕ್ಕೆ ಇಳಿದಿದೆ. ಅತಿಯಾದ ಸಾಲ ನೀಡುವಿಕೆಗೆ ಅಂಕುಶ ಹಾಕಿದೆ. ಇದರಿಂದ ಸಾಮಾನ್ಯ ಸಾಲಗಾರರಿಗೆ ಏನಾಗಲಿದೆ. ಇದುವರೆಗೆ ಸುಲಭದಲ್ಲಿ ಸಿಗುತ್ತಿದ್ದ ವೈಯಕ್ತಿಕ ಸಾಲ ಇನ್ನು ಆ ರೀತಿ ಸಿಗುವುದಿಲ್ಲವೇ ಎಂಬ ಪ್ರಶ್ನೆ ಜನಸಾಮಾನ್ಯರದ್ದು. ಮೊದಲನೆಯದಾಗಿ ಆರ್‌ಬಿಐ ಇಂತಹ ಒಂದು ಕ್ರಮಕ್ಕೆ ಮುಂದಾಗಿದ್ದಾದರೂ ಏಕೆ ಎಂಬುದಾಗಿ ವಿಶ್ಲೇಷಿಸುವು ದಾದರೆ, ದೇಶದಲ್ಲಿ ಬ್ಯಾಂಕ್‌ಗಳು ಮತ್ತು ಬ್ಯಾಂಕೇತರ ಸಂಸ್ಥೆಗಳು (ಎನ್‌ಬಿಎಫ್ಸಿ) ಬೇಕಾಬಿಟ್ಟಿಯಾಗಿ ಸಾಲ ನೀಡಿರುವುದು. ಇದು ಅತಿಯಾದರೆ ಒಂದಲ್ಲ ಒಂದು ರೀತಿಯಲ್ಲಿ ಅಪಾಯಕ್ಕೆ ದಾರಿಯಾಗುತ್ತದೆ. ಸಾಲ ನೀಡುವ ಇಂತಹ ಸಂಸ್ಥೆಗಳು ಉಳಿಯುವುದು ಮತ್ತು ಒಟ್ಟಾರೆ ದೇಶದ ಹಣಕಾಸು ಸಂಸ್ಥೆಗಳು ಸುಸ್ಥಿರವಾಗಿರಬೇಕಾದರೆ ಇಂತಹ ನಿಯಮ ಅನಿವಾರ್ಯ ಎಂಬುದು ಆರ್‌ಬಿಐ…
ಬಜಪೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಮೋನಪ್ಪ ಶೆಟ್ಟಿ ಎಕ್ಕಾರು ಅವರಿಗೆ ಸಹಕಾರ ಇಲಾಖೆ ನೀಡುವ ರಾಜ್ಯಮಟ್ಟದ “ಸಹಕಾರ ರತ್ನ” ಪ್ರಶಸ್ತಿಯನ್ನು ವಿಜಯಪುರದಲ್ಲಿ ನಡೆದ ರಾಜ್ಯ ಮಟ್ಟದ ಸಹಕಾರಿ ಸಪ್ತಾಹ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರದಾನ ಮಾಡಿದರು. ಮಂಗಳೂರು ತಾಲೂಕು ವ್ಯವಸಾಯ ಉತ್ಪನ್ನ ಮಾರಾಟ ಸಹಕಾರ ಸಂಘದ ಅಧ್ಯಕ್ಷರೂ ಆಗಿರುವ ಮೋನಪ್ಪ ಶೆಟ್ಟಿ ಅವರ 4 ದಶಕಗಳಿಗೂ ಹೆಚ್ಚು ಅವಧಿಯ ಸಹಕಾರ ಕ್ಷೇತ್ರದಲ್ಲಿನ ಸೇವೆ ಹಾಗೂ ಬಜಪೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್‌ನ ಸಮಗ್ರ ಪ್ರಗತಿಯನ್ನು ಪರಿಗಣಿಸಿ ರಾಜ್ಯ ಸರಕಾರ “ಸಹಕಾರ ರತ್ನ” ಪ್ರಶಸ್ತಿ ನೀಡಿದೆ. ಸಹಕಾರ ಸಚಿವ ಎನ್. ರಾಜಣ್ಣ, ಜವುಳಿ, ಕಬ್ಬು, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರು ಹಾಗೂ ಹಿರಿಯ ಸಹಕಾರಿ ಮುಖಂಡ ಶಿವಾನಂದ ಎಸ್, ಅಬಕಾರಿ ಸಚಿವ ತಿಮ್ಮಾಪುರ್, ರಾಜ್ಯ ಸಹಕಾರಿ ಫೆಡರೇಶನ್ ಅಧ್ಯಕ್ಷ ಮಾಜಿ ಸಚಿವ ಜಿ.ಟಿ. ದೇವೇಗೌಡ, ಸಂಸದ ರಮೇಶ್ ಜಿಗಜಿಣಗಿ, ಸಂಸದ ಪಿ.ಸಿ. ಗದ್ದಿಗೌಡರ ಉಪಸ್ಥಿತರಿದ್ದರು
ಬಂಟ್ಸ್ ಫ್ಯಾಮಿಲಿ ಯು.ಎ.ಇ ವತಿಯಿಂದ ಇತ್ತೀಚೆಗೆ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಭಕ್ತಿ ಸಡಗರದಿಂದ ಜರಗಿತು. ಯು.ಎ.ಇ.ಯ ಎಲ್ಲಾ ರಾಜ್ಯದ ಬಂಟ ಬಾಂಧವರು ಅಲ್ಲದೇ ಇತರ ಸಮಾಜದ ಸಾವಿರಾರು ಭಕ್ತರು ಪೂಜೆಗೆ ಆಗಮಿಸಿ ಶ್ರೀ ಸತ್ಯನಾರಾಯಣ ದೇವರ ಕೃಪೆಗೆ ಪಾತ್ರರಾದರು. ದುಬಾಯಿಯ ಅಲ್ ಗುಸೈಸ್ ನ ಇಂಡಿಯನ್ ಅಕಾಡೆಮಿ ಸ್ಕೂಲ್ ನ ಸಭಾಂಗಣದಲ್ಲಿ ಬೆಳಿಗ್ಗೆ ಒಂಬತ್ತರಿಂದ ಮಧ್ಯಾಹ್ನದವರೆಗೆ ಪುರೋಹಿತರಾದ ರಘು ಭಟ್ಟರ ಪೌರೋಹಿತ್ಯದಲ್ಲಿ ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು. ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯ ಪ್ರತಿನಿಧಿಯಾಗಿ ಧ್ರುವ ಶೆಟ್ಟಿ ಮತ್ತು ಶ್ರೀಮತಿ ದೀಕ್ಷಾ ಶೆಟ್ಟಿ ದಂಪತಿ ಹಾಗೂ ಪುರಂದರ ಶೆಟ್ಟಿ ಮತ್ತು ಶ್ರೀಮತಿ ಅಶ್ವಿನಿ ಶೆಟ್ಟಿ ದಂಪತಿಗಳು ಕುಳಿತುಕೊಂಡಿದ್ದರು. ಶ್ರೀ ರಾಜರಾಜೇಶ್ವರಿ ಭಜನಾ ಮಂಡಳಿ ದುಬೈ ವತಿಯಿಂದ ಭಕ್ತಿ ಭಜನೆ ಹಾಗೂ ಯು.ಎ.ಇ. ಬಂಟ್ಸ್ ಸದಸ್ಯ ಸದಸ್ಯೆಯರಿಂದ ನೃತ್ಯ ಭಜನೆ ಜರಗಿತು. ಯುಎಇಯ ಬಂಟ್ಸ್ ನ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿಯವರು ಪೂಜೆಗೆ ಆಗಮಿಸಿದ ಎಲ್ಲರನ್ನೂ ಸ್ವಾಗತಿಸಿದರು. ಪೂಜೆಗೆ ಸಹಕಾರ ನೀಡಿದ ಶ್ರೀ…
ಜಾಗತಿಕ ಬಂಟರ ಸಂಘಗಳ ಒಕ್ಕೂಟದ(ರಿ.) ಮಂಗಳೂರು ಇದರ ಅಧ್ಯಕ್ಷರಾದ ಶ್ರೀ ಐಕಳ ಹರೀಶ್ ಶೆಟ್ಟಿಯವರು ಸಮಾಜ ಕಲ್ಯಾಣ ಯೋಜನೆಯಡಿ ಬಳ್ಕುಂಜೆ ನಿವಾಸಿ ಗುಲಾಬಿಯವರು ಆರ್ಥಿಕವಾಗಿ ತುಂಬಾ ಕಷ್ಟದಲ್ಲಿದ್ದು ಅವರಿಗೆ ಮನೆ ನಿರ್ಮಾಣಕ್ಕೆ ಮಂಜೂರಾದ ಸಹಾಯ ಧನದ ಚೆಕ್ಕನ್ನು ಗುಲಾಬಿಯವರಿಗೆ ಮನೆಯ ಗೃಹಪ್ರವೇಶದ ಸಂದರ್ಭದಲ್ಲಿ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಒಕ್ಕೂಟದ ಉಪಾಧ್ಯಕ್ಷ ಶ್ರೀ ಕರ್ನಿರೆ ವಿಶ್ವನಾಥ್ ಶೆಟ್ಟಿಯವರು ಉಪಸ್ಥಿತರಿದ್ದರು.
ಮೂಡುಬಿದಿರೆ: ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಕರ್ನಾಟಕ ರಾಜ್ಯ ವೇಯ್ಟ್ ಲಿಫ್ಟಿಂಗ್ ಸಂಸ್ಥೆ (ರಿ.) ಆಶ್ರಯದಲ್ಲಿ ಜರುಗಿದ ಕರ್ನಾಟಕ ರಾಜ್ಯ ಮಟ್ಟದ ಯೂತ್, ಜೂನಿಯರ್ ಮತ್ತು ಸೀನಿಯರ್ ವೇಯ್ಟ್ ಲಿಫ್ಟಿಂಗ್ ಚಾಂಪಿಯನ್‍ಶಿಫ್‍ನ ಪುರುಷ ಮತ್ತು ಮಹಿಳಾ ವಿಭಾಗದಲ್ಲಿ ಎಲ್ಲಾ ಆರು ವಿಭಾಗದಲ್ಲಿ ತಂಡ ಪ್ರಶಸ್ತಿ ಪಡೆದು ಸಮಗ್ರ ತಂಡ ಪ್ರಶಸ್ತಿಯನ್ನು ಆಳ್ವಾಸ್ ಪಡೆದುಕೊಂಡಿತು. ಪುರುಷರ ವಿಭಾಗದ ಯೂತ್, ಜೂನಿಯರ್ ಮತ್ತು ಸೀನಿಯರ್ ವಿಭಾಗದಲ್ಲಿ ಹಾಗೂ ಮಹಿಳಾ ವಿಭಾಗದ ಯೂತ್, ಜೂನಿಯರ್ ಮತ್ತು ಸೀನಿಯರ್ ವಿಭಾಗದಲ್ಲಿ ತಂಡ ಪ್ರಶಸ್ತಿ ಪಡೆದಿದೆ. ಪುರುಷರ ವಿಭಾಗದ ಬೆಸ್ಟ್ ಲಿಫ್ಟರ್ ಪ್ರಶಸ್ತಿಯನ್ನು ಜೂನಿಯರ್ ವಿಭಾಗದಲ್ಲಿ ಆಳ್ವಾಸ್‍ನ ಶಿವಾನಂದ ಪಡೆದುಕೊಂಡರು. ಮಹಿಳಾ ವಿಭಾಗದ ಬೆಸ್ಟ್ ಲಿಫ್ಟರ್ ಪ್ರಶಸ್ತಿಯನ್ನು ಯೂತ್ ವಿಭಾಗದಲ್ಲಿ ಆಳ್ವಾಸ್ ಕಾಲೇಜಿನ ಪಡೆದುಕೊಂಡರು. ಕ್ರೀಡಾಪಟುಗಳ ಉತ್ತಮ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಡಾ. ಎಂ.ಮೋಹನ್ ಆಳ್ವ ಅಭಿನಂದಿಸಿದ್ದಾರೆ.
ಕನ್ನಡ ಸಂಘ ಬಹರೈನ್ ನ ಅಧ್ಯಕ್ಷರಾದ ಶ್ರೀ ಅಮರನಾಥ ರೈ ಅವರು ಕರ್ನಾಟಕದ ಗೌರವಾನ್ವಿತ ಗೃಹ ಸಚಿವ ಡಾ ಜಿ ಪರಮೇಶ್ವರ ಅವರನ್ನು ಇತ್ತೀಚೆಗೆ ಬೆಂಗಳೂರಿನಲ್ಲಿ ಅವರ ಕಚೇರಿಯಲ್ಲಿ ಭೇಟಿ ಮಾಡಿದರು ಮತ್ತು ಅವರ ಇತ್ತೀಚಿನ ಬಹರೈನ್ ಭೇಟಿಗಾಗಿ ಸಂಘ ಮತ್ತು ಸದಸ್ಯರ ಕೃತಜ್ಞತೆಯನ್ನು ತಿಳಿಸಿದರು. ಸಚಿವರ ಬಹರೈನ್ ಭೇಟಿಯ ಸಂದರ್ಭದಲ್ಲಿ ಪ್ರಸ್ತಾಪಿಸಲಾದ ಯೋಜನೆಗಳನ್ನು ಅವರು ಚರ್ಚಿಸಿದರು. ಬಹರೈನ್ ನಲ್ಲಿ ಕನ್ನಡ ಮತ್ತು ಕರ್ನಾಟಕದ ಸಂಸ್ಕೃತಿಯನ್ನು ಉಳಿಸುವ ಮತ್ತು ಪ್ರಚಾರ ಮಾಡುವಲ್ಲಿ ಸಂಘ ಮತ್ತು ಸದಸ್ಯರ ಪ್ರಯತ್ನಗಳಿಗೆ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು ಮತ್ತು ಸಂಘದ ಚಟುವಟಿಕೆಗಳಿಗೆ ತಮ್ಮ ಬೆಂಬಲದ ಭರವಸೆ ನೀಡಿದರು. ಭೇಟಿ ಸಂದರ್ಭದಲ್ಲಿ ಮಲ್ಲಾ ರೆಡ್ಡಿ ಹೆಲ್ತ್ ಸಿಟಿಯ ಪ್ರೊ ವೈಸ್ ಛಾನ್ಸಲರ್ ಡಾ ಪಿ ಬಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು.